Friday, 18 September 2026 Suryagagana — Edition

Suryagagana

My WordPress Blog

ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I Uncategorized Een vergelijking van virtuele spelopties systematisch bekeken Uncategorized Algemene uitleg over gebruikelijke speloverzichten ter voorbereiding Uncategorized Algemene uitleg over beschikbare spelformaten helder beschreven Uncategorized Casino categories: examples and explanations for players Uncategorized Zo vergelijkt je online accountfuncties aandachtig Uncategorized Hoe u verschillende spelcategorieën duidelijk kunt onderscheiden ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I Uncategorized Een vergelijking van virtuele spelopties systematisch bekeken Uncategorized Algemene uitleg over gebruikelijke speloverzichten ter voorbereiding Uncategorized Algemene uitleg over beschikbare spelformaten helder beschreven Uncategorized Casino categories: examples and explanations for players Uncategorized Zo vergelijkt je online accountfuncties aandachtig Uncategorized Hoe u verschillende spelcategorieën duidelijk kunt onderscheiden
ಅಂಕಣ

 I ಪೊಲೀಸರು ತನಿಖೆ ಮಾಡಿದ್ದಾ..? I I ಮಾಧ್ಯಮಿಗಳು ತನಿಖೆ ಮಾಡಿದ್ದೋ..?! I

ಬರೆಯುತ್ತಾರೆ ಗಾರಾ.ಶ್ರೀನಿವಾಸ್  I ಪೊಲೀಸರು ತನಿಖೆ ಮಾಡಿದ್ದಾ..? I I ಮಾಧ್ಯಮಿಗಳು ತನಿಖೆ ಮಾಡಿದ್ದೋ..?! I ಭಾಗ-೨, ಅಂದಿನ ಪ್ರಕರಣ ಹಾಗೂ ಇತ್ಯಾದಿ ಸುದ್ದಿ ಮನುಷ್ಯವಾದಿಯಾಗಿ ನುಡಿಯಬೇಕು ಅದರಂತೆ ನಡೆಯಬೇಕು ಇದು ಜೀವಪರ ನಿಲುವು ಕೂಡ, ಜೀವ ಎನ್ನುವುದು ಬದುಕು ಈ…

ಬರೆಯುತ್ತಾರೆ ಗಾರಾ.ಶ್ರೀನಿವಾಸ್

 I ಪೊಲೀಸರು ತನಿಖೆ ಮಾಡಿದ್ದಾ..? I
I ಮಾಧ್ಯಮಿಗಳು ತನಿಖೆ ಮಾಡಿದ್ದೋ..?! I

ಭಾಗ-೨, ಅಂದಿನ ಪ್ರಕರಣ ಹಾಗೂ ಇತ್ಯಾದಿ ಸುದ್ದಿ

ಮನುಷ್ಯವಾದಿಯಾಗಿ ನುಡಿಯಬೇಕು ಅದರಂತೆ ನಡೆಯಬೇಕು ಇದು ಜೀವಪರ ನಿಲುವು ಕೂಡ, ಜೀವ ಎನ್ನುವುದು ಬದುಕು ಈ ಬದುಕು ಕಟ್ಟಿ ಕೊಳ್ಳುವ ಮುನ್ನವೇ ಸುಟ್ಟು ಮಸಣದ ಕಸವಾದೊಡೆ ಭಾವುಕತೆಯ ಬ್ರಿಡ್ಜ್ ಒಮ್ಮೆಲೆ ಬಿರುಕು ಬಿಡುತ್ತದೆ, ಸುಧಾರಿಸಲು ಕಷ್ಟ ಸಾಧ್ಯವಾಗುತ್ತದೆ ಅಲ್ಲವೇ..?!, ಇಂತಹದೊಂದು ಟಿಪ್ಪಣಿಯೊಂದಿಗೆ ದೃಶ್ಯ ಮಾಧ್ಯಮಿಗಳು ಮತ್ತು ಈ ಹೊತ್ತಿನ ನಟ ದರ್ಶನ್ ಪ್ರಕರಣವನ್ನು ಒಮ್ಮೆ ಅಧ್ಯಯಿಸೋಣ, ಬೆಂಗಳೂರಿನ ಕಾಮಾಕ್ಷಿ ಪಾಳ್ಯದ ಪಾಳುಬಿದ್ದ ಡ್ರೈನೇಜ್ ಬಳಿ ಅನಾಥ ಶವವಾಗಿ ಬಿದ್ದು ಹೋಗಿದ್ದವನು ಚಿತ್ರದುರ್ಗದ ರೇಣುಕಾಸ್ವಾಮಿ ಎಂದು ತನಿಖೆಗಿಳಿದಿದ್ದ ಪೊಲೀಸರು ಗೊತ್ತು ಮಾಡಿಕೊಂಡಿದ್ದರು. ನಿಜಕ್ಕೂ ಇದೊಂದು ಅಮಾನವೀಯ ಘಟನೆಯೇ ಆಗಿದೆ, ಈ ಜೀವವನ್ನು ನಂಬಿದ್ದ ಮದ್ಯಮ ಕುಟುಂಬದ ಸಾಂಗತ್ಯದ ಕೊಂಡಿ ಕಳಚಿದಂತಾಗಿದೆ ಇದು ಎಂತಹವರಿಗೂ ಬೇಸರ ಸಂಗತಿ, ಕಾನೂನು ಕೂಡ ಯಾವುದೇ ಮುಲಾಜಿಲ್ಲದೆ ನೈಜ ಕರ್ತವ್ಯದ ಮಜಲಿನಲ್ಲಿದೆ.


ಪೊಲೀಸ್ ಆಯುಕ್ತರಾದ ಬಿ.ದಯಾನಂದ್‌ರವರು ಬಹಿರಂಗವಾಗಿ ತಿಳಿಸಿದಂತೆ ಮೊದ ಮೊದಲು ರೇಣುಕಾಸ್ವಾಮಿ ಶವ ನೋಡಿದಾಗ ಇದೊಂದು ಆತ್ಮಹತ್ಯೆ ಎಂದು ಭಾವಿಸಲಾಗಿತ್ತು, ಆದರೆ ತನಿಖಿಸುತ್ತಿದ್ದ ಕರ್ತವ್ಯನಿರತ ಅಧಿಕಾರಿಗಳಿಗೆ ಇದು ಕೊಲೆ ಎಂದೇ ಶವದ ಮೇಲಿನ ಗುರುತುಗಳ ನೋಡಿ ದೃಡಪಡಿಸಿಕೊಂಡಿದ್ದಾರೆ, ಅದಾಗಲೇ ಇನ್ನೂ ತಡಮಾಡುವುದು ಸರಿಯಲ್ಲ ಎಂದು ಭಾವಿಸಿದ ಗಿರಿನಗರ ಬಡಾವಣೆಯ ಮೂವರು ಹುಡುಗರು ನಾವುಗಳೇ ಕೊಲೆಗೈದಿದ್ದೇವೆ ಎಂದು ತಪ್ಪೋಪ್ಪಿಗೆ ನೀಡಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ.

ಹಠಾತ್ ಈ ಬದಲಾವಣೆಯನ್ನು ಅನುಮಾನಿಸಿದ ಪೊಲೀಸರು ತಮ್ಮದೇ ಆದ ರೀತಿಯಲ್ಲಿ ಖಾಕಿ ಡ್ರಿಲ್ ಮಾಡಿದ ತರುವಾಯ ಶರಣಾಗಿದ್ದ ಹುಡುಗರ ಹೇಳಿಕೆ ಬದಲುಗೊಂಡು ಅದು ನಟ ದರ್ಶನ್ ತೂಗುದೀಪರವರನ್ನು ಬೊಟ್ಟು ತೋರಿಸಿದೆ, ಪೊಲೀಸರು ಕೂಡ ನಟ ದರ್ಶನ್ ಗೆಳತಿ ಪವಿತ್ರ ಗೌಡ ಅವರ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಾಮೆಂಟ್ ಹಾಕುತ್ತಿದ್ದುದೇ ಈ ಮರ್ಡರ್‌ಗೆ ಕಾರಣವೆಂದು ತಿಳಿದ ಮೇಲೆ ಮೈಸೂರಿನ ಫಾರಂ ಹೌಸ್‌ನಲ್ಲಿದ್ದ ದರ್ಶನ್‌ಗೆ ಪೋನಾಯಿಸಿದ್ದಾರೆ, ಅವರೇ ಖುದ್ದು ಠಾಣೆಗೆ ಬರುವುದಾಗಿ ತಿಳಿಸಿ ಪೊಲೀಸರ ತನಿಖೆಗೆ ಸ್ಪಂದಿಸುತ್ತಿದ್ದಾರೆ.

