Saturday, August 1, 2026
HomeಅಂಕಣI ಅವರೊಬ್ಬ ಜೀವಪರ I ನಿಲುವಿನ ಯುವ ಮುಂದಾಳು I

I ಅವರೊಬ್ಬ ಜೀವಪರ I ನಿಲುವಿನ ಯುವ ಮುಂದಾಳು I

ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಅವರೊಬ್ಬ ಜೀವಪರ I ನಿಲುವಿನ ಯುವ ಮುಂದಾಳು I

ಜಾತ್ಯಾತೀತ ಮನಸು, ಸಮಾಜವಾದದ ವಿಚಾರಗಳ ಕೊಂಡಿಯಾಗಿ, ಪ್ರಬುದ್ದಮಾರ್ಗಿಯಾಗಿ, ಸಾರ್ವಜನಿಕ ಜಗಲಿಯೊಳು ಎಲ್ಲ ಸ್ತರದ ಸೂರುಗಳ ಬದುಕುಗಳೊಂದಿಗೆ ಸ್ಪಂದನೆಗಳಿರಬೇಕು, ನಾಗರೀಕ ಜ್ವಲಂತತೆಗಳ ಅರಿವು ಇರಬೇಕು, ಸಾಮಾಜಿಕ ನ್ಯಾಯ ಎಂದು ಬಂದಾಗ ಪಕ್ಷಾತೀತವಾಗಿ, ಮನುಷ್ಯತ್ವದ ಮಾನವೀಯ ಅಜೆಂಡಾಗಳನ್ನು ತಳೆಯಬೇಕು ಹೀಗಾದೊಡೆ ಮಾತ್ರ ನಾಯಕ, ಜನನಾಯಕನೆಂದು ಮೊಹರೊತ್ತಲು ಸಾಧ್ಯ..!

ಹೌದು ಈ ಎಲ್ಲಾ ಗುಣಮಾನಗಳ ಮೈಗೂಡಿಸಿಕೊಂಡು ತಮ್ಮ ಪಕ್ಷದ ಜವಾಬ್ದಾರಿಗಳನ್ನು ಸಮರ್ಥ ಹಾಗೂ ಸಮಗ್ರವಾಗಿ ನಿಭಾಯಿಸಿ ಸ್ಪರ್ಧಾತ್ಮಕ ಸವಾಲುಗಳನ್ನು ಸ್ವೀಕರಿಸಿ ಗುರುತರವಾಗಿ ನಡೆದುಕೊಳ್ಳುತ್ತಿರುವವರೇ ಹೆಚ್.ಸಿ ಯೋಗೇಶ್‌ರವರು, ಇಂತಿವರ ಕುರಿತಾಗಿ ಹೇಳಬೇಕಾದ ಹೊತ್ತಿದು, ಇಂದು ಅವರ ಜನುಮ ದಿನ ಕೂಡ ಈ ಸಂದರ್ಭದಲ್ಲಿ ಅವರಿಗೆ ಶುಭಾಶಯ ತಿಳಿಸಲಿಚ್ಚಿಸುವೆ, ಈ ಮಲೆನಾಡಿನ ಹೆಬ್ಬಾಗಿಲು ಅನೇಕ ಯುವಕರನ್ನು ರಾಜ್ಯದ, ದೇಶದ ಮೇರೆತ್ತರದಿ ಕಳುಹಿಸಿಕೊಟ್ಟಿದೆ, ಈ ಸಾಲಿನಲ್ಲಿ ಹೆಚ್.ಸಿ ಯೋಗೇಶ್‌ರವರು ಕೂಡ ಅಗ್ರಮಾನ್ಯರು ಎನ್ನುವುದಕ್ಕೆ ಅನೇಕತೆಯ ಹೆಜ್ಜೆ ಮೊಹರುಗಳಿದೆ.

