Sunday, August 2, 2026
HomeಅಂಕಣI ಸಿಬಿಲ್ ಎಂಬುವ I ಡಿಜಿಟಲ್ ಹೈಡ್ರಾಮ I ಇಲ್ಲಿದೆ ಗ್ರೌಂಡ್ ರಿಪೋರ್ಟ್ I

I ಸಿಬಿಲ್ ಎಂಬುವ I ಡಿಜಿಟಲ್ ಹೈಡ್ರಾಮ I ಇಲ್ಲಿದೆ ಗ್ರೌಂಡ್ ರಿಪೋರ್ಟ್ I

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಸಿಬಿಲ್ ಎಂಬುವ I ಡಿಜಿಟಲ್ ಹೈಡ್ರಾಮ I ಇಲ್ಲಿದೆ ಗ್ರೌಂಡ್ ರಿಪೋರ್ಟ್ I

 ರಾಷ್ಟ್ರೀಯ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬದಲಾವಣೆ ಎನ್ನುವುದು ಬಲು ಜರೂರಿ ಅಗತ್ಯವಿದೆ, ಇನ್ನೂ ಖಾಸಗಿ ಬ್ಯಾಂಕ್ ಕ್ಷೇತ್ರಗಳಲ್ಲೂ ವಸೂಲಿ ಹಾಗೂ ಆರ್‌ಬಿಐ ನಿಯಮಾವಳಿ ಮೀರಿದ ಬಡ್ಡಿ ಹೇರಿಕೆಗಳಿಗೆ ಕಡಿವಾಣ ಹಾಕದೇ ಹೋದರೆ ಇದು ನಾಗರೀಕ ವಲಯದಲ್ಲಿ ಶಾಪವಾಗಿ ಕಾಡದೆ ಇರಲಾರದು, ಇಂತಹದೊಂದು ಅಸಲಿ ಮ್ಯಾಟರ್‌ಗಳನ್ನು ನಾಗರೀಕ ಸಮೂಹದ ಮುಂದಡಿ ವಿಸ್ತ್ರತಗೊಳಿಸಲಾಗಿದೆ.

ಬ್ಯಾಂಕಿಂಗ್ ಕ್ಷೇತ್ರ ಹಣಕಾಸು ವಲಯವಾಗಿದೆ ಅದು ನಾಗರೀಕ ಗ್ರಾಹಕರಿಗೆ ಬ್ಯಾಂಕ್ ಖಾತೆಗಳನ್ನು ತೆರೆಯಲು ಅವಕಾಶವನ್ನು ಮಾಡಿಕೊಡುತ್ತದೆ ಅಲ್ಲದೆ ಅದೇ ವಹಿವಾಟಿನ ಆಧಾರದ ಮೇಲೆ ಕನಿಷ್ಠ ಸಾಲದಿಂದ ಗರಿಷ್ಠ ಸಾಲದವರೆಗೆ ಆಯಾ ವ್ಯವಹಾರಿಕ ಪ್ರಾಜೆಕ್ಟ್‌ಗಳಿಗೆ ಸೌಲಭ್ಯವನ್ನು ಕಲ್ಪಿಸಿಕೊಡುತ್ತದೆ ಇದಕ್ಕೆ ಸೆಕ್ಯೂರಿಟಿ ಮಾನದಂಡಗಳನ್ನು ಮಾಡಿಕೊಂಡಿರುತ್ತದೆ, ಅಲ್ಲದೆ ಠೇವಣಿಗಳನ್ನು ಪಡೆಯಲು ಮತ್ತು ಸಾಲ ನೀಡಲು ಪರವಾನಗಿಯನ್ನು ಪಡೆದಿರುತ್ತದೆ, ಸುರಕ್ಷಿತ ಹೂಡಿಕೆ, ಹಣದ ವಿನಿಮಯ, ವಿವಿಧ ವಹಿವಾಟು ಸೌಲಭ್ಯಗಳನ್ನು ಒದಗಿಸಲು ಇದೇ ಬ್ಯಾಂಕಿಂಗ್ ಕ್ಷೇತ್ರಗಳಿಗೆ ಅನುಮತಿ ಇರುತ್ತದೆ, ಯಾವುದೇ ರಾಷ್ಟ್ರೀಯ ಬ್ಯಾಂಕುಗಳೇ ಆಗಿರಲಿ, ಖಾಸಗಿ ಒಡೆತನದ ಬ್ಯಾಂಕ್‌ಗಳೇ ಆಗಿರಲಿ, ಸಹಕಾರಿ ಕ್ಷೇತ್ರದ ವಲಯವೇ ಆಗಿರಲಿ, ಇಂತಿವುಗಳು ನಾಗರೀಕ ಸಮುದಾಯಗಳ ನಡುವೆ ಆರ್ಥಿಕ ನಿರ್ವಹಣೆಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ ನಿಯಮಾವಳಿಗಳನ್ನು ಅಕ್ಷರಶಃ ಪಾಲಿಸಬೇಕಾಗಿದೆ ಇದು ಪಾಲಿಸುತ್ತಿದಿಯಾ..? ಎನ್ನುವ ಬಹುತೇಕ ಪ್ರಶ್ನೆಗಳಿಗೆ ಆಯಾ ಜಿಲ್ಲಾ ವ್ಯಾಪ್ತಿಯಲ್ಲಿರುವ ಲೀಡ್ ಬ್ಯಾಂಕ್ ವ್ಯವಸ್ಥಾಪಕರುಗಳೇ ಉತ್ತರಿಸಬೇಕಾಗಿದೆ. ಗ್ರಾಹಕರಿಗೆ ಚೆಕ್ ಅಥವಾ ಪಾವತಿಯ ರೂಪದಲ್ಲಿ ಹಣವನ್ನು ನೀಡುವುದು. ಬ್ಯಾಂಕ್‌ಗಳು ಗ್ರಾಹಕರಿಗೆ ಪಾವತಿಸುವ ಮತ್ತು ಸಂಗ್ರಹಿಸುತ್ತದೆ ಎನ್ನುವುದಾದರೆ ರಾಷ್ಟ್ರೀಯ ಬ್ಯಾಂಕುಗಳು ಹೀಗೆ ಹೇಳಿದಂತೆ ಕಾರ್ಯನಿರ್ವಹಿಸುತ್ತಿದಿಯಾ..? ಅಥವಾ ತಮ್ಮ ಬ್ಯಾಂಕಿನ ಆರ್ಥಿಕ ಟಾರ್ಗೆಟ್ ವೇಗದ ವೃದ್ದಿಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ ನಿಯಮಾವಳಿಗಳನ್ನು ಉಲ್ಲಂಘಿಸುತ್ತಿದಿಯಾ..?

ರಾಜ್ಯ ಹಾಗೂ ಕೇಂದ್ರ ಸರಕಾರದ ಸಚಿವ ಸಂಪುಟದಲ್ಲಿ ದಾಖಲಾದ ಯೋಜನಾ ಸೌಲಭ್ಯಗಳು ಆಯಾ ಕಾಲಘಟ್ಟದಲ್ಲಿ ನೀಡಿ ಪ್ರಗತಿ ಸಾದಿಸುತ್ತಿದಿಯಾ..? ಈಗಾಗಲೇ ಕೇಳಿ ಬಂದಿರುವ ಹಾಗೂ ಜಾರಿಯಲ್ಲಿರುವಂತೆ ಜಾತಿವಾರು ಬೇದಗಳಿಗೆ ಬ್ಯಾಂಕಿಂಗ್ ಆಡಳಿತ ಗುರಿಯಾಗಿದಿಯಾ..? ಸಾಲದ ಗುರಿಯನ್ನು ಉಳ್ಳವರಿಗೆ ಸೀಮಿತಗೊಳಿಸಿರುವ ಈ ಹೊತ್ತಿನ ಬ್ಯಾಂಕಿಂಗ್ ಕ್ಷೇತ್ರ ಸಾಲವನ್ನು ಬ್ಯಾಕ್-ಟು-ಬ್ಯಾಕ್ ಪಡೆಯುವಷ್ಟೇ ಮಗ್ನತೆಯಾಗಿ ಮಾನವೀಯ ಮೌಲ್ಯಗಳನ್ನು ಗಾಳಿಗೆ ತೂರಿಕೊಂಡಿದಿಯಾ..?

