ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಶಿವಮೊಗ್ಗದ ಟೆರರ್ ಭೂಪಟದ I ಎಚ್.ಎಂ ಫೈಲ್ಸ್ I
ಪುಟ್ಬಾಲ್ ಪ್ಲೇಯರ್ ಮಂಜುನಾಥ್ ಯಾನೆ ಹೆಬ್ಬೆಟ್ಟು ಮಂಜ
ಹೀಗೊಂದು ವಾಸ್ತವದ ಸ್ಟೋರಿಯ ಹಿಂದೆ, ವೈಟ್ ಕಾಲರ್ ರಾಜಕಾರಣಿಯ ರಾಜಕೀಯ ಸಾಮ್ರಾಜ್ಯ ನಿರ್ಮಾಣ, ಎಲ್ಲವೂ ತನ್ನ ಹಿಡಿತದಲ್ಲಿದಟ್ಟುಕೊಳ್ಳುವ ಹಪಾಹಪಿತನದಿ, ಜೀವಭಯದಿ ಸರಣಿ ಕೊಲೆಗಳು ನಡೆದಿರಬಹುದಾದ ಅಸಲಿ ಕಥಾನಕಗಳ ಒಳಹೂರಣವಿದು, ಕೋಟಿ ಕಂತೆಗಳಲ್ಲಿ ತೂಗಿಕೊಳ್ಳುವ ಈ ವೈಟ್ ಕಾಲರ್ನ ಕಪ್ಪು ಹೆಜ್ಜೆಗಳು, ಶಿವಮೊಗ್ಗದಲ್ಲಷ್ಟೆ ಅಲ್ಲದೆ, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಹಾಸುಹೊಕ್ಕಾಗಿದೆ, ಈ ನಡುವೆ ಪಕ್ಕದ ರಾಜ್ಯ ಗೋವಾ, ಮುಂಬೈ ಅಂತಹ ಮಹಾನಗರಿಗಳಲ್ಲಿ ಈತನ ಜುಗಾರಿ ದಂಧೆಗಳಿವೆ, ಇಂತಹ ಅಪಾಯಕಾರಿ ವೈಟ್ ಕಾಲರ್ ಮೇಲೆ ಸುಫಾರಿ ಹತ್ಯೆಗಳಂತಹ ಬೀಕರತೆಗಳ ಆರೋಪಗಳಿವೆ, ಭೂಗತ ಲೋಕದಲ್ಲಿ ಇಂತಹದೊಂದು ಚರ್ಚೆ ಮಡುಗಟ್ಟಿದೆ, ಶಿವಮೊಗ್ಗದಲ್ಲಿಯು ಈ ಪರಿ ರೌಡಿಗಳು ಹೊಡೆದಾಡಿಕೊಂಡು ಬೀದಿ ಹೆಣವಾಗಲು ಈತನದ್ದೇ ಪಿತೂರಿಗಳಿವೆ ಎನ್ನುವ ಅಸಲಿ ಮಾಹಿತಿಗಳು ಪತ್ರಿಕಾ ಕಛೇರಿಗೆ ಲಿಖಿತವಾಗಿ ವಿಸ್ತೃತಗೊಳ್ಳುತ್ತಿದೆ, ಇಂತಹ ಅನೇಕತೆಗಳ ವರಾತಗಳ ಮುನ್ನದಿ, ಶಿವಮೊಗ್ಗದ ಹೆಚ್.ಎಂ ಫೈಲ್ಸ್ ಕುರಿತಾಗಿ ತಿಳಿದುಕೊಳ್ಳಬೇಕಾದ ಅತೀ ಜರೂರತ್ತಿದೆ,
ಹೋರಾಟದ ನೆಲೆ ಶಿವಮೊಗ್ಗದ ಹೆಸರು ಭೂಗತ ಲೋಕದಲ್ಲಿ ಮೊಹರೊತ್ತಿದ್ದ ಆ ಕಾಲದ ಕೊತ್ವಾಲ್ ರಾಮಚಂದ್ರ ಕೊಲೆಯಾಗಿ ಹೋಗಿದ್ದ ಆದರೆ ಆ ಹೆಸರೇ ಇಂದಿಗೂ ಅಳಿಸಲಾಗದಂತೆ ಭೂಗತ ಲೋಕದಲ್ಲಿ ಅಚ್ಚಳಿಯದೇ ಉಳಿದಿದೆ, ಇಂತಹದ್ದೊಂದು ಪಾಪಿ ಲೋಕವನ್ನೇ ಸೃಷ್ಟಿ ಮಾಡಿಕೊಂಡು ಒಂದಿಷ್ಟು ವರುಷಗಳ ಕಾಲದಿ ಮೆರೆದು ಮರೆಯಾದ, ಹೀಗೆ ಶಿವಮೊಗ್ಗದ ಹೆಸರಿಗೆ ಭೂಗತದ ನಂಟು ಬೆಸೆದ ಪಟ್ಟಿಯಲ್ಲಿ ಸಾಕಷ್ಟು ಜನರಿದ್ದಾರೆ . ಒಂದು ಮಾಹಿತಿಯಂತೆ ಬೆಂಗಳೂರು ಭೂಗತ ಜಗತ್ತಿನಲ್ಲಿರುವ ಈ ಹೊತ್ತಿನ ಮುಲಾಮ ಆಲಿಯಾಸ್ ಲೋಕೆಶ್ ಕೂಡ ಶಿವಮೊಗ್ಗದವನು ಎನ್ನುವ ಮಾತಿದೆ..! ಒಂದು ಸಾಮಾನ್ಯ ಬಡ ಕುಟುಂಬ ಅಣ್ಣಾ ನಗರದ ಕೆರೆ ಅಂಗಳದ ಏರಿ ಸಾಲಿನಲ್ಲಿ ವಾಸವಾಗಿತ್ತು ,ಪ್ರತಿ ಮಳೆಯ ವರ್ಷಕ್ಕೆ ಅಲ್ಲಿನ ಕೆರೆ ಕೋಡಿ ಒಡೆದು ಏರಿ ಸಾಲಿನಲ್ಲಿದ್ದ ಗುಡಿಸಲು ಗಳು ನೀರಿನಿಂದ ಆವೃತ ವಾಗುತಿತ್ತು, ಇದರಿಂದ ಇಲ್ಲಿ ವಾಸವಾಗಿದ್ದ ಬಹುತೇಕರು ಮನೆ ಖಾಲಿ ಮಾಡಿ ನಿರಾಶ್ರಿತರಾಗುತ್ತಿದ್ದರು. ಉಳಿದ ಬೇಸಿಗೆಗಾಲಕ್ಕೆ ಮತ್ತೆ ಅದೇ ಗುಡಿಸಲುಗಳ ಸೇರಿ ಕೊಳ್ಳುತ್ತಿದ್ದರು. ಹೀಗೆ ಆ ಬಡ ಕುಟುಂಬದ ಲೋಕೇಶ್ ಯಾನೇ ಮುಲಾಮನ ತಂದೆ ಶಿವಮೊಗ್ಗದಿಂದ ಬೆಂಗಳೂರು ಮಾರುಕಟ್ಟೆಗೆ ಸಾಗಿಸಲಾಗುತ್ತಿದ್ದ ತರಕಾರಿ ಮಂಡಿಯಲ್ಲಿ ಹಮಾಲಿಯಗಿದ್ದರು, ಹೀಗೊಮ್ಮೆ ಇದ್ದ ಸ್ಥಿತಿಯನ್ನು ಬೆಂಗಳೂರಿನ ತರಕಾರಿ ಮಾರುಕಟ್ಟೆಯಲ್ಲಿದ್ದ ತನ್ನ ಸ್ನೇಹಿತನಿಗೆ ತಿಳಿಸುತ್ತಾರೆ ಅವನ ಸಲಹೆಯಂತೆ ಇಡೀ ಕುಟುಂಬ ಬೆಂಗಳೂರಿಗೆ ಶಿಪ್ಟ್ ಆಗುತ್ತದೆ. ಈ ನಂತರ ಕಾಲದಲ್ಲಿ ಲೋಕೇಶ್ ಎಂಬುವ ಬಡ ಹುಡುಗ ಮುಲಾಮನಾಗಿ ಬದಲಾಗುತ್ತಾನೆ. ಅಲ್ಲದೆ ಭೂಗತ ಸಾಮ್ರಾಜ್ಯದಲ್ಲಿ ಹೆಸರು ಮಾಡಿಕೊಳ್ಳುತ್ತಾನೆ, ಆದರೆ ಇನ್ನೊಂದು ಮೂಲದ ಪ್ರಕಾರ ಮುಲಾಮ ಅಲಿಯಾಸ್ ಲೋಕೇಶ್ ಓರ್ವ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದನು ಈತನ ತಂದೆ ವೆಂಕಟೇಶ್ ಕೂಡ ಇದೇ ವೃತ್ತಿಯಲ್ಲಿದ್ದು ರಾಜಾಜಿನಗರದ ಜೂಗನಹಳ್ಳಿನಲ್ಲಿ ವಾಸವಾಗಿದ್ದರು