ಇದು ಘಟಿತ ಘಟನೆಯಾಗಿದೆ ಪೊಲೀಸರು ತನಿಖಿಸುತ್ತಿದ್ದಾರೆ, ಪ್ರಕರಣವೂ ದಾಖಲಿಸಿಕೊಂಡಿದ್ದಾರೆ, ಪ್ರಥಮ ವರ್ತಮಾನ ವರದಿಯಂತೆ ವಿಚಾರಣೆಯು ನಡೆಯುತ್ತಿದೆ, ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದ ಹದಿಮೂರು ಜನರನ್ನು ವಶಕ್ಕೆ ಪಡೆದಿದ್ದಾರೆ, ಇಂತಹದೊಂದು ಘಟನೆಗೆ ಬೇಕಾದ ಅಗತ್ಯ ಸಾಕ್ಷ್ಯಗಳನ್ನು ಕಲೆ ಹಾಕುತ್ತಿರುವ ಪೊಲೀಸರು ಮುಂದಿನ ದಿನಗಳಲ್ಲಿ ಚಾರ್ಜ್‌ಶೀಟ್ ಕೋರ್ಟಿಗೆ ಸಲ್ಲಿಸಬೇಕಾಗುತ್ತದೆ,
ಇಲ್ಲಿ ವಾದ-ಪ್ರತಿವಾದಗಳು ನಡೆದು ಬಂಧಿಸಿದ, ವಿಚಾರಣೆಗೊಳಪಡಿಸಿದ ಆರೋಪಿಗಳಲ್ಲಿ ಆಪಾದಿತರಾರು..? ಎನ್ನುವುದು ಅಂತಿಮ ತೀರ್ಪು ಈ ನೆಲದ ನ್ಯಾಯ ನೀಡುತ್ತದೆ ಅಲ್ಲವೇ..

ಆದರೆ ಆಚ್ಚರಿ ಎಂದರೆ ಪೊಲೀಸರು ಹೇಗೆ ಕರ್ತವ್ಯ ನಿರ್ವಹಿಸಬೇಕು, ಹೇಗೆ ತನಿಖೆ ನಡೆಯಬೇಕು..? ನಟ ದರ್ಶನ್‌ರವರನ್ನು ಹೇಗೆ ಕಾನೂನಿನ ಕುಣಿಕೆಯಲ್ಲಿ ಹೆಣೆಯಬೇಕು..? ದರ್ಶನ್ ತೂಗುದೀಪರವರ ಜೀವನ ಮುಗಿದ ಅಧ್ಯಾಯವೇ ಆಗುವಂತೆ ಅದ್ಯಾಗೆ ಚಾರ್ಜ್‌ಶೀಟ್ ಸಲ್ಲಿಸಬೇಕು..? ಹೀಗೆ ಸರಣಿ ಸಾಲಿಗೆ ಮುಗಿಬಿದ್ದಿರುವ ಬಹುತೇಕ ಪ್ರಸ್ತುತ ದೃಶ್ಯ ಮಾಧ್ಯಮಗಳು ಅತಿರಂಜನೆಯನ್ನು ಡ್ರ್ಯಾಗ್ ಮಾಡುತ್ತಿದೆ, ತರಾತುರಿಯಲ್ಲಿ ದರ್ಶನ್‌ಗೆ ಖೈದಿ ಬಟ್ಟೆ ತೊಡಿಸುವಂತೆ ಭಾರತೀಯ ದಂಡ ಸಂಹಿತೆಯನ್ನು ದಾಖಲಿಸಿ ಎನ್ನುವಂತೆ ಸುದ್ದಿಯನ್ನು ಬಿತ್ತರಿಸುತ್ತಿದೆ, ಸಾಲದಕ್ಕೆ ಮತ್ತೊಂದು ಹೆಜ್ಜೆ ಮುಂದಡಿಯಿಟ್ಟು ನ್ಯಾಯಾಂಗದ ವ್ಯವಸ್ಥೆಯನ್ನು ಕೂಡ ತಾವೇ ನಿರ್ವಹಿಸುತ್ತಿರುವಂತೆ ಅಂತಿಮ ತೀರ್ಪು ನೀಡುವಂತೆ ನಟ ದರ್ಶನ್‌ಗೆ ಜೀವವಾದಿ ಶಿಕ್ಷೆಯ ಖಾಯಂ ಆಗುತ್ತದೆ ಎಂದು ಬಿಡುವಿಲ್ಲದೆ ಪ್ರೇರಿತ ಸುದ್ದಿಯ ಸದ್ದು ಮಾಡುತ್ತಿದೆ.

