Saturday, August 1, 2026
Homeಸಂಪಾದಕೀಯ I ರಾಜಕಾರಣಿಗಳ ಒಪ್ಪಿತ ಸೆಕ್ಸ್ I ಹನಿಟ್ರ್ಯಾಪರ್‍ಸ್ I ಸೆಕ್ಸ್ ಪೆನ್‌ಡ್ರೈವ್ಗಳ ಫೈಲ್ಸ್ I

 I ರಾಜಕಾರಣಿಗಳ ಒಪ್ಪಿತ ಸೆಕ್ಸ್ I ಹನಿಟ್ರ್ಯಾಪರ್‍ಸ್ I ಸೆಕ್ಸ್ ಪೆನ್‌ಡ್ರೈವ್ಗಳ ಫೈಲ್ಸ್ I

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ರಾಜಕಾರಣಿಗಳ ಒಪ್ಪಿತ ಸೆಕ್ಸ್ I ಹನಿಟ್ರ್ಯಾಪರ್‍ಸ್ I ಸೆಕ್ಸ್ ಪೆನ್‌ಡ್ರೈವ್ಗಳ ಫೈಲ್ಸ್ I

ಈ ಹೊತ್ತಿನ ರಾಜಕೀಯ ಪಥ ಬದಲಾವಣೆಯಲ್ಲಿ ಲೈಂಗಿಕತೆಯ ಅಸ್ತ್ರ ದಿವ್ಯಾಸ್ತ್ರವಾದಂತಿದೆ, ಕಾಮದ ಅಮಲಿನಲ್ಲಿ ಲೈಂಗಿಕ ತೃಷೆ ತಣಿಸಿಕೊಳ್ಳುವವರ “ಪೆನ್ ಡ್ರೈವ್” ನಮ್ಮ ಬಳಿ ಇದೆ, ಸಕಾಲದಲ್ಲಿ ರೀಲಿಸ್ ಮಾಡುತ್ತೇನೆ, ಎನ್ನುವ ಬಹುತೇಕ ಪ್ರಕರಣಗಳು ರಾಜ್ಯ ರಾಜಕೀಯದಲ್ಲಷ್ಟೆ ಅಲ್ಲ, ದೇಶದ ರಾಜಕೀಯದಲ್ಲೂ ಅಗಾಗ್ಗೆ ದರ್ಶಿಸಿಕೊಳ್ಳುತ್ತದೆ, ಏನೀದು ಸೆಕ್ಸ್ ಪೆನ್ ಡ್ರೈವ್ ಇದೊಂದು ಅಸ್ತ್ರವೆಂದು ಅದ್ಯಾಕೆ ಬಣ್ಣಿಸಲಾಗುತ್ತಿದೆ.. ಇದು ಒಪ್ಪಿತ ಲೈಂಗಿಕ ಕ್ರಿಯೇಯೇ..? ಅಥವಾ ಬಲತ್ಕಾರವೇ..? ಹೀಗೊಂದು ಸಾಮಾಜಿಕ ಅಧ್ಯಯನಶೀಲ ಚರ್ಚೆಗೆ ಈ ಹೊತ್ತಿನ ದಿನಮಾನ ಎದುರಾಗಿದೆ, ಯಾವುದೇ ರಾಜಕಾರಣಿಯಾಗಲಿ ಜನಪ್ರತಿನಿಧಿಯಾಗಿ ಒಪ್ಪಿತ ಸೆಕ್ಸ್ ಕ್ರಿಯೇಯಲ್ಲಿ ತೊಡಗಿಸಿಕೊಳ್ಳಬಾರದೇ..? ಎನ್ನುವ ಪ್ರಶ್ನೆಯನ್ನು ಕಾನೂನಾತ್ಮಕವಾಗಿಯೇ ಮಾಡುವ ಜರೂರತ್ತಿದೆ.

