ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಸಿನಿಮಾ ಬೇಸ್ ವಾಯ್ಸ್ I ನಿರ್ಮಾಪಕ ಕೆ.ಮಂಜು I
ಸ್ಯಾಂಡಲ್‌ವುಡ್ ಎನ್ನುವ ಸಾಂಸ್ಕೃತಿಕ ಸೊಬಗನ್ನು ಒಂದಷ್ಟು ಮಾನಸೀಕತೆಗಳು ಹಾಳುಗೆಡುತ್ತಿವೆ, ಏಕಪಕ್ಷೀಯ ಧೋರಣೆಗಳು, ಸ್ವಜನತೆಯ ತುಷ್ಟೀಕರಣಗಳು ಬಕೆಟ್ ಮನಸ್ಥಿತಿಗಳು, ಆಗಾಗ್ಗೆ ಉಗಮವಾಗುತ್ತಿರುವ ವಿವಾದಿತ ಸಂಗತಿಗಳು, ಸಿನಿಮಾ ರೀವಿವ್ಸ್‌ಗಳು, ಸ್ಟಾರ್ ನಟರುಗಳ ಅಮ್ಮು-ಬಿಮ್ಮುಗಳು, ವಿವೇಕ ಕಳೆದುಕೊಂಡ ಹೇಳಿಕೆಗಳು, ಪುಕ್ಕಟೆ ಪ್ರಚಾರಗಿಟ್ಟಿಸಿಕೊಳ್ಳುವ ತರಾವರಿ ಕ್ಯಾಬರೆಗಳು ಇನ್ನೂ ಮುಂತಾದ ಸ್ಥಿತಿಗಳು ಇಂದು ಹೆಗ್ಗಿಲ್ಲದಂತೆ ರಾಚಿಕೊಳ್ಳುತ್ತಿದೆ, ಕರ್ನಾಟಕ ವಾಣಿಜ್ಯ ಚಲನಚಿತ್ರ ಮಂಡಳಿ, ಕಲಾವಿದರ ಸಂಘಟನೆಗಳು ಈ ಕುರಿತಂತೆ ಚಿತ್ತವರಿಸಬೇಕಾದ ಜರೂರಿ ಕಹಾನಿಗಳು ಸಿನಿಮಾ ನಗರಿಯಲ್ಲಿದೆ,
ಏಕೆಂದರೆ ವಯೋಸಹಜ ವರ್ತನೆ, ಅತೀ ನೋವಿಗೆ ಒಳಗಾಗಿ ತಮ್ಮ ನಿರ್ಮಣದ ‘ ಕಾಟನ್ ಪೇಟೆ ‘ ಬಿಡುಗಡೆಯ ಮುನ್ನದ ದಿನಮಾನಗಳಲ್ಲಿ ಪ್ರಚಾರಗಿಟ್ಟಿಸುವಿಕೆಯ ಕಯ್ಯಾಲಿಯಲ್ಲಿಯೇ ಉದ್ದೇಶಪೂರಕವಾಗಿ ನಟ-ನಿರ್ದೇಶಕರುಗಳ ಕುರಿತಾಗಿ ಅತ್ಯಂತ ಅವಹೇಳನಕಾರಿಯಾಗಿ, ಆಶ್ಲೀಲ ಪದ ಪ್ರಯೋಗದಿಂದ ಬಹಿರಂಗವಾಗಿಯೇ ನಿಂದಿಸಿ ನಂತರದ ಹೊತ್ತಿಗೆ ಕ್ಷಮಿಸಿ ಎಂದ ನಿರ್ಮಾಪಕ ಕನಕಪುರ ಶ್ರೀನಿವಾಸ್ ಕತೆಯಲ್ಲ ವ್ಯಥೆಯಂತೆಯೇ, ಚಕ್ರವರ್ತಿ ಚಂದ್ರಚೂಡ್ ಪ್ರಕರಣವೂ ಅತಿ ಕೆಳಮಟ್ಟದಲ್ಲಿ ಬಿಂಬಿಸಿ ನಂತರದ ಹೊತ್ತಿಗೆ ಕ್ಷಮೆಯಾಚನೆ ಮಾಡಿರುವುದು ಹೇಯಕರವಾಗಿದೆ.
