Sunday, August 2, 2026
HomeಅಂಕಣI ಇವರದ್ದು ಸಮಾದಿಯಾದ ಸೆಲಿಬ್ರಿಟಿ ಪ್ರಚುರತೆ I ಅದರ ಉಳಿವಿಗಾಗಿ I ನಟ ತೂಗುದೀಪ ದರ್ಶನ್...

I ಇವರದ್ದು ಸಮಾದಿಯಾದ ಸೆಲಿಬ್ರಿಟಿ ಪ್ರಚುರತೆ I ಅದರ ಉಳಿವಿಗಾಗಿ I ನಟ ತೂಗುದೀಪ ದರ್ಶನ್ I ವಿಚಾರಗಳು ಬೇಕಿತ್ತೇ..? I (ಭಾಗ-೧)

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಇವರದ್ದು ಸಮಾದಿಯಾದ ಸೆಲಿಬ್ರಿಟಿ ಪ್ರಚುರತೆ I ಅದರ ಉಳಿವಿಗಾಗಿ I ನಟ ತೂಗುದೀಪ ದರ್ಶನ್ I ವಿಚಾರಗಳು ಬೇಕಿತ್ತೇ.? I (ಭಾಗ-೧)

ಸಾವುಗಳ ಸರಣಿಯಲ್ಲಿ ಜೀವಪರತೆಗಳನ್ನು ಶೋಧನೆಗಳ ಕಾಲಘಟ್ಟದಲ್ಲಿ ಬದಲಾಗುತ್ತಿರುವ ಸರಕಾರದ ನಿಲುವುಗಳನ್ನು, ಲಾಕ್ಡೌನ್- ಸೀಲ್ಡೌನ್ ಗಳ ಪೊಲೀಸ್ ಬ್ಯಾರಿಕೆಡ್ ಗಳ ನಂತರದಲ್ಲಿ ಅದೆಷ್ಟೋ ಸೂರಿನ ಜಗುಲಿಗಳು ಹಸಿವೆಗಳಿಂದ ತತ್ತರಿಸುತ್ತಿರುವ ಈ ಕಾಲಮಾನದಲ್ಲಿ, ದುಡಿಮೆಗಳು ನಿಲ್ಲಿಸಿ ತೆರೆದ ಹೊತ್ತಿನಲ್ಲಿ, ಆಕ್ರಂಧಿತ ನೋವು-ಬರೆ ಹೊರೆಗಳ ಕಾವಣದಲ್ಲಿ ಬ್ರೇಕಿಂಗ್ ನ್ಯೂಸ್ ಮಾಧ್ಯಮಗಳು ಸಂಪೂರ್ಣವಾಗಿ ಹಾದಿ ತಪ್ಪಿದೆ ಎನ್ನುವುದು ಪ್ರಸ್ತುತ ವಿಪರೀತ ಅತಿರಂಜನೆಗಳಿಂದ ಮತ್ತು, ಮತ್ತು ಸಾಬೀತುಪಡಿಸುತ್ತಿದೆ,
ಹೌದಲ್ಲವೇ..? ಮಾಧ್ಯಮಿಗಳೇ ಟಿಆರ್ಪಿಗಾಗಿ ಯಾರನ್ನಾದರೂ ಬಲಿ ಹಾಕಲು ಮುಗಿಬಿದ್ದು ಹೇಳಿಕೆ. ಪ್ರತಿ ಹೇಳಿಕೆಗಳನ್ನು ಸೆರೆಹಿಡಿದ ಮಸಾಲ ಸವರಿದ ಚಿಕನ್-೬೫ ಖಾದ್ಯದಂತೆ ಬಿತ್ತರಿಸುತ್ತಿರುವ ನೀವೊಮ್ಮೆ ಆತ್ಮವಿಮರ್ಶೆ ಮಾಡಿಕೊಳ್ಳಲೇ ಬೇಕಿದೆ. “ನಟ ತೂಗುದೀಪ ದರ್ಶನ್” ನನ್ನು ನಿಮ್ಮ ಪೊಳ್ಳು ಸುದ್ದಿಗಳು ವಾಮಮಾರ್ಗದ ಹಪಾ-ಹಪಿಗಳಿಂದ ಕನ್ನಡ ಸಾಂಸ್ಕೃತಿಕ ಜಗತ್ತಿನಿಂದ ಹೊರದೊಬ್ಬಲು ಸಾಧ್ಯವೇ..? ಈ ಹಿಂದೆಯಿಂದಲೂ ವ್ಯವಸ್ಥಿತವಾಗಿ ನಟ ತೂಗುದೀಪ ದರ್ಶನ್ ವಿರುದ್ದ ಷಡ್ಯಂತ್ರ ರೂಪಿಸುತ್ತಿರುವುದು ಇದಕ್ಕೆ ತಕ್ಕಂತೆ ಸ್ಯಾಂಡಲ್ ವುಡ್ ಕೆಲ ಆರ್ಟಿಸ್ಟ್‌ಗಳು ವ್ಯತಿರಿಕ್ತ ಹೇಳಿಕೆಗಳನ್ನು ಹರಡುವುದು ನೋಡಿದರೆ ದರ್ಶನ್ ಮೇಲಿನ ಸೇಡಿಗೆ ನಿಂದವರಂತೆ ಬಹಿರಂಗವಾಗಿ ದರ್ಶಿಸಿಕೊಳ್ಳುತ್ತದೆ, ಆಗಾಗ್ಗೆ ನಟ ಶಿವರಾಜ್‌ಕುಮಾರ್ ಇದೀಗ ನಟಿ ರಮ್ಯಾ ಇನ್ನುಳಿದಂತೆ ಮಾಧ್ಯಮಿ ಮನಸುಗಳು ದರ್ಶನ್ ವಿರುದ್ದ ಸಮಾರೋಪಾದಿಯಡಿ ಎಬ್ಬಿಸಿರುವ ಸಂಗತಿಗಳ ಅನಾವರಣಗೊಳಿಸುವ ಮೊದಲು ಕಂತು ಇದಾಗಿದೆ,

ಈ ಸಾಲುಗಳನ್ನು ಬರೆಯದೇ ಹೋದರೆ ಅದೊಂದು ಆತ್ಮವಂಚನೆ ಆಗಬಹುದು ಎನ್ನುವ ಕಾರಣಕ್ಕೆ ಇಲ್ಲಿ ಉಲ್ಲೇಖಿಸುತ್ತಿದ್ದೇನೆ, ಅಷ್ಟಕ್ಕೂ ನಾನಿಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಬಯಸಿ ಮಾತಾಡುವುದಿಲ್ಲ, ಅದು ನನಗೆ ಅಗತ್ಯವೂ ಇಲ್ಲ, ನೇರವಾಗಿ ತನ್ನ ಅಭಿವ್ಯಕ್ತಿಯನ್ನು ಪ್ರತಿಬಿಂಬಿಸುತ್ತಿದ್ದೇನೆ. ಈ ಲೇಖನದ ಮೊದಲ್ಗೊಂಡಂತೆ ಬರೆಯುತ್ತಿರುವುದು ಇಂದ್ರಜಿತ್ ಕುರಿತಾದ ನಿಲುವುಗಳ ಕುರಿತಾಗಿ ಅವರು ಆಗಾಗ್ಗೆ ರಾಜ್ಯದಲ್ಲಿ ಹೈಪ್ರೋಪೈಲ್ ಸುದ್ದಿಗೆ ಗ್ರಾಸವಾಗುವ “ಇಂದ್ರಜಿತ್” ಓರ್ವ ಪತ್ರಿಕಾ ರಚನಾತ್ಮಕತೆ, ಕ್ರಿಯಾಶೀಲತೆ ಗೊತ್ತಿರದ ಪೆನ್ ಡ್ರೈವರ್..? ಯಾವಾಗ ಖ್ಯಾತ ಬರಹಗಾರ ಹಾಗೂ ಪತ್ರಕರ್ತರಾದ ಲಂಕೆಶ್ ರವರ ಹೆಸರನ್ನು ಸೇರಿಸಿಕೊಳ್ಳುತ್ತಾರೋ ಅದಾಗ ಮಾತ್ರದಿ ಇಂದ್ರಜಿತ್ ಲಂಕೇಶ್‌ಗೆ ಒಂದಿಷ್ಟು ಹೆಸರಿನ ಗೌರವ ಬರಬಹುದು. “ಅಪ್ಪ ಹಾಕಿದ ಆಲದ ಮರದ ನೆರಳಿನಲ್ಲಿ” ಅಯಾಷಿ ಬದುಕನ್ನಷ್ಟೇ ಅಮರಿಕೊಂಡಿರುವ ಇಂದ್ರಜೀತ್ ಎಂದಾದರೂ ಪತ್ರಕರ್ತರ ಸಮಸ್ಯೆಗಳಿಗೆ ದನಿಯಾದ ಜೀವಜಂತುವೇ ಅಲ್ಲ, ಕೋವಿಡ್-೧೯ ನಂತಹ ಈ ಕಾಲದಲ್ಲಿ ಪತ್ರಕರ್ತರ ಸಮಸ್ಯೆಗಳು, ಸಾವು-ನೋವುಗಳು ಕುರಿತಾಗಿ ಸರಕಾರದೊಂದಿಗೆ “ಮನವಿ” ನೀಡಿ ಸ್ಪಂದಿಸಿ ಎಂದು ಎಂದಾದರೂ ಕಾಳಜೀ ತೋರಲಿಲ್ಲ, ತೋರಿದ್ದಾರೆ ಎನ್ನುವ ಮಾಹಿತಿ ಲಭ್ಯವಿಲ್ಲ, ಸ್ವತಃ ಇಂದ್ರಜಿತ್ ಅವರು ಯಾವಾಗ..? ಪತ್ರಕರ್ತರಾಗುತ್ತಾರೋ..? ಯಾವಾಗ ಚಲಚಿತ್ರೋದ್ಯಮಿಯಾಗುತ್ತಾರೋ.. ಗೊತ್ತಿಲ್ಲ, “ಮಜಾ ಟಾಕೀಸ್” ಎಂಬುವ ರಿಯಾಲಿಟಿ ಶೋ ನಲ್ಲಿ ನಗುವುದಕ್ಕೆ ಕೂರಿಸಿರುವ ಮಾರಾಟ ಮಳಿಗೆಯ ನಗುವಿನ ಗೊಂಬೆಯಾಗಿರುವುದು ನೋಡಬಹುದು.

ಇಂತಹ ಧ್ವಂದ್ವತೆಯ ಬದುಕಿನಲ್ಲಿರುವ ಇಂದ್ರಜಿತ್ ಇತ್ತೀಚಿನ ವರುಷಗಳಲ್ಲಿರುವ ಹೇಳಿಕೆಗಳಲ್ಲಿ ಹಾಗೂ ನೀಡಿದ ದೂರಿನಲ್ಲಿ ಒಂದಿಷ್ಟು ಪ್ರೇರಿತವಾಗಿದೆ, ಅಥವಾ ನಿರೀಕ್ಷೆಗಳಿವೆ, ಎನ್ನುವ ಅಸಲಿ ಕಹಾನಿ ಪತ್ತೆಹಚ್ಚುವ ಕೆಲಸವೂ “ಸೈಬರ್ ಕ್ರೈಂ” ಹೆಚ್ಚುವರಿ ಅಪರಾಧ ವಿಭಾಗದ ಪೊಲೀಸರಿಂದಾಗಲಿ ಎನ್ನುವುದು ವಿನಂತಿಯಾಗಿದೆ. ಕಳೆದ ಭಾರಿ ಸಿನಿಮಾ ಮಂದಿಗಳು “ಡ್ರಗ್ಸ್’ ಜಾಲದಲ್ಲಿದ್ದಾರೆ ಎಂದು ಬಹುದೊಡ್ಡ ಹೋರಾಟಕ್ಕಿಳಿದು ಒಂದಿಷ್ಟು ಸಮಯದೊಳಗೆ ಇದೇ ಡ್ರಗ್ಸ್ ಮಾಫಿಯಾದ ವಿರುದ್ದ ಕನಿಷ್ಟ ಹೇಳಿಕೆಗಳನ್ನು ನಿಷ್ಕೃಷ್ಟವಾಗಿ ನೀಡಿದೇ ಹೋದ ಇಂದ್ರಜಿತ್ ಲಂಕೇಶ್ ಗೆ ನಿಜದ ಪಡ್ಲರ್ ಗಳಿಂದಾಗಲಿ ಅವರ ಸಹಚರರಿಂದಾಗಲಿ ಜೀವಬೆದರಿಕೆ ಬಂದಿರಲಿಲ್ಲವೇ.. ಇಂದ್ರಜಿತ್ ಎಲ್ಲಿ ಸತ್ತೋಯ್ತು ನಿಮ್ಮ ಡ್ರಗ್ಸ್ ವಿರುದ್ದ ಹೋರಾಟ.. ಹಾರಾಟ..? ಹೇಳಿ.

ಒಂದಿಷ್ಟು ತಿಂಗಳು ಹಾಗೇ ತೆರೆಯ ಹಿಂದೆ ಸರಿದು ಹೋಗಿದ್ದ ನೀವು ಮತ್ತೆ ಏಕಾಎಕಿ ಹಳೆಯ ಘಟನೆಗೆ ಹೊಸರೂಪ ನೀಡಲೊರಟಿದ್ದು ಯಾವ ಪುರಷಾರ್ಥಕ್ಕಾಗಿ ಸ್ವಾಮಿ.. ಎನ್ನುವ ಪ್ರಶ್ನೆಯನ್ನು ತಮ್ಮ ಮುಂದಿಡುತ್ತೇನೆ, ಲಂಕೇಶ್ ಮಗ ಲಂಕೇಶ್ ನಂತಾಗದೇ ಒಂದಿಷ್ಟು ಅವರ ನೆರಳಿನ ಕೊನೆಯ ಗೆರೆಯೂ ಆಗದೇ ಸದಾ ಕಮರ್ಷಿಯಲ್ ಚಿಂತನೆಗಳನ್ನೇ ಬೆಸೆದುಕೊಂಡ ತಮ್ಮ ನಿಲುವುಗಳಿಗೆ ಮಾಧ್ಯಮಗಳೇಕೆ ಈ ಪರಿ ಸಮಯ ನೀಡುತ್ತಿದ್ದಾರೆ..? ಜನಜೀವನಗಳು ಯಾವ ಕ್ಲಿಷ್ಟಕರದಲ್ಲಿದೆ ಎನ್ನುವ ಕೊಂಚ ಅರಿವು ಕೂಡ ಇಲ್ಲವೇ..?
ಇಂದ್ರಜಿತ್ ನೋಡಿ ನಿಮ್ಮ ನಿಲುವುಗಳು ಬದಲಾಗದೇ ಹೋದರೆ ಮುಂದೊಂದು ದಿನ ಕಾನೂನಿನ ಕಟ್ಟಳೆಯಲ್ಲಿ ಅಪರಾಧಿಯಾಗಿ ನಿಲ್ಲುವ ಸಮಯವೂ ದೂರವಿಲ್ಲ, ವೈಚಾರಿಕತೆಯ ಕ್ರಾಂತಿ ಮೊಳಗಿಸಿದ, ಸಾಂವಿಧಾನಿಕ ಅಭಿವ್ಯಕ್ತಿಯನ್ನು ಎತ್ತಿ ಹಿಡಿದು ಸಾವಿರಾರು ಬರಹಗಾರರಿಗೆ ಸ್ಪೂರ್ತಿಯ ಸೆಲೆಯಾದ ಲಂಕೇಶ್ ಹೆಸರಿಗೆ ಮಗನೇ ಮಸಿ ಬಳಿವ ಹಂತಕ್ಕೆ ತೆರಳಬಾರದು. ಸುದ್ದಿಗೋಷ್ಟಿಯಲ್ಲಿ ಇಡೀ ಕರ್ನಾಟಕವೇ ನೋಡುವಂತೆ “ಗಾಂಡುಗಿರಿ” ಮಾಡುವುದಿಲ್ಲ, ಕೊಚ್ಚೆಗೆ ಕಲ್ಲು ಎಸೆಯಲ್ಲ, ದರ್ಶನ್ ಮಾನಸಿಕವಾಗಿ ತೊಂದರೆಗೀಡಾಗಿದ್ದಾರೆ, ದರ್ಶನ್ ಬೆಂಬಲಿಗರಿಂದ ಜೀವಬೆದರಿಕೆ ಕರೆಗಳು ಬಂದಿವೆ, ಎನ್ನುತ್ತಿದ್ದೀರಿ, ಸಿನಿಮಾ ಮಂದಿಗಳು ಡ್ರಗ್ಸ್ ಮಾಫಿಯ ಜಾಲದಲ್ಲಿದ್ದಾರೆ ಎಂದಾಗ, ಕೇಸು ಅಂತರಾಷ್ಟ್ರೀಯ ಮಟ್ಟದಲ್ಲಿ ತನಿಖೆಗೆ ಶುರುವಾದಾಗ, ಡ್ರಗ್ಸ್ ಪಡ್ಲರ್ ಗಳಿಂದ ಬೆದರಿಕೆಯೇ ಬರಲಿಲ್ವಾ.. ಹೇಳಿ ಇಂದ್ರಜಿತ್ ಬೆದರಿಕೆ ಕರೆಗಳು ಬರದಿದ್ದರೆ ಮತ್ಯಾವ ಕರೆನ್ಸಿ ಮೂಲ ಹುಡುಕಿ ಬಂತು..?

