Saturday, 19 September 2026 Suryagagana — Edition

Suryagagana

My WordPress Blog

ಸೂರ್ಯಗಗನ I ಹಸಿರು, ಸ್ವಚ್ಚ ಮತ್ತು ಸುಂದರ ನಗರ ನಿರ್ಮಾಣಕ್ಕೆ ಸಂಕಲ್ಪ I ಸ್ಬೂಡಾ ಅಧ್ಯಕ್ಷ ಹೆಚ್.ಎಸ್.‌ಸುಂದರೇಶ್ I ಸೂರ್ಯಗಗನ I ಕಾರ್ಮಿಕರ ವಸತಿ ನಿಲಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲು I ರಾಜ್ಯ ಅಸಂಘಟಿತ ಕಾರ್ಮಿಕ ಸಂಘ ಒತ್ತಾಯ I ಸೂರ್ಯಗಗನ I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I ಸೂರ್ಯಗಗನ I ಹಸಿರು, ಸ್ವಚ್ಚ ಮತ್ತು ಸುಂದರ ನಗರ ನಿರ್ಮಾಣಕ್ಕೆ ಸಂಕಲ್ಪ I ಸ್ಬೂಡಾ ಅಧ್ಯಕ್ಷ ಹೆಚ್.ಎಸ್.‌ಸುಂದರೇಶ್ I ಸೂರ್ಯಗಗನ I ಕಾರ್ಮಿಕರ ವಸತಿ ನಿಲಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲು I ರಾಜ್ಯ ಅಸಂಘಟಿತ ಕಾರ್ಮಿಕ ಸಂಘ ಒತ್ತಾಯ I ಸೂರ್ಯಗಗನ I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I
ಸೂರ್ಯಗಗನ

I ಚಿತ್ರದುರ್ಗದಲ್ಲಿ I ಬಿಎಸ್‌ವೈ ಅಭಿಮಾನೋತ್ಸವಕ್ಕೆ I ಕ್ಷಣಗಣನೆ I

I ಚಿತ್ರದುರ್ಗದಲ್ಲಿ I ಬಿಎಸ್‌ವೈ ಅಭಿಮಾನೋತ್ಸವಕ್ಕೆ I ಕ್ಷಣಗಣನೆ I ಚಿತ್ರದುರ್ಗ / ಶಿವಮೊಗ್ಗ : ಭಾರತೀಯ ಜನತಾ ಪಕ್ಷದ ಮುತ್ಸದ್ದಿ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ೫೦ ವರ್ಷಗಳ ರಾಜಕೀಯ ಪಥದ ಮೈಲಿಗಲ್ಲಿಗೆ ಗೌರವಿಸುವ…

