Sunday, August 2, 2026
HomeಸಿನಿಮಾI ಸ್ಯಾಂಡಲ್‌ವುಡ್ ಚರಿತ್ರೆಯಲ್ಲಿ ಹೊಸತೊಂದು ಇತಿಹಾಸ ಬರೆಯಲಿದೆ I ದರ್ಶನ್ ಅಭಿನಯದ 'ಡೆವಿಲ್' ಚಿತ್ರ I

I ಸ್ಯಾಂಡಲ್‌ವುಡ್ ಚರಿತ್ರೆಯಲ್ಲಿ ಹೊಸತೊಂದು ಇತಿಹಾಸ ಬರೆಯಲಿದೆ I ದರ್ಶನ್ ಅಭಿನಯದ ‘ಡೆವಿಲ್’ ಚಿತ್ರ I

I ಸ್ಯಾಂಡಲ್‌ವುಡ್ ಚರಿತ್ರೆಯಲ್ಲಿ ಹೊಸತೊಂದು ಇತಿಹಾಸ ಬರೆಯಲಿದೆ I ದರ್ಶನ್ ಅಭಿನಯದ ‘ಡೆವಿಲ್’ ಚಿತ್ರ I

ಈ ಹೊತ್ತಿನ ಚೆಂದನವನದ ಕುರಿತಾಗಿ ಹೇಳುವ ಜರೂರಿ, ಕಲಾವಿದರ ಶ್ರಮ, ನಿರ್ಮಾಪಕರ ಹಣ, ನಿರ್ದೇಶಕರ ಆಲೋಚನೆ, ಚಿತ್ರ ತಂತ್ರಜ್ಞರ ಹೊಸ ಕಲ್ಪನೆಗಳು ಇಂತಿವುಗಳು ಸೇರಿದರೆ ಒಂದು ಚಿತ್ರ ನಿರ್ಮಾಣದ ಹಿಂದೆ ಸರಿ ಸುಮಾರು ಮುನ್ನೂರು ಬದುಕುಗಳು ಇರುತ್ತದೆ, ಇದರಲ್ಲಿ ಒಂದಷ್ಟು ತೆರೆಯಲ್ಲಿ ದರ್ಶಿಸಿಕೊಂಡರೆ ಇನ್ನೊಂದಿಷ್ಟು ತೆರೆಯ ಹಿಂದೆ ಇರುತ್ತದೆ, ಇಂತಹದೊಂದು ಸಂದಿಗ್ದತೆಯನ್ನು ಅರಿತುಕೊಂಡೆ ನಟ ದರ್ಶನ್‌ಗೆ ದುಡ್ಡು ಮಾಡುವ ಅವಸರಗಳಿಗಿಂತ ಕನ್ನಡದ ನೆಲದ ಚಿತ್ರಗಳಿಗೆ, ಬದುಕುಗಳಿಗೆ, ಸೊರಗುತ್ತಿರುವ ಚಿತ್ರಮಂದಿರಗಳಿಗೆ ಆಸರೆಯಾಗಿ ನಿಲ್ಲಬೇಕಾದ ಜವಾಬ್ದಾರಿಗಳಿದೆ, ಹೀಗಾಗಿ ಪರಭಾಷೆಗಳಿಗೆ ಗೌರವಿಸುವೆ, ಆದರೆ ನಾನು ಕನ್ನಡದ ಚಿತ್ರಗಳಿಗಷ್ಟೆ ಮಾನ್ಯತೆ ನೀಡುವೆ ಎನ್ನುವ ಅವರ ಚಿತ್ರ ಕಾಳಜಿಗಳು ಎಷ್ಟರಮಟ್ಟಿಗೆ ಮೈಗೂಡಿಸಿಕೊಂಡಿತ್ತು ಎನ್ನುವುದು ಗೊತ್ತು ಮಾಡಿಕೊಳ್ಳಬಹುದಾಗಿದೆ.