ದೃಶ್ಯ ಮಾದ್ಯಮಿಗಳು ಬಿತ್ತರಿಸುತ್ತಿರುವ ರಂಜನೆಯ ರಾಡಿಗಳಿಂದ ಸತ್ತು ಅನಾಥ ಶವವಾದ ರೇಣುಕಾಸ್ವಾಮಿಯ ಕುಟುಂಬಕ್ಕೆ ನ್ಯಾಯ ಸಿಗುತ್ತದೋ..? ಬಿಡುತ್ತದೋ..? ಈತನನ್ನೆ ನಂಬಿದ ಕುಟುಂಬಕ್ಕೆ ಸರಕಾರದಿಂದ ಒಂದಿಷ್ಟು ಸಹಾಯಧನ ಒದಗಿಸುತ್ತದೋ..? ಗೊತ್ತಿಲ್ಲ ಪ್ರಕರಣದಲ್ಲಿ ಸಿಲುಕಿಕೊಂಡಿರುವ ನಟ ದರ್ಶನ್‌ರವರನ್ನು ಸಾಧ್ಯವಾದರೆ ನೇಣಿಗೇರಿಸಿ ಬಿಡಿ ಎನ್ನುವಷ್ಟು ಜಿಜ್ಞಾಸೆ, ಅಸೂಯೇ, ಕೋಪಾಧ್ರಿಕ್ತತೆಗಳು ಮಡುಗಟ್ಟಿಸಿಕೊಂಡಿರುವ ಪ್ರಸ್ತುತ ಮಾಧ್ಯಮಿಗಳು ಈ ಘಟಿತ ಘಟನೆಯನ್ನು ತಮಗೆ ಬೇಕಾದ ರೀತಿಯಲ್ಲಿ ಚಿತ್ರಿಸಿಕೊಂಡು ಒಮ್ಮೆಲೆ ಪೊಲೀಸ್ ಕರ್ತವ್ಯ ನಿರ್ವಹಿಸುತ್ತಿದೆ, ಇನ್ನೊಮ್ಮೆ ನ್ಯಾಯಾಂಗ ವ್ಯವಸ್ಥೆಯ ಅಂತಿಮ ತೀರ್ಪುದಾರರಂತೆ ವರ್ತಿಸುತ್ತಿರುವುದು ಸಾಂವಿಧಾನಕ ವಿರೋಧಿ ನಡೆಯಾಗಿದೆ ಎನ್ನುವುದು ದೃಶ್ಯ ಮಾಧ್ಯಮಿಗಳಿಗೆ ತಿಳಿದಿದೆಯಾ..? ಇದು ಅಭಿವ್ಯಕ್ತಿ ಸ್ವಾತಂತ್ರ್ಯವಾ..?

