September 25, 2026
Gara 1
ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಬದುಕಿನ ಬುಟ್ಟಿ I
ಬದುಕಿನ ಬೆತ್ತಲಿಗೆ
ಬೆವರಿನ ಹೊದಿಕೆಯಿದೆ,
ಹಣೆಬರಹದ ಪುಸ್ತಕಕ್ಕೆ
ಮುಖಪುಟದ ಕಣ್ಣೀರಿವೆ,
ಓದುಗರ ಎದೆಗೊಕ್ಕಿ
ಮೌನದಿ ಉದ್ವೇಗಿಸೋ ನೋವುಗಳು,
ಮುಗಿಲ ಸಿಡಿಲಿನ ಸದ್ದಾಗಿವೆ,
ಕಾವಣವಿಲ್ಲದ ಸೂರು,
ರಾವಳರೆನ್ನುವ ಮನುಜರು.!
ಜೀವದ ಬುಟ್ಟಿಗೆ ಕಂದಲಿ ಏಟು,
ಮುರಿದು ಮಗಚುವ ಕಿಂಡಿಗೆ..
ಇಣುಕಿ ದಿಟ್ಟಿಸಿದ ನೂರು ಕಣ್ಣು,
ನಕ್ಕು ನಲಿದಿವೆ..!
ಕಥಾ ಹಂದರವಿದು
ಹೆಣೆದ ಹೂರಣಗಳಲ್ಲ,
ನಡೆದ ಹೆಜ್ಜೆಗಳಿವು,
ಸಾಕ್ಷೀಗೆ ಕುರುಹುಗಳಿವೆ..
ರುಧಿರದನಿಗಳ ಹಸಿಕಲೆಗಳಿವೆ,
ಒಮ್ಮೆ ಓದಿದವರು ಅನುಕಂಪಿಸಲಿಲ್ಲ,
ಎದೆಗೆಟ್ಟಿಸಲಿಲ್ಲ,
ಬೆನ್ನಿಗೆ ನಿಂತವರು,
ಆತ್ಮಬಲವ ತುಂಬಿದರು,
          @ಗಾರಾ.ಶ್ರೀನಿವಾಸ್
Spread the love

Leave a Reply

Your email address will not be published. Required fields are marked *

error: Content is protected !!