Sunday, August 2, 2026
HomeಅಂಕಣI ಜನ ಜಗಲಿಯ ಜೀವಜಲ I ಯುವ ಮುಂದಾಳು I ಕಟ್ಟೆ ಪ್ರವೀಣ್ I

I ಜನ ಜಗಲಿಯ ಜೀವಜಲ I ಯುವ ಮುಂದಾಳು I ಕಟ್ಟೆ ಪ್ರವೀಣ್ I

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಜನ ಜಗಲಿಯ ಜೀವಜಲ I ಯುವ ಮುಂದಾಳು I ಕಟ್ಟೆ ಪ್ರವೀಣ್ I

‘ಯುವ ಶಕ್ತಿಯೊಂದು ಉಗಮವಾಗಿ” ಅದರ ಪ್ರಖರತೆ ಕಾಪಿಟ್ಟುಕೊಂಡರೆ ನಿಜಕ್ಕೂ ಅದೊಂದು ಭರವಸೆಯ ಆಶಾಕಿರಣ ಆಗುವುದರಲ್ಲಿ ಯಾವುದೇ ನಿಸ್ಸಂದೇಹವಿಲ್ಲವಾಗಿದೆ, ಅಂತಹದೊಂದು ಸಮಾಜಮುಖಿಯಾಗಿ, ಜೀವೋನ್ಮುಖಿಯ ಭಾವುಕತೆಯ ಬಹುತ್ವಪರತೆಯೊಳು ಜನಸಾಮಾನ್ಯರಿಗೆ ಜೀವಜಲವಾದವರು ಇದೇ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹುಂಚದಕಟ್ಟೆಯ ಯುವ ಮುಂದಾಳು ಕಟ್ಟೆ ಪ್ರವೀಣ್‌ರವರು.

ಹೌದು ಇವರೇನು ಯಾವುದೇ ಪಕ್ಷದ ಅಭ್ಯರ್ಥಿಯಾಗಿ ಗ್ರಾಪಂ, ತಾಪಂ, ಜಿಪಂ ಕ್ಷೇತ್ರದ ಜನಪ್ರತಿನಿಧಿಯಾಗುವ ಕನಸು ಕಟ್ಟಿಕೊಳ್ಳಲಿಲ್ಲ, ಇದಕ್ಕಾಗಿ ಇನ್ನಿಲ್ಲದ ಕಸರತ್ತುಗಳನ್ನು ಜನಮುಂದಡಿಯಾಗಿಸಲಿಲ್ಲ, ನಂಬಿಕೆಯಿಟ್ಟು ಬಂದವರಿಗೆ ಸಹಾಯವನ್ನು ನಿಷ್ಟೆಯಿಂದ ಮಾಡಿದವರಿವರು, ಸದಾ ಮಾತೃತ್ವ ಮನಸಿನಡಿನಲ್ಲಿದ್ದು ಜಾತಿ. ಧರ್ಮ, ಪಕ್ಷ ಸಿದ್ದಾಂತಗಳನ್ನು ಹೆಣೆಯದೆ, ತೂಗಿ ತರ್ಕಿಸದೆ, ಜನಸೇವೆಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡವರು, ಹೀಗಾಗಿಯೇ ಇಂತಿವರು ಜನರ ಎದೆಮಾನಸದಲಿ ಕಟ್ಟೆ ಪ್ರವೀಣ್ ಎಂದೇ ಬಿಂಬಿತವಾಗಿದ್ದಾರೆ, ಇದನ್ನು ಉಲ್ಲೇಖಿಸುವ ಈ ಅಕ್ಷರದ ಸಾಲುಗಳಿಗೆ ಯಾವುದೇ ಉತ್ಪ್ರೇಕ್ಷೆಗಳಿಲ್ಲವಾಗಿದೆ, ವಾಸ್ತವದ ಸಂಗತಿಯನ್ನು ಅನಾವರಣಗೊಳಿಸಿ ಯುವ ಸಮುದಾಯಕ್ಕೆ ಒಳಿತಿನ ಸಂದೇಶ, ಮಾದರಿ ನಾಯಕತ್ವವನ್ನು ಜನಸೇವೆಯ ಮೂಲಕವೇ ಸಾರಿ ಶಾಸನವಾಗಬಹುದು ಎನ್ನುವುದನ್ನು ಈ ಮುಖೇನ ತಿಳಿಸುವ ಪ್ರಯತ್ನ ಇದಾಗಿದೆ.

ಇಂತಹದೊಂದು ಅಸಲಿ ಮಾಹಿತಿಗಳ ಜಾಡು ತಿಳಿದುಕೊಂಡು, ಯಾರ ಅಡೆತಡೆಗಳನ್ನು ಲೆಕ್ಕಿಸದೆ, ಅಂದು ಮಾಜೀ ಮುಖ್ಯಮಂತ್ರಿಗಳಾದ ಹೆಚ್.ಡಿ ಕುಮಾರಸ್ವಾಮಿಯವರು ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಪಂಚರತ್ನ ಯಾತ್ರೆಯ ಮೂಲಕ ತೀರ್ಥಹಳ್ಳಿಗೆ ಹೋದ ಸಂದರ್ಭದಲ್ಲಿ ಹುಂಚದಕಟ್ಟೆಯ ಕಡೆಗೆ ಮುಖ ಮಾಡಿ ನಿಂತಿದ್ದರು, ಯಾವಾಗ ಕಟ್ಟೆ ಪ್ರವೀಣ್ ನಿವಾಸದಲ್ಲಿ ವಾಸ್ತವ್ಯ ಎಂದು ಹೇಳಿದಾಗ ಕೆಲವರಿಗೆ ಮುನಿಸು, ಅಸಮಾಧಾನವಾಗಿತ್ತು, ಏಕೆಂದರೆ ಅದೇ ಪಕ್ಷದ ಕೆಲ ಜಿಲ್ಲಾ ಮುಖಂಡರಿಗೆ ಈ ಯುವಕನಿಗೊಂದು ಮತ್ತೊಂದು ಮೈಲಿಗಲ್ಲು ಸಿಗುತ್ತದೆ, ಇದು ಯಾವುದೇ ಕಾರಣಕ್ಕೂ ಸಿಗಬಾರದು ಎನ್ನುವ ಉದ್ದೇಶವಿತ್ತು, ಆದರೆ ಈ ಮೊದಲೇ ನಿರ್ಧಾರಿತವಾಗಿದ್ದ ಹೆಚ್.ಡಿ ಕುಮಾರಸ್ವಾಮಿಯವರ ಬಂಡಿ, ಹುಂಚದಕಟ್ಟೆಯ ಕಡೆಗೆ ಸಾಗಿ ಬಂದಿತ್ತು, ಅಷ್ಟೊತ್ತಿಗಾಗಲೇ ಇಡೀ ರಾಜ್ಯದಲ್ಲಿ ಸುದ್ದಿ ಹರಡಿತ್ತು, ಹುಂಚದ ಕಟ್ಟೆಯ ಕಟ್ಟೆ ಪ್ರವೀಣ್ ನಿವಾಸಲ್ಲಿ ವಾಸ್ತವ್ಯ ಹೂಡುತ್ತಾರೆ, ಬೆಳಿಗ್ಗೆಯ ಹೊತ್ತಿಗೆ ಪತ್ರಿಕಾಗೋಷ್ಟಿಯು ಕರೆದಿದ್ದಾರೆ ಎನ್ನುವುದು ಖಾತ್ರಿಯಾದಾಗ ಊರಿಗೆ ಊರೇ ಸಂಭ್ರಮಿಸಿತ್ತು,

ಹುಂಚದಕಟ್ಟೆ ಅಗ್ರಹಾರ ಹೊಬಳಿಯ ಜಿಲ್ಲಾ ಪಂಚಾಯ್ತಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ, ಅಲ್ಲದೆ ಇದಕ್ಕೆ ಹೊಂದಿಕೊಂಡಂತೆ, ಗರ್ತಿಕೆರೆ, ಹುಂಚ, ಹಾದಿಗಲ್ಲು, ಕೊಣಂದೂರು, ಬಿಲ್ಲೇಶ್ವರ, ರಿಪ್ಪನಪೇಟೆ, ದೇಮ್ಲಾಪುರ, ಆರಗ, ಹುಲ್ಲತ್ತಿ, ನೊಣಬೂರು, ಮಲ್ಲೇಸರ, ಸಂಕ್ರಳ್ಳಿ, ಇನ್ನೂ ಮುಂತಾದೆಡೆ ಸೇರಿದಂತೆ ಜಿಲ್ಲಾ ಹೆಡ್ ಕ್ವಾರ್ಟರ್ ಶಿವಮೊಗ್ಗ ಹಾಗೂ ತಾಲ್ಲೂಕು ತಿರ್ಥಹಳ್ಳಿಯ ವ್ಯಾಪ್ತಿಯಲ್ಲಿ ಅದೆಷ್ಟೋ ಜನಪ್ರತಿನಿಧಿಗಳು ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿ ಕಳೆದು ಹೋಗಿದ್ದಾರೆ, ಅನೇಕರ ಹೆಸರುಗಳು ಹಾಗೆಯೇ ತೇಲಿ ಆಯಾ ರಾಜಕೀಯ ಪಕ್ಷಗಳಲ್ಲಿ ಮುಳುಗಿ ಹೆಜ್ಜೆ ಗುರುತುಗಳಿಲ್ಲದಂತೆ ನಶಿಸಿ ಹೋಗಿರುವ ಈ ದಿನಮಾನದೊಳು ಯಾವುದೇ ಸಂಘಟನೆಯ ಪ್ರಮುಖನಾಗದೆ, ರಾಜಕೀಯ ರಂಗದಲ್ಲಿ ಸುಧೀರ್ಘ ಹದಿನಾರು ವರ್ಷಗಳ ಕಾಲದ ಜರ್ನಿ ಇದ್ದರೂ ಯಾವುದೇ ಅವಕಾಶದ ಅಕಾಂಕ್ಷಿಯಾಗದೆ ಇದಕ್ಕಾಗಿ ಹಪಾ-ಹಪಿಸಿಕೊಳ್ಳದೆ, ಜನರ ಜಗಲಿಗಳಲ್ಲಿನ ಮಗನಾಗಿ ಜೆಡಿಎಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ, ಹೆಚ್.ಡಿ ಕುಮಾರಸ್ವಾಮಿಯವರ ಅಪ್ಪಟ ಅಭಿಮಾನಿಯಾಗಿ ಜನಸಸೇವೆಯಲ್ಲಿ ತಲ್ಲೀನನಾಗಿರುವ ಕಟ್ಟೆ ಪ್ರವೀಣ್‌ರವರು ತಮ್ಮ ದುಡಿಮೆಯ ಹಣದಲ್ಲಿ ಜನಸಂಕಷ್ಟಗಳಿಗೆ ಸಹಾಯ ಮಾಡುವ ಯುವ ಮುಂದಾಳು ಎನ್ನುವುದು ಶ್ಳಾಘನೀಯವಾದುದ್ದು,

ಸೇವೆ ಸಲ್ಲಿಕೆಗೆ ಯಾವ ರಾಜಕೀಯ ಜವಾಬ್ದಾರಿಗಳು ಬೇಕಿಲ್ಲ, ಅಧಿಕಾರವೂ ಬೇಕಿಲ್ಲ, ಇಂತಿವುಗಳು ಶಾಶ್ವತವಲ್ಲ ಇದು ಅಮುಖ್ಯವಾದ ತಾತ್ವಿಕ ಸಂಗತಿಗಳು, ಮುಕ್ತವಾದ ಸೇವೆ, ಸಹಾಯಗಳೇ ಮುಖ್ಯವಾದವು ಎಂದು ಕಳೆದ ಎರಡು ದಶಕಗಳಿಂದ ಸಾವಿರಾರು ಜನರಿಗೆ ವಿವಿಧ ಬಗೆಯ ಸಹಾಯ, ಮಾಡಿದವರು, ಇದುವೇ ನಿಜದ ನಾಯಕತ್ವವೆಂದು ಸಾರಿರುವ ಈ ಯುವ ಮನಸಿಗೆ ಸೇವೋನ್ಮುಖಿಯ ಬಾಹುಳ್ಯದ ಸಾಂಗತ್ಯ ಬೆಸೆದಿದೆ, ಇದರಿಂದ ಆತ್ಮತೃಪ್ತಿಯಿದೆ ಎನ್ನುವ ಇಂತಿವರ ಹೆಜ್ಜೆ ಗುರುತುಗಳ ಮಾಹಿತಿಗಳನ್ವಯವೇ ಹೆಚ್.