I ಚಿತ್ರದುರ್ಗದಲ್ಲಿ I ಬಿಎಸ್‌ವೈ ಅಭಿಮಾನೋತ್ಸವಕ್ಕೆ I ಕ್ಷಣಗಣನೆ I

ಚಿತ್ರದುರ್ಗ / ಶಿವಮೊಗ್ಗ : ಭಾರತೀಯ ಜನತಾ ಪಕ್ಷದ ಮುತ್ಸದ್ದಿ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ೫೦ ವರ್ಷಗಳ ರಾಜಕೀಯ ಪಥದ ಮೈಲಿಗಲ್ಲಿಗೆ ಗೌರವಿಸುವ ಸಲುವಾಗಿ ‘ ಬಿಎಸ್‌ವೈ ಅಭಿಮಾನೋತ್ಸವ ” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇನ್ನೇನು ಬಿಎಸ್‌ವೈ ಅಭಿಮಾನೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ, ಮೇ ೯ರ ಶನಿವಾರ ಈ ಬೃಹತ್ ಕಾರ್ಯಕ್ರಮ ನಡೆಯಲಿದ್ದು ಇದಕ್ಕಾಗಿ ಪೂರ್ವ ಸಿದ್ದತೆಯನ್ನು ಬರಪೂರವಾಗಿ ಚಿತ್ರದುರ್ಗದಲ್ಲಿ ಹಮ್ಮಿಕೊಳ್ಳಲಾಗಿದೆ ದಕ್ಷಿಣ ಭಾರತದಲ್ಲಿ ಮೊದಲ ಭಾರಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಶ್ರಮಿಸಿದ ಯಡಿಯೂರಪ್ಪನವರ ೫೦ ವರ್ಷಗಳ ಸುದೀರ್ಘ ಸಾರ್ವಜನಿಕ ಜೀವನ ಮತ್ತು ಸಾಧನೆಯನ್ನು ಸಂಭ್ರಮಿಸುವುದು ಇದರ ಮುಖ್ಯವಾಗಿದ್ದರು ಈ ಸಮಾರಂಭದಲ್ಲಿ ಯಡಿಯೂರಪ್ಪನವರ ಜೀವನ ಮತ್ತು ಕೊಡುಗೆಗಳನ್ನು ಬಿಂಬಿಸುವ ಸ್ಥಬ್ದಚಿತ್ರಗಳನ್ನು ಪ್ರದರ್ಶಿಸ ಲಾಗುತ್ತಿರುವುದು ವಿಶೇಷವಾಗಿದೆ. ಬಿಜೆಪಿಯ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಸೇರಿದಂತೆ ಪಕ್ಷದ ಮುಖಂಡರು ಕಾರ್ಯಕ್ರಮದ ಯಶಸ್ಸಿಗೆ ಪೂರ್ವಭಾವಿ ಸಭೆಗಳನ್ನು ನಡೆಸಿ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಕಾರ್ಯಕ್ರಮವು ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪನವರ ವರ್ಚಸ್ಸನ್ನು ಮತ್ತಷ್ಟು ಬಲಪಡಿಸುವ ಮತ್ತು ಅವರನ್ನು ಅಭಿನಂದಿಸುವ ಬೃಹತ್ ವೇದಿಕೆಯಾಗಿದೆ ಇದೊಂದು ಹೊಸತೊಂದು ರಾಜಕೀಯ ಪರ್ವಕ್ಕೆ ಮುನ್ನುಡಿಯಾಗಿದೆ.

ಇನ್ನೂ ಬಿಎಸ್‌ವೈ ಅವರ ಕುರಿತಾಗಿ :

ಬಿ.ಎಸ್ ಯಡಿಯೂರಪ್ಪನವರ ಸುಧೀರ್ಘವಾದ ರಾಜಕೀಯದ ಇತಿಹಾಸದಲ್ಲಿ ಎಂದಿಗೂ ?ಕೋಮು ಭಾವನೆ? ಕೆರಳಿಸಲೇ ಇಲ್ಲ, ಕೆರಳಿಸುವ ಕಿಡಿಗೇಡಿಗಳಿಗೆ ಎಚ್ಚರಿಕೆಯನ್ನು ನೀಡಿ ಸೌಹಾರ್ದತೆಗೆ ಮುಂದಾಗುತ್ತಿದ್ದ ಬಿ.ಎಸ್ ಯಡಿಯೂರಪ್ಪನವರಿಗೆ ಒಟ್ಟು ಸಮಾಜದ ಏಕತೆಯ ಕನಸಿತ್ತು ಎನ್ನುವುದು ಅಗ್ರಮುಖಿಯಾಗಿ ಮನಗಾಣಬೇಕಿದೆ.

ಹೀಗೆ ರಾಜಕೀಯ ಸಂಗತಿಯಲ್ಲಿ ಹೇಳಿಕೆ, ಪ್ರತಿಹೇಳಿಕೆಗಳು ಸಾಮಾನ್ಯವಾಗಿರುತ್ತದೆ ಇದರಿಂದ ರಾಜಕೀಯ ವಿಶ್ಲೇಷಣೆಗೆ ಬಳಸಿಕೊಂಡರೆ ಹೊರತು ಸಾರ್ವಜನಿಕ ಸಂಗತಿಗಳ ನಡುವೆ ಎಂದಿಗೂ ಜಾತಿ-ಧರ್ಮಗಳಿಡಿದು ವಿರೋದಬಾಸವಾದ ಹೇಳಿಕೆಗಳತ್ತ ಚಿತ್ತವರಿಸಲೇ ಇಲ್ಲ, ವಿರೋದಪಕ್ಷದ ನಾಯಕರಾದ ಸಂದರ್ಭದಲ್ಲಾಗಲಿ, ಮುಖ್ಯಮಂತ್ರಿಯ ಹುದ್ದೆಯನ್ನಾಗಲಿ ನಿರ್ವಹಿಸುವಾಗ ಅಥವಾ ಇನ್ನಾವ ರಾಜಕೀಯ ಕಾರಣಕ್ಕಾಗಿ ಎಂದಿಗೂ ?ಕೋಮು ಭಾವನೆ? ಕೆರಳಿಸುವಷ್ಟರ ಮಟ್ಟಿಗಿನ ಗೋಜಿಗೆ ತೆರಳದೆ ತಾನೋರ್ವ ಸಮ ಸಮಾಜದ ನಾಯಕನೆಂದು ಬಿಂಬಿಸಿಕೊಂಡಿದ್ದರು, ಅಕ್ಷರಶಃ ಇದನ್ನು ಪಾಲಿಸಿ ಕೊಂಡು ಬಂದು ಇತ್ತೀಚೆಗೆ ಮುಖ್ಯಮಂತ್ರಿ ಹುದ್ದೆಗೆ ರಾಜಿನಾಮೆ ನೀಡಿ ರಾಜಕೀಯ ಮೌನಕ್ಕೆ ಶರಣಾಗಿದ್ದಾರೆ.

ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಬಿ.ಎಸ್ ಯಡಿಯೂರಪ್ಪನವರು :

ನಾಲ್ಕನೇ ಭಾರಿ ಮುಖ್ಯಮಂತ್ರಿಯಾಗಿದ್ದು ಜುಲೈ -೨೬-೨೦೧೯ ಅಚ್ಚರಿ ಎನೆಂದರೆ ಅಂದು ಜುಲೈ-೨೬-೨೦೨೧ರಂದು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ೭೫ ವರ್ಷದ ಮೇಲ್ಪಟ್ಟ ರಾಜಕಾರಣಿ ಎನ್ನುವ ಬಿಜೆಪಿ ಪಕ್ಷದ ಹೊಸದೊಂದು ಅಜೆಂಡಾದ ತಳಹದಿಯನ್ನು ಒಪ್ಪಿ ಸ್ವತಃ ರಾಜಿನಾಮೆಯನ್ನು ಒಪ್ಪಿಸಿದರು. ಆದರೆ ಚಳುವಳಿ-ಹೋರಾಟಗಳ ಮೂಲಕ ?ಕ್ರಿಯಾಸಿದ್ದಿ ಸತ್ವೇ ಭವತಿ ಮಹತಾಂ ನೋಪಕರಣೆ? ಎನ್ನುವ ಸಂಘದ ಗೀತೆಯೊಂದಿಗೆ ಜನಪರವಾಗಿ ನಡೆದು ರಾಜ್ಯದಲ್ಲಿ ಬಿ.ಎಸ್ ಯಡಿಯೂರಪ್ಪನವರು ಇಲ್ಲದೆ ಬಿಜೆಪಿ ಇಲ್ಲ ಎನ್ನುವ ವಾಸ್ತವ ಬಲವರ್ಧನೆಯಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ರಾಜಕೀಯ ವೇದಿಕೆಯಲ್ಲಿ ಮೊದಲಿಗ ಮುತ್ಸದ್ದಿ ಎಂದರೆ ತಪ್ಪಾಗಲಾರದು.