ತಂದೆ ಹೆಚ್.ಎಂ ಚಂದ್ರಶೇಖರಪ್ಪನವರು ಶಿವಮೊಗ್ಗ ನಗರ ಕ್ಷೇತ್ರದ ಶಾಸಕರಾಗಿದ್ದವರು ಈ ಅಲುಗಿನ ಮೇಲೆ ರಾಜಕಾರಣವನ್ನು ಎಂದಿಗೂ ಇವರು ತಳೆಯಲೇ ಇಲ್ಲ, ತಮ್ಮ ಸಾಮಾಜಿಕ ಕಳಕಳಿ, ನಾಯಕತ್ವದಡಿಯಲ್ಲಿಯೇ ಪ್ರತ್ಯೇಕವಾಗಿ ಈ ನೆಲ್ಲದಲ್ಲಿ ಗುರುತಿಸಿಕೊಂಡಿದ್ದಾರೆ, ಇದಕ್ಕೊಂದು ಹಳ್ಳಿಗಾಡಿನ ನುಡಿ ಇದೆ, ‘ಅಪ್ಪ ಹಾಕಿದ ಆಲದ ಮರ’ ಇದನ್ನು ಅಕ್ಷರಶಃ ಹುಸಿಯಾಗಿಸಿ, ತಮ್ಮೊಳಗಿನ ಎದೆ ನಾಯಕತ್ವವನ್ನು ಜರೂರಿಯಾಗಿ ಪಬ್ಲಿಕ್‌ನಲ್ಲಿ ಲಗತ್ತಿಸಿಕೊಂಡಿದ್ದಾರೆ ಇಂತಹ ಸ್ಥಿತಿಗಳು ಉಳಿದವರಿಗೆ ಮಾದರಿ ಎಂದೇ ಭಾವಿಸುತ್ತೇನೆ.,
ಉತ್ಪ್ರೇಕ್ಷೆಗಾಗಲಿ ಅತಿರಂಜನೆಗೊಳಿಸದ ನನ್ನ ಕಾಸಿಲ್ಲದ ಅನೇಕ ಲೇಖನಗಳು ಸಂಪಾದಕೀಯದಲ್ಲಿ ಮೂಡಿ ಬಂದಿದೆ, ಓದುಗರ ಲೋಕದ ಬಹುತೇಕರು ಶ್ಲಾಘಿಸಿರುವ ಉದಾಹರಣೆಗಳೂ ಇದೆ, ಹೆಚ್.ಸಿ ಯೋಗೇಶ್‌ರವರ ಕುರಿತಾಗಿ ಈ ಮೊದಲ್ಗೊಂಡು ಬರೆಯಬೇಕಿತ್ತು, ಆದರೆ ಅದೊಂದು ವಿಳಂಭವಾಗಿದೆ, ಈ ಸುಸಂದರ್ಭ ಅವರ ಜನುಮ ದಿನದ ಈ ಬಗೆನಲ್ಲಿ ವಿಸ್ತೃತವಾಗಿಸಿ ತಮ್ಮಗಳ ಮುಂದಡಿ ಇಡುತ್ತಿದ್ದೇನೆ,

ಹೆಚ್.ಸಿ ಯೋಗೆಶ್ ಅವರು ನಗರಸಭೆ ಹಾಗೂ ಮಹಾನಗರ ಪಾಲಿಕೆಯ ಸದಸ್ಯರಾಗಿ, ವಿರೋಧಪಕ್ಷದ ನಾಯಕರಾಗಿ, ಜಿಲ್ಲಾ ಕಾಂಗ್ರೆಸ್ ಘಟಕದ ಪ್ರಮುಖರಾಗಿ, ರಾಜ್ಯ ಹಾಗೂ ರಾಷ್ಟ್ರೀಯ ಜವಾಬ್ದಾರಿಗಳನ್ನು ನಿರಾಯಾಸವಾಗಿ ನಿಭಾಯಿಸಿರುವ ಯುವ ಮುಂದಾಳು, ಹೀಗಾಗಿಯೇ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ, ಜಾತಿ, ಮತ, ಪಂಥಗಳ ಹೊರತಾಗಿ ಸ್ಪಂದಿಸುವ ಯುವ ಮನಸು ಕಟ್ಟಿಕೊಂಡು ಶಿವಮೊಗ್ಗದ ನೆಲದ ನ್ಯಾಯಕ್ಕಾಗಿ ಸದಾ ದನಿಯಾಗುತ್ತಿರುವುದು ಅವರಲ್ಲಿನ ನಾಗರೀಕ ಜವಾಬ್ದಾರಿಯನ್ನು ತೋರಿಸುತ್ತದೆ, ಅದೆಂತಹ ಕ್ಲಿಷ್ಟಕರ ಸಂದರ್ಭದಲ್ಲಿಯು ಜನರೊಂದಿಗೆ ಬೆಸೆದುಕೊಳ್ಳುವ ಹೆಚ್.ಸಿ ಯೋಗೆಶ್ ಅವರು ಕರೋನಾ ಎನ್ನುವ ಸಾಂಕ್ರಮಿಕ ವೈರಸ್‌ಗೆ ತುತ್ತಾದ ಜನಜೀವನಕ್ಕೆ ಧೈರ್ಯ ತುಂಬಿ, ಅಹಾರ ಸಾಮಾಗ್ರಿಗಳನ್ನು ಒದಗಿಸಲು ಮುಂದಾದವರು, ಸೋಂಕು ತಡೆಗಟ್ಟುವ ನಿಯಮಗಳನ್ನು ಪಾಲಿಸಲು ಜನರಿಗೆ ಜಾಗೃತಿ ಮೂಡಿಸಿ ಅವರುಗಳ ಸೂರಿನ ಜಗಲಿಗಳಲ್ಲಿದ್ದವರು,

