I ಕರವೇ ಜನಮನ ರಾಜ್ಯ ಸಂಘಟನೆಯಿಂದ I ಮೆಗ್ಗಾನ್ ಆಸ್ಪತ್ರೆ ವಿರುದ್ದ ಭ್ರಷ್ಟಾಚಾರ ಆರೋಪ I ಪ್ರತಿಭಟನೆ I
I ಕರವೇ ಜನಮನ ರಾಜ್ಯ ಸಂಘಟನೆಯಿಂದ I ಮೆಗ್ಗಾನ್ ಆಸ್ಪತ್ರೆ ವಿರುದ್ದ ಭ್ರಷ್ಟಾಚಾರ ಆರೋಪ I ಪ್ರತಿಭಟನೆ I
ಶಿವಮೊಗ್ಗ : ಕರವೇ, ಜನ ಮನ, ರಾಜ್ಯ ಸಂಘಟನೆಯಿಂದ ರಾಜ್ಯಾಧ್ಯಕ್ಷರಾದ. ಕೆ ಜನಾರ್ಧನ ಸಾಲಿಯಾನ್ ರವರ ನೇತೃತ್ವದಲ್ಲಿ ಮೆಗ್ಗಾನ್,ಜಿಲ್ಲಾ ಆಸ್ಪತ್ರೆಯ ಅವ್ಯವಸ್ಥೆ, ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ ನಡೆಯಿತು,
ಈ ಸಂದರ್ಭದಲ್ಲಿ ಸರಿಪಡಿಸಿಕೊಳ್ಳಲು ಗಡುವು ಕೊಟ್ಟು ಮನವಿ ಯನ್ನು ನೀಡಿ ಮಾತಾನಾಡಿದ ಜನಾರ್ಧನ ಸಾಲಿಯಾನರವರು ವಿಳಂಬ ನೀತಿ ಮತ್ತು ಸಿಬ್ಬಂದಿಗಳ ಉಡಾಫೆ ಉತ್ತರ ಮತ್ತು ಶುಕ್ರೂಶಕಿಯರ ತಾತ್ಸಾರ ವರ್ತನೆಯ ವಿರುದ್ಧ ಆಕ್ಷೇಪಣೆ ಇದೆ,
ಇಲ್ಲಿಯ ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳಲು ಮತ್ತು ವಿಳಂಬ ನೀತಿಯ ಸೇವಾ ಮನೋಭಾವನೆಯಿಂದ ಸ್ಥಳೀಯ ಮತ್ತು ಪರ ಊರಿನಿಂದ ಬರುವ ರೋಗಿಗಳಿಗೆ ನಿಮ್ಮ ಸಿಬ್ಬಂಧಿಗಳಿಂದ ಆಗುತ್ತಿರುವ ತೊಂದರೆಗಳನ್ನು ಈ ಕೂಡಲೇ ಸಂಬಂಧಪಟ್ಟ ಆಡಳಿತ ವರ್ಗ ಸರಿಪಡಿಸಿಕೊಳ್ಳದಿದ್ದರೆ ನಾವು ರೋಗಿಗಳ ಪರವಾಗಿ ಧರಣಿಯನ್ನು ಮಾಡುವವರಿದ್ದೇವೆ ಎಂದು ಅವರು ವಿವರಿಸಿದರು,
ರೋಗಿಗಳ ನೋದಣಿ ವ್ಯವಸ್ಥೆ ಸರಿಪಡಿಸುವುದು: ಅನಾರೋಗ್ಯದಿಂದ ಬಂದಂತಹ ರೋಗಿಗಳನ್ನು ಗಂಟೆಗಟ್ಟಲೆ ಕಾಯಿಸಿ ರೋಗಗಳು ಮತ್ತಷ್ಟು ಉಲ್ಬಣಗೊಳ್ಳುವಂತೆ ಮಾಡುತ್ತಿರುವುದು ಸರಿಯೇ..? ಸರತಿ ಸಾಲು ನಿಲ್ಲುವ ಬದಲು ಮೊಬೈಲ್ ಬಳಸಿ ಆನ್ಲೈನ್ ನೋದಣಿ ಮಾಡಿ ಎನ್ನುವ ನಿಮ್ಮ ವ್ಯವಸ್ಥೆ ಸುಸ್ಥಿತಿಯಲ್ಲಿ ಇಲ್ಲ ಏಕೆ..? ಇದನ್ನೆಲ್ಲಾ ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರರು ಯಾರು..? ಅವರಿಗೆ ಜಾವಾಬ್ದಾರಿ ಇಲ್ಲವೇ.? ಎಂದು ಪ್ರಶ್ನಿಸಿದರು,
ಲಂಚದ ಅವ್ಯವಸ್ಥೆ ಹೇಗಿದೆಯಿಂದರೆ ಯಾವ ಸಿಬ್ಬಂದಿಯೂ ಇವರಿಂದ ಹೊರತಾಗಿಲ್ಲ, ಇದಕ್ಕೆಲ್ಲ ನಿರ್ಭಂದ ಹೇರಲಾಗುವುದಿಲ್ಲವೇ, ನಿಮ್ಮ ಆಡಳಿತ ವ್ಯವಸ್ಥೆಯಲ್ಲಿ ಇದಕ್ಕೆಲ್ಲ ಕಡಿವಾಣ ಹಾಕಲು ನಿಮಗೆ ಸಾಧ್ಯವಾಗುತ್ತಿಲ್ಲವೇ? ಇದಕ್ಕೆಲ್ಲ ಕಡಿವಾಣ ಹಾಕಲು ನಿಮ್ಮಿಂದ ಸಾಧ್ಯವಾಗುವುದಿಲ್ಲವಾದರೆ ನಾವು ಕರವೇ ಜನಮನದಿಂದ ಹೋರಾಟ ಹಮ್ಮಿಕೊಂಡು ಆಸಮರ್ಪಕ ಆಡಳಿತದ ವಿರುದ್ಧ ಧರಣಿ ಕೈಗೊಳ್ಳಲಾಗುತ್ತದೆ ಎಂದು ಈ ಸಂದರ್ಭದಲ್ಲಿ ಎಚ್ಚರಿಸಿದರು,
ಎಂ.ಆರ್.ಐ ಸ್ಕ್ಯಾನಿಂಗ್ಗಾಗಿ ರೋಗಿಗಳನ್ನು ತಿಂಗಳಾನುಗಟ್ಟಲೆ ಅಲೆದಾಡಿಸುವುದು. ಇದಕ್ಕೆ ಕಾರಣವೇನು? ಸ್ಕಾನಿಂಗ್ಗೆ ಬಂದವರು ಲಂಚ ಕೊಟ್ಟರೆ 2-3 ದಿನದಲ್ಲೇ ಸ್ಯಾನಿಂಗ್ ಆಗುತ್ತದೆ. ಇಲ್ಲದಿದ್ದರೆ ತಿಂಗಳುಗಟ್ಟಲೇ ದೂರದ ದಿನಾಂಕ ಕೊಡಲಾಗುತ್ತದೆ ಈ ವಿಷಯ ನಿಮ್ಮ ಗಮನಕ್ಕೆ ಬಂದಿಲ್ಲವೇ? ಅಥವಾ ಗೊತ್ತಿದ್ದರೂ ಸುಮ್ಮನಿರುವುದೇಕೆ?ಬಾಣಂತಿಯರು ಈ ಆಸ್ಪತ್ರೆಗೆ ದಾಖಲಾಗಲು ಭಯಪಡುತ್ತಿದ್ದಾರೆ. ಕಾರಣ ಇಲ್ಲಿ ಹಣ ಕೊಟ್ಟರೆ ಸರಿಯಾದ ಚಿಕಿತ್ಸೆ ದೊರೆಯುತ್ತದೆ. ಇಲ್ಲದಿದ್ದರೆ ನಮ್ಮನ್ನು ಯಾರೂ ಲೆಕ್ಕಿಸುವುದಿಲ್ಲ ಮತ್ತು ಹಣಕ್ಕಾಗಿ ಮಕ್ಕಳನ್ನು ಅದಲು ಬದಲು ಮಾಡುತ್ತಾರೆ ಎಂಬ ವಿಚಾರಗಳು ಕೇಳಿಬರುತ್ತಿದೆ. ಇಂತಹ ಘಟನೆಗಳು ಜಿಲ್ಲಾ ಆಸ್ಪತ್ರೆಯಲ್ಲಿ ಯಾವುದೇ ಕಾರಣಕ್ಕೂ ನಡೆಯಲು ಅವಕಾಶವಿಲ್ಲದ ಹಾಗೆ ಆಡಳಿತ ವರ್ಗ ಜವಾಬ್ದಾರಿಯುತವಾಗಿ ನಡೆದುಕೊಂಡು ಬಾಣಂತಿಯರ ಕುಟುಂಬವರ್ಗದ ಮಖ್ಯಸ್ಥರನ್ನು ಕರೆಯುಸಿ ಜನನವಾದ ಮಗುವನ್ನು ಕೂಡಲೇ ಅವರಿಗೆ ತೋರಿಸಿ ಪಾರದರ್ಶಕತೆಯನ್ನು ಮೆರೆಯುವುದು ಒಳಿತು ಎಂದರು,
