September 25, 2026

I ಒಂದು ಸೆಲ್ಫೀ ಹುಟ್ಟು ಹಾಕಿತೇ I ನೂರು ಭಾವಗಳು..? I

0
WhatsApp Image 2025-08-15 at 1.30.16 PM

I ಒಂದು ಸೆಲ್ಫೀ ಹುಟ್ಟು ಹಾಕಿತೇ I ನೂರು ಭಾವಗಳು..? I

Written By Gara Srinivas@2019 August 15th

ಮುಗ್ಧ ಹಸುಳೆಗಳ ಎದೆಗಳಲ್ಲಿ ಅದೆಂತಹ ಭಾವ ಹೊಕ್ಕಿದ್ದವೋ..? ಏನೋ..? ನಾವು ಪೋಟೋದಲ್ಲಿ ಕಾಣಿಸಿಕೊಳ್ಳುತ್ತೇನೆನ್ನುವ ಆತುರಾತರತೆಗಳಲ್ಲಿ ಬರಿಗಾಲಿನ ಇಮ್ಮಡಿ ಏರಿಸಿ, ತನ್ನ ಕಣ್ಣಾಲೆಗಳ ದಿಟ್ಟಿಸಿ, ಎಗರಿ, ಎಗರಿಯೇ ನಿಲ್ಲುತ್ತಿದ್ದ ಆ ಕಂದಮ್ಮಗಳ ಭಾವಗಳು ಗಿರಿ ಕಾದಂಬನಿಗಳಾಗಿದ್ದವು, ನಡಕ್ಕೆ ಕಟ್ಟಿದ ಉರುದಾರದಲ್ಲಿ ಅವರ ಚಡ್ಡಿ ಜೋತಾಡುತಿತ್ತು, ಎಲುಬುಗಳೊತ್ತ ಎಳೆಯರ ಕಾಯದೊಳಿನ ಅಂಗಿಗಳಲ್ಲಿ ಒಂದೆರೆಡು ಗುಂಡಿಗಳೇ ಕಾಣದಾಗಿತ್ತು,..! ಆದರೆ ಆ ಜಟಿ ಮಳೆಹನಿಗಳ ನಡುವೆ ಅವರ ಮನಸುಗಳು ನಿರ್ಭಿತಿಯಿಂದ ಮುಕ್ತವಾಗಿದ್ದವು..!

ಇದೀಗ ನಾವುಗಳು ಭಾರತದ ಭಾವುಟವ ಮುಗಿಲೆತ್ತರಕ್ಕೆ ಹಾರಿಸಿದ್ದೇವೆ, ಎನ್ನುವ ಸಡಗರದ ಸಂಭ್ರಮಗಳು ಅವರಲ್ಲಿ ಮನೆ ಮಾಡಿತ್ತು..! ಅಷ್ಟರೊಳಗೊಂದು ಯಾವುದೋ ಭಾವವೊಂದು ಕಿವಿಗಪ್ಪಳಿಸಿತ್ತು, ಅಲ್ಲೊಮ್ಮೆ ಕಿವಿಗೊಟ್ಟಿ ನಿಂದೆ ಅದೇನೆಂದು ಕೇಳಿದೆ ..
“ಒಂದು ಚಿತ್ರವೇಳಿತು
ಎದೆಸೂರಿನ ಕತೆಗಳು..!
ತೇವದಿ ಧರೆ ಹೇಳಿತು
ಮಡಿಲಿನ ಮಡಿಗಳು..!