ಇಂದ್ರಜಿತ್ ಲಂಕೇಶ್ ರವರೇ ಮಾತು ನಿಲ್ಲಿಸಿಬಿಡಿ, ನಟ ದರ್ಶನ್ ಹೆಸರಲ್ಲಿ ವಂಚನೆ ಪ್ರಕರಣದ ಹಾದಿ ತಪ್ಪಿಸುವುದಕ್ಕೆ ನೀವು ಮತ್ತೊಂದು ಹಳೆಯದಾದ ಘಟನೆಯನ್ನು ಎಳೆದು ತಂದಿದ್ದೀರಿ, ಸಾಲದಕ್ಕೆ ಮನಬಂದಂತೆ ಮಾತಾಡುತ್ತಿದ್ದೀರಿ, ಅಷ್ಟೇ ವೇಗದಿ ಮಾಧ್ಯಮಗಳು ಬ್ರೇಕಿಂಗ್ ನ್ಯೂಸ್ ಮಾಡಿಕೊಂಡು ಕೂತು ಬಿಟ್ಟಿವೆ, ಹೋಟೆಲ್ ಸಿಬ್ಬಂದಿಯನ್ನು ದಲಿತ ಎಂದು ನೀವೆ ಹೇಳಿ ಬಿಟ್ಟಿದ್ದೀರಿ ಅಂದರೆ ದಲಿತ ಸಂಘಟನೆಗಳು ಕೂಡ ರೊಚ್ಚಿಗೆದ್ದು ದರ್ಶನ್ ವಿರುದ್ದ ಬೀದಿಗಿಳಿಯಲಿ ಎನ್ನುವ ಪ್ರಚೋದಾತ್ಮಕ ಹೇಳಿಕೆಗಳು, ಆತುರತೆಗಳನ್ನು ಎಂತಹವರು ಕೂಡ ಉಹಿಸಬಲ್ಲರು ನೀವು ತೆರೆಯ ಮೇಲೆ ನಟಿಸುತ್ತಿಲ್ಲ ನಿಜ ಜೀವನದಲ್ಲಿ ನಟಿಸುವುದಕ್ಕೆ ಶುರು ಮಾಡಿದ್ದೀರಾ ಎಂದು ತಿಳಿಯಪಡುತ್ತದೆ. ನಿಮ್ಮನ್ನು ಕುರಿತಾಗಿ ಅತೀಯಾಗಿ ಉವಾಚಿಸದೆ ಒಂದಿಷ್ಟು ಇಲ್ಲಿ ಹೇಳಬಯಸಿ ಸಾಲುಗಳನ್ನು ಲಗತ್ತಿಸುತ್ತಿದ್ದೇನೆ, ನಟ ದರ್ಶನ್ ಕೋಪಿಷ್ಟ ಇರಬಹುದು, ಆದರೆ ಎಂದಿಗೂ ಅದನ್ನು ಸಾಮಾಜಿಕವಾಗಿ ದುರ್ನಡತೆ ಬಿತ್ತಿಲ್ಲ, ಬದಲಿಗೆ ಕೋಪದ ಹಿಂದಿರುವ ಅಸೀಮ ಪ್ರೀತಿಯನ್ನು, ಕಾಳಜಿಯನ್ನು ಸಮಾಜದ ನಡುವೆ ಹಾಗೂ ಚಿತ್ರರಂಗದಲ್ಲಿ ಸಾಬೀತುಪಡಿಸಿಕೊಂಡಿದ್ದಾರೆ.

