Saturday, August 1, 2026
HomeಅಂಕಣI ಭಾರತದ ಸೇವೋನ್ಮುಖಿ I ಹುಸೇನ್ ಮನ್ಸೂರಿ

I ಭಾರತದ ಸೇವೋನ್ಮುಖಿ I ಹುಸೇನ್ ಮನ್ಸೂರಿ

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಭಾರತದ ಸೇವೋನ್ಮುಖಿ I ಹುಸೇನ್ ಮನ್ಸೂರಿ I

ಮನುಷ್ಯನ ಹುಟ್ಟು ಈ ಭೂಮಿಯ ಮೇಲೆ ಅವತರಣಿಸಿದಾಗ, ಯಾವ ಸಂಕೋಲೆಗಳು ಇರಲಿಲ್ಲ, ಬದಲಿಗೆ ಹಸಿವು ಕಟ್ಟಿಕೊಂಡಿತ್ತು, ನಂತರ ನಾಗರೀಕತೆಯ ಬದಲಾವಣೆಗಳು ಆಚರಣೆಗಳ ವೈವಿದ್ಯತೆಗಳು ಅಮರಿಕೊಂಡವು, ಹೀಗೆ ಅದೊಂದು ಅಧಿಕಾರದ ಪರಮಾವಧಿಗಾಗಿ ಸಾಂದರ್ಭಿಕವಾಗಿ ಬಳಸಿಕೊಳ್ಳುವ ವಿಪರೀತಗಳಿಂದ ಇಂದು ಮಾನವೀಯ ಮೌಲ್ಯಗಳು ನಶಿಸಿ ಹೋಗುತ್ತಿದೆ, ಧರ್ಮ, ಜಾತಿ, ಪಕ್ಷಪಾತ, ಸ್ವಜನತೆಯ ಧೋರಣೆಗಳ ಹಪಾಹಪಿತನಕೆ ಗುರಿಯಾಗುತ್ತಿರುವುದರಿಂದ ಮನುಷ್ಯ ಮನುಷ್ಯನ ಬದುಕುಗಳನ್ನು ಕಿತ್ತು ತಿನ್ನುವುದಕ್ಕೆ ಮುಂದಾಗಿರುವುದು ದುರಂತವಾಗಿದೆ,

ಕಳೆದ ೨೦೨೦ ಸಾಲಿನಲ್ಲಿ ಜಗತ್ತಿಗೆ ಎರಗಿದ ಕೋರೋನಾ ಕಾಲಮಾನವು ಕೂಡ ಮನುಷ್ಯನ ಒಳಗಿನ ವ್ಯಕ್ತಿತ್ವಗಳನ್ನು ಬದಲಾವಣೆ ಮಾಡಿಕೊಳ್ಳಲಾಗದ ಶೇಕಡ ೭೦% ಸಮಾಜಮುಖಿಯಲ್ಲಿ ನಾವುಗಳು ಬದುಕುತ್ತಿದ್ದೇವೆ, ಇದು ವಾಸ್ತವವೂ ಕೂಡ, ಇಂತಹದೊಂದು ಅವಸರಗಳಲ್ಲಿ ಇಲ್ಲೋರ್ವರು ಮಾನವೀಯ ಮೌಲ್ಯವನ್ನಿಡಿದು ಹೊರಟಿದ್ದಾರೆ, ಇಂತಿವರೇನು ರಾಜಕಾರಣಿಗಳಲ್ಲ, ಬದಲಿಗೆ ಇವರಿಗೇನೂ ಆಗಬೇಕಿಲ್ಲ, ಆದರೂ ಕಾಡಿನಲ್ಲಿರುವ ಪ್ರಾಣಿಗಳು ಅದೇ ವರ್ಗದ ಪ್ರಾಣಿಗಳನ್ನು ಕಿತ್ತು ತಿನ್ನುವುದಿಲ್ಲ, ಮನುಷ್ಯ ಮಾತ್ರ ಈ ಹಂತಕ್ಕೆ ಹೋಗಿರುವ ಈ ವಿಷಮತೆಯ ಸಂದರ್ಭದಲ್ಲಿ ಇವರು ಪರೋಪಕಾರಿಯಾಗಿ ಬದುಕಬೇಕು ಎಂದು ಅತ್ಯಂತ ಅಗತ್ಯತೆ ಇರುವ ಮನುಷ್ಯ ಸಮುದಾಯಕ್ಕೆ ಆಸರೆ ಆಗಿರುವುದು ಶ್ಲಾಘನೀಯ ಹಾಗೂ ಮಾದರಿಯಾಗಿದೆ.

ಹೌದು ಇಂತಹ ಹಾದಿಯಲ್ಲಿ ಸಾಗುತ್ತಿರುವವರೇ ಮುಂಬಯಿನ ಹುಸೇನ್ ಮನ್ಸೂರಿ ಅವರು, ಮೊದಲಿಗೆ ಇವರ ಹಾದಿಗೆ ಸೂರ್ಯಗಗನ ಪತ್ರಿಕಾ ಬಳಗ ಅಭಿನಂದಿಸುತ್ತದೆ, ನೂರು ಜನರ ಮೌನದ ಮುಂದಡಿ ಒಂದತ್ತು ಜನ ಸೇವೆಗೆ ಎಂದು ತಮ್ಮ ಬದುಕನ್ನು ಮುಡಿಪಾಗಿಡುವ ಮನಸ್ಥಿತಿಗಳು ಈ ಮನುಷ್ಯ ಸಮಾಜದಲ್ಲಿ ಅತೀ ವಿರಳವಾಗಿದೆ, ಸನ್ಮಾನ್ಯ ಹುಸೇನ್ ಮನ್ಸೂರಿ ಅವರ ನಿಷ್ಪಕ್ಷಪಾತ ಹಾಗೂ ಸಾಮರಸ್ಯ ಸೇವೆಗಳು ಇದೀಗ ಭಾರತದಲ್ಲಿ ಸದ್ದು ಮಾಡುತ್ತಿದೆ,

ಹಸಿವು ಗೊತ್ತಿರುವವರಿಗೆ ಮಾತ್ರ ಹಸಿವಿನ ಪ್ರಾಮುಖ್ಯತೆ ಗೊತ್ತು ಮಾಡಿಕೊಳ್ಳಬಹುದು ಹೀಗಾಗಿ ತಮ್ಮ ಮೂಲ ಸ್ಥಿತಿಗಳಲ್ಲಿ ಅವರು ಅನುಭವಿಸಿದ ಕ್ಲಿಷ್ಟಕರ ದಿನಮಾನಗಳು, ವರುಷಗಳು ಒಂದೊಮ್ಮೆ ತಾನು ಬೆಳೆದು ನಿಂತು ದುಡಿದ ಹಣದಲ್ಲಿ ಅದೇ ಹಸಿವಿನ ಸಮುದಾಯಕ್ಕೆ ಯಾವುದೇ ಮತ, ಪಂಥಗಳ ಬೇದ ಭಾವವಿಲ್ಲದೆ, ಅತಿ ಹೆಚ್ಚು ಬಡನತನದ ಬೇಗೆಯಲ್ಲಿರುವ ಮಕ್ಕಳನ್ನು, ರಸ್ತೆ ಬದಿ ಟೆಂಟ್ ಕಟ್ಟಿಕೊಂಡು ಬದುಕು ಸಾಗಿಸುತ್ತಿರುವ ಮಂದಿಗಳಿಗೆ, ರೋಗಿಗಳಿಗೆ ಅದರಲ್ಲೂ ಮಕ್ಕಳಿಗೆ ಭಾದಿಸುತ್ತಿರುವ ಕ್ಯಾನ್ಸರ್‌ನಂತಹ ಮಾರಕ ರೋಗದ ಪೀಡಿತ ಹಸುಕಂದಮ್ಮಗಳಿಗೆ ನೆರವು ನೀಡುವುದು, ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸುವಿಕೆ, ಸಹಾಯ ಮಾಡುವುದು ಹಾಗೂ ಅವರಿಗೆ ಬಟ್ಟೆ, ಸೈಕಲ್ ಕೊಡಿಸುವುದು, ಈ ನೆಲದ ಎಲ್ಲಾ ಸಮುದಾಯಗಳಿಗೆ ಗೌರವಯುತವಾಗಿ ಕಾಣುವುದು, ಅವರ ಜೀವಪರ ನಿಲುವಿಗೆ ಹಿಡಿದ ಕೈಗನ್ನಡಿಯಾಗಿದೆ,

