Saturday, August 1, 2026
HomeಅಂಕಣI ನಾಗರೀಕ I ಆಸರೆಯಾದ ಶಾಸಕರ I ಕರ್ತವ್ಯ ಭವನವೂ...I

I ನಾಗರೀಕ I ಆಸರೆಯಾದ ಶಾಸಕರ I ಕರ್ತವ್ಯ ಭವನವೂ…I

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ನಾಗರೀಕ I ಆಸರೆಯಾದ ಶಾಸಕರ I ಕರ್ತವ್ಯ ಭವನವೂ…I

ಶಿವಮೊಗ್ಗ ನಗರ ವಿದಾನಸಭಾ ಕ್ಷೇತ್ರದ ಮತದಾರರ ಹಿಡಿತವೇ ಬೇರೆಯೇ ಇದೆ, ಇಲ್ಲಿ ಅಷ್ಟು ಸಾಮಾನ್ಯವಾಗಿ ಗೆಲುವಿನ ನಗೆ ಬಿತ್ತಲು ಸಾಧ್ಯವಿಲ್ಲ, ಹೋರಾಟದ ದೃಡತೆ ಕಟ್ಟಿಕೊಂಡಿರಬೇಕು, ಸದಾ ಸ್ಪಂದನೆಗಳಿರುವ ಜನಪ್ರತಿನಿಧಿಯಾಗಿರಬೇಕು, ಆಗ ಮಾತ್ರದಿ ಜನ ಒಪ್ಪುತ್ತಾರೆ ಇದಿಲ್ಲದಿದ್ದೊಡೆ ಗೆಲುವಿನ ನಿರೀಕ್ಷೆಗಳು ಹುಸಿಗೊಂಡು ಅಂತಿಮ ಫಲಿತಾಂಶಕ್ಕೆ ತಲೆಬಾಗಿಸಿಕೊಳ್ಳುವ ಅನಿವಾರ್ಯತೆಗಳು ಎದುರಾಗುತ್ತದೆ, ಇಂತಹ ಅಕ್ಷರಶಃ ವಾಸ್ತವದೊಳಗೆ ಚೆನ್ನಿ-ಚೆನ್ನಬಸಪ್ಪನವರು ಮೂಲತಃ ಸಂಘ ಪರಿವಾದವರು, ಅನೇಕ ಹೋರಾಟಗಳಲ್ಲಿ ದರ್ಶಿಸಿಕೊಂಡು ಚಿರಪರಿಚಿತರಾಗಿ ಸರಳತೆಯನ್ನು ಬೆಸೆದುಕೊಂಡಿದ್ದ ಬಿಜೆಪಿಯ ಸಾಮಾನ್ಯ ಕಾರ್ಯಕರ್ತರಾಗಿ ಬೆಳೆದು ಬಂದವರು, ಜನಸ್ಪಂದನೆ ಎಂದು ಎದುರಾದಾಗ ಪಕ್ಷ ಸಿದ್ದಾಂತಗಳ ಮರೆತು ಜನನ್ಯಾಯಕ್ಕಾಗಿ ಮುಂದಾದವರು ಹೀಗಾಗಿಯೇ ಅವರಿಗೆ ಸಿಕ್ಕಿದ್ದ ಬಹುದೊಡ್ಡ ಅವಕಾಶ ಫಲಪ್ರದವಾಗಿ ಇಂದು ಶಾಸಕರಾಗಿ ಆಯ್ಕೆಯಾಗಿದ್ದಾರೆ,


