I ಕೆಎಂ ( ಕೃಷ್ಣಮೂರ್ತಿ ) I ಖದರ್ I ಖತಂಗೊಳಿಸಿದ್ದೂ…I
ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಕೆಎಂ ( ಕೃಷ್ಣಮೂರ್ತಿ ) I ಖದರ್ I ಖತಂಗೊಳಿಸಿದ್ದೂ…I
ಶ್ಲೋಕವೆಂಬುದು ಎಲ್ಲಾ ಕಾಲಕ್ಕೂ ಉದಾಹರಣೆಯಾಗುತ್ತದೆ ಎನ್ನುವ ನುಡಿಗಳು ಇಂದಿಗೂ ಅಕ್ಷರಶಃ ಸತ್ಯ ರಂ ಕಂ ಕರೋತಿ ರಾಜಾನಾಂ, ರಾಜಾನಾಂ ರಂಕ ಮೇವ ಚ ಧನಿಕಂ, ನಿರ್ಧನಂ ಚೈವ ಧನಿಕಂ ತಥಾ ಇದು ಪ್ರತಿ ಜೀವಿತ ಜೀವನಗಳಲ್ಲಿ ಘಟಿಸುವ ಏರು-ಪೇರುಗಳ ವಾಸ್ತವವಾಗಿದೆ, ಇಂತಹದೊಂದು ಟಿಪ್ಪಣಿಯೊಂದಿಗೆ ಕೆಎಂ ಖದರ್ ಖತಂಗೊಳಿಸಿದ್ದೂ ತಲೆಬರಹವು ಅನೇಕತೆಗಳನ್ನು ಕಟ್ಟಿ ಕೊಡುತ್ತದೆ, ಆದರೆ ವಾಸ್ತವವಾಗಿ ಕೆ.ಎಂ ಕೃಷ್ಣಮೂರ್ತಿ ಯಾನೇ ಬಾಂಬ್ ಕೃಷ್ಣಮೂರ್ತಿ ಎನ್ನುವ ಪೈರ್ ಬ್ರಾಂಡಿನ ಕಥಾನಕವು ಹೋರಾಟದ ನಗರಿ ಶಿವಮೊಗ್ಗದಿಂದ ರಾಜಧಾನಿ ಬೆಂಗಳೂರಿನ ತನಕದಿ ರಹದಾರಿ ಮಾಡಿಕೊಡುತ್ತದೆ, ಇಂತಿವರ ಸಂಗತಿಗಳು ಶಿವಮೊಗ್ಗಕ್ಕೆ ಅಗತ್ಯತೆ ತಂದೊಡ್ಡಿದೆ, ಏಕೆಂದರೆ ತಾನೋರ್ವ ಪಾತಕ ಪ್ರಪಂಚದಲ್ಲಿ ಗುರುತಿಸಿಕೊಳ್ಳುತ್ತಿದ್ದೇನೆ ಎನ್ನುವ ಈ ಹೊತ್ತಿನ ಯುವ ಸಮುದಾಯಕ್ಕೆ ಅರಿವಿನ ಜಾಗೃತದ ಸದ್ದಾಗಬಹುದು.
ಬಾಂಬ್ ಕೃಷ್ಣಮೂರ್ತಿ ಎನ್ನುವ ಲೈಪ್ ಹಿಸ್ಟರಿ ಉಲ್ಲೇಖಿಸಬೇಕಾದ ಜರೂರಿ ವರಾತಗಳು ಈ ಸುದ್ದಿ ಸಗಟಿಗಿಲ್ಲ, ಶಿವಮೊಗ್ಗವನ್ನು ಹೇಗಾದರು ಮಾಡಿ ತನ್ನ ಕಪಿಮುಷ್ಠಿಯಲ್ಲಿಟ್ಟುಕೊಂಡು ಅಸೆಂಬ್ಲಿ ಗೆಲ್ಲಬೇಕು, ಇಲ್ಲೊಂದು ಸಾಮ್ರಾಜ್ಯ ಕಟ್ಟಬೇಕು, ಎಲ್ಲವೂ ತನ್ನ ಹತೋಟಿಯಲ್ಲಿಯೇ ಇಟ್ಟುಕೊಳ್ಳಬೇಕು ಎನ್ನುವ ಇರಾದೆಯಿಂದ ಶಿವಮೊಗ್ಗದಲ್ಲೊಂದು ಮಾಫಿಯಾ ಸೃಷ್ಟಿಸಿಕೊಂಡ ಓರ್ವ ವೈಟ್ ಕಾಲರ್‌ನ ವರಾತಗಳು ಇನ್ನಿಲ್ಲದ ಬಾನಗಡಿಗಳು ರಾಚಿಕೊಂಡಿವೆ.