ಏಕೆಂದರೆ ಈ ಸೆಕ್ಸ್ ಪೆನ್ ಡ್ರೈವ್ ಕುರಿತಾಗಿ ಆಡಳಿತಾತ್ಮಕ ವ್ಯವಸ್ಥೆಗಳಾಗಲಿ, ಜನಪ್ರತಿನಿಧಿಯ ಜವಾಬ್ದಾರಿಯಾಗಲಿ ಹೆಚ್ಚು ಸಮಯ ಚರ್ಚಿತವಾಗಿ ವ್ಯರ್ಥವಾಗುತ್ತಿದ್ದರೆ, ಶ್ರೀ-ಸಾಮಾನ್ಯರ ಅಭಿವೃದ್ದಿಗಳು, ಕನಿಷ್ಠ ಯೋಜನೆಗಳ ಬಗ್ಗೆ ಗಮನಹರಿಸಲು ಸಾಧ್ಯವೇ..? ಮತದಾರರು ಆಯ್ಕೆ ಮಾಡುವುದು ಜನಸೇವೆಗಾಗಿಯೇ ಹೊರತು ಇಂತಹ ಸೆಕ್ಸ್ ಪೆನ್ ಡ್ರೈವ್ ಕ್ರೂಡಿಕರಿಸಿಕೊಂಡು ರಾಜಕೀಯ ಮಾಡುವುದಲ್ಲವಾಗಿದೆ.. ಈ ಸಂಗತಿ ಹಿಡಿದು ಕಾಲಹರಣ ಮಾಡುವ ಯಾವ ರಾಜಕೀಯ ಪ್ರತಿನಿಧಿಯೇ ಆಗಿರಲಿ ಅಂತಹವರ ಮೇಲೆ ಕಾನೂನಾತ್ಮಕವಾಗಿ ಜನಸಾಮಾನ್ಯರು ಸ್ಥಳೀಯ ಪೊಲೀಸ್ ಠಾಣೆಗೆ ಹಾಗೂ ಆಯಾ ಸಕ್ಷಮ ಪ್ರಾಧಿಕಾರಗಳಿಗೆ ದೂರು ಸಲ್ಲಿಸುವಂತಾಗಲಿ, ಶ್ರೀ-ಸಾಮಾನ್ಯರಿಗೆ ಯಾವುದೇ ರಾಜಕಾರಣಿಗಳ ಸೆಕ್ಸ್ ಪೆನ್ ಡ್ರೈವ್ ಅಗತ್ಯವಿಲ್ಲ, ಬದಲಿಗೆ ಜ್ವಲಂತ ನಾಗರೀಕ ಸಮಸ್ಯೆಗಳು ಬಗೆಹರಿದರಷ್ಟೆ ಸಾಕು ಅಲ್ಲವೇ..?

