September 26, 2026
Gara 1

ಬರೆಯುತ್ತಾರೆ ಗಾರಾ.ಶ್ರೀನಿವಾಸ್

ಬರಹದ ಹಕ್ಕಿ

ಬರಹದ ಗೂಡೊಂದು ಕಟ್ಟಿದೆ ತಾಯಿ
ಅದುವೆ ತೂರಿ ಬಂದ ಕಲ್ಲುಗಳ ಲೆಕ್ಕಿಸಲಿಲ್ಲ,
ಪ್ರತಿ-ಪದಗಳಿಡಿದು ಹೊಸೆದ ಗೂಡ ಗೋಡೆ,
ಭಾವದ ಬುಗ್ಗೆಗಳ ತಳಸ್ಪರ್ಶಿಯಾಗಿ ಲೇಪಿಸಿತ್ತು,
ಆತ್ಮಧಾರೆಯ ಲೇಖನಿಗೆ ಕಾವಿನ ಮೈಯೊಡ್ಡಿತ್ತು,

ಕಾಸಿಲ್ಲದ ಬರಹಗಳು, ಅಭಿವ್ಯಕ್ತಿಯ ಸಾರಿತ್ತು,
ವಿಕೃತ ನಾಲಗೆಗಳ ಮುಂದಡಿ ಮೌನದಿ ಆಲಿಸಿತ್ತು,
ಸತ್ಯ-ಮಿಥ್ಯಗಳ ತರ್ಕದಡಿ ಜಗಲಿಗಳ ಮೇಲೇರಿತ್ತು,
ಈ ಗೂಡು ನಿನ್ನದೆ ಒಡಲಿನಾಳದ ಕಾವಣ ಗೊತ್ತೇ,

ತಾಯೇ,ಕಾಯ ಮಸಣದಿ ವಿರಾಜಿಸಿದರೂ…
ಬರೆದ ಸಾಲುಗಳೆಂದಿಗೂ ಅಳಿಸಲಾಗದು,
ಅದೆಲ್ಲವೂ ಶಾಸನವಾಗುವ ತನಕದಿ ಲಗತ್ತಾಗುವೆ,
ಕಾಯಕದ ಕೃತಿಗೆ ಅಣಿಗೊಂಡು, ಅಭ್ಯಾಸಿಯಾಗುವೆ,

ನಾನೀಗ ಎನ್ನೊಳಗೆ ಇಳಿದಿದ್ದೇನೆ,
ಅನ್ಯರುಗಳ ತುಲನೆಗಳಾಚೆಗೆ ಪಯಣಿಸಿದ್ದೇನೆ,
ಉಳಿದಿದ್ದೊಂದೆ ಬಲದ ಗುರುವಿನ ಸಾಂಗತ್ಯ,
ನೋಡು ಹಕ್ಕಿಯ ಬದುಕು ಬದಲಾಗಿದೆ ತಾಯಿ,
ಹರಸಮ್ಮ ಕೊನೆ-ತುದಿಯಲ್ಲಿದ್ದೇನೆ,
-Gara Srinivas

Spread the love

Leave a Reply

Your email address will not be published. Required fields are marked *

error: Content is protected !!