ಡಿ ಕುಮಾರಸ್ವಾಮಿಯವರು ಬಂದಿದ್ದರು, ಅವರು ಹೇಳಿದಂತೆ ಪತ್ರಿಕಾಗೋಷ್ಟಿಯನ್ನು ಮಾಡಿದರು, ಆ ಸಂದರ್ಭದಲ್ಲಿ ಜನ ಬೇಡಿಕೆಯನ್ನು ಸ್ವೀಕರಿಸಿ, ನೋಡಿ ಕಟ್ಟೆ ಪ್ರವೀಣ್‌ರವರು ಮುಂದೆ ಜಿಲ್ಲಾ ಪಂಚಾಯ್ತು ಚುನಾವಣೆಯಲ್ಲಿ ಟಿಕೆಟ್ ಕೊಡುತ್ತೇನೆ, ಅವರನ್ನು ಗೆಲ್ಲಿಸಿಕೊಡಿ, ನಿಮ್ಮೆಲ್ಲಾ ಬೇಡಿಕೆಗಳು ತನ್ನಷ್ಟಕ್ಕೆ ತಾನೇ ನೆರವೇರುತ್ತದೆ, ಎಂದು ಹೇಳಿದಾಗ ಅಲ್ಲಿ ನೆರೆದಿದ್ದ ಜನತೆ ಕಟ್ಟೆ ಪ್ರವೀಣ್‌ರವರ ಪರ ಘೋಷಣೆ ಹಾಕಿದರು,

ಇದು ಇವರ ನಿಜದ ಸಾಮಾರ್ಥ್ಯ, ಓರ್ವ ಯುವ ಕಟ್ಟಾಳು ಮನಸು ಮಾಡಿದರೆ ಯಾವುದೇ ಅಧಿಕಾರದಂದಣವಿಲ್ಲದೆ, ಇಡೀ ರಾಜ್ಯದ ಗಮನಸೆಳೆಯಬಹುದು ಎನ್ನುವುದಕ್ಕೆ ಕಟ್ಟೆ ಪ್ರವೀಣ್‌ರವರು ಮೊದಲಿಗರಾಗಿ ಮಾದರಿಯಾಗಿ ಯುವ ಸಮುದಾಯದ ಮುಂದಡಿ ದರ್ಶಿಸಿಕೊಳ್ಳುತ್ತಾರೆ, ಹೆತ್ತವರ ಮನಸು ಕೂಡ ಆತ್ಮದ ಕಂಬನಿ ತೊಟ್ಟಿಕ್ಕಿಸದೆ ಇರಲಾರದು, ಅಂತಹದೊಂದು ಸೇವಾಗುಣ, ನಾಯಕತ್ವದ ಗುಣ, ಮೈಗೂಡಿಸಿಕೊಂಡಿರುವ ಕಟ್ಟೆ ಪ್ರವೀಣ್‌ರವರಿಗೆ ತನ್ನ ಮಗನೆಂದು ಅಪ್ಪಿಕೊಳ್ಳುವ ಶ್ರೇಷ್ಟತೆ ಪ್ರತಿ ಮನೆಯಲ್ಲಿ ಎಲ್ಲಾ ಹೆತ್ತವರಿಗೆ ಸಿಕ್ಕಿದರೆ ಅದೆಷ್ಟು ಸಂತಸದ ಸಾರ್ಥಕವಲ್ಲವೇ, ಇಂತಹದೊಂದು ಆತ್ಮ ತೃಪ್ತಿಯಲ್ಲಿರುವ ಸಹಾಯಕ ಕೃಷಿ ನಿರ್ದೇಶಕರಾಗಿ ನಿವೃತ್ತಿ ಹೊಂದಿರುವ ಮಧ್ಯಮ ಕುಟುಂಬದ ತಂದೆ ನಾಗೇಂದ್ರಪ್ಪನವರು, ತಾಯಿ ಸುನಂದಾರವರ ದಂಪತಿಗಳಿಗೆ ಐದು ಜನ ಮಕ್ಕಳಲ್ಲಿ ಇಂತಿವರು ಎರಡನೆಯ ಸುಪುತ್ರರಾಗಿದ್ದಾರೆ, ಪ್ರಾಥಮಿಕ ಶಿಕ್ಷಣ ಹುಂಚದಕಟ್ಟೆನಲ್ಲಿಯೇ ಪೂರೈಸುವ ಇವರು ಕೊಣಂದೂರಿನಲ್ಲಿ ಪದವಿಯವರೆಗೆ ವ್ಯಾಸಾಂಗ ಮಾಡುತ್ತಾರೆ, ಇನ್ನೂ ಬಿಎಡ್ ಶಿವಮೊಗ್ಗದಲ್ಲಿ ಪೂರೈಸಿ, ಖಾಸಗಿ ವಹಿವಾಟುವಿನೊಂದಿಗೆ ಜನಸಾಮಾನ್ಯರೊಂದಿಗೆ ಬೆರೆತು ನಾನಿದ್ದೇನೆ, ನಿವ್ಯಾಕೆ ಚಿಂತೆ ಮಾಡ್ತೀರಿ, ಬಗೆ ಹರಿಸುವೆ ಎಂದು ಓಡಾಟ ಆರಂಭಿಸಿದ ಕಟ್ಟೆ ಪ್ರವೀಣ್ ಇಂದಿಗೂ ಅದೇ ಹುಮ್ಮಸ್ಸಿನಲ್ಲಿಯೇ ಜನಸೇವೆಯಲ್ಲಿ ತಲ್ಲಿನತೆ ಹೊಂದಿದ್ದಾರೆ,   ಭಗವಂತ ಕೃಷ್ಣ ಭಗವಧ್ಗೀತೆನಲ್ಲಿ ‘ಜನಸೇವೆಯೇ ಜನಾರ್ಧನ ಸೇವೆ’ ಎನ್ನುವ ಸಾಲು ಉಲ್ಲೇಖಿಸಿದಂತೆಯೇ ನಡೆದುಕೊಂಡಿರುವ ಕಟ್ಟೆ ಪ್ರವೀಣ್‌ರವರ ವ್ಯಕ್ತಿ ವಿಕಸನದಂತಹ ವಿಸ್ತಾರತೆಯ ಮನಸನ್ನು ಯಾವುದಕ್ಕೂ ತುಲನೆ ಮಾಡಲಾಗದು,

ಇನ್ನೂ ೨೦೨೦ನಲ್ಲಿ ಭಾರತಕ್ಕೆ ಎಂಟ್ರಿಯಾದ ಕೋರೋನಾ ಎನ್ನುವ ಸಾಂಕ್ರಮಿಕ ಯುದ್ದದಲ್ಲಿಯು ಹಸಿವು ನೀಗಿಸುವ ಹೋರಾಟ ನಡೆಸಿ ಜನಸಾಮಾನ್ಯರ ಜಗಲಿನಲ್ಲಿದ್ದು ಪುಡ್ ಕಿಟ್, ಆಸ್ಪತ್ರೆಯ ಚಿಕಿತ್ಸೆಗಳನ್ನು ಕೊಡಿಸುವುದು, ಧೈರ್ಯ ತುಂಬುವುದನ್ನು ನಿರಂತರವಾಗಿಸಿದ್ದರು, ಇನ್ನೂ ಇಲ್ಲಿನ ಸುತ್ತಲಿನ ಗ್ರಾಮೀಣಾ ಪ್ರದೇಶಗಳಲ್ಲಿ ಹಮ್ಮಿಕೊಳ್ಳುವ ವಾಲಿಬಾಲ್, ಕ್ರಿಕೇಟ್, ಜನಪದ ಕೋಲಾಟ, ಶಾಲಾ ವಾರ್ಷಿಕೋತ್ಸವಗಳಲ್ಲಿ ಬರಪೂರತೆಯಲ್ಲಿ ಪಾಲ್ಗೊಂಡು ಅದರ ಯಶಸ್ವಿಗೆ ಕಾರಣಕರ್ತರಾದವರು, ಕಾಲೇಜು ಸೀಟಿಗಾಗಿ ಹೊಡೆದಾಡಿದವರು, ಇದಕ್ಕಾಗಿ ಪರಿತಪಿಸಿ ನೂರಾರು ವಿದ್ಯಾರ್ಥಿಗಳ ವ್ಯಾಸಾಂಗಕ್ಕೆ ಸಹಾಯ ಮಾಡಿದ ಈ ಯುವ ಜರ್ನಿ, ಅನೇಕತೆಯ ದೇಣಿಗೆ, ಸಹಾಯ, ಸೇವೆನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಈ ಮನಸ್ಥಿತಿಗೆ ಇಂತಿವರಿಗೆ ನೆಲ ಜಲ ಉಳಿಸಿ ಹೋರಾಟ ಸಮಿತಿಯವರು ಕರ್ನಾಟಕ ರಾಜ್ಯ ವೀರ ಕನ್ನಡಿಗ ಎನ್ನುವ ಪ್ರಶಸ್ತಿ ನೀಡಿದರೆ, ಶ್ರೀ ನಾರಾಯಣ್ ಗುರುಗಳ ಕೃಪಾರ್ಶಿರ್ವಾದದೊಂದಿಗೆ ಶ್ರಿ.ಶ್ರೀ.ಶ್ರೀ ರೇಣುಕಾನಂದ ಮಹಾಸ್ವಾಮೀಜಿಗಳು ಕ್ರಿಕೇಟ್ ಟೂರ್ನಮೆಂಟ್ ವೇದಿಕೆಯಲ್ಲಿ “ನಾಗರೀಕ ಸೇವಾ ಪ್ರಶಸ್ತಿ” ನೀಡಿ ಗೌರವಿಸಿರುವುದು ಮೆಚ್ಚುವಂತಹದ್ದಾಗಿದೆ,

ಒಟ್ಟಿನಲ್ಲಿ ಇಂತಹ ನೂರಾರು ಗುರುತಿಸುವಿಕೆ, ತಮ್ಮದೇ ಆದ ನಿಟ್ಟಿನಲಿ ಛಾಪು ಮೂಡಿಸಿರುವ ಕಟ್ಟೆ ಪ್ರವೀಣ್ ಇಂದಿಗೂ ಹೆಚ್.ಡಿ ಕುಮಾರಸ್ವಾಮಿಯವರ ಅಭಿಮಾನಿಯಾಗಿ ಜೆಡಿಎಸ್ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿರುವುದು ವಿಶೇಷವಾಗಿದೆ, ಬಡವನೇ ಬರಲಿ ಬಲ್ಲಿದನೇ ಎದುರಾಗಲಿ, ಅವರ ಸಮಸ್ಯೆಗಳನ್ನು ತನ್ನ ಸೇವಾ ಜೋಳಿಗೆಯಲ್ಲಿಟ್ಟುಕೊಂಡು ಅದನ್ನು ಸಮಗ್ರವಾಗಿ ಬಗೆಹರಿಸಿ ಅವರ ಅಂಗಳದಲ್ಲಿ ನಗುವಿನ ಚರಿಗೆ ತುಂಬಿಸುವ, ಯುವ ಮುಂದಾಳು ಕಟ್ಟೆ ಪ್ರವೀಣ್ ಮಲೆನಾಡಿನಲ್ಲಿ ಯಾರು ಅಳಿಸಲಾಗದ ಯುವ ಶಾಸನ ಬರೆಯುತ್ತಿರುವುದು ಈ ಹುಂಚದಕಟ್ಟೆಯ ನೆಲಕ್ಕೊಂದು ಹೆಮ್ಮೆಯ ಗೌರವವಾಗಿದೆ ಎನ್ನುವುದು ನನ್ನಯ ಅಂಬೋಣ.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I