ತುಂಬಾ ತುರ್ತು ಚಿಕಿತ್ಸೆಯ ಆವಶ್ಯಕತೆ ಇರುವ ರೋಗಿಗಳನ್ನು ಗಂಟೆಗಟ್ಟಲೆ ಕಾಯಿಸಿ ಸತಾಯಿಸಿ ಅವರಿಗೆ ಮತ್ತಷ್ಟು ನೋವು ಉಂಟುಮಾಡುವುದನ್ನು ನಿಮ್ಮ ಆಡಳಿತ ವರ್ಗ ಗಮನಹರಿಸಿ ತುರ್ತಾಗಿ ಚಿಕಿತ್ಸೆ ದೊರೆಯುವಂತೆ ಸ್ಪಂದಿಸಬೇಕು ಎಂದರು,
ಔಷದ ವಿಭಾಗದಲ್ಲಿ ಇರುವವರು ವೈದ್ಯರುಗಳು ಬರೆದು ಕಳಿಸಿದ ಚೀಟಿಯಲ್ಲಿರುವ ಔಷಧಿಗಳನ್ನು ಕೊಡದೇ ಇನ್ಯಾವುದೋ ಔಷದಿಗಳನ್ನು ಕೊಟ್ಟು ಅದು ರೋಗಿಗಳಿಗೆ ಗೊತ್ತಾಗಿ ಇದು ಯಾಕೆ ಬೇರೆ ಔಷಧಿ ಕೊಟ್ಟಿದ್ದಿರ ಎಂದು ಪ್ರಶ್ನೆ ಮಾಡಿರುತ್ತಾರೆ. ತಕ್ಷಣ ಅದು ಕೊಡಿ ಬೇರೆ ಕೊಡುತ್ತೇನೆ ಎಂದು ಹೇಳಿ ಬದಲಾಯಿಸಿ ಕೊಟ್ಟಿದ್ದೂ ಇದೆ. ಹಾಗಾದರೇ ಔಷದ ವಿಭಾಗದಲ್ಲಿ ತರಬೇತಿ ಪಡೆದ ಅನುಭವವುಳ್ಳ ಸಿಬ್ಬಂಧಿ ಇಲ್ಲವೇ? ಮತ್ತು ಔಷಧಿಗಳ ವಾಸ್ತಾನು ಇದ್ದರೂ ಕೂಡ ವೈದ್ಯರುಗಳು ಆಸ್ಪತ್ರೆಯ ಸಮೀಪವಿರುವ ಖಾಸಗಿ ಔಷಧಿ ಅಂಗಡಿಗಳಿಗೆ ಚೀಟಿಯನ್ನು ಬರೆದುಕೊಟ್ಟು ತೆಗೆದುಕೊಂಡು ಬನ್ನಿ ಎಂದು ಹೇಳಿ ಕಳಿಸಿಕೊಟ್ಟು ಔಷದಿಯನ್ನು ತರಿಸಿಕೊಂಡು ಔಷಧಿ ಅಂಗಡಿಯವರಿಂದ ಕಮಿಷನ್ ಪಡೆದುಕೊಳ್ಳುತ್ತಿರುವುದು ಕೂಡ ನಮ್ಮ ಗಮನಕ್ಕೆ ಬಂದಿರುತ್ತದೆ. ಇದಕ್ಕೂ ಕೂಡ ನೀವು ಕಡಿವಾಣ ಹಾಕಬೇಕು, ನಿಮ್ಮಲ್ಲಿ ಔಷಧಿಗಳು ದಾಸ್ತಾನು ಇಲ್ಲದಿದ್ದರೆ ದಾಸ್ಥಾನ ಇಲ್ಲದ ಔಷಧಿಗಳ ಬಗ್ಗೆ ರೋಗಿಗಳಿಗೆ ತಿಳಿಯುವಂತೆ ಫಲಕವನ್ನು ಹಾಕಿ ರೋಗಿಗಳಿಗೆ ತಿಳುವಳಿಕೆ ನೀಡುವುದು ನಿಮ್ಮ ಕರ್ತವ್ಯವಲ್ಲವೇ?