ಇಂತಹ ಕನ್ನಡ ಅಗ್ರಮುಖಿ ಕಲಾವಿದ ದರ್ಶನ್ ಮೇಲೆ ಮುಗಿಬಿದ್ದದ್ದು ತಮ್ಮದೇ ಚಿತ್ರಬಳಗದ ಕೆಲವರು ಎನ್ನುವುದು ಎಂದಾಗ ಎಂತಹವರಿಗೂ ಇದು ದುರಂತ ಎನ್ನಬಹುದು, ಈ ದಿಸೆಯ ಸ್ಯಾಂಡಲ್‌ವುಡ್‌ನ ವೈಪರಿತ್ಯ ಮನಸುಗಳಿಂದಾಗಿ ಇಂದು ಒಡೆದ ಮನೆಯಂತಾಗಿದೆ, ‘ಒಂದು ಘಟನೆ ಘಟಿಸಬಾರದಿತ್ತು’ ಆದರೆ ಆ ಘಟನೆಯಲ್ಲಿ ದರ್ಶನ್‌ನನ್ನು ಸಿಲುಕಿ ಹಾಕಿಸುವ ಮಹಾ ಷಡ್ಯಂತ್ರಗಳು ಇಂದಿಗೂ ಸಾರ್ವಜನಿಕ ವಲಯದಲ್ಲಿ ಚರ್ಚಿತವಾಗುತ್ತಿದೆ, ಈ ನಡುವೆ ದರ್ಶನ್ ಅಭಿಮಾನಿಗಳು ಫ್ಯಾನ್ ಪಾಲ್ಹೋಹರ್‍ಸ್ ಕೋಟಿ, ಕೋಟಿ ಸಂಖ್ಯೆಯಲಿ ನೀರ ಕೋಡಿ ಹರಿದಂತೆ ಹರಿಯುತ್ತಿದೆ, ಏನೇ ಆಗಲಿ ‘ಮೇಲೊಬ್ಬ ಮಾಯಾವಿ’ ಇದ್ದಾನೆ ನ್ಯಾಯ ಸಿಕ್ಕೆ ಸಿಗುತ್ತದೆ, ದರ್ಶನ್ ಮೇಲಿನ ವ್ಯವಸ್ಥಿತ ದಾಳಿಗೆ ಕನ್ನಡದ ನೆಲ ಮುಂದೊಮ್ಮೆ ಉತ್ತರಿಸಿಯೇ ಉತ್ತರಿಸುತ್ತದೆ ಇದರಲ್ಲಿ ಯಾವುದೇ ಅನುಮಾನಿತವಿಲ್ಲವಾಗಿದೆ,

ಇನ್ನೂ ದರ್ಶನ್ ಮೇಲೆ ರಾಜ್ಯ ಸರ್ಕಾರವೇ ತಿರುಗಿ ಬಿದ್ದಿದೆ, ಅವರು ಜಾಮೀನು ಕ್ಯಾನ್ಸಲ್ ಆಗಿ ಜೈಲಿನಲ್ಲಿದ್ದಾರೆ, ಈ ಸಂದರ್ಭದಲ್ಲಿ ಅವರೇ ನಟಿಸಿರುವ ಚಿತ್ರ ‘ಡೆವಿಲ್’ ಜ್ವರ ರಾಜ್ಯದಲ್ಲಿ ಬುಗಿಲೆದ್ದಿದೆ, ಅಭಿಮಾನಿಗಳು ಡಿಸೆಂಬರ್-೧೧ರಂದು ಹಬ್ಬದ ವಾತಾವರಣಕ್ಕೆ ಅಣಿಯಾಗುತ್ತಿದ್ದಾರೆ, ಅಚ್ಚರಿ ಎಂದರೆ ಡೆವಿಲ್ ಸಿನಿಮಾ ಪ್ರಮೋಷನ್‌ಗೆ ಸ್ವತಃ ಖುದ್ದು ರಾಜಕಾರಣಿಗಳೇ ಮುಂದಾಗಿರುವುದು ಇತಿಹಾಸದಲ್ಲಿಯೇ ಮೊದಲು ಎನ್ನಬಹುದು,

