ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಶಿವಮೊಗ್ಗದ I ಬಿಜೆಪಿ ಜಾಹಿರಾತುಗಳಿಂದಲೇ ಪತ್ರಿಕಾ ಬದುಕೇ..? I
ಸುದೀರ್ಘ ೫೦ ವರುಷದ ರಾಜಕೀಯ ಜೀವನದೊಂದರ ಮೈಲಿಗಲ್ಲಿಗಾಗಿ, ಬಿ.ಎಸ್. ಯಡಿಯೂರಪ್ಪನವರ ಕುರಿತಾದ “ಬಿಎಸ್ವೈ ಅಭಿಮಾನೋತ್ಸವ” ಸಮಾರಂಭ ನಾಡಿದ್ದು ಶನಿವಾರ ಚಿತ್ರದುರ್ಗದಲ್ಲಿ ಜರುಗುತ್ತಿದೆ, ಈ ನಿಮಿತ್ತ ಶಿವಮೊಗ್ಗದ ಬಿಜೆಪಿಯಲ್ಲೊಬ್ಬ ಪತ್ರಿಕಾ ವಲಯದಲ್ಲಿ ಪಾಲುಗಳು ಮಾಡಿ ಜಾಹಿರಾತುಗಳನ್ನು ಹಂಚಿಕೆ ಮಾಡುತ್ತಿದ್ದಾನೆ, ದಿನಪತ್ರಿಕೆ, ವಾರಪತ್ರಿಕೆ, ಮಾಸಿಕ ಮ್ಯಾಗಜಿನ್ ಹಾಗೂ ಅಧಿಕೃತ ವೆಬ್ಸೈಟ್ ಮೀಡಿಯಾಗಳಲ್ಲಿ ತನಗೆ ಬೇಕಾಗಿದ್ದು, ಕಿವಿಯಲ್ಲಿ ಊದಿದ್ದು, ಎಲ್ಲಾ ಸೇರಿ ತಾನೇ ಮೀಡಿಯಾ ಮೀಡಿಯೇಟರ್ ಅಥವಾ ಬ್ರೋಕರಿಂಗ್ ಎಂದೇ ಮೊಹರೊತ್ತಿಕೊಂಡು ಇಂತಿವುಗಳಿಗೆ ಅನ್ನದಾತನೆಂದು ಭ್ರಮಿಸಿಕೊಂಡಿರುವುದು ಜಿಲ್ಲಾ ಬಿಜೆಪಿ ತುರ್ತು ಅರ್ಥ ಮಾಡಿಕೊಳ್ಳುತ್ತದೆಯೇ..?
ಬಿಜೆಪಿಯಲ್ಲಿ ಈ ಕುರಿತಂತೆ ಯಾವುದೇ ತಾರತಮ್ಯವಿಲ್ಲದಿರುವುದು ದರ್ಶಿಸಿಕೊಂಡಿತ್ತು, ಆದರೆ ಇತ್ತೀಚೆಗೆ ಈ ಜವಾಬ್ದಾರಿಯನ್ನು ಕಾಡಿ-ಬೇಡಿ ವಹಿಸಿಕೊಂಡಿರುವ ಈ ಅಧಮನಿಗೆ ಪತ್ರಿಕಾ ಅಭಿವ್ಯಕ್ತಿಗಳು, ಶಿವಮೊಗ್ಗದ ವಸ್ತು ಸ್ಥಿತಿಗಳ ಬಗ್ಗೆ ತುಸು ಅರಿವಿಲ್ಲದಿದ್ದರೂ ಓರ್ವ ಗುಮಾಸ್ತನಂತೆ ಸಾರ್ವಜನಿಕ ವಲಯದಲ್ಲಿ ತೂರಿಕೊಂಡಿರುವುದು ಮುಂದೆ ಜಿಲ್ಲಾ ಬಿಜೆಪಿಗೆ ಅತೀವ ಕಂಟಕನಾಗುವುದರಲ್ಲಿ ಯಾವುದೇ ನಿಸ್ಸಂದೆಹವಿಲ್ಲವಾಗಿದೆ,
ಇನ್ನೂ ತನಗೆ ಹಾಗೂ ಸ್ವಜನತೆಗೆ ಪೂರ್ವಭಾವಿಯಾಗಿ ಮೃಗಿ ವಿಷವರ್ತುಲವನ್ನು ಮೈಗೂಡಿಸಿಕೊಂಡಿರುವ ಈತ ಮಾತು ಮುಂದು ಮಾಡಿ ಈ ಪಟ್ಟಿಯನ್ನು ಸ್ವತಃ ಸಂಸದರಾದ ಬಿ.ವೈ ರಾಘವೇಂದ್ರ ಹಾಗೂ ರಾಜ್ಯಾಧ್ಯಕ್ಷರಾದ ಬಿ.ವೈ ವಿಜಯೇಂದ್ರರವರುಗಳೇ ಸಿದ್ದಪಡಿಸಿದ್ದಾರೆಂದು ಕೆಲ ನಗರದ ಪತ್ರಕರ್ತರು ಪೋನಾಯಿಸಿದಾಗ ಅವರ ಹೆಸರಿನಲ್ಲಿ ವಾಕರಿಸಿಕೊಳ್ಳುತ್ತಿರುವ ಈ ಅಧಮ ಯಾರೆಂದು ಗೊತ್ತಿಲ್ಲದಿದ್ದರೂ ಆರಂಭಿಕ ಬಜರಂಗದಳ ಹಾಗೂ ವಿಹಿಂಪ ಮೂಲಕ ಜಿಲ್ಲಾಧ್ಯಕ್ಷರಾಗಿರುವ ಜಗದೀಶ್ ರವರು ಹಾಗೂ ನಗರ ಶಾಸಕ ಚೆನ್ನಬಸಪ್ಪನವರು ಇತ್ತಕಡೆ ಚಿತ್ತವರಿಸಿ ಈ ಅಧಮನಿಗೆ ಬೇರೆ ಜವಾಬ್ಧಾರಿಯನ್ನು ನೀಡುವಂತಾಗಲಿ ಎನ್ನುವುದು ಅನೇಕರ ಅಭಿಪ್ರಾಯವಾಗಿದೆ,
ಇನ್ನೂ ಮುತ್ಸದ್ದಿ ರಾಜಕಾರಣಿ ಬಿ.ಎಸ್ ಯಡಿಯೂರಪ್ಪನವರ ೫೦ನೇ ವರ್ಷದ ರಾಜಕೀಯ ಪಥಕೆ ಸೂರ್ಯಗಗನ ಬಳಗ ಅಭಿನಂದಿಸುತ್ತದೆ.