ಕಳೆದ ಮೂರು ವರ್ಷಗಳಿಂದ ನಟ ದರ್ಶನ್ ತೂಗುದೀಪರವರನ್ನು ಚಿತ್ರರಂಗದಿಂದಲೇ ಬ್ಯಾನ್ ಮಾಡಿ ನಾವು ಕೂಡ ಅವರ ಯಾವುದೇ ಸುದ್ದಿಗಳನ್ನು ಮಾಡುವುದಿಲ್ಲ ಸಂಪೂರ್ಣವಾಗಿ ಬಹಿಷ್ಕರಿಸಿದ್ದೇವೆ ಎಂದು ಹೇಳಿ ಅದರಂತೆ ನಡೆದಿದ್ದ ದೃಶ್ಯ ಮಾದ್ಯಮಿಗಳು ಇಂದು ತರಾತುರಿಯಲ್ಲೇಕೆ ನಟ ದರ್ಶನ್ ಕುರಿತಾಗಿ ತಂಡೋಪ ತಂಡವಾಗಿ, ಚಿತ್ರಿಕರಿಸಿ ಸುದ್ದಿ ಸೋಗಿನಲ್ಲಿ ಟಾರ್ಗೆಟ್ ಮಾಡುತ್ತಿದೆ..? ಇಂತಹದೊಂದು ಪ್ರಶ್ನೆಗೆ ಪೊಲೀಸ್ ಮಹಾನಿರ್ದೇಶಕರ ಬಳಿಯಾಗಲಿ, ರಾಜ್ಯ ಸರ್ಕಾರದ ಬಳಿಯಾಗಲಿ, ನ್ಯಾಯಾಂಗದ ವ್ಯವಸ್ಥೆಯ ಬಳಿಯಾಗಲಿ ಉತ್ತರವಿದಿಯಾ..? ಒಂದು ಘಟನೆಗೆ ಸುದ್ದಿ ಮಾಡುವುದು ತಪ್ಪಲ್ಲ ಆದರೆ ಇದೇ ಘಟನೆ ಕುರಿತು ರೆಕ್ಕೆ-ಪುಕ್ಕಗಳಂಟಿಸಿ, ಅತಿರಂಜಿಸಿ ದಿನದ ಅಷ್ಟು ಸಮಯವನ್ನು ಮೀಸಲಿಡುವುದು, ಬೊಬ್ಬಿಡುವುದು, ಇದು ಪತ್ರಿಕಾ ಕಾಯ್ದೆಯನ್ನು ಉಲ್ಲಂಘಿಸಿದಂತೆ ಎನ್ನುವುದು ಸುದ್ದಿ ಸೋಗಿನಡಿ ಟಾರ್ಗೆಟ್ ಮಾಡಿಕೊಂಡ ಮಾದ್ಯಮಿಗಳಿಗೆ ಬಹುಷ್ಯಃ ತಿಳಿಯದಾಗಿದೆ.
ಘಟನೆಯನ್ನು ಬಿಂಬಿಸಲೊರಟಿ ನಟ ದರ್ಶನ್ ತೂಗುದೀಪರವರನ್ನೇ ಟಾರ್ಗೆಟ್ ಮಾಡಿಕೊಂಡಿರುವ ದೃಶ್ಯ ಮಾದ್ಯಮಗಳು ತಾವೇ ವಿಧಿಸಿಕೊಂಡಿರುವ ಸಾಮಾಜಿಕ ಬಹಿಷ್ಕಾರವನ್ನು ಮರೆತು ಹೋದರಲ್ಲ ಎನ್ನುವುದು ಮತ್ತೊಮ್ಮೆ ಈ ಲೇಖನದ ಮೂಲಕ ಮನವರಿಕೆ ಮಾಡಿಕೊಡುತ್ತಿದ್ದೇನೆ. ಮಾದ್ಯಮಿಗಳೇ ನಿಜ ನಿಮ್ಮಗಳ ಮೇಲೆ ಸವಾಲೊಡ್ಡಿದ್ದ ನಟ ದರ್ಶನ್ ಸಾಮಾಜಿಕ ಜಾಲತಾಣಗಳ ಮೂಲಕವೇ ತಮ್ಮ ಚಿತ್ರಗಳನ್ನ ಬೆಳೆಸಿಕೊಂಡಿದ್ದರು. ಇಲ್ಲಿ ಟೆಲಿವಿಷನ್ ರೇಟಿಂಗ್ ಪಾಯಿಂಟ್ ಕೂಡ ನಿಮಗೆ ಡೌನ್ ಆಗಿತ್ತು, ಹೀಗಾಗಿಯೇ ನಟ ದರ್ಶನ್ ಮೇಲಿನ ಆರೋಪಗಳನ್ನು ಗುರಿಮಾಡಿಕೊಂಡು ಅಪಾದಿತನನ್ನಾಗಿಸಿದ್ದೀರಾ..? ಸ್ವಲ್ಪ ವಿಳಂಭಿಸಿ ಅಪಾದಿತನನ್ನಾಗಿಸುವುದು ನ್ಯಾಯಾಂಗವೇ ಹೊರತು ನೀವಲ್ಲ, ಯಾರು ತಪ್ಪು ಮಾಡಿದರು ಅದು ತಪ್ಪೇ ಅದಕ್ಕೆ ಕಾನೂನಿನಡಿ ಶಿಕ್ಷೆಗಳಿವೆ, ಪೊಲೀಸರು ಅವರ ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಅವರಿಗೆ ನಿಮ್ಮಗಳ ಮಾರ್ಗದರ್ಶನ ಅಗತ್ಯವಿಲ್ಲ, ಈ ರೀತಿಯ ಸುದ್ದಿಗಳ ಬಿತ್ತರಿಸುವಿಕೆ ಅಸಾಂವಿಧಾನಿಕ ಎನ್ನುವುದು ಗೊತ್ತಿರಲಿ.

