ಇನ್ನೆಲ್ಲಿ ನಿಲ್ದಾಣ..?
ಅಲೆಮಾರಿಯಾದಂತಾಗಿ ಮನವು,
ಅತ್ತಿತ್ತಾ ಅಲೆದಾಡುತಲೇ!ನನ್ನದಲ್ಲದ…
ಅಲೆಗಳ ಬಳಗದ ಬಲೆಯಲಿ ತೇಲಾಡುತ,
ಅರೆ ಭಾವದ ಭವದ ಬದುಕ ಹೆಣೆದಿದೆ.
ಇತ್ತ ಚಿತ್ತ ಬಯಸಿದ ಬದುಕೂ ಇಲ್ಲ…!
ಕತ್ತಲೂ ಕಳೆಯಲಿಲ್ಲ, ತೂಗುಯ್ಯಾಲೆಯ
ತರದಿ, ಆಚಿಂದೀಚೆಗೆ ತೂಗಾಡುತ,ಬಂದೆರಗುವ
ತುಸು ಗಾಳಿಗೂ ಅಂಜುವಂತಾಗಿದೆ.
ಬದುಕಲಿ ಬಂದುಹೋಗುವವರು,
ಭಾಂದವರಾಗರು ಬಂಧುಗಳಾಗರು,
ಅವರೆಂದಿಗೂ ಅಬ್ದಿಯಲಿ ಬಂದೆರಗುವ ಅಲೆಗಳಂತವರು,
ದಡವ ಮುಟ್ಟಿ ಕಡಲೊಡಲ ಸೇರುವವರು,
ಇನ್ನೆಲ್ಲಿ ನಿಲ್ದಾಣ..?.
-ಶಾಲಿನಿ.ಡಿ.ವಿ