ತಾನು ಹದಿಹರೆಯದ ವಯಸ್ಸಿನ ಆಸು-ಪಾಸಿನಲ್ಲಿ ಅನುಭವಿಸಿದ ಆರ್ಥಿಕ ಸಂಕಷ್ಟಗಳಿಂದಾದ ನೋವು, ಬಿಸಿಗಂಬನಿಗಳ ತೊಟ್ಟಿಕ್ಕಿಸುವಿಕೆಗಳು ಅನ್ಯರಲ್ಲಿ ನೋಡಿದಾಗ ಹಳೆಯ ನೆನೆವುಗಳು ದರ್ಶಿಸಿಕೊಳ್ಳುತ್ತದೆ, ಅದಾಗ ತನಗೊತ್ತಿಲ್ಲದೆ ಕಂಬನಿ ಮಿಡಿಯುವುದಕ್ಕೆ ಈ ಹೃದಯ ನಿಂತು ಬಿಡುತ್ತದೆ ಎನ್ನುವ ಮಾತೃ ಮನಸಿನ ಹುಸೇನ್ ಮನ್ಸೂರಿ ಅವರು, ಒಂದೊಮ್ಮೆ ಊರು, ಊರು ತಿರುಗುವಾಗ ಹಸಿವು ತಡೆಯುವುದಕ್ಕೆ ಆಗದೆ ಅಲ್ಲೇ ಇದ್ದ ಕಸದ ರಾಶಿಗಳಲ್ಲಿಯೇ ಕೂತು ಬಿಡುತ್ತಾರೆ ಅದಾಗ ಅವರ ಕಣ್ಣಿಗೆ ಕಂಡಿದ್ದು ಅರ್ಧ ತಿಂದು ಬಿಸಾಡಿದ ಕ್ಯಾಟ್‌ಬರಿಸ್ ಚಾಕೋಲೆಟ್, ಅದನ್ನು ತೆಗೆದುಕೊಂಡು ತಿನ್ನುವುದಕ್ಕೆ ಶುರು ಮಾಡುತ್ತಾರೆ, ಇಂತಹ ನೂರು ವಿಷಮ ಸ್ಥಿತಿಗಳ ದಾಟಿ, ನಂತರ ತನ್ನದೆ ಆದ ಗಾರ್ಮೆಂಟ್ಸ್ ವಹಿವಾಟು ಶುರು ಮಾಡುತ್ತಾರೆ, ಹೋಲ್‌ಸೇಲ್ ಹಾಗೂ ಸಿದ್ದ ಉಡುಪು ತಯಾರಿಕೆಗಳಿಗೂ ಮುಂದಾಗುವ ಹುಸೇನ್ ಮನ್ಸೂರಿ ಅವರ ಗಾರ್ಮೆಂಟ್ಸ್ ಉದ್ಯಮ ಭಾರತಾದ್ಯಂದತ ವಿಸ್ತಾರಗೊಂಡಿದೆ,

