September 24, 2026

I ಇವ್ರಿಗೆ ಆಜಾದಿ ಬೇಕಂತೆ..?! I

0
file_00000000856881fa8a02268eca03ca9f (1)

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಇವ್ರಿಗೆ ಆಜಾದಿ ಬೇಕಂತೆ..?! I

ನಾವಿನ್ನೂ ಗುಲಾಮಿಗಳೇ..?
ನನ್ನ ಭಾರತ ಯಾರ ಹಿಡಿತದಲ್ಲಿದೆ,
ಮನುವಾದ, ಬ್ರಾಹ್ಮಣವಾದ, ,
ಇನ್ನಾವ ಸಿದ್ದಾಂತದಲ್ಲಿದೆ..?!

ಬಲಪಂಥೀಯರು ದ್ರೋಹಿಗಳೇ..?!
ಬಿಜೆಪಿ ಪಕ್ಷ ಈ ದೇಶಕ್ಕೆ ಮಾರಕವೇ,
ಆರೆಸ್ಸೆಸ್ ಎದೆಚರಿಗೆಗಳು ವಿದ್ರೋಹಿಯೇ..?
ಇದೆಂತಹ ಕೂಗು “ಆಜಾದಿ”
ನಾವು ಸ್ವಾತಂತ್ರ್ಯ ಭಾರತದಲ್ಲಿಲ್ಲವೇ,

ಖಾಲಿ ಸುಳ್ಳಿನ ಸರಪಳಿಗಳಲಿ,
ಬಿಗಿತಗೊಳಿಸುವ ಕೂಗುಗಳಲಿ,
ಅತಂತ್ರತೆ, ಅರಾಜಕತೆ, ಅಭದ್ರತೆ,
ಸೃಷ್ಟಿಸುವ ಹುನ್ನಾರಗಳಲಿ
ಆಜಾದಿ, ಆಜಾದಿ ಎನ್ನದಿರಿ, ಅಬ್ಬರಿಸದಿರಿ,

ನನ್ನ ಭಾರತದಲಿ ಬಲಿದಾನಗಳ ಚರಿತ್ರೆಗಳಿದೆ,
ಇಂದಿಗೂ ಸ್ವಾತಂತ್ರ್ಯವಾಗಿದೆ, ಸಮೃದ್ದಿಯಾಗಿದೆ,
ದೇಶವಾಸಿಗಳ ಅಭಿಮಾನದಲ್ಲಿದೆ,
ಭಾರತದಲ್ಲಿ ಅನೇಕತೆಗಳ ಪಿಡುಗುಗಳಿದೆ..?
ಆದರೂ ಏಕತೆಯಲಿ ವೈವಿಧ್ಯತೆಗಳಿದೆ,

ಕ್ರಾಂತಿಕಾರಿಗಳ ಭಾರತವಿದು,
ದೇಶಾಭಿಮಾನಿಗಳ ಭಾರತವಿದು,
ಆಜಾದಿ ಹೆಸರಿನಲಿ ದೇಶವನ್ನ ಕೆಡವದಿರಿ,
ಆಜಾದಿ ಹೆಸರಿನಲಿ ಶ್ರೀರಾಮನನ್ನ ನಿಂದಿಸದಿರಿ,
ಭಾರತಮಾತೆಯ ಅಪಾಹಸ್ಯಗೈಯದಿರಿ,
ಆಜಾದಿ ಹೆಸರಿನಲಿ ಜನಜೀವನ ವಿಂಗಡಿಸದಿರಿ,
ಆಜಾದಿ ಹೆಸರಿನಲಿ ದೇಶದ್ರೋಹಿತ್ವ ಬಿತ್ತದಿರಿ,

ನನ್ನ ಭಾರತದಲ್ಲಿ ಸಂವಿಧಾನ ಗಟ್ಟಿಯಾಗಿದೆ,
ಸಮಷ್ಟಿ ಮನಸಿನೊಳು ಅಭಿವ್ಯಕ್ತಿಸಬಹುದಾಗಿದೆ,
ಈ ಜೀವದ ಸಂವಿಧಾನ ಯಾರ ಕೆಡುವಲು ಸಾಧ್ಯವಿಲ್ಲ,.
ಆಜಾದಿ ಹೆಸರಿನಲಿ ಸುಳ್ಳುಗಳ ಹಂಚದಿರಿ,

 

Spread the love

Leave a Reply

Your email address will not be published. Required fields are marked *

error: Content is protected !!