ಎನ್ನುವುದಿದೆ, ಈತನ ಮೂಲದ ಕುರಿತಾಗಿ ಶಿವಮೊಗ್ಗದಲ್ಲಿ ಚರ್ಚೆಯಲ್ಲಿದೆ, ಇಲ್ಲಿ ಇವರ ಸಂಬಂಧಿಕರು ಬೆಂಗ್ಳೂರಿಗೆ ಈ ಮೇಲೆ ಹೇಳಿದಂತೆ ಶಿಫ್ಟ್ ಆದ್ಮೇಲೆ ಇವರೊಂದಿಗೆ ಮುಲಾಮನ ಪೋಷಣೆ ನಡೆದಿತ್ತು, ಹೀಗಾಗಿಯೇ ಶಿವಮೊಗ್ಗದ ಫಿಲ್ಡ್ ಮಾಡೋ ಮುಕ್ಕಾಲು ಭಾಗದ ಹುಡುಗರಿಗೆ ಹಾದಿದೀಪವಾಗಿದ್ದ ಎನ್ನುವ ಮಾತು ಭೂಗತ ಲೋಕದಲ್ಲಿ ಮೊಹರೊತ್ತಿದೆ,
ಇದೀಗಲೂ ಮುಲಾಮನ ಹೆಸರು ಚಾಲ್ತಿಯಲ್ಲಿದೆ, ಇಂತಿಷ್ಡು ಟಿಪ್ಪಣಿ ಅಗತ್ಯತೆ ಇದೆ ಎನ್ನುವ ಕಾರಣಕ್ಕೆ ಇಲ್ಲಿ ವಿಸ್ತ್ರತ ಗೊಳಿಸಲಾಗಿದೆ. ಶಿವಮೊಗ್ಗದ ಹೆಸರನ್ನು ಭೂಗತ ಲೋಕದಲ್ಲಿ ಮೆರೆಸುತ್ತಿರುವ ಪಾಪಿಗಳ ಪಟ್ಟಿ ಇಂದಿಗೂ ಬೆಳೆಯುತ್ತಲೇ ಇದೆ.. ಹೌದು ಹೀಗೆ ಏನು ಅಲ್ಲದ ಯುವಕನೋರ್ವ ಕೊತ್ವಾಲ್ನನ್ನು ಮೀರಿಸಿದ ಭೂಗತ ಪಾತಕಿಯಾಗಿ ಬದಲಾಗುತ್ತಾನೆ , ಕರ್ನಾಟಕದ “Most wanted” ರೌಡಿ ಶೀಟರ್ ಎನಿಸಿಕೊಂಡು ಇದೀಗ ಸದ್ಯಕ್ಕೆ ಮಲೇಶಿಯಾಕ್ಕೆ ಪರಾರಿಯಾಗಿರುವ ವದಂತಿಗಳ ಬೆನ್ನತ್ತಿ ಆ ಹೊತ್ತಿನ ಪುಟ್ಬಾಲ್ ಪ್ಲೇಯರ್,ಆಟೋ ಡ್ರೈವರ್, ಬಜರಂಗಿಯಾಗಿ ಸೀದಾಸಾದ ಇದ್ದವನಿಗೆ ಅದ್ಯಾಕೋ ಭೂಗತ ಲೋಕ ಕರೆದಿತ್ತು. ಆ ಹೊತ್ತಿನ ಪುಟ್ಬಾಲ್
ಪ್ಲೇಯರ್ ಮಂಜುನಾಥ್ ಯಾನೆ ಹೆಬ್ಬೆಟ್ಟು ಮಂಜ. ಮದ್ಯಮ ಕುಟುಂಬದಲ್ಲಿ ಹುಟ್ಟಿ ಬೆಳೆದಿದ್ದ ಮಂಜುನಾಥ ಯಾನೆ ಹೆಬ್ಬೆಟ್ಟು ಮಂಜನಿಗೆ ಅಂಡರ್ ವರ್ಲ್ಡ್ ಡಾನ್ ಆಗ್ಬೇಕು ಎಲ್ಲಾ ರೌಡಿಗಳನ್ನು ಫೀಲ್ಡ್ ಮಾಡಬೇಕು ಎಂದೆನಿಸಿತ್ತು, ಹೀಗಾಗಿಯೇ ಬೆಂಗಳೂರಿನ ಸ್ಪೋರ್ಟ್ಸ್ ಕ್ಲಬ್ ಕಂಠೀರವ ಸ್ಟೇಡಿಯಂನಲ್ಲಿದ್ದ ಹಾಸ್ಟಲ್ನಲ್ಲಿದ್ದುಕೊಂಡೇ ವ್ಯಾಸಾಂಗದ ಜೊತೆಗೆ ಉತ್ತಮ ಪುಟ್ಬಾಲ್ ಪ್ಲೇಯರ್ ಎನಿಸಿಕೊಂಡಿದ್ದ ಹೀಗಿದ್ದವನು ಇದ್ದಕ್ಕಿದ್ದಂತೆ ಅದ್ಯಾವ ತಲೆ ಮಾಸಿದವರ ಎಂಟ್ರಿ ಆಗಿತ್ತೋ ಈತನ ಬದುಕಿನಲ್ಲಿ ಮತ್ತೆಂದಿಗೂ ಪುಟ್ಬಾಲ್ ಆಟ ಎದುರಾಗಲೇ ಇಲ್ಲ. ಬದಲಿಗೆ ಶಿವಮೊಗ್ಗಕ್ಕೆ ಬಂದವನು ಬಸವನ ಗುಡಿಯಲ್ಲಿದ್ದ ಮನೆ ಸೇರಿಕೊಂಡು ಆಟೋ ಡ್ರೈವಿಂಗ್ಗೆ ಇಳಿಯುತ್ತಾನೆ. ಮೊದಲಿನಿಂದಲು ಸೆಳೆಯುತ್ತಿದ್ದ ಭೂಗತ ಲೋಕ ಸಣ್ಣ,ಪುಟ್ಟ ಮರಿರೌಡಿಗಳನ್ನು ಪರಿಚಯಿಸುತ್ತದೆ.
ಅದಾಗಲೇ ಶಿವಮೊಗ್ಗದ ರೌಡಿ ತುಕಾರಾಂ ಕೊಲೆಗೆ ಸ್ಕೆಚ್ ಹಾಕಿದ್ದ ತಮಿಳು ಕುಮಾರನ ಗುಂಪಿನಲ್ಲಿ ಕಾಣಿಸಿಕೊಳ್ಳುತ್ತಾನೆ. ತಮಿಳುಕುಮಾರನ ಪಟಾಲಂ ನಲ್ಲಿದ್ದವರು ಪೂರ್ವ ಸ್ಕೆಚ್ನಂತೆಯೇ ಶಿವಮೊಗ್ಗ ನಗರದ ನೆಹರು ರಸ್ತೆಯ ಮಾಣಿಕ್ಯಂ ಕಾಂಪ್ಲೆಕ್ಸ್ ಹತ್ತಿರ ನಿಂತಿದ್ದ ರೌಡಿ ತುಕಾರಾಮನ ಮೇಲೆ ಹಂತಕರು ಅಟ್ಯಾಕ್ ಮಾಡಿ ಅವನನ್ನು ಬರ್ಬರವಾಗಿ ಕೊಲೆಗೈದು ಪರಾರಿಯಾಗುತ್ತಾರೆ. ಆಗಲೇ ಹೆಬ್ಬೆಟ್ಟು ಮಂಜ ಭೂಗತ ಜಗತ್ತಿಗೆ ಎಂಟ್ರಿ ಕೊಟ್ಟಂತಾಗುತ್ತದೆ. ಶಿವಮೊಗ್ಗದ ಪೋಲೀಸರು ತುಕಾರಮನ ಕೊಲೆಯಲ್ಲಿದ್ದವರನ್ನು ಹೊತ್ತು ತಂದು ಜೈಲಿಗಟ್ಟುತ್ತಾರೆ, ಹೀಗೆ ಜೈಲಿಗೋದವನು ಒಂದಿಷ್ಟು ತಿಂಗಳುಗಳ ನಂತರ ಜಾಮೀನಿನ ಮೇಲೆ ಹೊರ ಬರುತ್ತಾನೆ,ರೌಡಿ ತುಕಾರಾಮನ ಮೇಲೆ ಮಚ್ಚು ಬೀಸಿ ಅವನ ರಕ್ತಕಾರುವಿಕೆ ಕಂಡಿದ್ದ ಹೆಬ್ಬೆಟ್ಟು ಮಂಜ ಮತ್ತೊಂದು ಕೊಲೆಗೆ ಒಪ್ಪಿಕೊಳ್ಳುತ್ತಾನೆ ರೌಡಿ ಹನೀಪನ ಜೊತೆ ಸೇರಿಕೊಂಡು ತೀರ್ಥಹಳ್ಳಿಯ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಹೊಸಳ್ಳಿ ವೆಂಕಟೇಶ್ನನ್ನು ಮುಗಿಸಿ ಜೈಲು ಪಾಲಾಗುತ್ತಾನೆ ಅಂಡರ್ ವರ್ಲ್ಡ್ ಡಾನ್ ಆಗ್ಬೇಕು ಎನ್ನುವ ಹೆಬ್ಬೆಟ್ಟು ಮಂಜ ಶಿವಮೊಗ್ಗದಲ್ಲಿ ಎರಡು ಕೊಲೆಗಳಲ್ಲಿ ಭಾಗಿಯಾಗಿ ಲೆಕ್ಕಾಚಾರ ಶುರುವಿಟು ಕೊಳ್ಳುತ್ತಾನೆ.