ಸೆಕ್ಸ್ ಪೆನ್ ಡ್ರೈವ್ ಇದೆ ಎಂದು ರಾಜ್ಯದ ಜನತೆಯ ಮುಂದಡಿ ಸೆಕ್ಸ್ ಸಿನಿಮಾ ತೋರಿಸುವಂತೆ ಅರೆ-ಬರೆ ತೋರಿಸಿ ಏನು ಹೇಳಲು ಹೊರಟಿದ್ದೀರಿ, ಯಾವ ಸಂದೇಶವನ್ನು ಸಾರಲು ಹೊರಟಿದ್ದೀರಿ, ಇದನ್ನು ಯಾವ ವಯಸ್ಕರು ನೋಡಬೇಕಿದೆ ಹೇಳಿಬಿಡಿ, ಆಚ್ಚರಿ ಎಂದರೆ ಇಂತಹ ನೀಚ ಮಾನಸೀಕತೆಯಿಂದ ನೀವುಗಳು ಆಯ್ಕೆ ನಿಯಮಾವಳಿಗಳಲ್ಲಿ ಸಾಂವಿಧಾನಿಕವಾಗಿರುವಂತೆ ಪ್ರಜಾಸತ್ತಾತ್ಮಕತೆಯನ್ನು ಉಲ್ಲಂಘಿಸುತ್ತಿರುವುದಕ್ಕೆ ಸ್ವತಃ ಸಾಕ್ಷ್ಯಭೂತರಾಗಿದ್ದೀರಿ ಎನ್ನುವುದು ಮರೆಯಕೂಡದು. ಸುಫ್ರೀಂ ಕೋರ್ಟ್ ನಿರ್ದೇಶನದಂತೆ ಒಪ್ಪಿತ ಸೆಕ್ಸ್ ಅಪರಾಧವಲ್ಲ ಎಂದಾದರೆ ನಿಮ್ಮಗಳಿಗೆ ಇದೊಂದು ಅಪರಾಧ ಎಂದು ಹೇಗೆ ಸಾರ್ವಜನಿಕರಿಗೆ ತಿಳಿಸುತ್ತೀರಿ, ಯಾವುದೋ ರೆಸಾರ್ಟ್‌ನಲ್ಲಿ, ಲಾಡ್ಜ್‌ನಲ್ಲಿ ಒಪ್ಪಿತ ಸೆಕ್ಸ್ ಕ್ರಿಯೇಯಲ್ಲಿದ್ದರೆ ಅಥವಾ ಆತ್ಯಾಚಾರ ಮಾಡಿದ್ದರೆ ಅದನ್ನಾದರೂ ಹೇಳಿ..? ಬಲತ್ಕಾರವಾಗಿದ್ದರೆ ಆ ಸಂತ್ರಸ್ಥೆಯರ ಪರವಾಗಿ ನಿಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ವ್ಯಥಾ ಇದಲ್ಲದೆ ಸೆಕ್ಸ್ ಪೆನ್ ಡ್ರೈವ್ ಇದೆ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡುವುದು ಅದೆಷ್ಟರ ಮಟ್ಟಿಗೆ ಸಮಂಜಸ ಎನ್ನುವುದು ರಾಜ್ಯದ ಪೊಲೀಸ್ ಮಹಾನಿರ್ದೇಶಕರೇ ಉತ್ತರಿಸಬೇಕು

ಸೆಕ್ಸ್ ಸಿಡಿ ಹಿಡಿದುಕೊಂಡು ಯಾರಿಗೆ..? ಯಾವ ಕಾರಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ ಎನ್ನುವುದು ಬಹಿರಂಗವಾಗಬೇಕಿದೆ ಅಲ್ಲದೆ ಇದೊಂದು ಹನಿಟ್ರ್ಯಾಪ್ ಪ್ರಕರಣವೆಂದು ಪರಿಗಣಿಸಿ ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ಹೇಳಿಕೆ ಸಂಬಂಧಿಸಿದಂತೆ ಸುಮೋಟೋ ಕೇಸು ದಾಖಲಿಸಿಕೊಂಡು ತನಿಖಿಸುವಂತೆ ಆದೇಶಿಸಬೇಕಾಗಿರುವ ಅಗತ್ಯತೆ ಇದೆ. ಇದಾದರೆ ರಾಜ್ಯದಲ್ಲಿರುವ ಮಹಿಳೆಯರು, ಕುಟುಂಬಗಳಿಗೆ… ಈ ರಾಜಕಾರಣಿಗಳ ಒಪ್ಪಿತ ಸೆಕ್ಸ್ ಪೆನ್ ಡ್ರೈವ್ ಬ್ಲರ್ ದೃಶ್ಯಾವಳಿಗಳನ್ನು ಎಡೆಬಿಡದೇ ತೋರಿಸುತ್ತಿರುವ ದೃಶ್ಯಮಾಧ್ಯಮಿಗಳು ಹಾಗೂ ಯೂಟ್ಯೂಬರ್‍ಸ್‌ಗಳಿಂದ ನೆಮ್ಮದಿಯಾದರು ಸಿಕ್ಯಾತು, ಇನ್ನೂ ಈ ಬಹಿರಂಗ ದೃಶ್ಯಾವಳಿಗಳ ವೀಕ್ಷಣೆಯಿಂದ ಯುವ ಸಮುದಾಯ ಹಾದಿತಪ್ಪಿ ಸುಸಂಸ್ಕೃತ ಸಮ ಸಮಾಜ ನಿರ್ಮಾಣದಿಂದ ಸ್ವಲ್ಪ ದೂರ ಉಳಿದಾರು ಎನ್ನುವುದಾಗಿದೆ.

