Friday, 18 September 2026 Suryagagana — Edition

Suryagagana

My WordPress Blog

ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I Uncategorized Een vergelijking van virtuele spelopties systematisch bekeken Uncategorized Algemene uitleg over gebruikelijke speloverzichten ter voorbereiding Uncategorized Algemene uitleg over beschikbare spelformaten helder beschreven Uncategorized Casino categories: examples and explanations for players Uncategorized Zo vergelijkt je online accountfuncties aandachtig Uncategorized Hoe u verschillende spelcategorieën duidelijk kunt onderscheiden ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I Uncategorized Een vergelijking van virtuele spelopties systematisch bekeken Uncategorized Algemene uitleg over gebruikelijke speloverzichten ter voorbereiding Uncategorized Algemene uitleg over beschikbare spelformaten helder beschreven Uncategorized Casino categories: examples and explanations for players Uncategorized Zo vergelijkt je online accountfuncties aandachtig Uncategorized Hoe u verschillende spelcategorieën duidelijk kunt onderscheiden
ಅಂಕಣ

I ಯುವ ಕಟ್ಟಾಳು I ಮಲೆನಾಡಿನ ವಿನಯ್ ತಾಂದಲೆ I

ಬರೆಯುತ್ತಾರೆ ಗಾರಾ.ಶ್ರೀನಿವಾಸ್ I ಯುವ ಕಟ್ಟಾಳು I ಮಲೆನಾಡಿನ ವಿನಯ್ ತಾಂದಲೆ I ಈ ಹೊತ್ತಿನ ಸಾಮಾಜಿಕ ಬದಲಾವಣೆಗೆ ಯುವ ಸಮುದಾಯದ ಪಾತ್ರ ಬಹುಮುಖ್ಯವಾಗಿದೆ, ಈ ಹಿನ್ನೆಲೆಯಲ್ಲಿ ಇಂದು ರಾಷ್ಟ್ರೀಯ ಯುವದಿನವಾಗಿದ್ದು ಬರಹದ ಪಥದಲ್ಲಿ ಸಾಗುವ ಈ ಅವಸರದೊಳು ಯುವಕರ ನಾಯಕತ್ವವನ್ನು…

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಯುವ ಕಟ್ಟಾಳು I ಮಲೆನಾಡಿನ ವಿನಯ್ ತಾಂದಲೆ I

ಈ ಹೊತ್ತಿನ ಸಾಮಾಜಿಕ ಬದಲಾವಣೆಗೆ ಯುವ ಸಮುದಾಯದ ಪಾತ್ರ ಬಹುಮುಖ್ಯವಾಗಿದೆ, ಈ ಹಿನ್ನೆಲೆಯಲ್ಲಿ ಇಂದು ರಾಷ್ಟ್ರೀಯ ಯುವದಿನವಾಗಿದ್ದು ಬರಹದ ಪಥದಲ್ಲಿ ಸಾಗುವ ಈ ಅವಸರದೊಳು ಯುವಕರ ನಾಯಕತ್ವವನ್ನು ಗುರುತಿಸಿ ಸಮಾಜದಲ್ಲಿ ಉತ್ತೇಜಿಸುವ ಕೈಂಕರ್ಯದಲ್ಲಿ ತೊಡಗಿಸಿಕೊಳ್ಳುವ ಇರಾದೆಯಿಂದ ಬರೆಯುತ್ತಾರೆ ಗಾರಾ.ಶ್ರೀನಿವಾಸ್ ಎನ್ನುವ ಅಂಕಣದಲ್ಲಿ ಯುವ ದನಿ ಎಂದು ತಲೆಬರಹವನ್ನು ನಾಮಾಂಕಿಗೊಳಿಸಿ ಮೊದಲ್ಗೊಂಡು ಮಲೆನಾಡಿನ ಹೆಬ್ಬಾಗಿಲು ಸಿಹಿಮೊಗೆಯ ಯುವ ನಾಯಕತ್ವದ ಕುರಿತಾಗಿ ಬರೆಯುತ್ತಿದ್ದೇನೆ, ಬರೆಯುವ ಮನಸಿನಲ್ಲಿ ಯಾವ ಉತ್ಪ್ರೇಕ್ಷೆಯಾಗಲಿ, ಜಿಜ್ಞಾಸೆಗಳಾಗಲಿ, ಕಪೋಲಕಲ್ಪಿತವಾಗಿ ಸೃಷ್ಟಿಸಿಕೊಳ್ಳದೆ ಇರುವ ವಾಸ್ತವವನ್ನು ಇಲ್ಲಿ ಉಲ್ಲೇಖಿಸುತ್ತಿದ್ದೇನೆ, ನೂರಾರು ಲೇಖನಗಳು ಇಲ್ಲಿಗೆ ಬರೆದು ಪತ್ರಿಕೆಗಳಲ್ಲಿ ಹಾಗೂ ಸಾಮಾಜಿಕ ಜಾಲಾತಣದಲ್ಲಿ ಪ್ರಚುರ ಪಡಿಸಿದ್ದು ನಿಸ್ವಾರ್ಥಮುಖಿಯಾಗಿಯೇ ಹೊರತು ನನ್ನ ಲೇಖನಗಳಿಗೆ ಕಾಸಿಲ್ಲವಾಗಿದೆ,