ಪೋರ್ಜರಿ ದಾಖಲಾತಿಗಳ ಮುಖೇನ ದುರ್ಬಲರನ್ನು ಒಕ್ಕಲೆಬ್ಬಿಸುವುದು, ಮೀಸಲು ಜಾನುವಾರು, ಹುಲ್ಲುಬನಿ, ಗೋಮಾಳ, ಖಾಸಗಿ ಒಡೆತನದ ಭೂಮಿಗಳನ್ನು ಕಬ್ಜಾ ಮಾಡುವ ಗುಂಪಿನ ಗ್ಯಾಂಗುಗಳಿಗೆ ಈ ವೈಟ್ ಕಾಲರ್‌ನದ್ದೇ ಹುಕುಂ ಆಗಿದೆ. ಇದಲ್ಲದೆ ಪಾತಕ ಲೋಕದ ಹಿಡಿತಕ್ಕಾಗಿ ಬಿದ್ದಿರುವ ಹೆಣಗಳು ಗೋರಿ ಕಟ್ಟಿಕೊಂಡಿವೆ, ೨೦೦೩ರ ಹೊತ್ತಿಗೆ ಶಿವಮೊಗ್ಗದ ನಟ್ಟ ನಗರಿಯಲ್ಲಿ ಅಪಹರಣ ಮತ್ತು ಬೀಕರವಾಗಿ ಕೊಲೆಯಾದ ಪುಸ್ತಕ ವ್ಯಾಪಾರಿ ವೆಂಕಟೇಶ್ ಶೆಟ್ಟಿಯ ಪ್ರಕರಣ ಮೊದಲ ಸುಫಾರಿಯ ಪಟ್ಟಿಗೆ ಸೇರಿಕೊಂಡಿತ್ತು ನಂತರದ ದಿನಮಾನಗಳಲ್ಲಿ ಬಹುತೇಕ ಸುಫಾರಿ ಕೊಲೆಗಳಿಗೆ ಸೇಡಿನ ಲೇಪನ ಹಚ್ಚಲಾಗಿತ್ತು, ಹೀಗೆ ಹದಿನೈದಕ್ಕೂ ಹೆಚ್ಚು ಹತ್ಯೆಗಳು ಸುಫಾರಿ ಪಟ್ಟಿಯಲ್ಲಿದ್ದರೂ ಪೊಲೀಸರು ಪೂರ್ವ ತಳಸ್ಪರ್ಶಿ ತನಿಖೆಗಳುಗೈಯದೆ ಪ್ರಾಥಮಿಕ ಹಂತದಲ್ಲಿಯೇ ಮುಗಿಸಿ ಹಾಕಿರುವ ಅಸಲಿ ಸ್ಟೋರಿಗಳು ಇಂದಿಗೂ ಶಿವಮೊಗ್ಗವನ್ನು ಅಣಕ ಮಾಡುತ್ತಿರುವುದು ಅಲ್ಲದೆ ತನ್ನದೇ ಪಾತಕ ಪ್ರಪಂಚದ ಕೋಟೆಗಾಗಿ ಎಂದರೆ ಅಚ್ಚರಿ ತರಿಸಿದೇ ಇರಲಾರದು,
ಹೀಗೊಂದು ಶಿವಮೊಗ್ಗದಲ್ಲಿ ನಡೆದಿರುವ ಹತ್ಯೆಗಳು ಖಾಲಿ ಹತ್ಯೆಗಳಲ್ಲ ಅದೊಂದು ಪೂರ್ವಯೋಜಿತ ಸ್ಕೆಚ್ ಎನ್ನುವ ಅನಾಮಧೆಯ ಪತ್ರವೊಂದು ಶಿವಮೊಗ್ಗದ ನಗರ ಕ್ಷೇತ್ರದ ಅಸೆಂಬ್ಲಿ ಅಭ್ಯರ್ಥಿ ಆಗಬೇಕೆನ್ನುವ ಹಪಾಹಪಿನಲ್ಲಿರುವ ಓರ್ವ ವೈಟ್ ಕಾಲರಿನ ಅಸಲಿ ಸಂಗತಿಗಳನ್ನು ಬೆತ್ತಲುಗೊಳಿಸಿದೆ, ಇಂತಹದೊಂದು ಅನಾಹುತಕಾರಿ ರಕ್ತದರ್ಪಣ ಆಗಿರುವುದು ಕೇವಲ ಶಿವಮೊಗ್ಗವನ್ನು ತನ್ನ ಹತೋಟಿಯಲ್ಲಿಟ್ಟುಕೊಳ್ಳುವ ಪೂರ್ವಯೋಜಿತ ಸ್ಕೆಚ್‌ನಲ್ಲಿ ಈ ಅಸಲಿ ಕಥಾನಕಗಳ ವೈಡನ್ ಸ್ಟೋರಿ ಶಿವಮೊಗ್ಗದಲ್ಲಿರುವ ಚಿಂತಕರಿಗೆ ಪ್ರಬುದ್ದ ಸಮಾಜಕ್ಕೆ ಅಗತ್ಯವಾಗಿ ಬೇಕಾಗಿರುತ್ತದೆ, ಎನ್ನುವ ಕಾರಣಕ್ಕಾಗಿಯೇ ಶಿವಮೊಗ್ಗದ ರಾಜಕೀಯದಲ್ಲಿ ಕೆಎಂ ಖದರ್ ಖತಂಗೊಳಿಸಿದ್ದೂ ತಲೆಬರಹಕ್ಕೆ ಇದೇ ವೈಟ್ ಕಾಲರ್ ಓರ್ವನ ಕರಾಮತ್ತಿತ್ತು ಎನ್ನುವ ಕಾರಣವು ಇಂದಿಗೂ ಕಾಡುತ್ತಿದೆ,
ಅಸಲಿಗೆ ಒಂದು ಕಾಲಘಟ್ಟದಲ್ಲಿ ಬಾಂಬ್ ಕೃಷ್ಣಮೂರ್ತಿ ಯಾನೆ ಕೆ.ಎಂ ಕೃಷ್ಣಮೂರ್ತಿ ಎನ್ನುವ ಫೈರ್ ಬ್ರಾಂಡ್ ಶಿವಮೊಗ್ಗದಲ್ಲಿ ತನ್ನದೇ ಆದ ಖದರ್ ಮೊಹರೊತ್ತಿತ್ತು, ಅದು ಸುಫಾರಿ ಹಂತಕರ ಕಾಲವಲ್ಲವದು, ನೇರ ಬಡಿದಾಟದ ಕಾಲವಾಗಿತ್ತು, ಇಂತಹದೊಂದು ವಿಷಮತೆಯಲ್ಲಿ ಕೆಎಸ್ಸಾಆರ್‌ಟಿಸಿ ಬಸ್‌ಸ್ಟ್ಯಾಂಡ್‌ನ ಕೂಗಳತೆಯ ದೂರದಲ್ಲಿದ್ದ ಸುಂದರ ಆಶ್ರಯ ಲಾಡ್ಜ್ ಬಿಟ್ಟರೆ ನೆಹರು ರಸ್ತೆಯ ನಾಯಗನ್ ಸಿನಿಮಾ ವಿಲನ್ ಥೇಟ್ ಪ್ರತಿರೂಪವಾಗಿದ್ದ ನರೇಂದ್ರಕುಮಾರ್‌ರವರ ಮಾಣಿಕ್ಯಂ ಬಿಲ್ಡಿಂಗ್, ಭೂಗತ ರೌಡಿಗಳ ಅಡ್ಡೆಯಾಗಿತ್ತು,
ಬಾಂಬ್ ಕೃಷ್ಣಮೂರ್ತಿಯದ್ದೇ ಒಂದು ಪಾಲು ಮೇಲಿದ್ದ ಕಾಲಮಾನದಲ್ಲಿ ಆಲ್ಬರ್ಟ್ ಎನ್ನುವ ಇನ್ನೂರು ಕೇಜಿ ತೂಕದ ಅಜಾನುಬಾಹು ರೌಡಿಯ ನಡುವೆ ಕದನವು ಇತ್ತು, ಖಂಡೆರಾವ್ ಬಿಲ್ಡಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಇವರೀರ್ವರ ಗ್ಯಾಂಗುಗಳ ಬಡಿದಾಡುವುದಕ್ಕೆ ಶುರುವಾದಾಗ, ಸುಂದರ ಆಶ್ರಯ ಲಾಡ್ಜ್‌ನಲ್ಲಿದ್ದ ಈಶಾನ್ಯ ಹೋಟೆಲ್‌ನ ಸೋಡಾ, ಪೀಲೆ ಬಾಟಲಿಗಳು ತೂರಲಾಗಿತ್ತು, ಈ ಗ್ಯಾಂಗ್‌ವಾರ್‌ನಲ್ಲಿ ಅಂದು ದೊಡ್ಡಪೇಟೆ ಪೊಲೀಸ್ ಠಾಣೆಯ ಖಡಕ್ ಸಬ್ ಇನ್ಸ್‌ಪೆಕ್ಟರ್ ಮದನ್ ಗಾಂವಕಾರ್ ಬರದೇ ಹೋಗದಿದ್ದರೆ ಅಂದೇ ಆಲ್ಬರ್ಟ್ ಕತೆ ಮುಗಿದ ಅಧ್ಯಾಯವಾಗುತಿತ್ತು, ಆತನ ನಸೀಬು ಚೆನಾಗಿತ್ತು, ಪೊಲೀಸರ ಲಾಟಿ ಬೀಸುವ ಪರಿಗೆ ಎರಡು ಗ್ಯಾಂಗುಗಳು ಅಲ್ಲಿ ಪೇರಿ ಕತ್ತಿತ್ತು, ಹೀಗೆ ತನ್ನ ಖದರ್ ಶಿವಮೊಗ್ಗದಲ್ಲಿ ಕಾಯ್ದಿರಿಸಿಕೊಂಡಿದ್ದ ಬಾಂಬ್ ಕೃಷ್ಣಮೂರ್ತಿ ಜೆಡಿಎಸ್ ಭಾವುಟವನ್ನು ಹಾರಿಸಿ ಜನಪ್ರತಿನಿಧಿ ಆಗಬೇಕೆನ್ನುವ ಹತ್ತು ಹಲವು ಕನಸುಗಳ ಕಟ್ಟಿಕೊಂಡಿದ್ದವರು, ಜಿಪಂ ಚುನವಾಣೆಯಲ್ಲಿ ಗೆದ್ದು ಬೀಗಿದರು, ಅಲ್ಲದೆ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿ ಜನಸ್ಪಂದನೆಗೆ ಕಾರಣವಾದರು.
ಈ ಮೇಲೆ ಹೇಳಿದ ಶ್ಲೋಕದಂತೆ, ನಿಜಕ್ಕೂ ಬಾಂಬ್ ಕೃಷ್ಣಮೂರ್ತಿ ಎನ್ನುವ ಬ್ರಾಂಡಿನಿಂದ ನಿಜದ ಕೆ.ಎಂ ಕೃಷ್ಣಮೂರ್ತಿಯಾಗಿಯೇ ಬದಲುಗೊಂಡು ಜೆಡಿಎಸ್‌ನ ಪಿತಾಮಹರಾದ ಮಾಜೀ ಪ್ರಧಾನಿ ದೇವೆಗೌಡರವರು ಹಾಗೂ ಕುಮಾರಣ್ಣನವರೊಂದಿಗೆ ಅತೀವ ಸಂಪರ್ಕ ಹೊಂದಿದ್ದವರು ಅವರ ಅಣತಿಯಂತೆಯೇ ಶಿವಮೊಗ್ಗದ ಜೆಡಿಎಸ್ ಪಕ್ಷಕ್ಕೊಂದು ಬೇಸ್ ಫೌಂಡೆಶನ್ ಹಾಕಿಕೊಟ್ಟಿದ್ದರು, ಇಂತಹ ಸಂದರ್ಭದಲ್ಲಿ ೨೦೦೨ರ ಸುಮಾರಿಗೆ ಡಿ.