ಅವರ ಶಾಸಕರ ಕಛೇರಿಗೆ ಕರ್ತವ್ಯ ಭವನ ಎಂದು ನಾಮಾಂಕಿಗೊಳಿಸಿದ್ದಾರೆ, ಯಾವುದೇ ಜನ ಸಮುದಾಯಗಳೇ ಬರಲಿ ಅವರ ಅಹವಾಲುಗಳಿಗೆ ತ್ವರಿತವಾಗಿ ಸ್ಪಂದಿಸುವ ಟೀಮ್ ಕೂಡ ರಚಿಸಿ ಕಾರ್ಯಗತಗೊಳಿಸಿದ್ದಾರೆ, ಈ ಮೊದಲು ಆಯ್ಕೆಯಾಗಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭವು ವಿಶೇಷವಾಗಿತ್ತು, ಚನ್ನಬಸಪ್ಪ ಚೆನ್ನಿ ಎಂಬ ಹೆಸರಿನಾದ ನಾನು ವಿಧಾನಸಭೆಯ ಸದಸ್ಯನಾಗಿ, ನಿರ್ವಾಚನ ಹೊಂದಿದವನಾಗಿ, ವಿದಿದ್ವಾರ ಸ್ಥಾಪಿತವಾದ ಭಾರತದ ಸಂವಿಧಾನದ ವಿಷಯದಲ್ಲಿ ಶ್ರದ್ಧೆಯಿಂದಲೂ, ನಿಷ್ಠೆಯಿಂದಲೂ ಕೂಡಿರುತ್ತೇನೆಂದು ನಾನು ಭಾರತದ ಪರಮಾಧಿಕಾರವನ್ನು ಮತ್ತು ಸಮಗ್ರತೆಯನ್ನು ಸಮರ್ಥಿಸುತ್ತೇನೆಂದು ನಾನು ಈಗ ಕೈಗೊಳ್ಳಲಿರುವ ಕರ್ತವ್ಯವನ್ನು ಶ್ರದ್ಧಾಪೂರ್ವಕವಾಗಿ ನಿರ್ವಹಿಸುತ್ತೇನೆ ಎಂದು ಭಗವಂತನ ಹೆಸರಿನ ಮೇಲೆ ಪ್ರಮಾಣ ಮಾಡುತ್ತೇನೆ. ಸತ್ಯ ನಿಷ್ಠೆಯಿಂದ ಪ್ರತಿಜ್ಞೆ ಮಾಡುತ್ತೇನೆ. ಎಂದು ಅವರು ತಮ್ಮ ಕರ್ತವ್ಯವನ್ನು ಮೇಲ್ಪಂಕ್ತಿಯನ್ನು ಸಾರಿ ಅಗ್ರಮುಖಿಗೊಳಿಸಿದ ಜವಾಬ್ದಾರಿ ಎಂದಿಗೂ ಮರೆಯುವಂತಿಲ್ಲವಾಗಿದೆ,

ಹೀಗಾಗಿಯೇ ಅವರು ಕರ್ತವ್ಯವೇ ಪರಮಾತ್ಮನೆಂದು ನಂಬಿ ಅದರ ಮೇಲಿನ ಶ್ರದ್ಧೆಯನ್ನು ಅವರ ಕಛೇರಿಗೆ ಕರ್ತವ್ಯ ಭವನ ಎಂದೇ ನಾಮಾಂಕಿತಗೊಳಿಸುವುದರ ಮುಖೇನ ಎತ್ತಿ ಹಿಡಿದಿದ್ದಾರೆ, ಇದೊಂದು ಮನೋಬಲತೆಯಾಗಿದೆ, ಯಾವುದನ್ನು ಮಾಡಬೇಕೋ ಅದನ್ನು ಮಾಡಿಯೇ ತೀರುತ್ತೇನೆ, ಅಜೆಂಡಾವೇ ಬೇರೆ ಸಾಮಾನ್ಯರ ನ್ಯಾಯವೇ ಬೇರೆ ಎಂದು ಪ್ರತಿಪಾದಿಸುತ್ತಿರುವ ಶಾಸಕರಾದ ಚೆನ್ನಬಸಪ್ಪನವರು ಮಲೆನಾಡಿಗೊಂದು ಸರಳ ಸಹೃದಯಿತ್ವದ ಶಾಸಕರೆಂದೇ ಬಿಂಬಿತರಾಗಿದ್ದಾರೆ.

