Saturday, 19 September 2026 Suryagagana — Edition

Suryagagana

My WordPress Blog

ಸೂರ್ಯಗಗನ I ಹಸಿರು, ಸ್ವಚ್ಚ ಮತ್ತು ಸುಂದರ ನಗರ ನಿರ್ಮಾಣಕ್ಕೆ ಸಂಕಲ್ಪ I ಸ್ಬೂಡಾ ಅಧ್ಯಕ್ಷ ಹೆಚ್.ಎಸ್.‌ಸುಂದರೇಶ್ I ಸೂರ್ಯಗಗನ I ಕಾರ್ಮಿಕರ ವಸತಿ ನಿಲಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲು I ರಾಜ್ಯ ಅಸಂಘಟಿತ ಕಾರ್ಮಿಕ ಸಂಘ ಒತ್ತಾಯ I ಸೂರ್ಯಗಗನ I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I ಸೂರ್ಯಗಗನ I ಹಸಿರು, ಸ್ವಚ್ಚ ಮತ್ತು ಸುಂದರ ನಗರ ನಿರ್ಮಾಣಕ್ಕೆ ಸಂಕಲ್ಪ I ಸ್ಬೂಡಾ ಅಧ್ಯಕ್ಷ ಹೆಚ್.ಎಸ್.‌ಸುಂದರೇಶ್ I ಸೂರ್ಯಗಗನ I ಕಾರ್ಮಿಕರ ವಸತಿ ನಿಲಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲು I ರಾಜ್ಯ ಅಸಂಘಟಿತ ಕಾರ್ಮಿಕ ಸಂಘ ಒತ್ತಾಯ I ಸೂರ್ಯಗಗನ I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I
ಸೂರ್ಯಗಗನ

I ಕಡ್ಡಾಯ ಕನ್ನಡ ನಾಮಫಲಕ ಬಳಕೆಗೆ I ಕರವೇ ಸ್ವಾಭಿಮಾನಿ ಬಣ ಒತ್ತಾಯ I

I ಕಡ್ಡಾಯ ಕನ್ನಡ ನಾಮಫಲಕ ಬಳಕೆಗೆ I ಕರವೇ ಸ್ವಾಭಿಮಾನಿ ಬಣ ಒತ್ತಾಯ I ಶಿವಮೊಗ್ಗ : ವಾಣಿಜ್ಯ ಮಳಿಗೆಯ ನಾಮಫಲಕ ಹಾಗೂ ಜಾಹಿರಾತು ಫಲಕ ಶಾಲೆ ಮತ್ತು ಶಾಲಾ ವಾಹನಗಳಲ್ಲಿನ ನಾಮಫಲಕ ಆಹಾರ ಸರಬರಾಜುಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸುವಂತೆ ಒತ್ತಾಯಿಸಿ…

I ಕಡ್ಡಾಯ ಕನ್ನಡ ನಾಮಫಲಕ ಬಳಕೆಗೆ I ಕರವೇ ಸ್ವಾಭಿಮಾನಿ ಬಣ ಒತ್ತಾಯ I

ಶಿವಮೊಗ್ಗ : ವಾಣಿಜ್ಯ ಮಳಿಗೆಯ ನಾಮಫಲಕ ಹಾಗೂ ಜಾಹಿರಾತು ಫಲಕ ಶಾಲೆ ಮತ್ತು ಶಾಲಾ ವಾಹನಗಳಲ್ಲಿನ ನಾಮಫಲಕ ಆಹಾರ ಸರಬರಾಜುಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸುವಂತೆ ಒತ್ತಾಯಿಸಿ ಇಂದು ಕರವೇ ಸ್ವಾಭಿಮಾನಿ ಬಣ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