ಓರ್ವ ಕಲಾರಂಗದಲ್ಲಿ ಖಳನಟನಾಗಿ ವೈಭವೀಕರಿಸಿದ ಹಿರಿಯ ನಟನ ಮಗ, ಇಂದು ಯಶಸ್ವಿ ಸ್ಟಾರ್ ನಟನಾಗಿರುವುದು ಸಹಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ವಾ..? ಖಳನಟನ ಮಗ ಖಳನಟನಾಗಿಯೇ ಇರಬೇಕೆ..? ಅಗರ್ಭ ಕಲಾವಿದನಾಗಿ ಮೆರೆದ ಖಳನಟನ ಮಗ ಸ್ಟಾರ್ ನಟನಾಗುವುದಕ್ಕೆ ಪರಿತಪಿಸಿದ ಹಾದಿ, ಅನುಭವಿಸಿದ ನೋವು-ಯಾತನೆಗಳು ಸಂಕಟಗಳ ನಡುವೆ, ಸೋಲುಗಳ ಸ್ವಾದಗಳ ಅನುಭವಿಸಿ ಸಾಲು-ಸಾಲು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ ದರ್ಶನ್ ಇಂದು ಬಹುಬೇಡಿಕೆಯ “ಸ್ಟಾರ್ ನಟ” ಎನ್ನುವುದನ್ನು ಅರಗಿಸಿಕೊಳ್ಳಲು ಸಾಧ್ಯ ಇಲ್ಲವೇ..?

ರಾಜಕೀಯ ಹಿನ್ನಲೆ ಬೇಕಿಲ್ಲ, ಕನ್ನಡ ಸಾಂಸ್ಕೃತಿಕ ಲೋಕ ಎಂದಿಗೂ ಇಂದ್ರಜಿತ್ ರವರಂತಹ ಮಾನಸೀಕತೆಯನ್ನು ಅರ್ಥೈಸಿಕೊಳ್ಳುವ ಅತ್ಯಂತ ಜರರೂತ್ತಿದೆ, ನಟ ದರ್ಶನ್ ತೋರುವ ಪ್ರಾಣಿ-ಪಕ್ಷಿಗಳ ಪ್ರೀತಿ, ಜೀವಪರ ನಿಲುಗಳನ್ನು ಮೈಗೂಡಿಸಿಕೊಂಡು ಸಹಾಯವನ್ನು ಮಾಡುವ ಭಾವುಕ ಮನಸಿನವರೆನ್ನುವುದು ಇಡೀ ಚಿತ್ತ ಸಮಾಜಕ್ಕೆ ಗೊತ್ತಿದೆ, ಯಾವುದೇ ರಂಗವಾಗಿರಲಿ “ಕಾಲೆಳೆವ ಸಾಂಪ್ರದಾಯಿಕ ವಿಕೃತಿಗಳು” ಇದ್ದೇ ಇರುತ್ತವೆ ಎನ್ನುವ ಕಾರಣಕ್ಕೆ ದರ್ಶನ್ ಒಳಗಿನ ಮನುಷ್ಯತ್ವ, ಭಾವನ್ಮುಖಿ, ಅಗಾಧವಾದ ನಟನೆ ಎಂದಿಗೂ ಮಾಸುವುಕ್ಕೆ ಸಾಧ್ಯವಿಲ್ಲ ಎನ್ನುವುದು ಯಾರು ಮರೆಯುವಂತಿಲ್ಲ,

