Saturday, August 1, 2026
HomeಅಂಕಣI ನಾನೋರ್ವ ಅಲೌಕಿಕ ಪಯಣದ ಅಭ್ಯಾಸಿ I

I ನಾನೋರ್ವ ಅಲೌಕಿಕ ಪಯಣದ ಅಭ್ಯಾಸಿ I

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ನಾನೋರ್ವ ಅಲೌಕಿಕ ಪಯಣದ ಅಭ್ಯಾಸಿ I

ನಾನೀಗ ಹೇಳುವುದಕ್ಕೆ ಹೊರಟಿರುವುದು, ಅಂತರ್ಮುಖಿ ಪಯಣವನ್ನು ಕುರಿತು, ಈ ಮಾರ್ಗವನ್ನು ಸಾಮಾನ್ಯವಾಗಿ ಸ್ವೀಕರಿಸಿ ತಾತ್ಸಾರತೆಗೊಳಿಸುವ ಬಹುತೇಕರಲ್ಲಿ ವಿರಳರು ಮಾತ್ರ ಈ ಮಾರ್ಗವನ್ನು ನಿತ್ಯ ಜೀವನದ ನಡುವೆಯೇ ಪಯಣಿಸಲು ಶುರು ಮಾಡಿ ಬಿಡುತ್ತಾರೆ, ಇಂತಹದೊಂದು ಅಗೋಚರ ದಿಕ್ಕಿನತ್ತ ಚಿತ್ತವರಿಸುವುದು, ಅಧ್ಯಯನಶೀಲತೆಯ ಭಾಗವಾದರು ಸಹ ನಾವು ಸ್ವತಃ ಅನುಭವಿಸಿದಾಗ ಮಾತ್ರವೇ ಈ ಹಾದಿಯ ಹೆಜ್ಜೆಗಳ ಅನುಭೂತಿಯಾಗುವುದು ಖಾತ್ರಿ. ಇಂತಹದೊಂದು ಟಿಪ್ಪಣಿಯೊಂದಿಗೆ “ಭರತಭೂಮಿ ತಪೋಭೂಮಿ” ಎನ್ನುವ ವಾಸ್ತವದ ನೆಲೆ-ಸೆಲೆಗಳಲಿ ಧ್ಯಾನ ( Meditation ) ಅದೆಷ್ಟು ನಮ್ಮೊಳಗಿನ ಮನಸನ್ನು ವಿಕಸನದತ್ತ ಕೊಂಡೋಯ್ಯುವುದು ಅರಿವಿಗೆ ಬರುತ್ತದೆ. ಈ ಅರಿವು ಪ್ರತಿ ಜೀವನ, ಜೀವಮಾನದ ಸಮಯಕ್ಕೆ ಹೊಸದೊಂದು ಆಯಾಮ ಸಿಗುತ್ತದೆ ಎಂದು ಮುಂದಿನ ಸಂಗತಿಯನ್ನು ವಿಸ್ತ್ರತಗೊಳಿಸುವೆ.

ಹೌದು ಚಿಕ್ಕವಯಸ್ಸಿನ ಆಸು-ಪಾಸಿನಲ್ಲಿಯೇ “ತಪಸ್ಸು” ಎನ್ನುವ ಪರಿಕಲ್ಪನೆಯಲ್ಲಿ ಶುರುವಾದ ಆಂತರಿಕ ಗೀಳಿಗೆ ಒಂದು ಸುಂದರ ಜೀವನಚಿತ್ರದ ಪ್ರೇಮ್ ಕಟ್ಟಿಕೊಟ್ಟಿದ್ದು ಶ್ರೀ ಪ್ರಭಾಕರ್ ಗುರೂಜೀಯವರ ಋಷಿ ಸಂಸ್ಕೃತಿ ವಿದ್ಯಾ ಕೇಂದ್ರ ಇಲ್ಲಿ ನಡೆಸುವ “ಸಿದ್ದ ಸಮಾಧಿ ಯೋಗ” ಇದರಲ್ಲಿ ಹದಿನೈದು ನಿಮಿಷದ ನಿಜದ ಧ್ಯಾನ ಶುರುವಾಯಿತು, ನಂತರ ಭಾವಸಮಾಧಿ ಯೋಗ, ಶ್ರೀ ರವಿಶಂಕರ್ ಗುರೂಜೀಯವರ ಸಾನಿಧ್ಯದ “ಸುದರ್ಶನ ಕ್ರಿಯಾ ಯೋಗ” ಹಾಗೂ ಓಶೋ ರಜನೀಶ್ ರವರ ಮೆಡಿಟೇಷನ್ ಕ್ರಿಯೇಗಳು, ಶಿವಮೊಗ್ಗದ ಗೆಳತಿಯಿಂದ ಪರಿಚಿತವಾದ “ಪಿರಮಿಡ್ ಧ್ಯಾನ ಕ್ರಿಯೇ” ಈ ಹೊತ್ತಿಗೆ ಸಾಕಷ್ಟು ವರುಷಗಳು ಕಳೆದು ಹೋಗಿತ್ತು, ಹದಿನೈದು ನಿಮಿಷದಿಂದ ಸರಿಸುಮಾರು ೪೫ ನಿಮಿಷದವರೆಗೆ ಧ್ಯಾನಮಾರ್ಗಿಯಾಗಿ ಪಯಣಿಸುವ ಸಂದರ್ಭದಲ್ಲಿ ಆತ್ಮೀಯ ಸ್ನೇಹಿತರಾದ ಅನಿಲ್ ಕುಮಾರ್-ಗೋಲ್ಡ್, ಅವರೊಮ್ಮೆ ಸಹಜಮಾರ್ಗ ಧ್ಯಾನದ ಬಗ್ಗೆ ತಿಳಿಸಿದರು.

