Sunday, August 2, 2026
Homeಸೂರ್ಯಗಗನI ಶಿವಮೊಗ್ಗ ಸ್ಕೇಟಿಂಗ್ ಪಟುಗಳಿಗೆ ಬಹುಮಾನ I 

I ಶಿವಮೊಗ್ಗ ಸ್ಕೇಟಿಂಗ್ ಪಟುಗಳಿಗೆ ಬಹುಮಾನ I 

I ಶಿವಮೊಗ್ಗ ಸ್ಕೇಟಿಂಗ್ ಪಟುಗಳಿಗೆ ಬಹುಮಾನ I 
ಶಿವಮೊಗ್ಗ: ಬೆಂಗಳೂರಿನ ಬನಶಂಕರಿಯಲ್ಲಿರುವ ಸ್ಕೇಟಿಂಗ್ ಕ್ರೀಡಾಂಗಣದಲ್ಲಿ ರಾಜ್ಯ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಕಳೆದ ಮೂರು ದಿನಗಳಿಂದ ಆಯೋಜಿಸಿದ್ದ ನಾಲ್ಕನೇ ರ್ಯಾಕಿಂಗ್ (ranking) ಸ್ಕೇಟಿಂಗ್ ಕ್ರೀಡೆಯಲ್ಲಿ ಶಿವಮೊಗ್ಗದ ನಮ್ಮ ಶಿವಮೊಗ್ಗ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ನ ನಾಲ್ವರು ಸ್ಕೇಟರ್ ಗಳು ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕವನ್ನು ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಆರು ವರ್ಷದೊಳಗಿನ ವಯೋಮಿತಿಯ ಪಂದ್ಯಾವಳಿಯಲ್ಲಿ ಭಕ್ತಿ ಎಂ.ಪಿ. ಅವರು ಎರಡು ಚಿನ್ನದ ಪದಕ ಪಡೆದಿದ್ದಾರೆ. ಸೆಂಟ್ ಜೋಸೆಫ್ ಅಕ್ಷರಧಾಮ ಶಾಲೆಯಲ್ಲಿ ಓದುತ್ತಿರುವ ಭಕ್ತಿ ಡಾ. ಎಂ.ಸಿ. ಪ್ರದೀಪ್ ಹಾಗೂ ಕೆ.ಬಿ. ಮಮತಾ ದಂಪತಿಗಳ ಪುತ್ರಿ. ಅಂತೆಯೇ ಆರರಿಂದ ಎಂಟು ವರ್ಷದೊಳಗಿನ ವಯೋಮಿತಿಯ ಪಂದ್ಯಾವಳಿಯಲ್ಲಿ ನಮ್ಮ ಶಿವಮೊಗ್ಗ ಸಂಸ್ಥೆಯ ಹಿತ ಪ್ರವೀಣ್ ಎರಡು ಚಿನ್ನದ ಪದಕ ಪಡೆದಿದ್ದಾರೆ. ಜ್ಞಾನದೀಪ ಶಾಲೆಯಲ್ಲಿ ಓದುತ್ತಿರುವ ಹಿತ ಪ್ರವೀಣ್  ಅವರು ಆರೋಗ್ಯ ಇಲಾಖೆಯ ಪ್ರವೀಣ್ ಹಾಗೂ ಸೌಮ್ಯ ಅವರ ಪುತ್ರಿ. ಸರ್ಜಿ ಫ್ರೀ ಶಾಲೆಯಲ್ಲಿ ಓದುತ್ತಿರುವ ಸಮೃದ್ಧಿ ವಿಶ್ವಾಸ್ ಆರು ವರ್ಷದೊಳಗಿನ ವಯೋಮಿತಿಯ ಪಂದ್ಯಾವಳಿಯಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಶಿವಮೊಗ್ಗದ ಮಾಜಿ ಕಾರ್ಪೊರೇಟರ್ ಈ. ವಿಶ್ವಾಸ್ ಹಾಗೂ ಸುಪ್ರಿಯಾ ಎಸ್. ಎಸ್. ದಂಪತಿಗಳ ಪುತ್ರಿ. ನಮ್ಮ ಶಿವಮೊಗ್ಗ ಸಂಸ್ಥೆಯ ಅದ್ವಿಕಾ ನಾಯರ್  10 ರಿಂದ 12 ವರ್ಷ ವಯೋಮಿತಿಯ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.
ಪೋದಾರ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಅದ್ವಿಕಾ ಅವರು ಆರ್.ಎಲ್. ರಂಜಿತ್ ಹಾಗೂ ಗಾಯತ್ರಿ ದಂಪತಿಗಳ ಪುತ್ರಿ. ಈ ಸಾಧಕ ಸ್ಕೇಟರ್ ಗಳಿಗೆ ನಮ್ಮ ಶಿವಮೊಗ್ಗ ಸಂಸ್ಥೆಯ  ಆರ್. ವಿಶ್ವಾಸ್, ಆರ್. ಆತೀಶ್ ತರಬೇತುದಾರರು.
ಅಭಿನಂದನೆ: ಜಿಲ್ಲೆಗೆ ಕೀರ್ತಿ ತಂದ ಸಾಧಕ ಸ್ಕೇಟರ್ ಗಳಿಗೆ ನಮ್ಮ ಶಿವಮೊಗ್ಗ ಸಂಸ್ಥೆಯ ಅಧ್ಯಕ್ಷ ಮೋಹನ್ ಕುಮಾರ್, ಪದಾಧಿಕಾರಿಗಳಾದ ಎಂ.ರವಿ,  ಎಸ್.ಕೆ. ಗಜೇಂದ್ರಸ್ವಾಮಿ, ಉಮಾ ಟಿ., ವಕೀಲ ಪ್ರವೀಣ್, ತಾರಾನಾಥ್ ಹೆಚ್. ಪಿ., ಶ್ರೀನಾಥ್ ಅಭಿನಂಧಿಸಿದ್ದಾರೆ.
ಬಿವೈಆರ್, ಕೆಎಸ್ಈ ಶುಭಹಾರೈಕೆ : ಸ್ಕೇಟಿಂಗ್ ನಲ್ಲಿ ಜಿಲ್ಲೆಗೆ ಕೀರ್ತಿ ತಂದ ಪುಟಾಣಿ ಕ್ರೀಡಾಪಟುಗಳಿಗೆ ಶಿವಮೊಗ್ಗ ಲೋಕಸಭಾ ಸದಸ್ಯ ಬಿ. ವೈ. ರಾಘವೇಂದ್ರ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ. ಎಸ್. ಈಶ್ವರಪ್ಪ ಸೇರಿದಂತೆ ವಿವಿಧ ಗಣ್ಯರು ಅಭಿನಂದಿಸಿ ಶುಭಹಾರೈಸಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ I ಗುಡ್ಡ ಕುಸಿದು ಮೂವರ ಧಾರುಣ ದುರ್ಮರಣ I I ಗಾರಾ ಎನ್ನುವ ಜೀವಭಾವ I I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I