ವಿಶೇಷವಾಗಿ ಅವರಲ್ಲಿನ ಗುಣ ಗಾಂಭಿರ್ಯತೆಗಳು ಗೆದ್ದು ಬೀಗಿದ ಮೇಲೂ ಪ್ರಸ್ತುತ ಪಡಿಸಿದ್ದಾರೆ ಯಾರು ರಾಜಕೀಯಕ್ಕೆ ಕಾರಣರಾಗಿದ್ದಾರೋ ಅವರನ್ನು ಮರೆಯದೆ ಸ್ಮರಿಸಿದ ರೀತಿ ಬಲು ಶ್ಲಾಘನೀಯವಾದುದ್ದಾಗಿದೆ ಅವರೇ ಹೇಳಿದ ಮಾತೀದು, ಹಿರಿಯರು ಹಾಗೂ ನನ್ನ ಮಾರ್ಗದರ್ಶಕರಾದ ಕೆ.ಎಸ್ ಈಶ್ವರಪ್ಪನವರು ಚುನಾವಣಾ ರಾಜಕೀಯಕ್ಕೆ ಸ್ವಯಂ ನಿವೃತ್ತಿ ಘೋಷಿಸಿ ನನ್ನಂಥ ಸಾಮಾನ್ಯ ಕಾರ್ಯಕರ್ತನಿಗೆ ಅವಕಾಶ ಕಲ್ಪಿಸಿಕೊಟ್ಟು ನಮ್ಮ ಜೊತೆ ಬೆಂಬಲವಾಗಿ ನಿಂತಿರುವುದಕ್ಕೆ ಅನಂತ ಅನಂತ ಧನ್ಯವಾದಗಳನ್ನು ತಿಳಿಸಿದ್ದರು, ಅಂದು ಕೆ.ಎಸ್ ಈಶ್ವರಪ್ಪನವರು ಕೂಡ ಚೆನ್ನಬಸಪ್ಪನವರ ಗೆಲುವನ್ನು ಸಂಭ್ರಮಿಸಿದ್ದರು ಆದರೆ ಕಾಲಾಯ ತಸ್ಮೈ ನಮಃ ಎನ್ನುವಂತೆ ಕಾಲ ಬದಲಾವಣೆಯಾದಂತೆ ರಾಜಕೀಯ ಸ್ಥಿತಿಗತಿಗಳು ಬದಲುಗೊಳ್ಳುತ್ತದೆ ಎನ್ನುವುದಕ್ಕೆ ಗುರು-ಶಿಷ್ಯರ ಅವಿನಾಭಾವ ಸಾಂಗತ್ಯಗಳು ತುಸು ಮಗ್ಗಲಾಗಿದೆ.

ಲಭಿಸಿದ ಅವಕಾಶ ದೇವರು ನೀಡಿದ ಅವಕಾಶವೆಂದೇ ಭಾವಿಸಿ ಅದನ್ನು ಕರ್ತವ್ಯ ಭವನದ ಮುಖೇನ ಋಣ ತೀರಿಸುವ ಕೈಂಕರ್ಯದಲ್ಲಿ ಜನ ಸಾಮಾನ್ಯರನ್ನು ಯಾವುದೇ ಮತ-ಪಂಥಗಳತ್ತ ದೂಡದೆ ಎಲ್ಲರೂ ಸಮಾನರು, ಸಹಭಾಳ್ವೆಯ ಪ್ರತೀಕರು ಎನ್ನುವಂತೆ ಅವರುಗಳ ಬೇಡಿಕೆಗಳಿಗೆ ಸ್ಪಂದಿಸುತ್ತಿರುವ ಚೆನ್ನಬಸಪ್ಪನವರು ರಾಜ್ಯದಲ್ಲಿಯೇ ಮಾದರಿಯಾಗಿದ್ದಾರೆ, ಒಂದೆಡೆ ಹಿಂದೂ ಅಜೆಂಡಾ ಇನ್ನೊಂದೆಡೆ ಶ್ರೀ ಸಾಮಾನ್ಯರ ಸ್ಪಂದನೆಗಳಿಗೆ ಯಾವುದೇ ರೀತಿಯ ದೋಖಾವಿಲ್ಲದಂತೆ ಜನಪ್ರತಿನಿಧಿಯ ಪಾತ್ರ ನಿರ್ವಹಿಸುತ್ತಿರುವ ಶಾಸಕ ಚೆನ್ನಬಸಪ್ಪ ಶರಣಾದಿ ಬಸವ ತತ್ವಗಳನ್ನು ನಂಬಿರುವ ಕಾಯಕಯೋಗಿಯೇ ದರ್ಶಿಸಿಕೊಂಡಿರುವುದು ನಗರ ಕ್ಷೇತ್ರದ ಜನಮಾನಸದವರಿಗೆ ಒಂದು ರೀತಿಯ ಬೆಸುಗೆಯೇ ಆಗಿ ಹೋಗಿದೆ.

ಇನ್ನೂ ಶಿವಮೊಗ್ಗದಲ್ಲಿ ಆಯಾ ಕಾಲಘಟ್ಟಕ್ಕೆ ತಕ್ಕಂತೆ ಮತದಾರ ಬದಲುಗೊಂಡಿದ್ದಾನೆ, ಎಂದಿಗೂ ಈ ಕ್ಷೇತ್ರ ಅಷ್ಟು ಸುಲಭವಾಗಿ ಒಪ್ಪಿಕೊಂಡಿಲ್ಲ, ಇಂತಹದೊಂದು ತರ್ಕ, ತುಲನೆ ಈ ಸಂಗತಿಯಲ್ಲಿ ಅಗತ್ಯ ಎಂದಾದರೆ ಚೆನ್ನಬಸಪ್ಪನವರ ರೀತಿ, ನೀತಿ, ನಡುವಳಿಕೆ, ಸ್ಪಂದನೆ, ಸರಳತೆ, ಕಾರ್ಯಕ್ಷಮತೆ, ಪಕ್ಷ ನಿಷ್ಠೆ ಹಾಗೂ ಕರ್ತವ್ಯ ಪರತೆಗಳಿಂದ ಆಯ್ಕೆಯಾಗಿದ್ದಾರೆ ವಿನಃ ಅನ್ಯ ಕಾರಣದಿಂದಲ್ಲವಾಗಿದೆ, ಇದಕ್ಕೆ ಅಸಲಿ ಕಾರಣಗಳನ್ನು ಅವಲೋಕಿಸಿಕೊಳ್ಳುವ ಜರೂರತ್ತಿದೆ,

ಹೌದು ಅಂದು ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಚುನಾವಣಾ ಲೆಕ್ಕಾಚಾರಗಳ ಸಮೀಕ್ಷೆ ನಿಲುಕದ ನಕ್ಷತ್ರವಾಗಿತ್ತು : ಜೆಡಿಎಸ್‌ನ ಜಿಲ್ಲಾಧ್ಯಕ್ಷರಾಗಿದ್ದ ನಿರಂಜನ್‌ರವರು ಸಾಧು ಲಿಂಗಾಯತ ಸಮುದಾಯವರಾಗಿದ್ದರು ಇಲ್ಲಿ ಲಿಂಗಾಯತ ಮತಗಳು ನಿರ್ಣಾಯಕ ಎಂದಾದರೆ ಅವರೇಕೆ ನಗರ ಕ್ಷೇತ್ರದಿಂದ ಸ್ಪರ್ಧಿಸಿ ಕೇವಲ ನಾಲ್ಕು ಸಾವಿರ ಅಲ್ಪಮತಗಳನ್ನು ಗಳಿಸುವಲ್ಲಿ ಸೀಮಿತಗೊಂಡು ಹೀನಾಯವಾಗಿ ಪರಾಭವಗೊಂಡಿದ್ದರು, ಹೀಗೆ ಲಿಂಗಾಯತ ಮತಗಳ ನಂಬಿ ಕಣಕ್ಕಿಳಿದ ಹೆಸರಾಂತ ಉದ್ಯಮಿ ವೈ.ಹೆಚ್ ನಾಗರಾಜ್ ಕೇವಲ ಮೂರು ಸಾವಿರ ಮತಗಳಿಗೆ ತೃಪ್ತಿಗೊಂಡು ಸೋತಿದ್ದರು, ಇನ್ನೂ ಬ್ರಾಹ್ಮಣ ಸಮುದಾಯದ ಮತಗಳು ನಿರ್ಣಾಯಕವಾಗಿದೆ ಎಂದಾದರೆ ಅಂದು ಬ್ರಾಹ್ಮಣ ಮತಗಳ ನಂಬಿ ಕಣಕ್ಕಿಳಿದ ಕೆ.ಹೆಚ್ ಶ್ರೀನಿವಾಸ್‌ರವರನ್ನ ಹೀನಾಯವಾಗಿ ಸೋಲಿಸಿ ಕುರುಬ ಸಮುದಾಯದ ಕೆ.ಎಸ್ ಈಶ್ವರಪ್ಪನವರನ್ನು ಗೆಲ್ಲಿಸಲು ಮುಂಚೂಣಿಯಲ್ಲಿದ್ದವರೇ ಬ್ರಾಹ್ಮಣರು, ಬಜರಂಗದಳ ಸಂಘಟನೆಯ ಹುಟ್ಟವಿಗೆ ಕಾರಣಕರ್ತರಾದ ಅನಂತರಾಮಯ್ಯ ಮಲ್ಯ ಪಕ್ಷದಿಂದ ಅಸೆಂಬ್ಲಿ ಕಣಕ್ಕೆ ಧುಮುಕುವ ಮುನ್ನವು ಅವರದೇ ಬ್ರಾಹ್ಮಣ ಸಮುದಾಯದ ಮತಗಳನ್ನೇ ನಂಬಿದ್ದರೂ ಕೂಡ ಅವರು ಮೂರು ಸಾವಿರ ಮತಗಳ ಆಜು ಬಾಜಿಗೆ ತೃಪ್ತಿಗೊಂಡು ಸ್ಪರ್ಧಾ ಕಣದ ತೆರೆಗೆ ಮರೆಗೆ ಸರಿದರು, ಇಂತಹ ತುಲನೆಯೊಳು ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಜಾತಿ, ಸಮುದಾಯಗಳಿಗೆ ಗಂಟು ಬಿದ್ದು ಒಮ್ಮೆಲೆ ಗೆದ್ದು ಸೋಲುಂಡವರಲ್ಲಿ ಲಿಂಗಾಯುತ ಸಮುದಾಯದ ಹೆಚ್.ಎಂ ಚಂದ್ರೆಶೇಖ ರಪ್ಪನವರು ಕೂಡ ಇವರ ಮೊದಲ ಗೆಲುವಿಗೆ ಎಸ್.ಬಂಗಾರಪ್ಪನವರು ಕಾರಣಕರ್ತರು ಎನ್ನುವುದನ್ನು ಮರೆಯಲಾಗದು,