ಕೆ ಅವರ ಬೆಂಬಲಿಗನೆಂದು ಎಂದು ಇದೀಗ ಹೇಳಿಕೊಂಡು ಓಡಾಡುತ್ತಿರುವ ಎಂಟ್ರಿಕೊಟ್ಟಿದ್ದ ಓರ್ವ ವೈಟ್ ಕಾಲರ್ ( ಹೆಸರು ಹೇಳುವ ಸಂದರ್ಭಗಳು ) ಇನ್ನೇನು ಎದುರಾಗುವ ಹೊತ್ತಿದು, ಬೆದರಿಕೆ ಕರೆಗಳು, ಅಟ್ಯಾಕ್‌ಗಳು ಮಾಡ್ಬೇಕು ಎಂದು ಇದೇ ವೈಟ್ ಕಾಲರ್‌ನ ಗ್ಯಾಂಗು ಹೇಳಿಕೊಂಡಿದೆಯಾದರು ಹತ್ತಕ್ಕೂ ಹೆಚ್ಚು ವರದಿ, ಪದ್ಯಗಳು ಬರೆದು ಬಿತ್ತರಿಸಿದ್ದರೂ ಇಂದಿಗೂ ಇವ್ಯಾವು ಜರುಗಿಲ್ಲ, ಓರ್ವ ಅಭಿವ್ಯಕ್ತಿ ಪತ್ರಕರ್ತನ ಮೇಲೆ ಪಾತಕ ಎಸಗುವುದಕ್ಕೆ ಸಾಧ್ಯವೂ ಇಲ್ಲ, ಎಂಬುವ ಎದುರುಗೊಂಡರೆ ಎಂತಹುದೇ ಸ್ಥಿತಿಗಳಲ್ಲೂ ಧೃತಿಗೆಡುವ ಮಾತಿಲ್ಲ, ಎನ್ನುವ ಉವಾಚ ಸಧೃಡತೆಯಿಂದ ಕೂಡಿದೆ, ಇಂತಹ ಕರಿನೆರಳು ವೈಟ್ ಕಾಲರ್ ಶಿವಮೊಗ್ಗದಲ್ಲೀಗ ತಾಂಡವಿಟ್ಟಿದೆ ಇದಕ್ಕೆ ಬ್ರೇಕ್ ಹಾಕಿದ್ದು ದೂರದ ಮೇಲೆಷಿಯಾದಲ್ಲಿರುವ ಶಿವಮೊಗ್ಗದ ಹುಡುಗ ಎಂದರೆ ತಪ್ಪಾಗಲಾರದು,
ಇಂತಹದೊಂದು ಸ್ಥಿತಿಯಲ್ಲಿ ಅಂದು ಎಂಟ್ರಿಕೊಟ್ಟಿದ್ದ ವೈಟ್ ಕಾಲರ್ ಆಸಾಮಿಯು ಬಾಂಬ್ ಕೃಷ್ಣಮೂರ್ತಿಯಿಂದ ಬದಲುಗೊಂಡು ಕೆ.ಎಂ ಕೃಷ್ಣಮೂರ್ತಿ ಎಂದೇ ಜೆಡಿಎಸ್ ಪಕ್ಷದ ಜೀವಾಳವಾಗಿದ್ದ, ಖದರ್ ಮೇಲೆ ಮೆಲ್ಲನೆ ದಾಂಗುಡಿಯಿಕ್ಕಿದ್ದ, ಶಿವಮೊಗ್ಗದ ಇರೋ-ಬರೋ ರೌಡಿಗಳು, ಪುಡಾರಿಗಳ ಗ್ಯಾಂಗ್ ಕಟ್ಟಿ ಬಿರಿಯಾನಿ, ಪುಲ್ ಬಾಟಲ್ ಎಣ್ಣೆ ಕೊಟ್ಟು ಮಲೆನಾಡಿನ ಈ ನಗರಿಯಲ್ಲಿ ತನ್ನದೇ ಆದ ಸಾಮ್ರಾಜ್ಯ ಕಟ್ಟಬೇಕೆಂದು ಮೊದಲ ಮುನ್ನುಡಿ ಬರೆದಿದ್ದ ವೈಟ್ ಕಾಲರ್ ಆಸಾಮಿಯು ಕೆ.