ಇಂತಿವರಿಗೂ ಆಗಾಗ್ಗೆ ಕೋಮು ಭಾವನೆ ಕೆರಳಿಸುವ ಪರಿವಾರದ ಹಿಡನ್ ಅಜೆಂಡಾಗಳ ಸೂಚನೆಗಳಿದ್ದವು ಅನಿಸುತ್ತೇ ಆದರೆ ಎಂದಿಗೂ ಸಂಘಪರಿವಾರವನ್ನು ಗೌರವಿಸಿ ನಡೆದರೆ ಹೊರತು ಬಲವಾಗಿ ಪ್ರತಿಪಾದಿಸಲು ಮುಂದಾಗದೇ ನಾಡಿನ ಎಲ್ಲಾ ಸ್ತರದ ಜನತೆಯೊಂದಿಗೆ ?ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು? ಎನ್ನುವಂತೆ ನುಡಿದಂತೆ ನಡೆದವರು, ಇನ್ನೂ ಅದಾಗ ಬೂಕನಕೆರೆ ಯಡಿಯೂರಪ್ಪನವರು ಹೋರಾಟದ ನೆಲೆ ಶಿವಮೊಗ್ಗಕ್ಕೆ ಬಂದ ಮೇಲೆ ಅಂದಿನ ಸಂಘಪರಿವಾರದ ನಡೆಗಳಿಗೆ ಆಕರ್ಷಿತರಾದರು ಶಿಕಾರಿಪುರದ ಪುರಸಭಾ ಸದಸ್ಯರಾಗಿ ಮೊದಲ ಭಾರಿಗೆ ರಾಜಕೀಯ ಪ್ರವೇಶಿಸಿದರು, ಇದಾದ ತರುವಾಯ ಜಿಲ್ಲಾಮಟ್ಟದಿಂದ ರಾಜ್ಯಮಟ್ಟದ ನಾಯಕರಾಗಿ, ಶಿಕಾರಿಪುರ ಕ್ಷೇತ್ರದಿಂದ ಅಸೆಂಬ್ಲಿಗೆ ಹೆಜ್ಜೆ ಇಟ್ಟರು, ವಿರೋದಪಕ್ಷದ ನಾಯಕರು ಆದರು, ಉಪಮುಖ್ಯಮಂತ್ರಿಯಾಗಿ ೨೦೦೭ರಲ್ಲಿ ಸ್ವಂತ ಬಲದಿಂದ ಬಿಜೆಪಿಯನ್ನು ದಕ್ಷಿಣ ಭಾರತದಲ್ಲಿ ಮೊದಲ ಭಾರಿಗೆ ರಾಜ್ಯಾಡಳಿತದ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿಯಾದರು.

ಬಿಜೆಪಿಯನ್ನು ರಾಜಕೀಯ ಸಂಘರ್ಷದಡಿಯಲ್ಲಿಯೇ ಬಲಪಡಿಸಿದ ಬಿಎಸ್‌ವೈ :