ಮೊದಲೇ ಧ್ಯಾನದ ಅನ್ವೇಷಣೆ, ಗುರುಗಳನ್ನು ಹುಡುಕಿ ಹೋಗುತ್ತಿದ್ದ ನನಗೆ ಮತ್ತೊಂದು ಮೈಲಿಗಲ್ಲು ಎನ್ನೊಳಗೆ ಶಾಶ್ವತಗೊಳಿಸುತ್ತದೆ ಎಂದುಕೊಂಡಿರಲಿಲ್ಲ, ಸರಿ ಅನಿಲ್ ಪರಿಚಯಸಿದ “ಸಹಜಮಾರ್ಗ ಧ್ಯಾನ”ದ ಮೂರು ದಿನದ ಸಿಟ್ಟಿಂಗ್ ನೀಡಿದ್ದು ಸಿಸ್ಟರ್ ಸರಸ್ವತಿಯವರು ಅವರ ಸಹಜ ಮನೋಸ್ಥಿತಿ, ಕಲಿತ ಮಾರ್ಗವನ್ನು ಧಾರೆ ಎರೆವ ಶಿಸ್ತುಗಳು ಬಹುಷ್ಯಃ ಎನ್ನೊಳಗೆ “ಸಹಜಮಾರ್ಗ ಧ್ಯಾನ” ನವ್ಯಜೀವನದ ಹಾದಿಯನ್ನು ತೋರಿಸಿಕೊಟ್ಟಿತು ಇಲ್ಲಿಂದ ಶುರುವಾದ “ಸಹಜಮಾರ್ಗ ಧ್ಯಾನ” ಮಾನಸಿಕ ಸಧೃಡತೆ, ಏಕಾಗ್ರತೆ, ಶಾಂತಿ-ಸಂಯಮತೆ ಅನುಭವಕ್ಕೆ ಬಂದಿದೆ. ನಿಜಕ್ಕೂ ಧ್ಯಾನ ಮಾರ್ಗಗಳನ್ನು ಪರಿಚಯಿಸಿದ ಎಲ್ಲರಿಗೂ ಈ ಸಂದರ್ಭದಲ್ಲಿ ವಿನಮ್ರ ಧನ್ಯವಾದ ಅರ್ಪಿಸುವೆ.