ಭಾರತದ ಶ್ರೇಷ್ಟರು ಸಾಮಾಜಿಕ ಸುಧಾರಕರು ಹಾಗೂ ವಿಶ್ವಗುರು ಬಸವೇಶ್ವರರ ಪುತ್ಥಳಿಯನ್ನು ೨೦೧೮ರಲ್ಲಿ ಲಂಡನ್‌ನಿಂದ ಶಿವಮೊಗ್ಗಕ್ಕೆ ಬರಮಾಡಿಕೊಂಡು ಪಾಲಿಕೆಯಿಂದ ಪ್ರತಿಷ್ಠಾಪಿಸಲು ಮುಂಚೂಣಿಯಲ್ಲಿದ್ದವರು, ನೆರೆ ಹಾವಳಿಗೆ ತುತ್ತಾದ ನಾಗರೀಕರಿಗೆ ನಾವಿದ್ದೇವೆ ಎಂದು ಖುದ್ದು ಹೋಗಿ ಮನೋದೃಡತೆಯನ್ನು ಭರ್ತಿ ಮಾಡಿದವರು, ಶಿವಮೊಗ್ಗಕ್ಕೆ ಕಾಂಗ್ರೆಸ್ ಪಕ್ಷದ ನಾಯಕರು ಯಾರೇ ಬರಲಿ ಅವರಿಗೆ ಮುಕ್ತವಾಗಿ ಆಹ್ವಾನಿಸಿ ಬರಮಾಡಿಕೊಳ್ಳುವ  ‘ಅತಿಥಿ ದೈವೋ ಭವ ‘ ಎನ್ನುವ ಮಾತನ್ನು ಸರಿಗಟ್ಟಿದವರು, ಕಾಂಗ್ರೆಸ್ ಪಕ್ಷದ ಮೇಲೆ ಹಾಗೂ ನಾಯಕರುಗಳ ಮೇಲೆ ವಿಪಕ್ಷಗಳು ಹೇಳಿಕೆಗಳ ದಾಳಿ ಮಾಡಿದರೆ ಇದಕ್ಕೆ ಅದೇ ಮಾದರಿಯಲ್ಲಿಯೇ ಪ್ರತ್ಯುತ್ತರ ನೀಡಿ ಕಾಂಗ್ರೆಸ್ ಸಂಘಟಿತ ಬಲವನ್ನು ಕಾಪಿಟ್ಟುಕೊಳ್ಳುವತ್ತ ಮುಂದಾಗುವ ಅನೇಕತೆಯ ಬಹುತ್ವ ಗುಣಗಳ ನಾಯಕನಾಗಿ ಹೊರ ಹೊಮ್ಮಿರುವುದರಿಂದಲೇ ಅವರಿಗೆ ಕಳೆದ ಅಸೆಂಬ್ಲಿ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಲಾಗಿತ್ತು,

ಈ ಸ್ಪರ್ಧೆಯಲ್ಲಿ ಸೊಲುಂಡರು ಬಹುತೇಕ ಗೆಲುವಿನತ್ತ ದಾಪುಗಾಲಿಟ್ಟಿದ್ದು ಮರೆಯುವಂತಿಲ್ಲ ಅಂತಹದೊಂದು ಸ್ಪರ್ಧಾತ್ಮಕತೆಯನ್ನು ಮಲೆನಾಡಿನ ಜನತೆಗೆ ತೋರಿಸಿಕೊಟ್ಟಿದ್ದು ಹೆಚ್.ಸಿ ಯೋಗೇಶ್‌ರವರ ಸಾಮಾರ್ಥ್ಯ ಎನ್ನಬಹುದಾಗಿದೆ, ನಗರದಲ್ಲಿನ ಕುಡಿಯುವ ನೀರಿನ ಸಮಸ್ಯೆ, ಸ್ವಚ್ಚತೆ, ಪಕ್ಷದ ಅಜೆಂಡಾಗಳಿಗೆ, ಮನುಷ್ಯತ್ವದ ನಿಲುವಿಗಳಿಗೆ ನಿರಂತರವಾದ ದನಿ ಇವರದ್ದಾಗಿದೆ, ಭವಿಷ್ಯರೂಪಿಯಾಗಿ ಜನಮಾನಸದಲ್ಲಿ ಶಿವಮೊಗ್ಗದ ಭರವಸೆಯ ಯುವ ನಾಯಕನೆಂದೆ ಚಿಗುರೊಡೆದು ಬಿಂಬಿತವಾಗಿರುವ ಹೆಚ್.ಸಿ ಯೋಗೇಶ್ ಓರ್ವ ಸರಳತೆಯ ವಿದ್ಯಾವಂತ, ಪ್ರಬುದ್ದತೆಯ ರಾಜಕೀಯ ಜೀವಾಳ ಆಗಿರುವುದು ಶ್ಲಾಘನೀಯ,

ಇದ್ದದ್ದನ್ನು ನೇರವಾಗಿ ಹೇಳುವ, ಹೇಳಿಕೆಗಳನ್ನಿತ್ತುವ, ಯಾವುದೇ ತೂಕದ ತಕ್ಕಡಿಯಂತೆ ವರ್ತಿಸದೇ, ಖಂಡಿಸುವ ನೇರ ನಿಷ್ಟುರವಾದಿಯಾಗಿರುವ ಹೆಚ್.ಸಿ ಯೋಗೇಶ್ ಈ ನೆಲದ ಯುವಕರಿಗೆ ಹಾಗೂ ನಾಗರೀಕರಿಗೆ ಭರವಸೆಯ ನಾಯಕನಾಗಿ ಛಾಪು ಮೂಡಿಸಿದ್ದಾರೆ ಎನ್ನುವುದು ನನ್ನಯ ಅಂಬೋಣ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I