September 24, 2026

 I ರಾಜ್ಯದಲ್ಲಿ ಸಿಎಸ್ಆರ್ ನಿಧಿ ದುರ್ಬಳಕೆ I ಕಟ್ಟುನಿಟ್ಟಿನ ಕಾಯಿದೆ ಜಾರಿಗೆ ತರಲು I ಐಡಿಯಲ್ ಗೋಪಿ ಆಗ್ರಹ I

0
IMG-20251204-WA0231

 I ರಾಜ್ಯದಲ್ಲಿ ಸಿಎಸ್ಆರ್ ನಿಧಿ ದುರ್ಬಳಕೆ I ಕಟ್ಟುನಿಟ್ಟಿನ ಕಾಯಿದೆ ಜಾರಿಗೆ ತರಲು I ಐಡಿಯಲ್ ಗೋಪಿ ಆಗ್ರಹ I

ಶಿವಮೊಗ್ಗ : ಸಿಎಸ್ ಆರ್  ನಿಧಿ ದುರ್ಬಳಕೆ ರಾಜ್ಯದ ಹಿತ ಕಾಪಾಡುವಲ್ಲಿ ವಿಫಲವಾಗಿದ್ದಾರೆ ಎಂದು ಮಾಜಿ ಮಹಾನಗರ ಪಾಲಿಕೆ ಐಡಿಯಲ್ ಗೋಪಿ ತಿಳಿಸಿದ್ದಾರೆ

ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ, ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ ಕಾರ್ಪೊರೇಟ್ ಸಂಸ್ಥೆಗಳು ಮತ್ತು ಕಂಪನಿಗಳು ತಮ್ಮ CSR ನಿಧಿಯನ್ನು ನಮ್ಮ ರಾಜ್ಯದೊಳಗೆ ವಿನಿಯೋಗ ಮಾಡಬೇಕು, ಕೂಡಲೇ ಸರ್ಕಾರ ಸೂಕ್ತ ಕಾನೂನು ರಚನೆ ಮಾಡಬೇಕು, ಕಾರಣ ವಿದೇಶಿ ಮತ್ತು ಹೊರರಾಜ್ಯದ ಕಂಪನಿಗಳು ತಮ್ಮ ವ್ಯಾಪಾರ ವಹಿವಾಟುಗಳನ್ನು ರಾಜ್ಯದಲ್ಲಿ ಮಾಡುತ್ತಿದ್ದಾರೆ ಅವರು ತಮಗೆ ಬರುವ ವಾರ್ಷಿಕ ನಿವ್ವಳ ಲಾಭಂಶದಲ್ಲಿ ಶೇಕಡ 2% ಹಣವನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಮೂಲಕ ರಾಜ್ಯದ ಹಿತ ಕಾಪಾಡದೇ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆಂದು ಮಹಾನಗರ ಪಾಲಿಕೆಯ ಹಣಕಾಸು ಕಂದಾಯ ತೆರಿಗೆ ನಿರ್ವಹಣೆ ವಿಭಾಗದ ಮಾಜೀ ಅಧ್ಯಕ್ಷರಾದ ಐಡಿಯಲ್ ಗೋಪಿ ಅವರು ವಿವರಿಸಿದ್ದಾರೆ,

ಕೆಲ ಕಂಪನಿಗಳು ತಮಗೆ ಇಷ್ಟ ಬಂದಂತೆ ಹೊರ ರಾಜ್ಯಕ್ಕೆ ತಮ್ಮ ಇಚ್ಛೆ ಅನುಸಾರ ಖರ್ಚು ಮಾಡುತ್ತಿರುವುದು ರಾಜ್ಯ ಸರ್ಕಾರ ಗಮನಿಸಿ ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕು, ಈ ನಿಧಿಯನ್ನು ಸಮರ್ಪಕವಾಗಿ ರಾಜ್ಯದ ಶಿಕ್ಷಣ ಹಸಿವು ಬಡತನ ನಿರ್ಮೂಲನೆ ಕೊಳಗೇರಿಗಳ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಮಾಡಲು ಸಂಸ್ಥೆ ಗಳಿಗೆ ಸೂಚನೆ ನೀಡಬೇಕೆಂದು ಈ ಮೂಲಕ ಸೂಕ್ತವಾದ ಕಾಯಿದೆಯನ್ನು ತರಬೇಕೆಂದು ಅವರು ಈ ಮೂಲಕ ಆಗ್ರಹಿಸಿದ್ದಾರೆ

Spread the love

Leave a Reply

Your email address will not be published. Required fields are marked *

error: Content is protected !!