ಇಂತಹದೊಂದು ಸಂಗತಿಯನ್ನು ತರ್ಕಿಸುವವರಿಗೆ ಮುಟ್ಟಿಸಿದ್ದೇನೆ, ಸಾವಿರಾರು ಓದುಗರ ಮುಕ್ತತೆಯ ಬೆಂಬಲವೇ ಇಡೀ ರಾಜ್ಯದಲ್ಲಿ ಗಾರಾ.ಶ್ರೀನಿವಾಸ್ ಎನ್ನುವ ಹೆಸರು ವಿಸ್ತಾರಗೊಂಡಿದೆ, ಇನ್ನೂ ಸುದ್ದಿ ಕೈಂಕರ್ಯದಲ್ಲಿಯು ಅಷ್ಟೆ ನೇರ-ನಿಷ್ಟುರವಾಗಿ ಬಿತ್ತರಿಸಿದ್ದೇನೆ, ಸುದ್ದಿಗೆ ಗ್ರಾಸವಾದ ಮಂದಿಗಳಿಗೆ ಉಳಿದಿದ್ದು ಕೊನೆಯ ಅಸ್ತ್ರ ಎಂಬಂತೆ ಆರೋಪಗಳನ್ನು ಕೂಡ ಕಟ್ಟಿ ಹೆಗಲಿಗಿಡುವ ವ್ಯಥಾ ಪ್ರಯತ್ನದಡಿ ಮುಗ್ಗರಿಸಿ ಸಮಾಜದ ಮುಂದಡಿ ನಿತ್ರಾಣಗೊಂಡಿರುವುದು ಹೊಸತೇನಲ್ಲ, ಈ ಟಿಪ್ಪಣಿ ಅಗತ್ಯತೆಯ ಕಾರಣ ಮಾತ್ರದಿ ಇಲ್ಲಿ ಲಗತ್ತಿಸ್ಸಿದ್ದೇನೆ, ೨೦೦೫ ರಿಂದ ಇಲ್ಲಿಯವರೆಗೆ ಅಂದರೆ ಎರಡು ದಶಕಗಳಿಂದ ರಾಜಿರಹಿತ ಸುದ್ದಿ, ಸಾಮಾಜಿಕ ಸಾಹಿತ್ಯಗಳ ಪದಬೀಜವನ್ನು ಈ ನೆಲದಲ್ಲಿ ಬಿತ್ತು ಬೆಳೆದು ಕನ್ನಡದ ಕೃಷಿಕನಾಗಿದ್ದೇನೆ, ಹೀಗಾಗಿ ಯಾವುದೇ ಕಾರಣಕ್ಕೂ ನನ್ನ ಅಕ್ಷರಗಳಿಗೆ ಮುಕ್ತತೆಯಿದೆ, ಭಯವಿಲ್ಲದ ಅಭಿವ್ಯಕ್ತಿಯನ್ನು ಎಡೆಬಿಡದೆ ಅಭಿವ್ಯಕ್ತಿಗೊಳಿಸಿದ್ದೇನೆ ಎಂದು ಉವಾಚಿಸುತ್ತಾ… ಈ ತಲೆಬರಹದ ಮೊದಲ ಲೇಖನವನ್ನು ವಿಸ್ತೃತಗೊಳಿಸುತ್ತಿದ್ದೇನೆ.