ಒಟ್ಟಿನಲ್ಲಿ ಘಟಿತ ಈ ಘಟನೆಗಾಗಿ ಬಕಪಕ್ಷಿಯಂತೆ ಕಾದು ಕುಳಿತ್ತಿದ್ದಂತೆ ಮಾದ್ಯಮಿಗಳಿಗೆ ನಟ ದರ್ಶನ್ ತೂಗುದೀಪರವರು ಸಿಲುಕಿದ್ದಾರೆ, ಅವರು ಸೇರಿದಂತೆ ಬಹಳಷ್ಟು ಮಾನಸೀಕತೆಯವರಿಗೆ, ಗುಂಪುಗಳಿಗೆ ಓರ್ವ ಚೆಂದನವನದ ಖ್ಯಾತ ಖಳನಟ ತೂಗುದೀಪ ಶ್ರೀನಿವಾಸ್‌ರವರು ಬೆಳ್ಳಿತೆರೆಯಲ್ಲಿ ತಮ್ಮ ಕಲಾ ಕೌಶಲ್ಯವನ್ನೆ ಮೆರೆದಿದ್ದರು ಅವರೊಂದು ಕಲಾ ಶಾಸನ ಕೂಡ, ಇದೀಗ ಖಳನಟನ ಪುತ್ರ ನಟ ದರ್ಶನ್ ತೂಗುದೀಪರವರನ್ನು ನಿಜ ಜೀವನದಲ್ಲಿ ಖಳನಟನಾಗಿ ಬಿಂಬಿಸಿ ಅವರ ಇತಿಹಾಸವನ್ನು ಮುಗಿಸಲೊರಟಿರುವುದು ಈ ಮೂಲಕ ದೃಡಪಟ್ಟಿದೆ, ಆದರೆ ಭವಿಷ್ಯದ ದಿನಮಾನಗಳು ಯಾರು ಉಹಿಸದಂತೆ ಬದಲುಗೊಳ್ಳುತ್ತದೆ ಆ ಕಾಲಮಾನಕ್ಕಾಗಿ ಕಾಯಬೇಕಷ್ಟೆ, ಸಧ್ಯಕ್ಕೆ ನಟ ದರ್ಶನ್ ತೂಗುದೀಪರವರ ಬಗ್ಗೆ ಸಾಕಷ್ಟು ಲಗತ್ತಿಸಿಕೊಂಡಿದ್ದ ನನ್ನ ಮನಸಿಗೊಂದಷ್ಟು ಗೊಂದಲವಾಗಿದೆ, ಮನುಷ್ಯ ತನ್ನ ವಿವೇಚನೆ ಕಳೆದುಕೊಂಡರೆ ಏನೆಲ್ಲಾ ಸಂಭವಿಸಿ ನರ್ತಿಸಿ ಬಿಡಬಹುದು ಎನ್ನುವುದಕ್ಕೆ ಕರುನಾಡಿನ ಕಲಾ ರಕ್ಕಸ ನಟ ದರ್ಶನ್ ಸಾಕ್ಷ್ಯಿಯಾಗಿ ನಿಂದಿದ್ದಾರೆ, ನಿಜಕ್ಕೂ ನಿಮ್ಮ ಮಾನವೀಯ ಮೆಟ್ಟಿಲುಗಳಲ್ಲಿ ಈ ಕಳಂಕ ನಿಮ್ಮದಾಗದಿರಲಿ ಎನ್ನುವುದು ಈ ಕನ್ನಡದ ಸಾಲುಗಳ ಅಂಬೋಣವಾಗಿದೆ.

Gara Srinivas

Gara Srinivas

Leave a comment

error: Content is protected !!