Saturday, August 1, 2026
Homeಸೂರ್ಯಗಗನI ಅಕ್ರಮ ಮದ್ಯ ಮಾರಾಟ I ಕ್ರಮ ಕೈಗೊಳ್ಳುವಂತೆ I ಕರವೇ ಸ್ವಾಭಿಮಾನಿ ಬಣದಿಂದ I...

I ಅಕ್ರಮ ಮದ್ಯ ಮಾರಾಟ I ಕ್ರಮ ಕೈಗೊಳ್ಳುವಂತೆ I ಕರವೇ ಸ್ವಾಭಿಮಾನಿ ಬಣದಿಂದ I ಅಬಕಾರಿ ಉಪ ಆಯುಕ್ತರಿಗೆ ಮನವಿ I

I ಅಕ್ರಮ ಮದ್ಯ ಮಾರಾಟ I ಕ್ರಮ ಕೈಗೊಳ್ಳುವಂತೆ I ಕರವೇ ಸ್ವಾಭಿಮಾನಿ ಬಣದಿಂದ I ಅಬಕಾರಿ ಉಪ ಆಯುಕ್ತರಿಗೆ ಮನವಿ I

ಶಿವಮೊಗ್ಗ : ನಗರದ ರಾಗಿಗುಡ್ಡದಲ್ಲಿ ಮಧ್ಯಮ ಬಡ ಕೂಲಿ ಕಾರ್ಮಿಕ ಅತಿ ಹೆಚ್ಚು ವಾಸವಿರುವ ಪ್ರದೇಶವಾಗಿದ್ದು ಇಲ್ಲಿ ಯಾವಾಗಲೂ ಕಾನೂನು ಬಾಹಿರ ಚಟುವಟಿಕೆಗಳಿಗೆ ಅಕ್ರಮ ಮದ್ಯ ಮಾರಾಟವೆ ಕಾರಣವಾಗಿದ್ದು, ಕ್ರಮ ಕೈಗೊಳ್ಳುವಂತೆ ಕರವೇ ಸ್ವಾಭಿಮಾನಿ ಬಣದಿಂದ ಅಬಕಾರಿ ಉಪ ಆಯುಕ್ತರಿಗೆ ಮನವಿ ನೀಡಲಾಯಿತು,

ಈ ಪ್ರದೇಶದ ವ್ಯಾಪ್ತಿಯಲ್ಲಿ ಪಾನಮತ್ತರ ಪುಂಡರ ಹಾವಳಿ ಕಳ್ಳತನ ಗಲಾಟೆ ಯಾವಾಗಲೂ ನಡೆಯುತ್ತಿದೆ, ಅಲ್ಲದೆ ಎಗ್ಗಿಲ್ಲದೆ ಹಾಡುಹಗಲೇ ಅಕ್ರಮವಾಗಿ ಮತ್ತು ಅನಧಿಕೃತವಾಗಿ ಮನೆ ಅಂಗಡಿಗಳಲ್ಲಿ ಮದ್ಯವನ್ನು ಮಾಡುತ್ತಿರುವುದು ಬೆಳಕಿಗೆ ಬಂದಿದೆ,

ಇಂತಹದೊಂದು ಅಕ್ರಮ ವ್ಯವಸ್ಥೆಯಿಂದಲೆ ಪುಂಡರಿಂದ ಅನಾವಶ್ಯಕ ದುಂಬಿ ಕಳ್ಳತನ ಸಹಜವಾಗಿರುತ್ತದೆ ಈ ಕುರಿತಂತೆ ಕರವೇ ಸ್ವಾಭಿಮಾನಿ ಸಂಘಟನೆ ಹಿಂದೆ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುವವರ ವಿರುದ್ಧ ಸಂಬಂಧಪಟ್ಟ ಇಲಾಖೆಗೆ ದೂರನ್ನು ನೀಡಿದ್ದರು ಸಹ ಯಾವ ಅಧಿಕಾರಿಗಳು ಅಥವಾ ಅಬಕಾರಿ ಇಲಾಖೆಯ ಅಧಿಕಾರಿಗಳು ಅನಧಿಕೃತ ಮಾರಾಟಗಾರರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಂಡಿರುವುದಿಲ್ಲ ಈ ಮಾರಾಟಗಾರರ ಜೊತೆಗೆ ಅಧಿಕಾರಿಗಳು ಶಾಮಿಲಾಗಿದ್ದಾರಾ ಎಂಬ ಅನುಮಾನವೂ ಮೂಡುತ್ತಿದೆ ಎಂದು ಸಂಘವು ಹೇಳಿದೆ