ಗ್ರಾಹಕರಿಗೆ ಬ್ಯಾಂಕಿಂಗ್ ಕ್ಷೇತ್ರದಿಂದ ಭಯಬೀತಿ ಹುಟ್ಟುಹಾಕುವ ಎಲ್ಲಾ ತರಾವರಿಗಳನ್ನು ಮೈಗೂಡಿಸಿಕೊಂಡಿರುವ ಅನೇಕ ಬ್ಯಾಂಕಿಂಗ್ ಅಧಿಕಾರಿಗಳ ಮಾನಸೀಕತೆ ಇಂದಿಗೆ ನಾಗರೀಕ ವಲಯದಲ್ಲಿ ಅಪಸ್ವರ ಎದ್ದಿದೆ, ಅಲ್ಲದೆ ಅತೀವ ರಿಸರ್ವ್ ಬ್ಯಾಂಕ್ ನಿಯಮಾವಳಿಗಳಲ್ಲದ ನೀತಿಗಳನ್ನು ತೂರಿಸಿಕೊಂಡು ಗ್ರಾಹಕರಿಗೆ ಇನ್ನಿಲ್ಲದ ಕಿರುಕುಳ ನೀಡುತ್ತಿರುವ ಕುರಿತಾಗಿ ಅದೆಷ್ಟೋ ಪ್ರಕರಣಗಳಿಂದ ದೃಡಪಡುತ್ತದೆ,
ಹೀಗಾದರೆ ಅಸಲಿ ಬ್ಯಾಂಕಿಂಗ್ ವ್ಯವಸ್ಥೆಗಳು ಅವರವರ ಮ್ಯಾನೇಜಿಂಗ್ ನಿಯಮಗಳಿಗೊಳಪಟ್ಟರೆ ರಿಸರ್ವ್ ಬ್ಯಾಂಕ್ ನಿಯಮಗಳು ಅತ್ಯಗತ್ಯವೇ..? ಗ್ರಾಹಕರ ವಿವಿಧ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲದಿದ್ದರೆ ದಂಡ ವಸೂಲಾತಿ, ಹೆಚ್ಚಿಗೆ ವಹಿವಾಟು ನಡೆಸಿದರೂ ಅದಕ್ಕೆ ವಿನಿಮಯದ ಹೆಸರಿನಲ್ಲಿ ಹಣ ಕಡಿತಗೊಳಿಸುವುದು, ಆನ್‌ಲೈನ್ ಟ್ರಾನ್ಸ್ಯಾಕ್ಷನ್, ಎಟಿಎಂ, ಚೆಕ್ ಬೌನ್ಸ್, ಇಸಿಎಸ್, ಹೀಗೆ ತರಾವರಿ ದಂಡ, ಸೇವಾ ಶುಲ್ಕ ವಿಧಿಸಿ ಖಾತೆಗಳಿಂದಲೇ ಗ್ರಾಹಕರಿಗೆ ತಿಳಿಯಗೊಡದೆ ಕಡಿತಗೊಳಿಸುವ ನಿಯಮಗಳು ರಿಸರ್ವ್ ಬ್ಯಾಂಕ್ ಎಲ್ಲಿಯಾದರು ಹೇಳಿಕೊಂಡಿದಿಯೇ..?

ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಹೀಗೊಂದು ದಂಡ ವಸೂಲಾತಿ ನಿಯಮ, ಸೇವಾ ಶುಲ್ಕ ಕಡಿತಗೊಳಿಸುವ ನಿಯಮಗಳಿಂದ ಗ್ರಾಹಕರು ವಂಚಿತರಾಗುತ್ತಿದ್ದರೆ ಇನ್ನೊಂದೆಡೆ ಕಿರು ಸಾಲ ಅಥವಾ ಗರಿಷ್ಠ ಸಾಲ ಅಥವಾ ವಿವಿಧ ಸರಕಾರಿ ಯೋಜನೆಗಳ ಸಾಲವೇ ಆಗಿರಲಿ, ವಿದ್ಯಾರ್ಥಿ ದಿಸೆಯಲ್ಲಿ ಪಡೆದ ಸಾಲವೇ ಆಗಿರಲಿ,… ಮುಖ ನೋಡಿ ಮಣೆ ಹಾಕುವಂತೆ, ಒಬ್ಬೊಬ್ಬರಿಗೆ ಒಂದೊಂದು ರೀತಿ ಸಾಲದ ಮೇಲಿನ ಬಡ್ಡಿಗಳ ಬರೆ ಎಳೆಯುವುದು ಕೂಡ ರಾಷ್ಟ್ರೀಯ ಬ್ಯಾಂಕಿಂಗ್ ಕ್ಷೇತ್ರದಲ್ಲಾದರೆ ಯಾಕೆ ಬೇಕಿದೆ…ರಾಜ್ಯ ಹಾಗೂ ಕೇಂದ್ರ ಸರಕಾರದ ಯೋಜನೆಗಳು ಅಲ್ಲವೇ..?ವಿದ್ಯಾರ್ಥಿಗಳು ಉನ್ನತ ವ್ಯಾಸಾಂಗಕ್ಕೆ ಪಡೆದ ಸಾಲವನ್ನು ಆಯಾ ವ್ಯಾಸಾಂಗದ ಅವಧಿ ಪೂರೈಸುವವರೆಗೆ ಬಡ್ಡಿ ವಿಧಿಸುವ ಹಾಗಿಲ್ಲ ಎಂದು ಸರಕಾರದ ಸಚಿವ ಸಂಪುಟಗಳಲ್ಲಿ ದಾಖಲು ಮಾಡಿಕೊಂಡರೆ ನಿಜಕ್ಕೂ ಈ ದಾಖಲು ಸಾಲಿಗೆ ಬ್ಯಾಂಕಿಂಗ್ ಮ್ಯಾನೇಜರ್‌ಗಳು ಯಾವುದೇ ಕಾಸಿನ ಕಿಮ್ಮತ್ತು ನೀಡದೆ ವಿದ್ಯಾರ್ಥಿಗಳು ಪಡೆದ ಸಾಲ ಸೌಲಭ್ಯದ ದಿನಮಾನದಿಂದಲೇ ಕೂಡಿ, ಭಾಗಿಸಿ, ಬಡ್ಡಿ ಬರೆ ಎಳೆದು ಕಟ್ಟಬೇಕು ಎಂದು ತಾಕೀತು ಮಾಡುತ್ತಿರುವುದು ಆಯಾ ಜಿಲ್ಲಾ ವ್ಯಾಪ್ತಿಯ ಲೀಡ್ ಬ್ಯಾಂಕ್ ವ್ಯವಸ್ಥೆಗೆ ಗೊತ್ತೇ..? ಇಂತಹ ಲೀಡ್ ಬ್ಯಾಂಕ್‌ಗಳಿಂದ ಇಂತಹದ್ದನ್ನು ಮಟ್ಟಹಾಕಲು ಸಾಧ್ಯವಾಗದೇ ಹೋದರೆ ಲೀಡ್ ಬ್ಯಾಂಕ್‌ಗಳು ಬಾಗಿಲು ಹಾಕಿಕೊಳ್ಳುವುದು ಸೂಕ್ತವಲ್ಲವೇ..?

