September 24, 2026

I ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ದ ಷಡ್ಯಂತ್ರ ಖಂಡಿಸಿ I ಸ್ವಾತಂತ್ರ್ಯ ಉದ್ಯಾನವನದಲ್ಲಿ I ಧರ್ಮ ಸಂರಕ್ಷಣಾ ಬೃಹತ್ ಸಮಾವೇಶ I ವಸಂತ್ ಗಿಳಿಯಾರ್ I

0
WhatsApp Image 2025-08-18 at 2.38.36 PM

I ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ದ ಷಡ್ಯಂತ್ರ ಖಂಡಿಸಿ I ಸ್ವಾತಂತ್ರ್ಯ ಉದ್ಯಾನವನದಲ್ಲಿ I ಧರ್ಮ ಸಂರಕ್ಷಣಾ ಬೃಹತ್ ಸಮಾವೇಶ I ವಸಂತ್ ಗಿಳಿಯಾರ್ I

ಬೆಂಗಳೂರು ಪ್ರೆಸ್ ಕ್ಲಬ್ ಸಭಾಂಗಣ:ಧಾರ್ಮಿಕ ಶೃದ್ಧಾ ಕೇಂದ್ರ ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ದ ನಿರಾಧಾರವಾದ ಅರೋಪ ಮಾಡುತ್ತಾ ವ್ಯವಸ್ಥಿತ ಷ್ಯಡ್ಯಂತ್ರ ನಡೆದಿರುವ ಬಗ್ಗೆ ಖಂಡಿಸಿ ಫೀಡಂ ಪಾರ್ಕ್ ಭಾನುವಾರ ಬೆಳಗ್ಗೆ 11ಗಂಟೆಗೆ ಧರ್ಮ ಸಂರಕ್ಷಣಾ ಸಮಾವೇಶ ಆಯೋಜಿಸಲಾಗಿದ್ದು ಇದರ ಕುರಿತು ಮಾಧ್ಯಮಗೋಷ್ಟಿ.

ಪುಣ್ಯ ಕ್ಷೇತ್ರ ಸಂರಕ್ಷಣಾ ಸಮಿತಿ ಸಂಚಾಲಕರಾದ ವಸಂತ್ ಗಿಳಿಯಾರ್ , ಪ್ರಕಾಶ್ ಕುಕ್ಕೇಹಳ್ಳಿ, ರಾಜಣ್ಣ ಹೊನ್ನೇನಹಳ್ಳಿ, ಪ್ರವೀಣ್ ಯಕ್ಷಿಮಠ, ಡಿ.ಸಿ.ಉಮೇಶ್ ಶೆಟ್ಟಿರವರು ಮಾಧ್ಯಮಗೋಷ್ಟಿಯಲ್ಲಿ ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಸಂಚಾಲಕರಾದ ವಸಂತ್ ಗಿಳಿಯಾರ್ ರವರು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಕೊಟ್ಯಂತರ ಜನರ ಶೃದ್ದಾ ಕೇಂದ್ರವಾಗಿದೆ ಅದರೆ ಅದರ ವಿರುದ್ದ ಅಪಪ್ರಚಾರ , ಸುಳ್ಳು ಸುದ್ದಿ ಹರಿಡಿಸುತ್ತಾ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ. ಸರ್ಕಾರ ಯಾವುದೇ ತನಿಖೆಯಾಗಿಲ್ಲ ಅಭ್ಯಂತರವಿಲ್ಲ ಅದರೆ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ವಿರುದ್ದ ಸರ್ಕಾರ ಕೊಡಲೆ ಕ್ರಮ ಕೈಗೊಳ್ಳಬೇಕು.

ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ದ ನಿರಾಧಾರವಾದ ಅರೋಪ, ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಷಡ್ಯಂತ್ರದ ವಿರುದ್ದ ದಿನಾಂಕ 24ರಂದು ಸ್ವಾತಂತ್ರ್ಯ ಉದ್ಯಾನವನದಲ್ಲಿ ಧರ್ಮ ಸಂರಕ್ಷಣಾ ಸಮಾವೇಶ ಆಯೋಜಿಸಲಾಗಿದೆ.

ಸಮಾವೇಶದಲ್ಲಿ ಜಗದ್ಗುರು ಶ್ರೀ ವಚನಾನದ ಸ್ವಾಮೀಜಿ, ಹಿಂದೂ ಪರ ಹೋರಾಟಗಾರರಾದ ಜಗದೀಶ್ ಕಾರಂತ, ಚಕ್ರವರ್ತಿ ಸೂಲಿಬೆಲೆ, ಕೇಶವಮೂರ್ತಿ, ಹಿಂದೂ ಪರ ಚಿಂತಕರು, ಹೋರಾಟಗಾರರು ಸಮಾವೇಶದಲ್ಲಿ ಭಾಗವಹಿಸಿಲಿದ್ದಾರೆ.

ಸಾರ್ವಜನಿಕರು ಮತ್ತು ವಿವಿಧ ಪಕ್ಷಗಳ ರಾಜಕಾರಣಿ ಬೆಂಬಲಿಸಿ ಸಮಾವೇಶದಲ್ಲಿ ಭಾಗವಹಿಸಬಹುದು ಎಂದು ಹೇಳಿದರು.

Spread the love

Leave a Reply

Your email address will not be published. Required fields are marked *

error: Content is protected !!