Saturday, August 1, 2026
Homeಸೂರ್ಯಗಗನ I ಕನ್ನಡ ಸಾಹಿತ್ಯ ಲೋಕಕ್ಕೆ 'ಕಥಾ ಮಂಥನ'ದ ಅಡಿಗಲ್ಲು I ಡಿಜಿಟಲ್ ವೇದಿಕೆಯಲ್ಲಿ ಸಣ್ಣಕಥೆಗಳ ಹೊಸ...

 I ಕನ್ನಡ ಸಾಹಿತ್ಯ ಲೋಕಕ್ಕೆ ‘ಕಥಾ ಮಂಥನ’ದ ಅಡಿಗಲ್ಲು I ಡಿಜಿಟಲ್ ವೇದಿಕೆಯಲ್ಲಿ ಸಣ್ಣಕಥೆಗಳ ಹೊಸ ಯುಗಾರಂಭ I

 I ಕನ್ನಡ ಸಾಹಿತ್ಯ ಲೋಕಕ್ಕೆ ‘ಕಥಾ ಮಂಥನ’ದ ಅಡಿಗಲ್ಲು I ಡಿಜಿಟಲ್ ವೇದಿಕೆಯಲ್ಲಿ ಸಣ್ಣಕಥೆಗಳ ಹೊಸ ಯುಗಾರಂಭ I

ಬೆಂಗಳೂರು : ಸ್ವದೇಶಿ ತಂತ್ರಜ್ಞಾನದಲ್ಲಿ ಭಾರತೀಯ ಸಾಮಾಜಿಕ ಜಾಲತಾಣವನ್ನು ನಿರ್ಮಿಸಿರುವ Knobly Cream ಸಂಸ್ಥೆಯು ಕನ್ನಡ ಸಾಹಿತ್ಯಾಭಿಮಾನಿಗಳಿಗೆ ವಿನೂತನ ವೇದಿಕೆಯನ್ನು ಸಿದ್ಧಪಡಿಸಿದೆ. ಸಣ್ಣಕಥೆಗಳ ಓದುವಿಕೆ ಮತ್ತು ವಿಮರ್ಶೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ‘ಕಥಾ ಮಂಥನ’ ಎಂಬ ನೂತನ ಯೋಜನೆಯನ್ನು ಪ್ರಾರಂಭಿಸಲಾಗಿದ್ದು, ಇದರ ಅಧಿಕೃತ ಲಾಂಛನವನ್ನು (ಲೋಗೋ) ಇಂದು ಲೋಕಾರ್ಪಣೆ ಮಾಡಲಾಯಿತು.

‘ಕಥಾ ಮಂಥನ’ದ ಲೋಗೋವನ್ನು ನೋಬ್ಲಿ (Knobly) ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ  ಪ್ರಶಾಂತ್ ಹೆಬ್ಬಾರ್ ಅವರು ಲೋಕಾರ್ಪಣೆ ಮಾಡಿದರು. ನಂತರ ಮಾತನಾಡಿದ ಅವರು, “ನಮ್ಮ ಸಂಸ್ಥೆ ನಮ್ಮದೇ ಸ್ವದೇಸೀ ತಂತ್ರಜ್ಞಾನದಲ್ಲಿ ಭಾರತೀಯ ಸಾಮಾಜಿಕ ಜಾಲತಾಣವನ್ನು ಸಿದ್ಧಪಡಿಸಿದೆ. ಆ ಮೂಲಕ ನಮ್ಮ ಸಾಹಿತ್ಯ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಪ್ರಚುರಪಡಿಸುವುದರ ಜೊತೆಗೆ ಸ್ವದೇಶಿಯ ಕಲ್ಪನೆಯನ್ನು ಗಟ್ಟಿಗೊಳಿಸುವ ಪ್ರಯತ್ನ ನಮ್ಮದಾಗಿದೆ. ಕನ್ನಡದ ಕಥಾ ಪರಂಪರೆಯನ್ನು ಡಿಜಿಟಲ್ ಯುಗದಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಜನತೆಗೆ ತಲುಪಿಸುವ ಕನಸಿನೊಂದಿಗೆ ನಾವು ‘ಕಥಾ ಮಂಥನ’ಕ್ಕೆ ಜೀವ ನೀಡುವುದರೊಂದಿಗೆ, Knobly ಸಂಸ್ಥೆ ಸ್ವದೇಶಿ ತಂತ್ರಜ್ಞಾನದಲ್ಲಿ ಜಾಗತೀಕ ಮಟ್ಟದ ಸಾಧನೆ ಮಾಡುವ ದೂರದೃಷ್ಟಿತ್ವವನ್ನು ಇಟ್ಟುಕೊಂಡಿದೆ. ಅದಕ್ಕೆ ಎಲ್ಲರೂ ಸ್ವದೇಶಿ ತಂತ್ರಜ್ಞಾನವನ್ನು ಬಳಸಿಕೊಂಡು ತಮ್ಮ ನಿತ್ಯದ ಕೆಲಸಗಳನ್ನು ಇನ್ನಷ್ಟು ಸರಳೀಕೃತ ಮಾಡಿಕೊಳ್ಳುವುದಕ್ಕೆ ಅವಕಾಶವಿದೆ. ಎಲ್ಲರೂ ಕಥಾ ಮಂಥನದಲ್ಲಿ ಭಾಗವಹಿಸಿ, ಕಥೆಗಳನ್ನು ಬರೆದು ಲೇಖಕರಾಗಿ, ಚರ್ಚೆಗಳಲ್ಲಿ ಭಾಗವಹಿಸಿ ಉತ್ತಮ ಓದುಗರಾಗಿ. ನಿಮ್ಮೆಲ್ಲರ ಪ್ರೋತ್ಸಾಹ ನಮ್ಮ ಮೇಲಿರಲಿ,” ಎಂದು ಅವರು ಆಶಿಸಿದರು.