ಇನ್ನೊಂದು ಅತೀ ಆಚ್ಚರಿ ಎಂದರೆ ವಸೂಲಾತಿಗಾಗಿ ಬಳಸಿಕೊಂಡ ಟೆಕ್ನಾಲಜಿ : ಯಾವುದೇ ಸಾಲ ಸೌಲಭ್ಯ ಪಡೆದ ವ್ಯಕ್ತಿ ಜೀವನವನ್ನು ಧಾವಂತಕ್ಕೆ ದೂಡುವ ಅಮಾನವೀಯತೆ ಇದರಿಂದ ಆಗುತ್ತಿರುವುದು ಲೀಡ್ ಬ್ಯಾಂಕ್‌ಗಳಿಗಿನ್ನೂ ಆರಿವಿಗೆ ಬಂದಿಲ್ಲ, ಹಿಂದಿನ ವಸೂಲಾತಿ ಪ್ರಕ್ರಿಯೇಗಳು ಹೀಗಿಲ್ಲದಿದ್ದರೂ ಇದೀಗ ಆಧುನಿಕತೆಯ ಬದಲಾವಣೆಯ ಟೆಕ್ನಾಲಜಿಯನ್ನು ಬಳಸಿಕೊಂಡು ಒಂದು ದಿನಕ್ಕೆ ಎರೆಡೆರೆಡು ಭಾರಿ ಸಾಲದ ಸಂದೇಶವನ್ನು ಲವ್ ಲೆಟರ್ ಕಳುಹಿಸಿದಂತೆ ಕಳಿಸುವುದು, ಅದರಲ್ಲಿ ಇನ್ನಿಲ್ಲದ ಸಾಲುಗಳನ್ನು ಕಾಣಿಸುವುದು, ನಡುರಾತ್ರಿಯು ಬಿಡದೇ ಗ್ರಾಹಕನಿಗೆ ಎಚ್ಚರಿಸುವ ಈ ಸಾಲದ ಸಂದೇಶಗಳು ಸದ್ದಿನೊಂದಿಗೆ ಬಂದು ಎದೆಬಡಿತವನ್ನು ಹೆಚ್ಚಿಸುವಂತೆ ಮಾಡುತ್ತಿರುವುದು ಸಾಲ ವಸೂಲಾತಿ ಕ್ರಮವೇ..? ಇದಕ್ಕೂ ಸಾಲದೆಂಂಬಂತೆ ಬ್ಯಾಂಕಿಂಗ್ ಅಧಿಕಾರಿಗಳು ಒಂದು ಕಂತು ಬಾಕಿ ಉಳಿಸಿಕೊಂಡ ಗ್ರಾಹಕನಿಗೆ ಪೋನಾಯಿಸಿ, ಹಣ ಕಂತು ಬಾಕಿ ಉಳಿದಿದೆ ಇದೀಗಲೇ ಪಾವತಿಸಿ ನಿಮ್ಮ ಮನೆ ಎಲ್ಲಿ ಬರುತ್ತದೆ, ಕಚೇರಿ ಎಲ್ಲಿದೆ..? ವಿದ್ಯಾರ್ಥಿಗಳಾಗಿದ್ದರೆ ಅವರು ಎಲ್ಲಿ ಸಿಗುತ್ತಿರಾ..?