ಈ ಸಂದರ್ಭದಲ್ಲಿ ಮಾತಾನಾಡಿದ ಜಿಲ್ಲಾಧ್ಯಕ್ಷರಾದ ಕರವೇ ಕಿರಣ್‌ರವರು, ಕನ್ನಡ ನಾಡು ಭಾಷೆ ಎಂದು ಭಾಷಣದಲ್ಲಿ ಮಾತ್ರ ಬೊಗಳೆ ಬಿಡುವ ರಾಜಕಾರಣಿಗಳು ಮತ್ತು ಅದಕ್ಕೆ ತಕ್ಕಂತೆ ವರ್ತಿಸುವ ಅಧಿಕಾರಿಗಳು ಎಲ್ಲಿಯೂ ಕನ್ನಡವನ್ನು ಬಳಸುವಂತೆ ಒತ್ತಾಯ ಪಡಿಸುವುದಾಗಲಿ, ಕಾನೂನನ್ನು ಪಾಲಿಸುವುದಾಗಲಿ ಯಾವುದನ್ನು ಮಾಡದೆ ಕನ್ನಡ ಉಳಿವಿಗಾಗಿ ಪತ್ರಗಳಲ್ಲಿ ಸುತ್ತೋಲೆಗಳಲ್ಲಿ ಮಾತ್ರ ಕಾಣುವುದು ವಿಪರ್ಯಾಸದ ಸಂಗತಿಯಾಗಿದೆ ಕನ್ನಡ ಉಳಿವಿಗಾಗಿ ಹೋರಾಟ ಮಾಡುವ ನಾಯಕರ ಮಕ್ಕಳೇ ಆಂಗ್ಲ ಶಾಲೆಗೆ ಸೇರಿಸುವುದು ತಮ್ಮ ವ್ಯವಹಾರಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಆಸ್ಪತ್ರೆಗಳಲ್ಲಿ ತಾವುಗಳೇ ಕನ್ನಡ ಬಳಕೆಯನ್ನು ಮಾಡದೆ ಕನ್ನಡ ನಾಡಿಗೆ ಕನ್ನಡದ ಜನತೆಗೆ ದ್ರೋಹ ಎಸಗುತ್ತಿದ್ದಾರೆ ಎಂದು ಅವರು ಕಿಡಿ ಕಾರಿದ್ದಾರೆ,

ಕರ್ನಾಟಕ ಸರ್ಕಾರ ಈಗಾಗಲೇ ಕನ್ನಡ ಉಳಿವಿಗಾಗಿ ಹಲವಾರು ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಹೇಳಿದೆ ಅವುಗಳೆಲ್ಲವೂ ಕಾಗದಗಳಲ್ಲೇ ಉಳಿದುಹೋಗಿದೆ ಕಾನೂನಿನ ಪ್ರಕಾರ ಯಾವುದೇ ಅಂಗಡಿ ಮುಂಗಟ್ಟುಗಳ ಮುಂದೆ ಶೇಕಡ ೬೦ರಷ್ಟು ಕನ್ನಡ ಭಾಷೆ ಹಾಗೂ ಶೇಕಡ ೪೦ರಷ್ಟು ಅನ್ಯ ಭಾಷೆ ಬಳಸುವಂತೆ ಆದೇಶವಿದ್ದರೂ ಸಹ ಇದನ್ನು ಅನುಷ್ಠಾನ ತರಲು ಯಾವುದೇ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಇರುವುದು ಅವರ ಭಾಷಾ ಪ್ರೀತಿ ಏನೆಂದು ಇಲ್ಲಿಯ ಗೊತ್ತಾಗುತ್ತದೆ ಎಂದು ಅವರು ತಿಳಿಸಿದ್ದಾರೆ,

