September 24, 2026

I ರೋಟರಿ ಕ್ಲಬ್ ಶಿವಮೊಗ್ಗ ರಿವರ್‌ಸೈಡ್ I ಅಧ್ಯಕ್ಷರಾಗಿ I ಕೆ.ಎಸ್.ವಿಶ್ವನಾಥ ನಾಯಕ I ಆಯ್ಕೆ I

0
08-07-2025 rotary riverside news vishwanath nayak

I ರೋಟರಿ ಕ್ಲಬ್ ಶಿವಮೊಗ್ಗ ರಿವರ್‌ಸೈಡ್ I ಅಧ್ಯಕ್ಷರಾಗಿ I ಕೆ.ಎಸ್.ವಿಶ್ವನಾಥ ನಾಯಕ I ಆಯ್ಕೆ I

ಶಿವಮೊಗ್ಗ: ರೋಟರಿ ಕ್ಲಬ್ ಶಿವಮೊಗ್ಗ ರಿವರ್ ಸೈಡ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಕೆ.ಎಸ್.ವಿಶ್ವನಾಥ ನಾಯಕ ಹಾಗೂ ಕಾರ್ಯದರ್ಶಿಯಾಗಿ ನಿತಿನ್ ಯಾದವ್ ಜಿ ಆಯ್ಕೆಯಾಗಿದ್ದಾರೆ.

ಕೃಷಿ ನಗರದಲ್ಲಿರುವ ರೋಟರಿ ಕ್ಲಬ್ ರಿವರ್ ಸೈಡ್ ಭವನದಲ್ಲಿ ಜುಲೈ 9 ರಂದು ಬೆಳಗ್ಗೆ 10.30ಕ್ಕೆ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಮ್ಮಿಕೊಳ್ಳಲಾಗಿದೆ. ರೋಟರಿ ಪಬ್ಲಿಕ್ ಇಮೇಜ್ ಕೋ ಆರ್ಡಿನೇಟರ್ ಅಭಿನಂದನ್ ಶೆಟ್ಟಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಎಂ ಎಸ್, ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ವಲಯ 10ರ ಸಹಾಯಕ ಗವರ್ನರ್ ಕೆ.ಪಿ.ಶೆಟ್ಟಿ, ಜೋನಲ್ ಲೆಫ್ಟಿಂನೆಂಟ್ ಎಸ್.ಪಿ.ಶಂಕರ್ ಕಾರ್ಯಕ್ರಮದಲ್ಲಿ ಹಾಜರಿರುವರು. ರೋಟರಿ ಕ್ಲಬ್ ರಿವರ್ ಸೈಡ್ ನಿಕಟಪೂರ್ವ ಅಧ್ಯಕ್ಷ ಬಸವರಾಜ್ ಎಂ ಆರ್, ಕಾರ್ಯದರ್ಶಿ ವಿನಯ್ ಚೌಡಿಕೆ ಉಪಸ್ಥಿತರಿರುವರು. ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Spread the love

Leave a Reply

Your email address will not be published. Required fields are marked *

error: Content is protected !!