ಕಥಾ ಮಂಥನ ಅಭಿಯಾನದ ಸಂಯೋಜಕರಾದ ಶ್ರೀನಾಥ್‌ ಜೋಶಿ ಅವರು ಮಾತನಾಡಿ,  “ನಮ್ಮ ಕಥಾ ಮಂಥನ ವೇದಿಕೆಯು ಕೇವಲ ಪ್ರಕಟಣೆಗೆ ಸೀಮಿತವಾಗಿಲ್ಲ. ಬದಲಾಗಿ, ಪ್ರತಿ ಓದುಗರಿಗೂ ಈ ಅಭಿಯಾನದಲ್ಲಿ ಭಾಗವಹಿಸಲು ಅವಕಾಶವಿದೆ. Knobly Cream ವೇದಿಕೆಯಲ್ಲಿ ಪ್ರಕಟವಾಗುವ ಕಥೆಗಳ ವಿಷಯ, ಭಾವಗಳು ಸೇರಿದಂತೆ ಎಲ್ಲಾ ಆಯಾಮಗಳಲ್ಲಿ ರಾಗ-ದ್ವೇಷಗಳಿಲ್ಲದೆ ಸಮರ್ಥ ಚರ್ಚೆಗೆ ಅವಕಾಶವಿದೆ. ಇದಕ್ಕಾಗಿ ಕಾಮೆಂಟ್ ಬಾಕ್ಸ್ ನೀಡಲಾಗಿದ್ದು, ಅಲ್ಲಿ ನಿಮ್ಮ ಅಭಿಪ್ರಾಯಗಳನ್ನು ಹಾಕುವುದಕ್ಕೆ ಅವಕಾಶವಿದೆ. ಈ ಅಭಿಯಾನದಲ್ಲಿ ಎಲ್ಲ ಅಭಿಮಾನಿ ಓದುಗರು ಸಕ್ರಿಯವಾಗಿ ಭಾಗವಹಿಸಬೇಕೆಂದು ಗೌರವಪೂರ್ವಕವಾಗಿ ಮನವಿ ಮಾಡಲಾಗುತ್ತಿದೆ. ಉತ್ತಮ, ಅರ್ಥಗರ್ಭಿತ ಮತ್ತು ಹೊಸ ಚಿಂತನೆಗೆ ಅನುವು ಮಾಡುವ ಅಭಿಪ್ರಾಯಗಳನ್ನು ಅವರ ಸ್ವ-ವಿವರಗಳೊಂದಿಗೆ ಪ್ರಕಟಿಸಲಾಗುವುದು.

ಕಥೆಗಳನ್ನು Knobly Cream ಚಾನಲ್‌ನ ಮೂಲಕ ಎಲ್ಲಾ ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗುವುದು.” ಎಂದು ಅವರು ಸ್ಪಷ್ಟಪಡಿಸಿದರು. ಲೋಗೋ ಲೋಕಾರ್ಪಣೆ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಭಾವನಾ ಎನ್‌, ವ್ಯವಸ್ಥಾಪಕಾರಾದ ಪ್ರಶಾಂತ್‌ ರಾವ್‌, ತಂತ್ರಜ್ಞರಾದ ರಮಾದೇವಿ, ಶ್ರೇಯಸ್‌, ದರ್ಶನ್‌ ಹಾಗೂ ಇತರ ಸಿಬ್ಬಂದಿಗಳು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I