ಹೀಗೆ ಎಲ್ಲಾ ಕಾಲಕ್ಕೂ ಬಿಜೆಪಿಯನ್ನು ರಾಜಕೀಯ ಸಂಘರ್ಷದಡಿಯಲ್ಲಿಯೇ ಬಲಪಡಿಸಿದರೇ ವಿನಃ ಎಂದಿಗೂ ?ಕೋಮು ಭಾವನೆ?ಯ ವಿಷಬೀಜದಿಂದ ರಾಜಕೀಯವನ್ನು ಮಾಡಲಿಲ್ಲ, ಹೀಗಾಗಿಯೇ ಅವರು ತಮ್ಮದೇ ಪಕ್ಷದವರ ಕುತಂತ್ರದಡಿ ಭ್ರಮನಿರಸನಕ್ಕೊಳಗಾಗಿ ಕೆಜೆಪಿ ಪಕ್ಷವನ್ನು ಕಟ್ಟಿಕೊಂಡರು, ಅದಾಗ ಅಹಿಂದ ವರ್ಗದವರು ಯಡಿಯೂರಪ್ಪನವರ ಬೆಂಬಲಕ್ಕೆ ನಿಂತರು ರಾಜ್ಯದಲ್ಲಿ ಕೆಜೆಪಿ ಪಡೆದ ಮತ ಸಂಖ್ಯೆಗಳನ್ನು ಬಿಜೆಪಿಗಿಂತಲೂ ಅಧಿಕ ಗಳಿಸುವಲ್ಲಿ ಶ್ರಮಿಸಿದರು, ಶಿವಮೊಗ್ಗದಲ್ಲಿ ಬಿಜೆಪಿಯಿಂದ ಸ್ಪರ್ದಿಸಿದ್ದ ಅಭ್ಯರ್ಥಿಯನ್ನು ಠೇವಣಿಗೆ ಹತ್ತಿರದಲ್ಲಿ ಸೋಲುಣಿಸಿದರು, ಕೆಜೆಪಿ ಅಭ್ಯರ್ಥಿಯನ್ನು ಕೇವಲ ೨೭೦ ಮತಗಳಿಂದ ಗೆಲುವನ್ನು ಪ್ರತಿಪಕ್ಷದವರಿಗೆ ಬಿಟ್ಟುಕೊಟ್ಟ ರಾಜಕೀಯ ಲೆಕ್ಕಾಚಾರ ನೋಡಿದಾಗ ಬಿ.ಎಸ್ ಯಡಿಯೂರಪ್ಪನವರ ಹೆಸರಿಲ್ಲದೆ ಬಿಜೆಪಿಯನ್ನು ಮುನ್ನೆಡೆಸಲು ಸಾಧ್ಯವಿಲ್ಲವೆನ್ನುವ ಸತ್ಯದರ್ಶನವನ್ನು ದರ್ಶಿಸುವಂತೆ ಮಾಡಿಕೊಟ್ಟವರು ಬಿ.ಎಸ್ ಯಡಿಯೂರಪ್ಪನವರು,

ಇನ್ನೂ ಮುಂದಿನ ೨೦೨೮ರ ಅಸೆಂಬ್ಲಿ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರ ಅತೀವ ಕುತೂಹಲ ಮೂಡಿಸಿದೆ, ಒಂದೆಡೆ ಪಕ್ಷದಿಂದ ಪಲ್ಲಟವಾಗುತ್ತಿರುವ ಮುಖಂಡರುಗಳು ಈ ಕ್ಷೇತ್ರದ ಮೇಲೆ ನಿಗಾವಹಿಸಿಯೇ ರಾಜಕೀಯ ದಾಳ ಎಸಗಿದ್ದಾರೆ, ಇಂತಿವುಗಳು ಏನೇ ಇರಲಿ ಮುಂದಿನ ಕ್ಷಿಪ್ರ ರಾಜಕೀಯ ವಿದ್ಯಮಾನದೊಳು ಶಿವಮೊಗ್ಗ ಜಿಲ್ಲೆಯ ಕ್ಷೇತ್ರ ವಿಂಗಡಣೆಗಳು ಖಾತ್ರಿಯಾದರೆ ಒಂದಿಷ್ಟು ಹೊಸ ಮುಖಗಳು ಕಣಕ್ಕಿಳಿವ ಲೆಕ್ಕಚಾರಗಳಲ್ಲಿ ರಾಜಕೀಯ ಮುಂದುವರೆದಿದ್ದರೂ ಬಿಎಸ್‌ವೈ ಎನ್ನುವ ಚಾಣಕ್ಯನಂತಹ ಘಟ ಇರುವವರೆಗೂ ಯಾರ ಬೇಳೆಯೂ ಶಿವಮೊಗ್ಗದಲ್ಲಷ್ಟೆ ಅಲ್ಲ ರಾಜ್ಯದ ಆಯಕಟ್ಟಿನ ಕ್ಷೇತ್ರಗಳಲ್ಲಿ ಇವರ ಹುಕುಂ ಜಾರಿಯಲ್ಲಿರುತ್ತದೆ ಎನ್ನುವ ವಾಸ್ತವ ತಳಸ್ಪರ್ಶಿಯಲ್ಲಿ ಬಿಎಸ್‌ವೈ ಅವರಿಗೆ ಸಲಾಂ ಹಾಕುವ ಅನಿವಾರ್ಯತೆಗಳಿದೆ.

 

Gara Srinivas

Gara Srinivas

Leave a comment

error: Content is protected !!