ಶಿವಮೊಗ್ಗ ನಗರಿಯ ಎದೆಭಾಗದಲ್ಲಿರುವ ಗಾಂಧಿಬಜಾರಿನ ಏರಿಯಾ ಹೊಂದಿಕೊಂಡಂತೆ ಇರುವ ತುಳುಜಾಭವಾನಿ ರಸ್ತೆಯ ನಿವಾಸಿಯಾಗಿರುವ ವಿನಾಯಕ ರಾವ್ ಹಾಗೂ ನಾಗರತ್ನ ಎಂಬುವ ಬಡ-ಮಧ್ಯಮ ಕುಟುಂಬ ಹೊಲಿಗೆ ಯಂತ್ರವನ್ನು ಅಪ್ಪಿಕೊಂಡಿಯೇ ತಮ್ಮ ಜೀವನವನ್ನು ಅವಲಂಬಿತವಾಗಿಸಿಕೊಂಡಿರುತ್ತಾರೆ, ಇಂದು ಬದಲಾದ ಹೊಲಿಗೆ ಕೌಶಲ್ಯಗಳ ಆಧುನಿಕತೆಯ ಯಂತ್ರಗಳು ಆಗಿರಲಿಲ್ಲ, ಯಾವುದೇ ಎಲೆಕ್ಟ್ರೀಕಲ್ ಅಂಡ್ ಎಲೆಕ್ಟ್ರಾನಿಕ್ ಸೌಲಭ್ಯಗಳನ್ನು ಹೊಂದಿರಲಿಲ್ಲ, ಬರಿಯಗಾಲಿನಲ್ಲಿ ಅದೆಷ್ಟು ತುಳಿದು ಗ್ರಾಹಕ ಮಂದಿಗಳ ಬಟ್ಟೆಗಳನ್ನು ವಿನ್ಯಾಸಗೊಳಿಸುತ್ತಿದ್ದರೋ ಅದಷ್ಟು ಅವರ ಜೀವನ ಸಾಗಿಸುವುದಾಗಿತ್ತು, ಕಾಲಿಗೆ ಬೊಬ್ಬೆ ಬಂದರು ಸರಿ, ಮನಸಿಗೆ ನೋವಾಗಿದ್ದರು ಸರಿ ತಮ್ಮ ವೃತ್ತಿ ಕಸುಬು, ಮಕ್ಕಳು, ವಿದ್ಯಾಭ್ಯಾಸ, ಮದುವೆ ಮನೆಯ ನಿರ್ವಹಣೆ ಎಲ್ಲವೂ ನಿಭಾಯಿಸಬೇಕಾದ ಜರೂರತ್ತುಗಳು ಈ ಕುಟುಂಬಕ್ಕೆ ಇತ್ತು, ಇದು ಬಡವರ ಹಾಡು-ಪಾಡು ಎಂದೇಳಬಹುದು,