ನಿಮ್ಮ ಸಿಬಿಲ್‌ಗೆ ತೊಂದರೆಯಾಗುತ್ತದೆ ಈ ಕೂಡಲೇ ಪಾವತಿಸಿ ಎಂದೆಲ್ಲಾ ಪೋನಾಯಿಸುವುದು ಕ್ರಮವೇ..? ಇನ್ನೂ ಮೂರು ಕಂತುಗಳು ಬಾಕಿ ಉಳಿಸಿಕೊಂಡರೆ ಅಂತಹ ಗ್ರಾಹಕನ ಮೇಲೆ ಕ್ರಮ ಕೈಗೊಳ್ಳಲಾಗುವುದು, ಪೊಲೀಸರಿಗೆ ಒಪ್ಪಿಸಲಾಗುವುದು, ನೋಟಿಸ್ ನೀಡುವುದು, ಮನೆ ಅಥವಾ ಕಛೇರಿ ಬಳಿ ಹೋಗಿ ಬೆದರಿಸುವ ಕಯ್ಯಾಲಿಗಳು ಬ್ಯಾಂಕಿಂಗ್ ಕ್ಷೇತ್ರ ಹೀಗೆಯೆ ಇರಬೇಕು ಎನ್ನುವ ರಿಸರ್ವ್ ಬ್ಯಾಂಕ್ ನಿಯಮಾವಳಿಗಳೇ..? ಎನ್ನುವುದು ಲೀಡ್ ಬ್ಯಾಂಕುಗಳು ಉತ್ತರಿಸಬೇಕಾಗಿರುವ ಜರೂರತ್ತುಗಳಿವೆ.ಲೀಡ್ ಬ್ಯಾಂಕ್‌ಗಳೇ ಆಗಲಿ ಅಥವಾ ರಿಸರ್ವ್ ಬ್ಯಾಂಕಿನ ಅಧಿಕಾರಿಗಳೇ ಆಗಲಿ ಇಂತಹ ನೀತಿಗೆಟ್ಟ ಬ್ಯಾಂಕಿಂಗ್ ವ್ಯವಸ್ಥಾಪಕರಿಗೆ ಹಾಗೂ ವಸೂಲಾತಿ ಅಧಿಕಾರಿಗಳ ಮೇಲೆ ಅಗತ್ಯ ಕಾನೂನು ಕ್ರಮ ಜರುಗಿಸಬೇಕಾಗಿದೆ ಅಲ್ಲದೆ ಈ ಕೂಡಲೇ ಸಾಲದ ಸಂದೇಶದ ರೂಪದಲ್ಲಿ ದಿನಕ್ಕೆರೆಡು ಭಾರಿ ಸಾಲ ಮರುಪಾವತಿಸಿ ಎಂದು ಬರುವ ಡೆತ್ ಸಂದೇಶಗಳ ಸ್ವರೂಪಿ ಟೆಕ್ನಾಲಜಿ ಕ್ರಮವನ್ನು ಸ್ಥಗಿತಗೊಳಿಸುವಂತೆ ಆಯಾ ಬ್ಯಾಂಕುಗಳಿಗೆ ನಿರ್ದೇಶನ ನೀಡುವಂತಾಗಲಿ ಎನ್ನುವುದು ಇತ್ಯಾದಿ ಪತ್ರಿಕೆಯ ಆಶಯವಾಗಿದೆ,

      ಸಾಲ ಸೌಲಭ್ಯ ಪಡೆದ ಗ್ರಾಹಕ ನಾಗರೀಕರು ಒಮ್ಮೆಲೆ ಆತಂಕ ಪಡುವ ಆಗತ್ಯವಿಲ್ಲ : ಬ್ಯಾಂಕಿಂಗ್ ಅಧಿಕಾರಿಗಳು ಮೂರು ತಿಂಗಳು ಪಾವತಿ ಮಾಡದ ಗ್ರಾಹಕರಿಗೆ ಬೆದರಿಸಲು ವಸೂಲಾತಿ ಎಜೆನ್ಸಿಗಳಿಗೆ ನೀಡಿದರೆ ಅದೊಂದು ನಿಯಮಗಳು ಉಲ್ಲಂಘನೆ ಎನ್ನುವುದಾಗಿದೆ, ಇನ್ನೂ ವಸೂಲಾತಿ ಎಜೆನ್ಸಿಗಳು ಬೆದರಿಕೆಯೊಡ್ಡುವುದಾಗಲಿ ಅಥವಾ ಪೊಲೀಸ್ ದೂರು ನೀಡಿ ಪ್ರಥಮ ವರ್ತಮಾನ ವರದಿ ದಾಖಲು ಮಾಡುವುದು ಸಾಧ್ಯವಿಲ್ಲ.. ಇದೊಂದು ಕಾನೂನು ಬಾಹಿರವಾಗಿದೆ,