ಬದುಕು ನಶ್ವರ, ಎಂದಿದ್ದರೂ ಸಹ ಆಸೆಗಳಿಗೆ ಕೊನೆಯಿಲ್ಲದೆ ಜಿಜ್ಞಾಸೆಗಳಲ್ಲೇ ಕುಣಿದು, ಕುಣಿಯೊಳಗೆ ಸಮಾಧಿಯಾಗುವ ನೆರಿಕೆಯ ಮುರುಕಿನೊಳಗೆ ಸೂರಿನಿಂದ ದೂರವಾಗುವ ಮೊದಲು, ಸೇವೆಯೇ ಮೂಲ ಧ್ಯೇಯವಾಗಿಸಿಕೊಂಡರೆ ಅಲ್ಲಿ ಶಾಶ್ವತ ಮೈಲಿಗಲ್ಲು ಸಿಗುವುದರಲ್ಲಿ ಎರಡು ಮಾತಿಲ್ಲ, ಇರಲಿ ಏನೇ ಹೇಳಿದರು ಕ್ಷಣಾರ್ಧದಿ ಮರೆಯುವುದು, ಮನುಷ್ಯನ ಗುಣ ಎನ್ನುವುದನ್ನು ಅದೆಷ್ಟೋ ಸಾಲೋ-ಸಾಲು ಮಂದಿಗಳು ಸುಳ್ಳಾಗಿಸಿದ್ದಾರೆ, ಇಂತಹದೊಂದು ಸುಳ್ಳು ನೀವಾಗಿಸಿದರೆ ಮಾತ್ರ ಅದುವೇ ಸಾರ್ಥಕ..! ಎಂಬುವ ಟಿಪ್ಪಣಿ ನಿಮ್ಮ ವಿಸ್ತೃತಗೊಳಿಸಿ ಹೇಳಿ ” ಒಂದು ಚಿತ್ರ ನೂರು ಭಾವಗಳು’ ಎನ್ನುವ ಶೀರ್ಷಿಕೆಯ ಸಾಲುಗಳನ್ನು ತಮಗೆ ತಿಳಿಸಿ ನಿಮ್ಮಗಳ ಆತ್ಮ ವಿಮರ್ಶೆಗಳಿಗೆ ಎಡೆಮಾಡಿ ಕೊಡುತ್ತಿದ್ಸೇನೆ,

ಆ ಮುಗ್ಧ ಮಕ್ಕಳ ಮನಸಿನಲ್ಲಿ ಹೀಗೊಂದು ತನಗೊತ್ತಿಲ್ಲದಂತೆ ಹೊಸತನದ ಭಾವಗಳ ಹುಟ್ಟು ಹಾಕಿದ್ದು ಸಹೋದರಿ ಶೋಭಾ ಸತೀಶ್ ರವರು, ಒಮ್ಮೆಲೆ ಈ ಚಿತ್ರವನ್ನು ತಾವು ಪರಾಂಭರಿಸಿದರೆ ಅದರ ಬಯಲಿನ ಸತ್ಯ ಅರಿವಿಗೆ ಎಡತಾಕುತ್ತದೆ, ಈ ಮೇಲ್ಕಾಣಿಸಿದ ಟಿಪ್ಪಣಿಯ ಉದ್ದೇಶ ತಿಳಿಯಲ್ಪಡುತ್ತದೆ, ಸಮಾಜ ನಮಗೆ ಎಲ್ಲವನ್ನು ಕೊಟ್ಟಿದೆ, ಆದರೆ ನಮಗೆ ಕೊಟ್ಟಷ್ಟು ಆ ಪುಟಾಣಿ ಕಂದಮ್ಮಗಳಿಗೆ ಕೊಟ್ಟಿಲ್ಲ..! ಎನ್ನುವ ಸತ್ಯಗಳು ಅಣುಕಿಸಿದಿಯಾ..? ನಾವುಗಳೊಮ್ಮೆ ಆಲೋಚಿಸಲೇ ಬೇಕಿದೆ, ಅಲ್ಲಿ ಜಟಿ ಮಳೆ-ಹನಿಗಳ ಕಾವಣಗಳಲ್ಲಿ ಒಂದಿಷ್ಟು ಬರಿಗಾಲಿನ ಪುಟಾಣಿಗಳು, ಉರುದಾರಕ್ಕೆ ಸಿಕ್ಕ ಚಡ್ಡಿಗಳು, ಗುಂಡಿಗಳಿಲ್ಲದ ಅಂಗಿಗಳಲ್ಲಿದ್ದರೂ, ಇದ್ದದರಲ್ಲೇ ಲೋಕ ಮರೆತ ಸ್ವಚ್ಚಂದತೆಯ ಮುಗ್ಧ ಭಾವಗಳ ಮಧ್ಯೆ ನಿಂತು ಪೋಟೋ ಕ್ಲಿಕ್ಮಿಸಿದ ಸಹೋದರಿ ಶೋಭಾ ಸತೀಶ್ ನಿಮ್ಮ ತಾಯಿ ಹೃದಯಕ್ಲೆ ನನ್ನ ಸಲಾಮ್..!

 

Spread the love

Leave a Reply

Your email address will not be published. Required fields are marked *

error: Content is protected !!