ಏನೀದು ಸಹಜ ಮಾರ್ಗ ಧ್ಯಾನ..? ನಿಮಗನಿಸಬಹುದು, ಆದರೆ ಅನಿಸಿಕೆಯಂತೆಯೇ ಸಾಧಿತ ಸ್ಥಿತಿಗೆ ನೀವು ಬರುವುದಿಲ್ಲ, ಬಂದರೆ ಶ್ರಧ್ದೆಯಿಂದ ಅಭ್ಯಾಸಿಗಳಾದರೆ ಮಾತ್ರ, ಈ ಪಯಣ ಸುಗಮ, ಪಯಣಿಸಿದಿದ್ದರೆ ಯಾವುದೇ ಧ್ಯಾನ ಮಾರ್ಗವೇ ಆಗಿರಲಿ ಅದೊಂದು ನಿಮಗೆ ಗೌಣವೇ ಹೊರತು ಬೇರೆನಿಲ್ಲ. ಸಹಜಮಾರ್ಗದ ಧ್ಯಾನದಲ್ಲಿ ಧಾರ್ಮಿಕತೆ, ವರ್ಗಬೇದ, ಬಾಹ್ಯಮುಖಿಯ ಆಚರಣೆಗಳಿಲ್ಲ, ಸಹಜವಾಗಿ ಆರಂಭಿಸಬಹುದಾದ ಈ ಮಾರ್ಗ ಬಹು ಉಪಯೋಗಿ, ಆದರೆ ಅದನ್ನು ಅನುಭವದಿಂದಲೇ ಕಂಡುಕೊಳ್ಳಬಹುದೇ ವಿನಃ ಯಾವುದೇ ರೀತಿಯ ಹುಸಿ ಭರವಸೆಗಳನ್ನು ಎದೆಚರಿಗೆಗಳಿಗೆ ತುಂಬುವುದಿಲ್ಲ.

ನೋಡಿ ನಿತ್ಯ ಒತ್ತಡಗಳಿಗೆ ಸಿಲುಕುವ ಮನುಷ್ಯ ಜೀವನ, ನೆಮ್ಮದಿಯನ್ನು ಬಯಸುತ್ತದೆ ಇದಕ್ಕೆ ಅನುಸರಿಸುವ ಮಾರ್ಗ ಯಾವುದು..? ಎನ್ನುವುದು ನಾವು ನಿರ್ಧರಿಸಬೇಕು, ಓರ್ವ ಪತ್ರಕರ್ತನಾಗಿ, ಸಾಹಿತಿಯಾಗಿ, ಯಾವ ಫಂಥೀಯವಾದಗಳು, ತತ್ವ ಸಿದ್ದಾಂತಗಳನ್ನು ಮೇಳೈಸಿಕೊಳ್ಳದೆ, ಸಾಗುವ ನನ್ನ ಜೀವನದಲ್ಲಿ “ಸಹಜಮಾರ್ಗ ಧ್ಯಾನ” ಮೂಲಕ ಅನೇಕತೆಗಳ ಫಲಿತಾಂಶವನ್ನು ಅನುಭವಿಸಿದ್ದೇನೆ, ನೀವು ಒಮ್ಮೆ ಶ್ರದ್ದತೆಯಿಂದ ಇಚ್ಚಾಮನಸಿನಿಂದ ಧ್ಯಾನಮಾರ್ಗದ ಪ್ರತಿನಿಧಿಗಳು ನೀಡುವ “ತ್ರಿ ಸಿಟ್ಟಿಂಗ್” ತೆಗೆದುಕೊಳ್ಳಿ, ಶುದ್ದೀಕರಣಗೊಳಿಸುವಿಕೆ, ಪ್ರಾರ್ಥನೆ, ಧ್ಯಾನ, ದ ಮೂಲಕ ನಿತ್ಯ ಅಭ್ಯಾಸಿಗಳಾಗಿ, ಅಧ್ಯಾತ್ಮದ ಮತ್ತೊಂದು ಲೋಕದಲ್ಲಿ ಪಯಣಿಸಬಹುದು ಎಂದಷ್ಟೆ ಹೇಳಬಹುದು,

ಈ ಪಯಣ, ನಮ್ಮೊಳಗಿನ ರಚನಾತ್ಮಕತೆ, ಕ್ರಿಯಾಶೀಲತೆಗೆ ಹೊಸ ದಿಕ್ಕು ತೋರಿಸುತ್ತದೆ, ಇದು ನನ್ನ ಜೀವನದಲ್ಲಾಗಿದೆ, ಅನಾಯಾಸವಾಗಿ ಯಾವುದೇ ಕ್ಲಿಷ್ಟಕರ ಸಂದರ್ಭವನ್ನು ದಾಟಿ ಬಿಡಬಹುದು ಇಂತಹದೊಂದು ಅರಿವಿನ ಬಲ ಬಹಳವಾಗಿ ತಳವೂರಿದೆ, ಇನ್ನೂ ನಾ ದರ್ಶಿಸಿದ, ಅನುಭೂತಿಸಿದ ಎಲ್ಲಾ ಸಂಗತಿಗಳನ್ನು ಇಲ್ಲಿ ತೆರೆದಿಡದೇ ನೀವೆ ಖುದ್ದು ” ಸಹಜ ಮಾರ್ಗ ಧ್ಯಾನ” ವನ್ನು ಸರಳವಾಗಿಯೇ ಅನುಸರಿಸಿ ಅಭ್ಯಾಸಿಗಳಾಗಿ, ನೀವು ಇದನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರೆ ಶಿವಮೊಗ್ಗದಲ್ಲಿಯೇ, ಧ್ಯಾನ ಪ್ರತಿನಿಧಿಗಳಿದ್ದಾರೆ ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಇಲ್ಲಿ ಉವಾಚಿಸುತ್ತೇನೆ.