ಏಕೆಂದರೆ ಇದೊಂದು ಸಿವಿಲ್ ಮ್ಯಾಟರ್ ಆಗಿರುವುದರಿಂದ ಪೊಲೀಸರು ಮಧ್ಯೆ ಪ್ರವೇಶ ಮಾಡುವುದಕ್ಕೆ ಬರುವುದಿಲ್ಲ, ಈ ಪೊಲೀಸ್ ಬೆದರಿಕೆಗಳನ್ನು ಸುಳ್ಳು ಹುಟ್ಟು ಹಾಕುವುದು ಬ್ಯಾಂಕಿಂಗ್ ಹಾಗೂ ವಸೂಲಾತಿ ಎಜೆನ್ಸಿಗಳ ಡ್ರಾಮವೇ ಆಗಿರುತ್ತದೆ, ಎನ್‌ಪಿ ಹೆಸರಿನಲ್ಲಿ ಸಿಬಿಲ್ ಹೋಗುತ್ತದೆ ಈ ಕೂಡಲೇ ಕಟ್ಟಿ ಎಂದು ಆರ್ಥಿಕ ದುರ್ಬಲತೆಗೆ ಎದುರಾದವರಿಗೆ ತರಾವರಿ ಹಿಂಸಿಸುವುದು, ಅವರಿರುವ ಸ್ಥಳಗಳಿಗೆ ವಾಹನದ ಮೂಲಕ ತೆರಳಿ ಬೆದರಿಸುವುದು ಕಾನೂನು ಬಾಹಿರ ಎನ್ನುವುದು ಬ್ಯಾಂಕಿಂಗ್ ಅಧಿಕಾರಿಗಳಿಗಾಗಲಿ, ಅಥವಾ ರಿಕವರಿ ಏಜೆನ್ಸಿಗಳಿಗಾಗಲಿ ಗೊತ್ತಿಲ್ಲವೇ.. ರಿಸರ್ವ್ ಬ್ಯಾಂಕ್ ಪ್ರಕಾರ ಅವಕಾಶಗಳನ್ನು ಕೊಟ್ಟು ಕಾನೂನು ರಿತ್ಯಾವೇ ಗ್ರಾಹಕರ ಬಳಿ ವಸೂಲಿ ಮಾಡಬೇಕಾಗಿದೆ ಎಂದು ಲೀಡ್ ಬ್ಯಾಂಕ್‌ಗಳು ಯಾಕೆ ಹೇಳುತ್ತಿಲ್ಲ..? ಜನಾರಿವು ವಿಸ್ತಾರವಾಗುವ ತನಕ ಇಂತಹದೊಂದು ಅಪ್ರದಾನವಾದುದ್ದನ್ನು ಮಾಡಬಹುದೇ ವಿನಃ ಗ್ರಾಹಕ ಜಾಗೃತನಾದರೆ ಬ್ಯಾಂಕಿಂಗ್ ಅಧಿಕಾರಿಗಳ ಮಾನಸಿಕತೆಗೆ ಹಾಗೂ ರಿಕವರಿ ಏಜೆನ್ಸಿಗಳ ಬೆದರಿಕೆಗಳು ಕೊನೆಗಾಣುತ್ತದೆ.

ಇದು ರಾಷ್ಟ್ರೀಯ ಬ್ಯಾಂಕುಗಳ ಕಥಾನಕವಾದರೆ ಖಾಸಗಿ ಒಡೆತನದ ಬ್ಯಾಂಕುಗಳು ರಿಸರ್ವ್ ಬ್ಯಾಂಕ್ ನಿಯಮಾವಳಿಗಳಿಗೂ ನಮಗೂ ಯಾವುದೇ ಸಂಬಂಧವಿಲ್ಲದಂತೆ ದುರ್ನಡತೆಗೆ ದುಂಡಾವರ್ತನೆಗಿಳಿದು ಗ್ರಾಹಕನಿಗೆ ಹಿಂಸಿಸುತ್ತಿರುವ ಅನಾಹುತಕಾರಿಗಳನ್ನು ಇತ್ಯಾದಿ ಪತ್ರಿಕೆ ಸಧ್ಯದರಲ್ಲಿಯೇ ವಿವರಿಸುತ್ತದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I