ಎಂ ಕೃಷ್ಣಮೂರ್ತಿ ಅವರ ರಾಜಕೀಯ ಖದರ್ ಅಳಿಸಿ ಹಾಕುವ ಪೂರ್ವ ಯತ್ನದಲ್ಲಿ ಜ್ಯುವೆಲ್ ರಾಕ್, ಹಾಗೂ ದುರ್ಗಾ ಲಾಡ್ಜ್‌ಗಳಲ್ಲಿ ಮೀಟಿಂಗ್ ಶುರುವಿಟ್ಟಿದ್ದು ಎಲ್ಲರಿಗೂ ತಿಳಿದ ಸಂಗತಿಯೂ ಆಗಿದೆ, ಅಚ್ಚರಿ ಎಂದರೆ ಈ ವೈಟ್ ಕಾಲರನದ್ದು ಇಂದಿಗೂ ಶಿವಮೊಗ್ಗದಲ್ಲಿ ಲಾಡ್ಜ್‌ಗಳೇ ಆವಾಸಸ್ಥಾನವು ಆಗಿ ಬಿಟ್ಟಿದೆ, ಮುಂದವರೆದಂತೆ ಮಲೆನಾಡಿನ ತವರು ಜಿಲ್ಲೆ ಶಿವಮೊಗ್ಗದಲ್ಲಿ ಜೆಡಿಎಸ್ ಖಾತೆ ತೆರೆದು ಭಾಜಪ, ಕಾಂಗ್ರೆಸ್ ಪಕ್ಷಗಳಿಗೆ ಸವಾಲೆಸೆದಿದ್ದ ದಿನದೊಳು ಜಿಲ್ಲೆಯಲ್ಲಿ ಹೊಸನಗರ ಕ್ಷೇತ್ರ ವಿಂಗಡನೆ ಆಗದೇ ಹೋಗದಿದ್ದರೆ ಅದೇ ಕ್ಷೇತ್ರದ ಅಸೆಂಬ್ಲಿ ಅಭ್ಯರ್ಥಿ ಅಥವಾ ಹೈಪವರ್ ಪಾಲಿಟಿಕ್ಸ್‌ನ ಕೇಂದ್ರಬಿಂದುವಾಗಿರುವ ಶಿವಮೊಗ್ಗ ನಗರ ಕ್ಷೇತ್ರದ ಅಭ್ಯರ್ಥಿ ಆಗಿಬಿಡುತ್ತಿದ್ದರು,
ಆದರೆ ಅಚ್ಚರಿ ಎಂದರೆ ಯಾವಾಗ ವೈಟ್ ಕಾಲರ್‌ನ ಕರಿ ನೆರಳು ಕಾಡುವುದಕ್ಕೆ ಶುರುವಾಗಿ ಬಿಡುತ್ತದೋ.. ಅದಾಗ ಜಿಪಂ ಉಪಾಧ್ಯಕ್ಷರಾಗಿದ್ದ ಕೆ.ಎಂ ಕೃಷ್ಣಮೂರ್ತಿ ತನ್ನ ರಾಜಕೀಯ ನಾಗಲೋಟಕ್ಕೆ ಇತಿ ಹಾಡಿ, ಬೆಂಗಳೂರಿನಲ್ಲಿಯೇ ಹೆಚ್ಚು ಕಾಲ ಉಳಿದುಕೊಳ್ಳುವುದಕ್ಕೆ ನಿರ್ಧರಿಸಿದ್ದರು, ಅಸಲಿಗೆ ಈ ವೈಟ್ ಕಾಲರ್ ಎಂಬುವ ಬ್ಲಾಕ್ ಶ್ಯಾಡೋ, ಡೀಲಿಂಗ್ ರೌಡಿ ಆಲ್ಬರ್ಟ್‌ನನ್ನು ತನ್ನ ಹತೋಟಿಯಲ್ಲಿಟ್ಟುಕೊಂಡು ಮುಲಾಮು ಸವರುತ್ತಾನೆ, ಆಲ್ಬರ್ಟ್‌ಗೂ ಮೊಟ್ಟೆ ಸತೀಶನ ಖಡಕ್ ಬೆದರಿಕೆ ಇರುತ್ತದೆ, ಸಾಲದಕ್ಕೆ ಒಮ್ಮೆ ಕೋರ್ಟಿನಲ್ಲಿ ಬಹಿರಂಗವಾಗಿಯೇ ನಿನ್ನ ಅಂಡು ಬಗ್ಗಿಸಿ ಬೀಡಾ ಅಂಗಡಿ ಇಡುತ್ತೇನೆ ಎಂದು ಅವಾಚ್ಯವಾಗಿ ಕೂಗಿ ನುಗ್ಗಿದ್ದನು ಅಲ್ಲಿಯೇ ಇದ್ದ ಪೊಲೀಸರು ತಹಬದಿಗೆ ತರುವಲ್ಲಿ ಹೆಣಗಾಡಿದ್ದು ಇದೆ, ಹೀಗಾಗಿ ಈ ವೈಟ್ ಕಾಲರ್‌ನ ಮಾತಿನಂತೆ ಆಲ್ಬರ್ಟ್ ಸೇರಿಕೊಂಡು ಡೀಲಿಂಗ್ ಶುರುವಿಟ್ಟಿದ್ದು, ಆಗಾಗ್ಗೆ ಮರುಕಳಿಸುತ್ತಿದ್ದ ಗ್ಯಾಂಗು ವಾರ್‌ಗಳಿಂದ ದೂರ ಉಳಿದು ರಾಜಕೀಯ ಮುತ್ಸದ್ದಿತನದ ಕಾಯ್ದಿರಿಸಿಕೊಳ್ಳಲು ಕೆ.ಎಂ ಕೃಷ್ಣಮೂರ್ತಿ ತನ್ನ ರಾಜಕೀಯ ಖದರ್ ಮೊಟಕುಗೊಳಿಸಿಕೊಂಡು ಶಿವಮೊಗ್ಗದ ರಾಜಕೀಯಕ್ಕೆ ಮತ್ತೆಂದಿಗೂ ಎಂಟ್ರಿ ಕೊಡಲೇ ಇಲ್ಲ ಎನ್ನುವುದು ವಾಸ್ತವವಾಗಿದೆ.
ಈ ನಂತರದ ಹೊತ್ತುಗಳಲ್ಲಿ ದಾಂಗುಡಿಯಿಕ್ಕಿದ್ದ ವೈಟ್ ಕಾಲರ್ ಎಂಬುವ ಕರಿನೆರಳು ಶಿವಮೊಗ್ಗವನ್ನು ಶಾಪಗ್ರಸ್ಥವನ್ನಾಗಿ ಮಾಡಿದೆ, ಸಾಲದಕ್ಕೆ ಸೇಡಿನ ನೆವದಲ್ಲಿ ಹೆಣಗಳು, ಸುಫಾರಿಯ ಹೆಸರಿನಲ್ಲಿ ಕಮಟು ವಾಸನೆಗಳು ಇಂದಿಗೂ ಇದ್ದರು ಜೆಡಿಎಸ್‌ನಲ್ಲಿಯು ಇರಲಾರದೆ ಕಾಂಗ್ರೆಸ್‌ನಲ್ಲಿಯು ಕೂರಲಾರದೆ ಅಸೆಂಬ್ಲಿ ಗೆಲ್ಲುವ ಎಲ್ಲಾ ಲಕ್ಷಣಗಳಿಂದ ವಿಲಕ್ಷಣಗೊಂಡು ಈತನ ಅಸಲಿ ವರಾತಗಳು ಮೂರಾಬಟ್ಟೆ ಮಾಡಿಕೊಂಡಿರುವುದು ಕೂಡ ಅಷ್ಟೆ ಸತ್ಯವಾಗಿದೆ,ಇಂತಹದೊಂದು ಮುನ್ಸೂಚನೆ ಇರುವುದರಿಂದಲೇ ಕೆ.ಎಂ ಕೃಷ್ಣಮೂರ್ತಿ ಮತ್ತದೇ ಬಾಂಬ್ ಕೃಷ್ಣಮೂರ್ತಿ ಆಗದೆ ರಾಜಕೀಯ ಖದರ್‌ಗೆ ಇತಿ ಹಾಡಿ, ವೈಟ್ ಕಾಲರ್ ಎಂಬುವ ಕರಿನೆರಳಿನ ಛಾಯೇ ಇಂದಲೇ ದೂರ ಉಳಿದರು ಎನ್ನುವ ಅಸಲಿ ಸತ್ಯಗಳು ಜನಸಮೂಹ ಅರ್ಥೈಸಿಕೊಳ್ಳಬೇಕಾದ ಜರೂರಿಗಳಿದೆ.