ಸಾಕಷ್ಟು ಸಂತ್ರಸ್ಥೆಯರನ್ನು ಬಲತ್ಕಾರದಿ ಈ ಲೈಂಗಿಕ ಅನಾಹುತಕ್ಕೆ ತಳ್ಳುತಲಿ ಸರಕಾರದ ಸಚಿವರೊಂದಿಗೆ ಹಾಗೂ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಅವಿನಾಭಾವ ಸಂಬಂಧ ಹೊಂದಿ ವರ್ಗಾವರ್ಗಿ ನಡೆಸಲು ಕಾರಣವಾಗಿದ್ದ ಸ್ಯಾಂಟ್ರೋ ರವಿಯನ್ನು ಪೊಲೀಸರು ಬಂಧಿಸಿರುವುದು ಸ್ವಾಗತಾರ್ಹ ಸಂಗತಿಯಾಗಿದೆ, ಅಲ್ಲದೆ ಯಾರು ಈ ವಿಷಮ ವ್ಯವಸ್ಥೆಯಲ್ಲಿ ಬಿಸಿಗಂಬನಿ ಇಟ್ಟಿದ್ದರೋ ಆ ಸಂತ್ರಸ್ಥೆಯರು ಇದೀಗ ಪ್ರತ್ಯೇಕ ಕೇಸುಗಳನ್ನು ದಾಖಲಿಸಿ ಸಾಮಾಜಿಕ ನ್ಯಾಯವನ್ನು ಬಯಸಿದ್ದಾರೆ ಅಲ್ಲದೆ ಸ್ಯಾಂಟ್ರೋ ರವಿ ಎಂಬುವ ತಲೆಹಿಡುಕನ ಉಪಟಳದಿಂದ ಮುಕ್ತರಾಗಿ ಎಲ್ಲರಂತೆ ಸಮಾಜಮುಖಿಯಾಗಿ ಬದುಕು ಕಟ್ಟಿಕೊಳ್ಳುವುದಕ್ಕೆ ಮುಂದಾಗಿದ್ದಾರೆ,

ಹೀಗೆಯೇ ಯಾರು ರಾಜಕೀಯ ವೈಷಮ್ಯದಿಂದಲೋ.. ಮುಂಬರುವ ಅಸೆಂಬ್ಲಿ ಚುನಾವಣೆಯ ಹಿನ್ನಲೆಯಿಂದಲೋ..? ಅಧಿಕಾರದ ಹಪಾಹಪಿಗೆ ಒಳಗಾಗಿ ಈ ಸೆಕ್ಸ್ ಪೆನ್ ಡ್ರೈವ್ ಬಗ್ಗೆ ದಿನದ ಸಮಯವೆಲ್ಲಾ ಚರ್ಚಿತಗೊಳಿಸಿ ಸಾರ್ವಜನಿಕರನ್ನು ಮುಜುಗರಕ್ಕೆ ಅತ್ಯಂತ ಅಸಹ್ಯಗೇಡಿತನಕ್ಕೆ ಗುರಿಮಾಡುತ್ತಿರುವುದು ಸಾರ್ವಜನಿಕ ಸುಸಂಸ್ಕೃತ ಬದುಕಿಗೊಂದು ಸುಡುಬೆಂಕಿ ಇಟ್ಟಂತೆ ಹಾಗೂ ಜನಜೀವನ ಕಾಯ್ದೆಯನ್ನು ಉಲ್ಲಂಘಿಸಿ ಕಾನೂನು ಬಾಹಿರವಾಗಿ ನಡೆದುಕೊಳ್ಳುತ್ತಿರುವುದು ನಾಗರೀಕ ಸಮಾಜಕ್ಕೆ ತರವಲ್ಲವಾಗಿರುವುದರಿಂದ ಪೊಲೀಸ್ ಮಹಾನಿರ್ದೇಶಕರು ಇತ್ತಕಡೆ ಚಿತ್ತವರಿಸುವುದು ಉತ್ತಮವಾಗಿದೆ.