ಬಿಲ್ಲಿಂಗ್ ವ್ಯವಸ್ಥೆಗಾಗಿ ಕೌಂಟರ್ಗಳನ್ನು ಹೆಚ್ಚಿಸುವುದು. ಇರುವ ಕೌಂಟರ್ಗಳಲ್ಲಿ ಸಿಬ್ಬಂದಿಗಳು ಸರಿಯಾದ ಸಮಯಕ್ಕೆ ಬಂದು ಸೇವೆಯನ್ನು ನೀಡತಕ್ಕದ್ದು.
ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಯನಿರತ ವೈದ್ಯರುಗಳು ಸೇವಾ ಸಮಯದಲ್ಲಿ ಆಸ್ಪತ್ರೆಯ ಹೊರಗೆ ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವುದು ಬಹುಪಾಲು ಇದೇ ವೃತ್ತಿಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಬೇಕಾದದ್ದು ನಿಮ್ಮ ಜಾವಾಬ್ದಾರಿಯಾಗಿರುತ್ತದೆ. ಯಾಕೋ ಏನೊ ಈ ವಿಷಯವನ್ನು ಕೂಡ ನಿಮ್ಮ ಆಡಳಿತ ವರ್ಗ ಮರೆತಂತಿದೆ.
ಇವೆಲ್ಲದಕ್ಕೂ ಕಡಿವಾಣ ಹಾಕಿ ಪಾರದರ್ಶಕವಾದ ಸೇವೆಯನ್ನು ರೋಗಿಗಳಿಗೆ ನೀಡುವುದೇ ನಿಮ್ಮ ಆಡಳಿತ ವರ್ಗದ ಕರ್ತವ್ಯವಾಗಿದ್ದೂ ನಾವು ವ್ಯಕ್ತಪಡಿಸಿದ ಈ ಎಲ್ಲಾ ಸಮಸ್ಯೆಗಳನ್ನು ಗಮನಕ್ಕೆ ತೆಗೆದುಕೊಳ್ಳವೇ ಕಡೆಗಣಿಸಿದರೆ ಇದಕ್ಕೆಲ್ಲಾ ನಾಂದಿ ಹಾಡುವ ತನಕ ನಮ್ಮ ಸಂಘಟನೆಯು ಹಗಲು ರಾತ್ರಿ ಧರಣಿ ನಡೆಸುವುದು ಶತಸಿದ್ದವಾಗಿರುತ್ತದೆ.
ಈ ಆಕ್ಷೇಪಣೆ ವ್ಯಕ್ತಪಡಿಸಿದ ವಿಷಯಗಳೆಲ್ಲ ನಿಮ್ಮ ಗಮನದಲ್ಲಿದ್ದರೂ ಕೂಡ ನಾವು ಮತ್ತೊಮ್ಮೆ ಗಮನಕ್ಕೆ ತರುತ್ತಿದ್ದೂ ಕೆಲವೇ ದಿನಗಳಲ್ಲಿ ಇದನ್ನೆಲ್ಲಾ ಸರಿಪಡಿಸದಿದ್ದರೆ ಮುಂದಿನ ಹೋರಾಟಕ್ಕೆ ನಾವು ಸಜ್ಜಾಗುತ್ತೇವೆ ಎಂದು ಕರವೇ ಜನಮನ ತಿಳಿಸಿದೆ.
ಪ್ರತಿಭಟನೆಯಲ್ಲಿ, ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ, ಎನ್, ಮಾಲತೇಶ್, ರಾಜ್ಯ ಸಂಘಟನಾ ಕಾರ್ಯದರ್ಶಿ ಕಿರಣ್ ಕುಮಾರ್ ಕೆ, ಮತ್ತು ರಾಮಣ್ಣ ರಾಗಿಗುಡ್ಡ, ಪಾರ್ತಿಬನ್, ಜಿಲ್ಲಾ ಸಂಚಾಲಕರಾದ ಹರ್ಷಿತ್ ಭಾರದ್ವಾಜ್, ತಾಲೂಕು ಸಂಚಾಲಕರಾದ ಪ್ರತಾಪ್, ಮತ್ತು ಪದಾಧಿಕಾರಿಗಳಾದ ಶೋಭಾ, ಪುಷ್ಪ,ಪ್ರಮುಖ ರಾದ ಲಕ್ಷ್ಮೀಶ,ಸಂಗೇಶ್ವರ, ಮತ್ತಿತರರು ಭಾಗವಹಿಸಿದ್ದರು.