ಇಂತಹ ಯಶಸ್ವಿ ಉದ್ಯಮಿಗೆ ಇಂದಿಗೂ ಕಾಡುತ್ತಿರುವುದು ತಾನು ಸಂಕಷ್ಟದಲ್ಲಿ ಅನುಭವಿಸಿದ ಯಾತನೆಗಳನ್ನು ಇನ್ನೋರ್ವರು ಅನುಭವಿಸಬಾರದು ತನಗೆ ಎಲ್ಲಿ ಅಂತಹ ಕ್ಲಿಷ್ಟಕರತೆಗಳ ದರ್ಶಿಸಿಕೊಳ್ಳುತ್ತವೆಯೋ ಅಲ್ಲಿ ಯಾವುದೇ ಲೆಕ್ಕಾಚಾರಗಳಿಲ್ಲದೆ ಬಳಲಿದ ಜೀವಗಳಿಗೆ ಆಸರೆಯಾಗುವುದಕ್ಕೆ ಮುಂದಾಗುತ್ತಲೇ ಸಾವಿರಾರು ಜನರಿಗೆ, ಸೂರುಗಳಿಗೆ ಹುಸೇನ್ ಮನ್ಸೂರಿ ಅವರು ಸಹಾಯದ ಹಸ್ತ ಚಾಚಿದ್ದಾರೆ, ಅದೆಷ್ಟೋ ಜೀವಗಳಿಗೆ ಧೈರ್ಯ ತುಂಬಿದ್ದಾರೆ, ಮಕ್ಕಳ ಮನಸುಗಳೊಂದಿಗೆ ಬೆರೆತು ತಾವು ಮಕ್ಕಳಾಗಿ ಬಿಡುತ್ತಾರೆ, ಬೀದಿ ಬದಿಯ ಟೆಂಟ್ ನಲ್ಲಿ ವಾಸಿಸುವ ನಾಗರೀಕರೊಂದಿಗೆ ಸಹಭೋಜನಕ್ಕೆ ಮುಂದಾಗುತ್ತಾರೆ ಯಾವುದೇ ಆಚರಣೆಗಳಿಗೂ ತಕಾರರಿಲ್ಲದೆ ಆತ್ಮಪೂರ್ವಕವಾಗಿ ಗೌರವಿಸುತ್ತಾರೆ, ಕ್ಯಾನ್ಸರ್ ಪೀಡಿತ ಮಕ್ಕಳ ಚಿಕಿತ್ಸೆಗೆ ಆರ್ಥಿಕವಾಗಿ ನೆರವಾಗುವ ಹುಸೇನ್ ಮನ್ಸೂರಿ ಅವರ ಬದುಕು ಭಾರತದಲ್ಲಿ ಮಾನವೀಯ ಮೌಲ್ಯವನ್ನು ಎತ್ತಿ ಹಿಡಿದಿದೆ ಎಂದು ಇಲ್ಲಿ ಲಗತ್ತಿಸುತ್ತೇನೆ,

ದುಡಿದ ಹಣ ತನಗೆಲ್ಲಾ ಎನ್ನದೆ, ತಾನು ದುಡಿದಿದ್ದು ಪರರಿಗಾಗಿ ಎನ್ನುವ ಪರೋಪಕಾರಿ ಹುಸೇನ್ ಮನ್ಸೂರಿ ಅವರ ಬದುಕು ಇಂದು ದೇಶದ ಹಾಗೂ ಜಗತ್ತಿನ ಜನರಿಗೆ ಮಾದರಿಯಾಗಿದೆ, ಇಂತಹದೊಂದು ದೃಶ್ಯಗಳನ್ನು ನಾನು ಕಣ್ಣಾರೆ ಕಂಡಿದ್ದು ಸಾಮಾಜಿಕ ಜಾಲತಾಣದಲ್ಲಿಯೇ, ಅವರ ಸೇವಾನಿಷ್ಠೆ ಹಾಗೂ ಸಮಾಜದಲ್ಲಿನ ಅತೀ ಕೆಳಸ್ತರ ಸಮುದಾಯಗಳಿಗೆ, ಶಿಕ್ಷಣ, ಆರೋಗ್ಯ, ನೆರವು ನೀಡುತಲಿ ಅವರೊಂದಿಗೆ ಸಾಕಷ್ಟು ಕಾಲಕಳೆವುದು, ಆತ್ಮನೆಮ್ಮದಿ ದೊರಕುತ್ತದೆ ಎನ್ನುವ ಅವರ ಸ್ಟೆಟಸ್‌ಗಳು ನಿಜಕ್ಕೂ ನಾಗರೀಕ ಮೆಚ್ಚುಗೆಗೆ ಅರ್ಹವಾಗಿದೆ, ಇಂತಹ ಮಾಹಿತಿಗಳನ್ನು ಕಲೆಹಾಕಿ ಅವರ ಕುರಿತಾದ ಸಮಾಜಮುಖಿ ಲೇಖನ ಬರೆಯಬೇಕೆನ್ನುವ ನಿರ್ಧಾರ ತಳೆದು ಹೀಗೊಂದು ಬರಹವನ್ನು ವಿಸ್ತೃತಗೊಳಿಸಿದ್ದೇನೆ, ಹುಸೇನ್ ಮನ್ಸೂರಿ ಅವರೇ ನಿಮ್ಮ ಬದುಕು ಅನ್ಯರಿಗೆ ಮಾದರಿಯಾಗಿದ್ದು ನಿಮಗೆ ಈ ಅಕ್ಷರದ ಮೂಲಕ ಅಭಿನಂದಿಸುತ್ತೇನೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I