ವಿವೇಕ ಕಳೆದುಕೊಂಡು ವರ್ತನೆಗಿಳಿದವರ ವಿರುದ್ದ ದಾಳಿ ಮಾಡುವುದಲ್ಲ. ಮತ್ತದೆ ಹೇಳಿಕೆಯನ್ನು ವೈಭವಿಕರಿಸುವ ಇರಾದೆಯಿಂದಲ್ಲ, ಈ ರೀತಿಯ ದುರ್ವರ್ತನೆಗಳು ಕನ್ನಡದ ಸಾಂಸ್ಕೃತಿಕ ಲೋಕಕ್ಕೆ ಕರಾಳ ಕಾಲಗಳು ಎಂದೇ ಮನನ ಮಾಡಿಕೊಳ್ಳಬೇಕಿದೆ, ಕಾಸಿಗೊಂದು ಮಾತು ಎನ್ನುವ ವರಾತಗಳಲ್ಲಿ ಚಕ್ರವರ್ತಿ ಚಂದ್ರಚೂಡ್‌ಗೆ ಅದ್ಯಾಕೆ ಯಶಸ್ವಿ ಕಾರ್ಯನಿರತ ನಿರ್ಮಾಪಕ ಕೆ.ಮಂಜು ಮೇಲೆ ಒಮ್ಮೆಲೆ ಹರಿ ಹಾಯ್ದರು..? ಅವರಾಕೆ ಈತನ ಮೇಲೆ ಐದು ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದ್ದರು, ಇದಲ್ಲದೆ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟು ಸೆಕ್ಷನ್ ೩೫೧ ಹಾಗೂ ೩೫೨ ರ ಭಾರತೀಯ ನಾಗರೀಕ ಸಂಹಿತೆಯಂತೆ ಪ್ರಥಮ ವರ್ತಮಾನ ವರದಿ ದಾಖಲಿಸಿ ವಿವೇಚನರಹಿತ ವಿವಾದಿತ ಹೇಳಿಕೆಗೆ ಕೆ.ಮಂಜುರವರು ಯಾಕೆ ಬಳುವಳಿ ಕೊಟ್ಟರು..! ಹೇಳುವಾಗ ಚಂದ್ರಚೂಡ್‌ಗೆ ವಿವೇಕ ಇರಲಿಲ್ಲವೇ..?!
ಬಹಳಷ್ಟು ಇಂತಿವರ ಹೇಳಿಕೆಗಳು, ವರ್ತನೆಗಳು, ವಿವಾದಿತ ಪ್ರಕರಣದ ಸಂಬಂಧಿಸಿದಂತೆಯೇ ಇರುತ್ತದೆ, ಕನ್ನಡ ಚಿತ್ರರಂಗದ ನಿರ್ಮಾಪಕರ ವಿರುದ್ದ ಮಾಡಿರುವ ಆರೋಪ ನಿಜಕ್ಕೂ ಕನ್ನಡ ಸಾಂಸ್ಕೃತಿಕ ಲೋಕ ತಲೆತಗ್ಗಿಸಿ ನಿಲ್ಲುವಂತಹದ್ದಾಗಿದೆ, ಅಲ್ಲದೆ ಜಗತ್ತಿಗೆ ಸೋಷಿಯಲ್ ಮೀಡಿಯಾ ಮುಖೇನ ಕನ್ನಡದ ಚಿತ್ರರಂಗದ ಮಾನ ಹರಾಜು ಹಾಕಿರುವುದು ಈ ಪ್ರಕರಣಗಳೇ ಸಾಕ್ಷೀಕರಿಸುತ್ತದೆ, ಚಕ್ರವರ್ತಿ ಚಂದ್ರಚೂಡ್ ಹೇಳಿರುವಂತೆ ಯಾವ ನಿರ್ಮಾಪಕ ಅಥವಾ ನಿರ್ಮಾಪಕರೋ ‘ಕಾಂಡೋಮ್ ‘ ತೆಗೆದುಕೊಂಡು ಯಾವ ನಟರುಗಳ ಮನೆಗೆ ಸರಬರಾಜು ಮಾಡುತ್ತಾರೆ ಎನ್ನುವುದು ಸಾಬೀತುಪಡಿಸಬೇಕಲ್ಲವೇ.. ಇಂತಹದೊಂದು ವಿಕೃತ, ವಿಕಲ್ಪಿತ ಮಾನಸೀಕ ಅಸ್ವಸ್ಥತೆಯ ಹೇಳಿಕೆ, ಡಿಬೇಟ್ ಮಾದರಿ ಬಹಿರಂಗ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿ ಕನ್ನಡ ಸಾಂಸ್ಕೃತಿಕ ಲೋಕದ ಮೌಲ್ಯವನ್ನು ಕೊಲೆಗೈದು, ಕೇಸು ದಾಖಲಿಸಿಕೊಂಡ ಮೇಲಷ್ಟೆ ಕ್ಷಮೆಯಾಚನೆ ಎನ್ನುವುದಾದರೆ ಇದು ಸಮಂಜಸವೇ..?!