ರಾಗಿ ಗುಡ್ಡದಲ್ಲಿ ಆಗಿರುವ ಕೆಲ ಅನಾಹುತಗಳಿಗೆ ಈ ಅಕ್ರಮ ಮದ್ಯ ಮಾರಾಟವೇ ಕಾರಣ ಈಗಲಾದರೂ ನಿಷ್ಠಾವಂತ ಪೊಲೀಸ್ ಅಧಿಕಾರಿಗಳು ಈ ಭಾಗದಲ್ಲಿ ಕರ್ತವ್ಯಕ್ಕೆ ನಿಯೋಜಿಸಿ ಈ ಅಕ್ರಮ ಮಾರಾಟವನ್ನು ನಿಲ್ಲಿಸಿ ಹಾಗೂ ಎಲ್ಲಿ ಗೂಡಂಗಡಿ ಮನೆಗಳಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೋ ಅಂತವರನ್ನು ಪತ್ತೆ ಹಚ್ಚಿ ಅಬಕಾರಿ ಇಲಾಖೆಯವರು ಕೂಡಲೇ ಕಾನೂನಿನ ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಸಂಘಟನೆ ಅಗ್ರಹಿಸುತ್ತದೆ ಎಂದು ಈ ಮೂಲಕ ತಿಳಿಸಿದೆ,

ಇಲ್ಲದಿದ್ದಲ್ಲಿ ಅನ್ಯದಾರಿ ಇಲ್ಲದೆ ಸಂಘಟನೆ ವಿಭಿನ್ನ ರೀತಿಯ ಪ್ರತಿಭಟನೆಯನ್ನು ಮುಂದಿನ ದಿನದಲಿ ಹಮ್ಮಿಕೊಳ್ಳುವುದು ಅನಿವಾರ್ಯ ಎಂದು ಎಚ್ಚರಿಸಿದೆ ಈ ಪ್ರತಿಭಟನೆಯಲ್ಲಿ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ಎಚ್ಎಸ್ ಮಹಿಳಾ ಘಟಕದ ಅಧ್ಯಕ್ಷರಾದ ಕವಿತಾ .ಸಿ, ನಗರ ಅಧ್ಯಕ್ಷರಾದ ಜೀವನ್ .ಡಿ, ಜಿಲ್ಲಾ ಉಪಾಧ್ಯಕ್ಷರಾದ ವಿಜಯಕುಮಾರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶಫಿ ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷರಾದ ಮಾಲತೇಶ್. ಸತೀಶ್ ಸಂಘಟನೆ ಮುಖಂಡರಾದ ಸಾಧಿಕ್ ಸತೀಶ್ ಸಾಧಿಕ್ ಪುರ್ಲೆ ಆರತಿ ಕನ್ನಡಪರ ಹೋರಾಟಗಾರರಾದ ಸಂತೋಷ್, ದೇವೇಂದ್ರಪ್ಪ ರಾಮು ಜಾದವ್, ಮಹಮ್ಮದ್ ಆಲಿ, ರವಿಕುಮಾರ್ ಶಿವಕುಮಾರ್, ಸುರೇಶ್ಪ, ರಮೇಶ್, ರಾಮು ರಾಗಿಗುಡ್ಡ ಮುಂತಾದ ಪದಾಧಿಕಾರಿಗಳು ಭಾಗವಹಿಸಿದ್ದರು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I