ಭಾರಿ ಚಿಂತಕರ ಸಾಲುಗಳನ್ನು ಒಂದಿಷ್ಟು ಓದಿದ್ದೇನೆ ಅಡ್ಡಗೋಡೆಯ ಮ್ಯಾಲೆ ದೀಪವಿಟ್ಟಂತೆ ಬರೆದುಕೊಂಡಿದ್ದಾರೆ, ಎಂದಿಗೂ ದರ್ಶನ್ ನನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ, ದರ್ಶನ್ ನಟನೆಗೆ ಗೌರವವಿದೆ ಎನ್ನುವ ಇಂತಹ ಚಿಂತಕರನ್ನು ಇಡೀ ರಾಜ್ಯವೇ ಸಹಿಸಿಕೊಂಡಿದೆ ಎನ್ನುವುದನ್ನು ಮರೆಯಕೂಡದು. ದರ್ಶನ್ ಈಗಾಗಲೇ ಚಿತ್ರರಂಗದ ಮೈಲಿಗಲ್ಲಾಗಿ ಬಿಟ್ಟಿದ್ದಾರೆ, ಆ ಮೈಲಿಗಲ್ಲನ್ನು ಕೀಳುವುದಕ್ಕೆ ಅಥವಾ ಹೇಸಿಗೆ ಮಾಡುವ ವಿಫಲ ಯತ್ನ ಮಾಡದೇ ಚಿತ್ರರಂಗವನ್ನು ಪ್ರತಿಭಾರಿಯೂ ಹೇಳಿಕೆಳನ್ನಾಧರಿಸಿ ಬೀದಿಗೆ ಎಳೆಯುವ ಹಾಗೂ ಕನ್ನಡ ಸಾಂಸ್ಕೃತಿಕ ಲೋಕದ ದೀಪಗಳನ್ನು ಹಾರಿಸುವ ಯತ್ನಕ್ಕೆ ಪ್ರತಿರೋಧವಿರಲಿ, ದೀಪವದು ತೂಗದೀಪ ಎನ್ನುವುದನ್ನು ದರ್ಶನ್ ತಮ್ಮ ನಿರಂತರ ಶ್ರಮದಿಂದ ಸಾಬೀತುಪಡಿಸಿದ್ದಾರೆ, ಸಾಧ್ಯವಾದರೆ ಇಂದ್ರಜೀತ್ ಕೂಡ ಲಂಕೇಶ್ ನೀತಿಗಳನ್ನು ಎದೆಯಲ್ಲಿಟ್ಟುಕೊಂಡು ಮೊದಲು ಸಾರ್ವಜನಿಕವಾಗಿ ಸಾಬೀತುಪಡಿಸಲಿ ಎನ್ನುವುದು ಮನವಿಯಾಗಿದೆ. ಇಂದ್ರಜಿತ್ ಉಡಾಳನೋ..? ಆತ ಮಾಧ್ಯಮದ ಜಗುಲಿಗಳಲ್ಲಿ ಬೆನ್ನಿಗಿಟ್ಟು ಕೂತಿರುವುದು ಕೊಳೆತ ಘಟನೆಯೋ. ಏನೇ ಆಗಲಿ ಇಂದ್ರಜಿತ್ ನ ಅವಸರವಾದ ಹೇಳಿಕೆಗಳ ಹಾಗೂ ದೂರುಗಳ ಹಿಂದೆ ಏನಿರಬಹುದು ಎನ್ನುವುದು ಪೊಲೀಸ್ ಇಲಾಖೆ ತನಿಖಿಸಲಿ, ಇಂತಹ ಕೋವಿಡ್ ಕಾಲದಲ್ಲಿಯೂ ಈತನ ಹೋರಾಟದ ಅಸಲಿ ಕಹಾನಿ ಪತ್ತೆ ಹಚ್ಚಲಿ ಎನ್ನುವುದೇ ಈ ಸಾಲಿನ ಉದ್ದೇಶವಾಗಿದೆ.

( ಮುಂದಿನ ಕಹಾನಿಯತ್ತ ಚಿತ್ತವರಿಸೋಣ )

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ I ಗುಡ್ಡ ಕುಸಿದು ಮೂವರ ಧಾರುಣ ದುರ್ಮರಣ I I ಗಾರಾ ಎನ್ನುವ ಜೀವಭಾವ I I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I