ಎಲ್ಲಾ ಕಾಲಕ್ಕೂ ಶಿವಮೊಗ್ಗದಲ್ಲಿ ಮತ ಬ್ಯಾಂಕ್ ಎಂದು ರಾಜಕೀಯ ಲೆಕ್ಕಾಚಾರ ಗಳಿದ್ದರೂ ಇವ್ಯಾವು ಮಾರಾಟವಾಗಲಿಲ್ಲ, ಬದಲಿಗೆ ಈ ನಗರ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ, ಆಗಾಗ್ಗೆ ಉಲ್ಭಣಿಸುತ್ತಿದ್ದ ಕೋಮುಗಲಬೆಗಳ ಅನುಕಂಪ,ಭಾವನಾತ್ಮಕ ನಾಟಕಗಳಿಗೆ ಎಲ್ಲಾ ಸಮುದಾಯದ ಮತಗಳು ಅತ್ತಿಂದಿತ್ತ ವಾಲಿವೆ ಎನ್ನುವ ಕಟು ಸತ್ಯದ ಒಳ ಹೂರಣಗಳು ಹೋರಾಟದ ನಗರಿ ಶಿವಮೊಗ್ಗದಲ್ಲಿದೆ. ದಲಿತ.ಹಿಂದೂಳಿದ, ಅಲ್ಪಸಂಖ್ಯಾತ ಮತಗಳು ಕೂಡ ಅವರವರ ಸಮುದಾಯದವರನ್ನು ಬೆಂಬಲಿಸದೇ ಅನ್ಯ ಕೋಮಿನ ನಾಯಕರನ್ನು ಬೆಂಬಲಿಸಿರುವ ಅಸಲಿ ಉದಾಹರಣೆಗಳಲ್ಲಿ ನಗರ ಕ್ಷೇತ್ರದಲ್ಲಿ ಮೊದಲ ಹಂತದಲ್ಲಿರುವ ದಲಿತ ಮತಗಳು ಮೂರು ಪಕ್ಷಗಳಿಗೆ ಹರಿದು ಹಂಚಿವೆ ಇದೇ ಪರಿಸ್ಥಿತಿ ಹಿಂದೂಳಿದ ಮತಗಳಿವೆ, ಅಲ್ಪಸಂಖ್ಯಾತರ ಮತಗಳನ್ನು ನಂಬಿ ಕಣಕ್ಕಿಳಿದಿದ್ದ ಇಸ್ಮಾಯಿಲ್ ಖಾನ್ ಗೆದ್ದು ಬಿಟ್ಟರೇ ಮುಸ್ಲಿಂ ಮತಗಳೆಲ್ಲಾ ಇಸ್ಮಾಯಿಲ್ ಖಾನ್ ರವರನ್ನು ಬೆಂಬಲಿಸಿದ್ದವೇ..?