ಪೋಸ್ಟರ್, ಅಚ್ಚೆಗಳು, ಡೈಲಾಗ್ ಲೈನ್ಸ್‌ಗಳು ಲಕ್ಷೆಪಲಕ್ಷದ ಲೆಕ್ಕದಲ್ಲಿ ಕಾಣಿಸಿಕೊಳ್ಳಲು ಶುರುವಾಗಿದೆ, ಅಸಲಿಗೆ ಡೆವಿಲ್ ಚಿತ್ರದ ಹಾಡು ಬಿಡುಗಡೆಯಾದ  ‘ಒಂದೇ ಒಂದು ಸಲ ಸೋತು ಬಿಡೇ’ ವೈರಲ್ ಆದರೆ ಮತ್ತೊಂದು ಹಾಡು ಮೋಟಿವೇಷನಲ್ ನಿಂದ ಕೂಡಿದ್ದು ಯುವಕರನ್ನು ಬಡಿದೆಬ್ಬಿಸುವಂತೆ ಮಾಡಿದೆ, ಈ ಹಾಡಿನ ತುಣುಕಷ್ಟೆ ಕೇಳಿದ್ದರು ಬೆಳ್ಳಿಪರದೆನಲ್ಲಿಯೇ ನಾವು ನೋಡಬಹುದಾಗಿದೆ,

ಹೀಗೆ ಒಂದೊಂದೇ ಹಂತದ ಚಿತ್ರ ಸಿಕ್ರೇಟ್‌ಗಳು ಬಾಕ್ಸ್‌ನಿಂದ ಓಪನ್ ಆಗುತ್ತಿದೆ, ಹೀಗೆ ಬಹಿರಂಗವಾದ ಎಲ್ಲಾ ಸಿಕ್ರೇಟ್‌ಗಳು ಕೋಟಿ ಲೆಕ್ಕದಲ್ಲಿಯೇ ರಿವ್ಹೀವ್ಸ್‌ಗಳು ಸಾಮಾಜಿಕ ಜಾಲತಾಣ ಓದಿಕೊಳ್ಳುತ್ತಿದೆ, ಅಜನೀಶ್ ಲೋಕನಾಥ್‌ರವರಿಂದ ಕಂಪೋಸ್ ಆಗಿರುವ ಐದು ಸಾಂಗ್‌ಗಳಲ್ಲಿ ವಿಭಿನ್ನತೆಗಳಿವೆ ಸಿನಿಲೋಕ ಕ್ರಾಂತಿ ಲೆವೆಲ್‌ನಲ್ಲಿ ಆಸ್ವಾದಿಸಿಕೊಳ್ಳುತ್ತದೆ ಎನ್ನುತ್ತಿರುವ ನೀರಿಕ್ಷೆಗಳು ಇಂದಿನ ಬೆಳವಣಿಗೆಗಳೇ ಸಾಕ್ಷೀಕರಿಸಿಕೊಂಡಿವೆ. ದರ್ಶನ್, ರಚನಾ ರೈ, ಮಹೇಶ್ ಮಂಜ್ರೇಕರ್, ಅಚ್ಯುತ್ ಕುಮಾರ್,ಶರ್ಮಿಳಾ ಮಾಂಡ್ರೆ ಮುಖ್ಯ ತಾರಬಳಗದಲ್ಲಿದ್ದು ಚಿತ್ರದ ಸನ್ನಿವೇಶಗಳು ಧೂಳೆಬ್ಬಿಸುತ್ತದೆ.

‘ಡೆವಿಲ್’ ಚಿತ್ರದ ಬಿಡುಗಡೆ ಹಾಗೂ ಅಭಿಮಾನಿಗಳ ಮಹಾಪೂರಕ್ಕೆ ಬೆದರಿದ ಬೇರೆ ಸ್ಟಾರ್ ಸಿನಿಮಾಗಳ ಬಿಡುಗಡೆ ಮುಂದೂಡಿಕೆಯಾಗಿದೆ, ಇಂತಹ ಅಲೆಗಳಿಗೆ ಸ್ಯಾಟಲೈಟ್ ಸುದ್ದಿ ಚಾನೆಲ್‌ಗಳು ಕೂಡ ಸದ್ದಿಲ್ಲದೆ ಮೌನವಹಿಸಿದೆ, ನಟ ದರ್ಶನ್ ಜೈಲಿನಲ್ಲಿದ್ದುಕೊಂಡೆ ಚಿತ್ರದ ಯಶಸ್ವಿಗೆ ಶುಭ ಕೋರಿದ್ದಾರೆ, ಅಲ್ಲದೆ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ I ಗುಡ್ಡ ಕುಸಿದು ಮೂವರ ಧಾರುಣ ದುರ್ಮರಣ I I ಗಾರಾ ಎನ್ನುವ ಜೀವಭಾವ I I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I