ಸಾಮಾನ್ಯವಾಗಿ ನಗರಗಳಲ್ಲಿ ಎಲ್ಲಿ ನೋಡಿದರೂ ಯಾವ ಜಾಹಿರಾತು ಫಲಕಗಳಲ್ಲಿಯೂ ಅಂಗಡಿ ಮುಂಗಟ್ಟುಗಳ ಮುಂದೆ ಪ್ರದರ್ಶನ ಮಾಡಿದ ನಾಮ ಪಲಕಗಳಲ್ಲಿ ಹಾಗೆಯೇ ಶಾಲೆಗೆ ಓಡಾಡುವ ವಾಹನಗಳಲ್ಲಾಗಲಿ, ಆಹಾರ ಪೂರೈಕೆಯ ಕಂಪನಿಗಳ ಹೆಸರು, ಸಮವಸ್ತ್ರ ಗಳಲ್ಲಾಗಲಿ ಕನ್ನಡ ಇಲ್ಲದೆ ಇಂಗ್ಲಿಷ್ ಭಾಷೆ ರಾರಾಜಿಸುತ್ತಿರುವುದು ಖಂಡನೀಯ ಇವೆಲ್ಲವನ್ನೂ ಅಧಿಕಾರಿಗಳು ಗೊತ್ತಿದ್ದರೂ ಕಂಡರೂ ಕಾಣದ ಹಾಗೆ ವರ್ತನೆ ಮಾಡುತ್ತಿರುವುದು ಕನ್ನಡ ನಾಡು ನುಡಿ ಭಾಷೆಗೆ ಮಾಡುವ ದ್ರೋಹವಾಗಿರುತ್ತದೆ ಹಾಗಾಗಿ ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಜಾಹಿರಾತು ಫಲಕದಲ್ಲಿ ಪ್ರತಿಷ್ಠಿತ ಶಾಲೆಗಳ ಗೋಡೆ ಬರಹದಲ್ಲಾಗಲಿ ಶಾಲೆಗೆ ಓಡಾಡುವ ವಾಹನಗಳ ಫಲಕದಲ್ಲಾಗಲಿ, ಮನೆಮನೆಗೆ ಆಹಾರ ಪೂರೈಕೆ ಮಾಡುವ ಕಂಪನಿ ಗಳಲ್ಲಾಗಲಿ ಈ ಕೂಡಲೇ ಕನ್ನಡ ಬಳಕೆಯನ್ನು ಬಳಸುವಂತೆ ಕ್ರಮ ಕೈಗೊಳ್ಳಬೇಕೆಂದು ಸಂಘಟನೆ ಒತ್ತಾಯಿಸುತ್ತದೆ ಒಂದು ಪಕ್ಷದಲ್ಲಿ ಈ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳದೆ ಇದ್ದಲ್ಲಿ ಸಂಘಟನೆಯು ಕಟ್ಟಾಳುಗಳ ಮುಂದಾಳತ್ವದಲ್ಲಿ ಕನ್ನಡ ಬಳಸದ ಜಾಹೀರಾತು ಬಳಕೆಗಳಿಗೆ ಮಸಿ ಬಳೆಯುವುದು ಹಾಗೂ ಕನ್ನಡ ಬಳಸದೆ ಓಡಾಡುವ ಶಾಲಾ ವಾಹನಗಳ ವಾಹನಗಳ ಅಡ್ಡ ಹಾಕುವುದು ಅಂತಹ ಶಾಲೆಯ ವಿರುದ್ಧ ಮುತ್ತಿಗೆ ಹಾಕಲಾಗುವುದು ಎಂದು ಸಂಘಟನೆ ಎಚ್ಚರಿಸುತ್ತದೆ ಎಂದು ಅವರು ಬಹಿರಂಗವಾಗಿ ವಿವರಿಸಿದ್ದಾರೆ.

ಈ ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷರಾದ ಕರವೇ ಕಿರಣ್ ಕುಮಾರ್ ಎಚ್.ಎಸ್, ಜಿಲ್ಲಾ ಖಜಾಂಚಿ ಗಣೇಶ್ ಜಿಲ್ಲಾ ಉಪಾಧ್ಯಕ್ಷರಾದ ವಿಜಯಕುಮಾರ್ ಜಿಲ್ಲಾ ಕಾರ್ಯದರ್ಶಿ ರಾಮು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಾಧಿಕ್ ನಗರಾಧ್ಯಕ್ಷ ಜೀವನ್ ಯುವ ಅಧ್ಯಕ್ಷ ಸಂತೋಷ್, ಮಹಿಳಾ ಘಟಕದ ಅಧ್ಯಕ್ಷ ಕವಿತಾ ಉಪಾಧ್ಯಕ್ಷರಾದ ಪದ್ಮ ಮಾಲತಿ, ಪ್ರಧಾನ ಕಾರ್ಯದರ್ಶಿ ಆರ್ಥಿಕ ತಿವಾರಿ ಸಂಘಟನಾ ಕಾರ್ಯದರ್ಶಿ ಜ್ಯೋತಿ ನಾಗರಾಜ್ ಪ್ರದೀಪ್ ನೂರೂಲ್ಲಾಖಾನ್ ಪ್ರಚಾರ ಸಮಿತಿ ಅಧ್ಯಕ್ಷರಾದ ಮಾಲತೇಶ್ ಮುಂತಾದ ಪದಾಧಿಕಾರಿಗಳು ಕಾರ್ಯಕರ್ತರು ಹಾಜರಿದ್ದರು

Gara Srinivas

Gara Srinivas

Leave a comment

error: Content is protected !!