ಇಂತಹದೊಂದು ಕುಟುಂಬದ ಮಗನಾಗಿ ತಾನೋಂದು ಈ ಜಗದ ಜಗಲಿಗೆ ಶಾಸನಗೊಳ್ಳಬೇಕು, ಈ ಬದುಕಿಗೊಂದು ನಿಜಾರ್ಥ ತಳೆಯಬೇಕು, ಹೆತ್ತವರ ಕನಸಿಗೊಂದು ಚಿತ್ತಾರ ಬಳಿಯಬೇಕು ಎಂದುಕೊಂಡು ಸೋಲುಗಳನ್ನು ಆಸ್ವಾದಿಸಿಕೊಂಡಿಯೇ ಸಾಕಷ್ಟು ಯುವಕರ ಮನಸೆಳೆದು ನಿಂದವರೇ ವಿನಯ್ ತಾಂದಲೆ, ಇಂತಿವರ ದೂರದೃಷ್ಟಿ, ಸಮಾಜಕ್ಕೆ ತನ್ನ ಜೀವನವನ್ನು ಹೇಗಾದರು ಸರಿಯೇ ಬಳುವಳಿಯಾಗಿಸಬೇಕು ಎಂದುಕೊಂಡು ಮಲೆನಾಡಿನಲ್ಲಿ ನೋಡು, ನೋಡುತ್ತಿದ್ದಂತೆಯೇ ಗುರುತಿಸಿಕೊಂಡಿದ್ದು ಸಾವಿರ ಯುವಕರ ದಂಡಿನಲ್ಲಿ ವಿನಯ್ ಒಬ್ಬರು ಎಂದು ಹೇಳುವುದರಲ್ಲಿ ಯಾವುದೇ ನಿಸ್ಸಂದೆಹಗಳಿಲ್ಲವಾಗಿದೆ, ಇದಕ್ಕೆ ಅಸಲಿ ಕಾರಣ ತಾನು ಬೆಳೆದು ಬಂದ ಕುಟುಂಬದ ಹೆತ್ತವರ ಪ್ರೀತಿ ಅವರು ಕೊಟ್ಟ ಸಂಸ್ಕಾರಗಳು, ನೋವಿನ ಅನುಭವದ ಅನುಭೂತಿಗಳಿಂದ ಈ ಕಿರಿದಾದ ವಯಸ್ಸಿನಲ್ಲಿಯೇ ತನ್ನ ಪ್ರಬುದ್ದತೆ ಪ್ರೌಡಿಮೆಗಳನ್ನು ಕಟ್ಟಿಕೊಂಡಿರುತ್ತಾರೆ,

ಓದಿ ವಿದ್ಯಾವಂತನಾದರೆ ಸಾಲದು ಓದಿದ ವಿದ್ಯೆಯ ಕಲಿಕೆಗಳು ಸಮಾಜಕ್ಕೆ ಅರ್ಪಿಸಬೇಕು, ಹುಟ್ಟಿನಿಂದ ಏನನ್ನು ಸಾಧಿಸಲಾಗದು ಸಾವಿನಿಂದ ಸಾಧಿಸಬಲ್ಲದು, ಎನ್ನುವ ಮಾತು ಅಕ್ಷರಶಃ ಇಂದಿಗೂ ದಿಟವಾಗಿದೆ, ಕೊನೆಯಾದವರ ಪಟ್ಟಿಯಲ್ಲಿ ಅನೇಕರಿದ್ದಾರೆ, ಆದರೆ ಇದರಲ್ಲಿ ಬೆರಳಣಿಕೆಯಷ್ಟು ಬದುಕುಗಳು ಅಳಿಸಲಾಗದ ಶಾಸನವಾಗಿದೆ, ಈ ನಿಟ್ಟಿನಲ್ಲಿ ವಿನಯ್ ತಾಂದಲೆ ಅವರು ತಮ್ಮ ಜೀವನದ ಕೃತಿಯನ್ನು ಬರೆದುಕೊಳ್ಳುತ್ತಿದ್ದಾರೆ,