ಇನ್ನೂ ಲೌಕಿಕ ಹಾಗೂ ಅಲೌಕಿಕ ಮಾರ್ಗಗಳು ವಿಭಿನ್ನತೆಗಳಿಂದ ಕೂಡಿದೆ, ಲೌಕಿಕ ಮಾರ್ಗದಲ್ಲಿ ಸೆಳೆವ ಬಹಳಷ್ಟು ಜನರು ತಮ್ಮ ತಮ್ಮ ಸ್ಟೇಟಸ್ ಗಳಿಗೆ ಧ್ಯಾನ ಸರಿ ಹೊಂದುವುದೇ ಎನ್ನುವ ಕೌಂಟ್ ಮಾಡಿ ಅದರಂತೆ ಪ್ರತ್ಯುತ್ತರ ನೀಡುತ್ತಾರೆ, ಇಂತಿವರು ಜಗತ್ತಿನ ಶ್ರೇಷ್ಠ ಬ್ಯುಸಿನೆಸ್ ಮೆನ್ ಬಿಲಿಗೆಟ್ಸ್ ಗಿಂತಲೂ ಬ್ಯುಸಿಯಾಗಿರುತ್ತಾರೆ, ಹರಟೆಗೆ, ರೌಂಡ್ ಟೇಬಲ್ಗಳಿಗೆ ಅನ್ಯತಾ ಕಾರಣಗಳನ್ನು ಮೈಗೂಡಿಸಿಕೊಂಡು ಕಾಲವನ್ನು ವ್ಯರ್ಥಗೊಳಿಸುವುದು ನಮ್ಮ ಸುತ್ತ-ಮತ್ತಲಿನಲ್ಲಿಯೇ ನೋಡುತ್ತೇವೆ, ಈ ಮನಸ್ಥಿತಿಯವರಿಗೆ ಅಲೌಕಿಕ ಮಾರ್ಗಗಳ ಜ್ಞಾನ ಇರುವುದು ಇಲ್ಲ, ಇತ್ತಕಡೆ ಚಿತ್ತವರಿಸುವುದು ಇಲ್ಲ, ಒಮ್ಮೆಲೆ ಚಿತ್ತವರಿಸಿದರೆ ಅವರೆಂದಿಗೂ ಲೌಕಿಕ ಮಾರ್ಗದೆಡೆ ಆಗುವ ಅಥವಾ ಎರಗುವ ಯಾವುದೇ ಸಾಂದರ್ಭಿಕತೆಯನ್ನು ನಿರಾಯಾಸವಾಗಿ ದಾಟಿಸುತ್ತಾರೆ..!

ಒಟ್ಟಿನಲ್ಲಿ ಧ್ಯಾನದ ಅಭ್ಯಾಸಿಗಳಾಗಿ, ಜೀವನದ ಉನ್ನತಿಗಳಿಸಿ, ಮನಸಿನೊಳಗಿನ ಕನ್ನಡಿಯಲ್ಲಿ ನಿಮ್ಮನ್ನು ನೀವು ದರ್ಶಿಸಿಕೊಳ್ಳಿ, “ಸಹಜ ಮಾರ್ಗದ ಧ್ಯಾನ” ಕ್ರಿಯೇಯ ವಿಶೇಷ ಅನುಭವವನ್ನು ನಿಮ್ಮದಾಗಿಸಿಕೊಳ್ಳಿ ಆದರೆ ಪ್ರತಿ ಅಭ್ಯಾಸದಲ್ಲಿಯೂ ನೀವು ಶೂನ್ಯರಾಗಿ, ಇಚ್ಚಾ ಮನಸಿನಿಂದ ಬನ್ನಿ, ಎಂದು ಈ ಸಾಲಿಗೆ ವಿರಮಿಸುತ್ತೇನೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I