I ನನ್ನವನು I
ನನ್ನ ಕಿರು ಬೆರಳ ಹಿಡಿದವನ
ನಾ ಹೇಗೆ ವರ್ಣಿಸಲಿ..?!,
ಶಬ್ದವಿಲ್ಲದ ಶಾಯಿಯಾಗಲೇನು,
ಪದಗಳಿಲ್ಲದ ಹಾಳೆಯಾಗಲೇನು..
ಅವನ ಪಾದ ತೊಳೆಯುವುದೇನು..?
ಅವನ ಹೆಜ್ಜೆ ಬಿದ್ದರೆ,
ನಾನೇ ಹೂವಾಗಬೇಕೆಂಬ ಹಂಬಲ…
ನನ್ನ ಅಂಗೈ ಹಿಡಿದವನ..?
ಹೃದಯವೆಂಬ ಹಣೆಯ ಮ್ಯಾಲೆ
ಆ, ರವಿಯಂತೆ ನನ್ನ ಸಿಂಧೂರವಾಗಿ
ಹೊಳೆಯಬೇಕು..!
ಇದು ಬರಿ ಪುಸ್ತಕವಲ್ಲ…
ನನ್ನ ಪತಿಯ ವರ್ಣಿಸಲು,
ಆಕಾಶವೇ ಸಾಕಾಗುವುದಿಲ್ಲ ಎನಗೆ!
-ಸ್ಪೂರ್ತಿ ಎಸ್ .ಆರ್ ಹೊಳೆನರಸೀಪುರ