ಈ ಕಾರಣದ ಮಾತ್ರದಿ ಅನೇಕ ಕಾರ್ಯಕ್ರಮಗಳು ಮಲೆನಾಡಿನ ಈ ನೆಲದಲ್ಲಿ ಇವರ ನಾಯಕತ್ವದಲ್ಲಿ ಅರಳಿದೆ, ಇದಲ್ಲದೆ ಕಾಂಗ್ರೆಸ್ ಪಕ್ಷದ ಯುವ ವಿಭಾಗದಲ್ಲಿ ಅಗ್ರಮುಖಿಯಾಗಿ ತಮ್ಮದೇ ಆದ ರೀತಿಯಲ್ಲಿ ಮೊಹರೊತ್ತಿದ್ದಾರೆ, ಬಾಹುಸಾರ ಕ್ಷತ್ರಿಯ ಸಮಾಜದ ಸಂಘಟನೆಯಲ್ಲಿ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸುತ್ತಿರುವ ಇವರು ೨೦೨೪ರಲ್ಲಿ ಶ್ರೀರಾಮ ಸೇವಾ ಬಾಹುಸಾರ ಕ್ಷತ್ರಿಯ ಕೋ-ಆಪರೇಟಿವ್ ಸೊಸೈಟಿ.ಲಿ ನಡೆದ ಚುನಾವಣೆಯಲ್ಲಿ ಅತೀ ಹೆಚ್ಚು ಮತಗಳಿಂದ ಗೆಲುವು ಸಾಧಿಸಿ ಆರ್ಥಿಕ ವಲಯದ ಚುಕ್ಕಾಣಿ ಹಿಡಿದಿದ್ದಾರೆ, ಜೀವನ ನಿರ್ವಹಣೆ ಮಾಡಲು ವೃತ್ತಿಯಲ್ಲಿ ಗುತ್ತಿಗೆದಾರರಾಗಿರುವ ವಿನಯ್ ತಾಂದಲೆ ಅವರು ಸಮಾಜಮುಖಿಯಾಗಿ, ಗೌರವಧಾರಣೆಯಾಗಿ, ಎಲ್ಲರಲ್ಲಿಯು ವಿಶ್ವಾಸಾರ್ಹ ಬದುಕಿನ ಸಾಲುಗಳನ್ನು ಬರೆದುಕೊಂಡಿರುವ ತಮ್ಮ ಹೆತ್ತವರ ಬಗ್ಗೆ ಅವರ ಆಪ್ತ ಸ್ನೇಹಿತರಲ್ಲಿ ಹೇಳಿಕೊಳ್ಳುವ ಸಾಂದರ್ಭಿಕತೆಗಳು ಎದುರಾದರೆ ಅವರಿಗೊತ್ತಿಲ್ಲದೆ ಒಮ್ಮೆಲೆ ಮಾತಿನ ಸ್ಥಭ್ದತೆಗೆ ಒಳಗಾಗುತ್ತಾರೆ, ತಲೆಕೆಳಗಾಗಿಸಿಕೊಂಡು ಕಂಗಳೊಮ್ಮೆ ತುಂಬಿಕೊಳ್ಳುತ್ತಾರೆ, ಎಂದರೆ ಅವರಲ್ಲಿನ ಭಾವುಕತೆಯ ಪ್ರತಿಫಲವೇ ಸಮಾಜದಲ್ಲಿ ವಿಶೇಷತೆಯನ್ನು ಕಂಡು ಕೊಂಡಿದ್ದಾರೆ,

ಜೀವನ ಎಂಬುದು ಎಲ್ಲರಲ್ಲಿಯು ಕಾಲದ ಬುತ್ತಿಯಂತೆ ಎದುರಾಗುತ್ತದೆ, ಈ ಬುತ್ತಿಯ ಸ್ವಾದತೆ ಆಸ್ವಾದಿಸುವ ಮನಸುಗಳಿಗೆ, ಸಮಾಜಕ್ಕೆ ರುಚಿಕರವಾಗಿಸಬೇಕೆ ಹೊರತು ಮುಗ್ಗುಲಾಗುವುದಕ್ಕಲ್ಲ, ಇದನ್ನು ಅರಿಯದ ಬಹುತೇಕ ಯುವಕರು ಸಾಂದರ್ಭಿಕತೆಯ ಶಿಶುವಂತಾಗಿ ಯುವ ದಿನಮಾನಗಳನ್ನೇ ನಶಿಸಿಕೊಂಡು ನಂತರ ಪಶ್ಚಾತಾಪ ಪಡುತ್ತಾರೆ, ಈ ಕಾರಣದಿಂದ ಮುಂದೆ ನೋವಿನ ಸರಮಾಲೆ ಧರಿಸುವ ಮೊದಲೇ ಜತೆಯಲ್ಲಿಯೇ ಇರುವ ಅಥವಾ ಸಮಾಜದಲ್ಲಿ ಬಡತನ ಎಂಬುವ ಬಗೆಗಳ ವಿರುದ್ದ ಯುದ್ದಕ್ಕಿಳಿದು ಒಟ್ಟು ಸಮಾಜದ ನಾಯಕತ್ವದ ಪತಾಕೆಯನ್ನು ಹಾರಿಸುವ ದಿಟ್ಟತೆಯ ವಿನಯ್ ತಾಂದಲೆ ಅಂತಹ ಯುವ ಮನಸುಗಳು ಅನ್ಯರಿಗೆ ಮಾದರಿಯಾಗಲಿ ಎನ್ನುವುದು ಈ ಸಾಲಿನ ಅಂಬೋಣ.

Gara Srinivas

Gara Srinivas

Leave a comment

error: Content is protected !!