September 25, 2026

I ಎನ್ನವ್ವನೇ ಮೊದಲ ಶಿಕ್ಷಕಿ I

0
FB_IMG_1757085611968

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಎನ್ನವ್ವನೇ ಮೊದಲ ಶಿಕ್ಷಕಿ I

ಈ ಹೊಕ್ಕುಳದುದರದ
ಉಸಿರ ಬಳ್ಳಿಯಲ್ಲಿ ಜೀವದುಂಬಿದೆ,
ಮಡಿಲೊಳಗಿಟ್ಟು ತೂಗುತಲಿ,
ರುಧಿರದನಿಗಳಿಂಡಿ ಹಸಿವ ನೀಗಿಸಿದೆ,

ಅಕ್ಕರೆಯ ಸದ್ದಿನ ಅಂಬೆಗಾಲಿಡಿಸಿ,
ಹೊಸಿಲ ದಾಟಿಸಿ ಚಂದ್ರಮನ ತೋರಿಸಿದೆ,
ಅಳುವ ನಿಲ್ಲಿಸಿ ಹಾಡೊಂದು ಗುನುಗುಟ್ಟಿದೆ,
ಕತೆಯ ಕಟ್ಟಿ ಒಳಿತಿನ ಪಾಠ ಕಲಿಸಿದೆ,

ದಾಪುಗಾಲಿಡಿವುದನು ಹೇಳಿಕೊಟ್ಟೆ,
ಮಾತನಾಡುವುದನು ಕಲಿಸಿಕೊಟ್ಟೆ
ಕಣ್ಣೀರ ಅಳಿಸಿ
ಈ ಎದೆಚರಿಗೆಗೆ ನಗುವ ತುಂಬಿದೆ.
ಮನೆಯೇ ಮೊದಲ ಪಾಠಶಾಲೆ.
ನೀನೆ ಮೊದಲ ಶಿಕ್ಷಕಿಯಾಗಿ ನಿಂದೆ,

ಯಾವ ಋಣಾನುಬಂಧವೋ ಎನೋ,
ತಾಯಿ ನಿನಗೆ ಶರಣು.ಶರಣು.

@Gara Srinivas

Spread the love

Leave a Reply

Your email address will not be published. Required fields are marked *

error: Content is protected !!