ಈ ನಿಟ್ಟಿನಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕರಾದ ಕೆ.ಮಂಜುರವರ ತೆಗೆದುಕೊಂಡ ಕಾನೂನು ಕ್ರಮಗಳು ಸರಿಯಾಗಿಯೇ ಇದೆ, ಅಸಲಿಗೆ ಕೆ.ಮಂಜುರವರ ವಹಿವಾಟು, ಝೀರೋ ಲೆವೆಲ್‌ನಿಂದ ಈ ಮಟ್ಟಿಗೆ ಬಂದು ಅನೇಕ ಯಶಸ್ವಿ ಚಿತ್ರಗಳನ್ನು ಕನ್ನಡನಾಡಿಗೆ ನೀಡಿದ್ದಲ್ಲದೆ, ಒಂದು ಸಿನಿಮಾ ಸುಮಾರು ಮುನ್ನೂರು ಕಲಾ ಕುಟುಂಬಗಳಿಗೆ ಅನ್ನದಾತರಾಗಿ ಯಶಸ್ವಿಯ ಪತಾಕೆ ಹಾರಿಸಿರುವ ಕೆ.ಮಂಜುರವರು ಕೊಬ್ಬರಿ ಮಾರುತ್ತಿದ್ದರು, ಇದನ್ನು ಮಾರುವುದಕ್ಕೆ ಬೆಂಗಳೂರಿಗೆ ಬರುತ್ತಿದ್ದರು ಹೀಗೆ ಬಾಯಿಗೆ ಬಂದಂತೆಲ್ಲಾ ಹರಟಿ, ಆ ವೀಡಿಯೋ ತುಣುಕುಗಳನ್ನು ಡಿಲೀಟ್ ಮಾಡಿ ಸರ್ ಕ್ಷಮೆ ಇರಲಿ ಎಂದರೆ ಇದ್ಯಾವ ಸೀಮೆಯ ಬಕೆಟ್ ಮಾನಸೀಕತೆಯೋ..? ಇಂತಹದೊಂದು ಹೇಳಿಕೆ ಅದ್ಯಾರಿಗೆ ಮನಸಿಗೆ ಮುದ ನೀಡುತ್ತದೆ, ಇದಕ್ಕಾಗಿಯೇ ಈ ಆಸಾಮಿ ಇಂತಹದೊಂದು ವಿವಾದಿತ ಹೇಳಿಕೆ ಸಮಾಜದ ನಟ್ಟ ನಡುವೆ ತೂರಿ ಬಿಟ್ಟನೇ. ಎನ್ನುವ ತರ್ಕದ ತುಲನೆಗಳು ಇಂದಾಗುತ್ತಿದೆ,
ಇಂತಹ ಮತಿಭ್ರಮಣೆ ಸರಿಗಟ್ಟುವ ವಿದ್ವತ್‌ವುಳ್ಳ ವಿದ್ವಾಂಸನನ್ನು ನಟ ಕಿಚ್ಚ ಸುದೀಪ್‌ರವರು ತಮ್ಮ ಕಲಾ ಭೂಮಿಕೆಯ ವ್ಯವಸ್ಥಾಪಕರನ್ನಾಗಿ ನೇಮಿಸಿಕೊಂಡಿರುವುದು ಮತ್ತೊಂದು ಮೈಲಿಗಲ್ಲೋ ಅಥವಾ ಈತನ ವರ್ತನೆಯಿಂದ ತಮ್ಮ ಕಲಾ ಜರ್ನಿಗೆ ಪೆಟ್ಟು ಬೀಳುವ ಹಾಗೂ ಬಿದ್ದಿರುವ ಅರಿವು ಬಂದಿಲ್ಲವೇ ಎನ್ನುವುದು ಇಂದಿಗೂ ಚಿತ್ತ ಸಮಾಜದ ಪ್ರಶ್ನೆಯಾಗಿದೆ.
ಮುಂದಾದರೂ ಕನ್ನಡ ಸಂಘಟನೆಗಳು ಇಂತಹ ವಿವೇಚನಾರಹಿತ ಅಪ್ರಬುದ್ದಮಾರ್ಗಿಗಳ ಅಸಂಬದ್ಧ ಹೇಳಿಕೆಗಳಿಂದ ಸ್ಯಾಂಡಲ್‌ವುಡ್ ಮತ್ತಷ್ಟು ಕಪ್ಪು ಲೇಪನಗಳು ಲೇಪಿಸಿಕೊಳ್ಳದಂತೆ ಚಿತ್ತವರಿಸಲಿ ಎಂದು ಉವಾಚಿಸಿ ಸಿನಿಮಾ ತಳಸ್ಪರ್ಶಿ ದನಿಯಾಗಿರುವ ಕೆ. ಮಂಜುರವರ ಕಾನೂನು ಪ್ರಯೋಗಗಳು ನಿಜಕ್ಕೂ ಮೆಚ್ಚುವಂತಹದ್ದಾಗಿದೆ.