ಜೈಲಿನಲ್ಲಿದ್ದಷ್ಟು ದಿನಗಳು ಹೆಬ್ಬೆಟ್ಟು ಮಂಜನಿಗೆ ಬೆಂಗಳೂರು ರೌಡಿಗಳು ಮಾತಾಡಿಸುತ್ತಾರೆ. ಜಾಮೀನಿನ ನಂತರ ಬೆಂಗಳೂರಿಗೆ ಕರೆಯಿಸಿ ಕೊಂಡಾಗಲೇ ಹೆಬ್ಬೆಟ್ಟು ಮಂಜ ನಡೆಸಿದ ಟೆರರ್ ದಾಳಿಯ ಕೊಲೆ ಇಡೀ ಬೆಂಗಳೂರನ್ನು ಬೆಚ್ಚಿ ಬೀಳಿಸುತ್ತದೆ ಎಂದು ಕೊಂಡಿದ್ದ,..? ಕೊತ್ವಾಲ್,ರಾಮಚಂದ್ರ,ಜಯರಾಜ್, ಕಾಲದ ನಟೋರಿಯಸ್ ಪಾತಕಿ ಕೊರಂಗು ಕೃಷ್ಣನನ್ನು ಮುಗಿಸಲೇಬೇಕು ಎಂದು ತನ್ನ ಹುಡುಗರನ್ನು ಕಟ್ಟಿಕೊಂಡು ನಡುರಾತ್ರಿಯ ಹೊತ್ತಿನಲ್ಲಿ ಚಿತ್ರದುರ್ಗದ ಸಮೀಪದಲ್ಲಿರುವ ಹಿರಿಯೂರು ಡಾಬದಲ್ಲಿದ್ದ ಕೊರಂಗು ಕೃಷ್ಣ ಮತ್ತು ಆತನ ಸಹಚರರ ಮೇಲೆ ಬುಲೆಟ್ ಹಾರಿಸುತ್ತಾನೆ. ನಡರಾತ್ರಿಯ ಆ ಬುಲೆಟ್ ಸದ್ದಿಗೆ ಜೈಲು ಪೋಲಿಸರು ತಮ್ಮಲ್ಲಿದ್ದ ಬಂದೂಕುಗಳನ್ನು ಹೊತ್ತುಕೊಂಡು ಪೇರಿ ಕೀಳುತ್ತಾರೆ. ಕೊರಂಗು ಕೃಷ್ಣನ ಸಹಚರನೋರ್ವ ಬಿದ್ದ ಬುಲೇಟ್ ಗುಂಡಿಗೆ ಶೌಚಾಲಯದಲ್ಲಿಯೇ ಕೆಳಗುರುಳುತ್ತಾನೆ.
