September 25, 2026

I ನಾಳೆ ಹೆಚ್.ಎಸ್ ಸುಂದರೇಶ್ ನೇತೃತ್ವದಲ್ಲಿ I ಹತ್ತು ಸಾವಿರ ಭಕ್ತ ಸಮೂಹಕ್ಕೆ I ಅರಿವಿನ ಅನ್ನದಾನ I

0
IMG-20250905-WA0012

I ನಾಳೆ ಹೆಚ್.ಎಸ್ ಸುಂದರೇಶ್ ನೇತೃತ್ವದಲ್ಲಿ I ಹತ್ತು ಸಾವಿರ ಭಕ್ತ ಸಮೂಹಕ್ಕೆ I ಅರಿವಿನ ಅನ್ನದಾನ I

ಶಿವಮೊಗ್ಗ : ಹಿಂದು ಮಹಾಸಭಾ ಗಣಪತಿಯ ವಿಸರ್ಜನಾ ಮೆರವಣಿಗೆಯಲ್ಲಿ ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ರವರ ನೇತೃತ್ವದಲ್ಲಿ 10000 ಭಕ್ತಾದಿಗಳಿಗೆ 6ನೇ ವರ್ಷದ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಗಾಂಧಿ ಬಜಾರ್ ಶ್ರೀ ಬಸವೇಶ್ವರ ದೇವಸ್ಥಾನದ ಮುಂಭಾಗ ಆಯೋಜಿಸಲಾಗಿದೆ.

ಈ ಸೇವೆಯು ನಿರಂತರವಾಗಿ ತಮ್ಮ ಸ್ವಂತ ವೆಚ್ಚದಲ್ಲಿ ಆಯೋಜಿಸಿಕೊಂಡು ಬಂದಿರುವ ಸ್ಬೂಡಾ ಅಧ್ಯಕ್ಷರಾದ  ಹೆಚ್.ಎಸ್ ಸುಂದರೇಶ್ ಅವರು ತಮ್ಮ ಸಾಮಾಜಿಕ ಕಾಳಜಿ ಹಾಗೂ ಹಸಿವಿನ ಸಂಕಟವನ್ನು ಅರಿತಿದ್ದಾರೆ ಅಲ್ಲದೆ ಈ ಮೂಲಕ ಜನಮಾನಸದ ಕೆಲಸದ ಅವಕಾಶ ದೊರೆಯುತ್ತದೆ ಎಂದು ಸೂರ್ಯಗಗನಕ್ಕೆ ತಿಳಿಸಿದ್ದಾರೆ,

ಕಳೆದ ಕೋರಾನ ವೈರಸ್ ಎನ್ನುವ ಸಾಂಕ್ರಾಮಿಕ ಕಾಲಮಾನದಲ್ಲಿಯು ಜನಸೇವೆಗೆ ಮುಂದಾದ ಹೆಚ್.ಎಸ್ ಸುಂದರೇಶ್ ಅವರು ಆಯಾ ಕಾಲಘಟ್ಟದ ಕ್ಲಿಷ್ಟಕರ ಸಂದರ್ಭದಲ್ಲಿ ಯಾವುದೇ ಸಂಭ್ರಮದಲ್ಲಿಯು ಜನಹಿತ ಬಯಸಿ ಸೇವೋನ್ಮುಖಿಯಾಗುವ ಅವರ ರಾಜಕಾರಣದ ನೀತಿ ಪಕ್ಷಾತೀತ ಹಾಗೂ ಜಾತ್ಯಾತೀತವಾಗಿದೆ. ಈ ನಿಟ್ಟಿನಲ್ಲಿ ಜನಸಾಮಾನ್ಯರಿಗೆ ಪರಿಚಿತರಾಗಿರುವ ಹೆಚ್.ಎಸ್ ಸುಂದರೇಶ್ ಅವರು ಮಲೆನಾಡಿನ ಜನಸ್ಪಂದನೆಯ ನಾಯಕರು ಎಂದೇ ಬಿಂಬಿತವಾಗಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!