ಮೇಲಾಗಿ ಪೆನ್ ಡ್ರೈವ್ ಸಂಗತಿ ಹಿಡಿದು ಮಾಧ್ಯಮದವರು ಕೂಡ ಅತಿರಂಜನೆಗೊಳಿಸದೇ ಸೆಕ್ಸ್ ಪೆನ್ ಡ್ರೈವ್ ದೃಶ್ಯಾವಳಿಗಳನ್ನು ತೋರಿಸುವುದು ಕೂಡ ಅಪರಾಧ ಎನ್ನುವುದು ಅರಿವಿಗಿರಲಿ ಹಾಗೂ ಈ ಸಾಲಿನ ಕಿವಿಮಾತಾಗಿದೆ. ಒಟ್ಟಿನಲ್ಲಿ ರಾಜಕೀಯ ಪಲ್ಲಟಕ್ಕಾಗಿ ಪಲ್ಲಂಗದ ಸಂಗತಿಯನ್ನು ಚಿತ್ರೀಕರಿಸಿ ದಯಮಾಡಿ ಜನಸಾಮಾನ್ಯರ ಮುಂದಡಿ ತರದಿರಿ, ಇದು ಒಪ್ಪಿತವಾಗಿದ್ದರೆ… ಉಳಿದವರೆದ್ದೇನು ಆಕ್ಷೇಪ..? ನಿಜಕ್ಕೂ ಸಂತ್ರಸ್ಥೆಗೆ ಬಲತ್ಕಾರವಾಗಿದ್ದರೆ, ಬ್ಲ್ಯಾಕ್ಮೇಲ್ ಮಾಡಿ ಲೈಂಗಿಕ ಕ್ರಿಯೇಯಲ್ಲಿ ತೊಡಗಿಸಿಕೊಂಡಿದ್ದರೆ ಪೆನ್ ಡ್ರೈವ್ ಬಿಡುಗಡೆ ಮಾಡುವ ಬದಲು ಆ ಸಂತ್ರಸ್ಥೆಗೆ ಬೆಂಬಲಿಸಿ ಸ್ಥಳೀಯ ಪೊಲೀಸ್ ಠಾಣೆಗೆ ದೌಡಾಯಿಸಿ ದೂರು ದಾಖಲಿಸಿ ತನಿಖೆ ಕೈಗೊಳ್ಳುವಂತೆ ಆಗ್ರಹಿಸುವುದು ಸಾಂವಿಧಾನಿಕವಾದ ವಿಧಾನವಾಗಿದೆ ಎನ್ನುವುದು ಅರಿತು ರಾಜಕೀಯ ಮಾಡಬೇಕಿದೆ.

ಕೇವಲ ಅಧಿಕಾರದ ಹಪಾಹಪಿಗೆ ಇಂತಹದೊಂದು ಒಪ್ಪಿತ ಸೆಕ್ಸ್ ಚಿತ್ರಿಕರಿಸುವುದು ಅಲ್ಲದೆ ಈ ಮೂಲಕ ಡಿಮ್ಯಾಂಡ್ ಮಾಡುವುದು ಅಕ್ಷಮ್ಯ ಅಪರಾಧವೂ ಹೌದು ಇದೊಂದು ಹನಿಟ್ರ್ಯಾಪ್ ಪ್ರಕರಣವೂ ಹೌದಾಗಿದೆ. ಈ ಎಲ್ಲಾ ಅಂಶಗಳನ್ನು ಮನಗಂಡು ರಾಜ್ಯದ ಪೊಲೀಸ್ ಮಹಾನಿರ್ದೇಶಕರು ಶಿಸ್ತು ಕ್ರಮವನ್ನು ಶೀಘ್ರವೇ ಕೈಗೊಳ್ಳುವಂತಾಗಲಿ ಎಂದು ಅಂಬೋಣಿಸುತ್ತೇನೆ.

RELATED ARTICLES

1 COMMENT

  1. Really it is a meaningful article sir, I like your views, But why the society is just enjoying this, not thinking about healthy of society. It is really shamfull attitude of our people sir

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I