ತಬ್ಬಿಬ್ಬಾದ ಕೊರಂಗು ಕೃಷ್ಣ ಯಾರು ಅಟ್ಯಾಕ್ ಮಾಡಿದ್ರು… ಎನ್ನುವ ಗೋಜಿನಲ್ಲಿ ಸದ್ಯದ ಸ್ಥಿತಿಯಲ್ಲಿ ಪ್ರಾಣ ಉಳಿಸಿಕೊಳ್ಳುವ ಹಂತದಲ್ಲಿ ಪರದಾಡುತ್ತಿರುವ ಸಂದರ್ಭದಲ್ಲಿಯೇ ಹೆಬ್ಬೆಟ್ಟು ಮಂಜನ ಹತ್ತಿರದ ಬುಲೆಟ್ ಖಾಲಿಯಾಗಿರುತ್ತದೆ, ಸುಫಾರಿ ಪಡೆದಂತೆಯೇ ಅಂಡರ್ ವರ್ಲ್ಡ್ ಡಾನ್ ಆಗಬೇಕೆನ್ನುವ ಅಮಲು ನೆತ್ತಗೇರಿಸಿ ಕೊಂಡಿದ್ದ ಹೆಬ್ಬೆಟ್ಟು ಮಂಜ ಲಾಂಗ್ ಹಿಡಿದು ಕೊರಂಗುವಿನ ಮೇಲೆ ಮುಗಿ ಬೀಳುತ್ತಾನೆ. ಸಿಕ್ಕ ಸಿಕ್ಕ ಕಡೆ ಲಾಂಗ್ ನಿಂದ ಹಲ್ಲೆ ನಡೆಸಿ ನೆಲಕ್ಕುರುಳಿಸಿದ ನಂತರ ರಕ್ತದ ಮಡುವಿನಲ್ಲಿ ಕೊರಂಗು ಬಿದ್ದ ಪರಿಗೆ ಸತ್ತೋದನೆಂದು ಮರಳುತ್ತಾರೆ. ಆದರೆ ಗಟ್ಟಿ ಪಿಂಡದವನು ಸತ್ತ ಸ್ಥಿತಿಯಲ್ಲಿ ಬಿದ್ದಿದ್ದ ಕೊರಂಗು ಕೃಷ್ಣ ಹೆಬ್ಬೆಟ್ಟು ಮಂಜ ಆತನ ಸಹಚರರು ಪರಾರಿಯಾದ ಮೇಲೆ ಬದುಕಿಸಿ ಕಾಪಾಡಿ ಎಂದು ಬೊಬ್ಬಿಕ್ಕುತ್ತಾನೆ ಅಷ್ಟರಲ್ಲಿ ಬೀಸೊ ದೊಣ್ಣೆಯಿಂದ ಪಾರಾದ್ರೆ ನೂರು ವರ್ಷ ಆಯಸ್ಸು ಎಂದು ಕೊಂಡು ಊರು ಪಾರಗಿದ್ದ ಜೈಲು ಪೋಲಿಸರು ಓಡಿ ಬರುತ್ತಾರೆ.
ಅಲ್ಲಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದ ಹಿರಿಯೂರು ಡಾಬಾದ ಛೇರುಗಳು ಅಲ್ಲೆ ಒದ್ದಾಡುತ್ತಿದ್ದ ಕೊರಂಗು ಕೃಷ್ಣ ಆತನ ಸಹಚರನೊರ್ವನನ್ನು ಆಸ್ಪತ್ರೆಗೆ ಅದೇ ಪೊಲೀಸ್ ವಾಹನದಲ್ಲಿ ಸಾಗಿಸುತ್ತಾರೆ, ಅದಾಗಲೇ ಕೊರಂಗು ಸತ್ತಿಲ್ಲ ಬದುಕಿದ್ದಾನೆಂದು ಸುದ್ದಿ ತಿಳಿದ ಹೆಬ್ಬೆಟ್ಟು ಮಂಜ ಕೊರಂಗು ದಾಖಲಾಗಿದ್ದ. ಆಸ್ಪತ್ರೆಗೆ ತನ್ನ ಸಹಚರರೊಂದಿಗೆ ನುಗ್ಗಿ ಮತ್ತೆ ವಿಫಲ ಯತ್ನ ನಡೆಸುತ್ತಾನೆ ಅಷ್ಟರಲ್ಲಿ ಪೊಲೀಸರ ಎಂಟ್ರಿಯಿಂದ ಕೊರಂಗುವಿನ ಮೇಲಿನ ಮತ್ತೊಂದು ಹಲ್ಲೆ ತಪ್ಪಿದಂತಾಗುತ್ತದೆ. ಅಲ್ಲಿಂದ ತಲೆಮರೆಸಿಕೊಂಡ ಹೆಬ್ಬೆಟ್ಟು ಮಂಜನನ್ನು ಕೆಲ ದಿನಗಳ ನಂತರ ಬಂಧಿಸುತ್ತಾರೆ ಈ ತರುವಾಯ ಆತ ಜೈಲು ಸೇರಿಕೊಳ್ಳುತ್ತಾನೆ,
ಮುಂದಿನ ಸಂಚಿಕೆಗೆ ಕಾದು ಓದಿ…