ಅಚ್ಚರಿ ಎಂದರೆ ಶಿವಮೊಗ್ಗ ನಗರ ಕ್ಷೇತ್ರ ಹೀಗೊಂದು ಲೆಕ್ಕಾಚಾರಕ್ಕೆ ಸಿಕ್ಕದ ಮತಗಳು ಆಯಾಯ ವಾಸ್ತವ ಘಟ್ಟಕ್ಕೆ, ನಂಬಿ ಶಾಸಕರನ್ನು ಆಯ್ಕೆ ಮಾಡಿವೆ, ಕಳೆದ ಚುನಾವಣೆ ಕೂಡ ಮಾಮೂಲಿಸಾ ನಗರಸಭಾ ಸದಸ್ಯ ಕೆ.ಬಿ ಪ್ರಸನ್ನಕುಮಾರ್ ಶಾಸಕರಾಗಿ ಆಯ್ಕೆಗೊಳ್ಳುವುದಕ್ಕೆ ಬಿಜೆಪಿಯಲ್ಲಿ ಬುಗಿಲೆದ್ದ ಅಸಮಾಧಾನಗಳು ಕೆ.ಎಸ್ ಈಶ್ವರಪ್ಪನವರ ಮೇಲೆ ನಂಬಿಕೆ ಕಳೆದುಕೊಂಡ ಶಿವಮೊಗ್ಗದ ಪ್ರಜ್ಞಾವಂತ ಮತಗಳು ಕಾರಣವಾದವು,

ಈ ಎಲ್ಲಾ ಬದಲಾವಣೆಗಳನ್ನು ಪರಮಾರ್ಶಿಸಿದಾಗ ಗೊತ್ತು ಮಾಡಿಕೊಳ್ಳಬೇಕಾದ ಸಂಗತಿಗಳು ಏನೆಂದರೆ ಇಲ್ಲೊಂದು ಹೋರಾಟದ ಸೊಗಡಿದೆ, ನೇರ ನಿಷ್ಟುರತೆಗಳ ಸಾಮಾಜಿಕ ನ್ಯಾಯವಿದೆ, ಚಳುವಳಿಗಳ ಉಗಮಗಳ ಬುಗ್ಗೆಗಳಿದೆ, ಯಾರು ಜನಪ್ರತಿನಿಧಿಯಾಗುತ್ತಾನೋ ಅಂತಹವರ ಅರ್ಹತೆಗಳನ್ನು ಶಿವಮೊಗ್ಗದ ಜನತೆ ಜಾತಿ, ಧರ್ಮಗಳಿಂದಲ್ಲ ಸ್ಪಂದನೆಗಳಿಂದ, ಸರಳತೆಗಳಿಂದ ಅಳೆಯುತ್ತಾರೆ ಈ ಅಚ್ಚರಿ ಫಲಿತಾಂಶಗಳ ನಡುವೆ ಅವರ ಸಾಮಾಜಿಕ ಅರ್ಹತೆ ಅನುಸಾರವೇ ಚೆನ್ನಬಸಪ್ಪನವರು ಇಂದು ಶಿವಮೊಗ್ಗ ನಗರ ವಿದಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ, ಅಲ್ಲದೆ ನುಡಿದಂತೆ ನಡೆಯುತ್ತಿದ್ದಾರೆ ಎನ್ನುವುದಕ್ಕೆ ಪ್ರಮಾಣ ವಚನವು ಕೂಡ ಕರ್ತವ್ಯದ ಮೇಲೆ ಪ್ರಮಾಣಿಕರಿಸಿದ್ದರು ಅದನ್ನು ಅಕ್ಷರಶಃ ಪಾಲಿಸಿದ್ದರು, ಹಾಗೆಯೇ ಅವರ ಶಾಸಕರ ಕಛೇರಿಗೆ ಕರ್ತವ್ಯ ಭವನ ಎಂದೇ ಬಿಂಬಿತಗೊಳಿಸಿ ಜನಸಾಮಾನ್ಯರ ಬೇಡಿಕೆಗಳಿಗೆ ಸ್ಪಂದಿಸುವ ಸರಳ ಜನಪ್ರತಿನಿಧಿಯಾಗಿರುವುದು ಸಾಕ್ಷೀಕರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I