Sunday, August 2, 2026
Homeಸೂರ್ಯಗಗನI ಕಿಟ್ಟಿಪಾರ್ಟಿ ಹೆಸರಿನಲಿ ಅಕ್ರಮ ಬಡ್ಡಿ ದಂಧೆ I ಜಿಲ್ಲಾರಕ್ಷಣಾಧಿಕಾರಿ ಕಛೇರಿಯಲ್ಲಿ ದಾಖಲಾದ ದೂರು I

I ಕಿಟ್ಟಿಪಾರ್ಟಿ ಹೆಸರಿನಲಿ ಅಕ್ರಮ ಬಡ್ಡಿ ದಂಧೆ I ಜಿಲ್ಲಾರಕ್ಷಣಾಧಿಕಾರಿ ಕಛೇರಿಯಲ್ಲಿ ದಾಖಲಾದ ದೂರು I

I ಕಿಟ್ಟಿಪಾರ್ಟಿ ಹೆಸರಿನಲಿ ಅಕ್ರಮ ಬಡ್ಡಿ ದಂಧೆ I ಜಿಲ್ಲಾರಕ್ಷಣಾಧಿಕಾರಿ ಕಛೇರಿಯಲ್ಲಿ ದಾಖಲಾದ ದೂರು I

ಶಿವಮೊಗ್ಗ : ರಾಜ್ಯ ಸರಕಾರದ ತ್ವರಿತ ಆದೇಶವಿದೆ, ಈ ಆದೇಶದನುಸಾರ ಅನೇಕ ಅಕ್ರಮ ಬಡ್ಡಿ ದಂಧೆಗಳನ್ನು ಹತ್ತಿಕ್ಕುವಲ್ಲಿ ಪೊಲೀಸ್ ಇಲಾಖೆ ತಮ್ಮ ಕರ್ತವ್ಯ ನಿರ್ವಹಿಸಿದೆ,

ಹೀಗಿದ್ದರು ಈ ಹೊತ್ತಿಗೂ ಯಾವುದೇ ಮನಿಲೆಂಡಿಂಗ್ ಪರವಾನಿಗೆಗಳಿಲ್ಲದೆ ಅಕ್ರಮ ಬಡ್ಡಿ ದಂಧೆ ಹಾಗೂ ಕೊಟ್ಟ ಹಣಕ್ಕಾಗಿ ಬ್ಲಾಂಕ್ ಡಾಕ್ಯುಮೆಂಟ್ ಗಳಿಗೆ ಸಹಿ ಮಾಡಿಸಿಕೊಂಡು ಬೊಮ್ಮನಕಟ್ಟೆಯ ನಿವಾಸಿಯೊಬ್ಬಳ ಮನೆಗೆ ಅನಾಮತ್ತಾಗಿ ಬೀಗ ಜಡಿದು, ಆಕೆಯ ಪ್ರಾಪರ್ಟಿ ಕಬ್ಜಾ ಮಾಡುವ ಹಂತಕ್ಕೆ ಹೋಗಿರುವ ಪ್ರಕರಣ ನಗರದಲ್ಲಿ ಮೊದಲು ಇದಾಗಿದೆ, ಎಸ್ಪಿ ಮಿಥುನ್ ಕುಮಾರ್ ಅವರಿಗೆ ಈಗಾಗಲೇ ದೂರು ದಾಖಲಿಸಿದ್ದು ಇದೀಗ ಇದು ವಿನೋಬಾನಗರದ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿರುವ ಹಂತದಲ್ಲಿದೆ,

ಅಸಲಿಗೆ ಈ ಪ್ರಕರಣ ಕಿಟ್ಟಿಪಾರ್ಟಿಯ ಹೆಸರಿನಡಿ ಸುತ್ತಿಕೊಂಡಿದ್ದು, ಕಿಟ್ಟಿ ಪಾರ್ಟಿಗಳು ಶಿವಮೊಗ್ಗದಲ್ಲಿ ಅನೇಕತೆಯ ಪಟ್ಟ ಕಾಪಿಟ್ಟುಕೊಂಡಿದೆ, ಇದರಲ್ಲಿ ಒಂದು ಪ್ರಕರಣ ಬೆಳಕಿಗೆ ಇದೀಗ ಬಂದಿದೆ,

ಬೊಮ್ಮನಕಟ್ಟೆಯಲ್ಲಿ ಶುರುವಾದ ಈ ಕಿಟ್ಟಿಪಾರ್ಟಿಯಲ್ಲಿ ಮುಡುಬಾ ಮೂಲದ ಓರ್ವಳಿಗೆ ಸೇರಿಸಿಕೊಂಡು ,‌ಮೊದ‌ ಮೊದಲು ಸಾಲವಾಗಿ ಹಣ ಕೊಟ್ಟು, ಬಡ್ಡಿ ವಹಿವಾಟುವಿಗೆ ಆಧಾರವಾಗಿ ಬ್ಲಾಂಕ್ (ಖಾಲಿ) ಬ್ಯಾಂಕ್ ಚೆಕ್ ಹಾಗೂ ಪ್ರನೋಟ್, ಇ-ಪೇಪರ್ ಗಳಿಗೆ ಸಹಿ ಹಾಕಿಸಿಕೊಂಡು ಸರಿಸುಮಾರು ಹದಿನಾರು ಲಕ್ಷ ರೂಪಾಯಿ ದಂಧೆ ನಡೆಸಿದ್ದು, ಇದನ್ನು ಮುಡುಬಾ ಮೂಲದ ಮಹಿಳೆ ಕೆಲವು ತಿಂಗಳುಗಳ ತನಕದಿ ಹದಿನೇಳು ಲಕ್ಷ ರೂಪಾಯಿ ಮರು ವಾಪಸ್ಸಾತಿ ಮಾಡಿದ್ದರು ಸಹ ಇನ್ನೂ ಮರು ಪಾವತಿ ಮಾಡಬೇಕಾಗಿದ್ದು  ಮುವತ್ತು ಲಕ್ಷ ಹಣ ಇದೆ ಎಂದು, ದಬಾವಣೆ ಮಾಡುವುದು ಅಲ್ಲದೆ ಆಧಾರಕ್ಕೆ ಕೊಟ್ಟಿದ್ದ ಬ್ಲಾಂಕ್ ದಾಖಲಾತಿಗಳನ್ನು ಭರ್ತಿ ಮಾಡಿಕೊಂಡು ಮನೆಗೆ ಬಂದು ಏಕಾಎಕಿ ಬೀಗ ಹಾಕಿ ಹೊರದೊಬ್ಬಿರುವುದು ಅಲ್ಲದೆ, ಮುಡುಬಾ ಊರಿಗೆ ಎಳೆದೊಯ್ದು ಜಮೀನು ಬರೆದುಕೊಡು ಎಂದು ನಾಲ್ಕೈದು ವಾಹನಗಳಲ್ಲಿ ತೆರಳಿ ದುಂಡಾವರ್ತನೆಗೈದಿರುವ ಅಸಲಿ ಸ್ಟೋರಿ ಇದಾಗಿದೆ,

ಇದಕ್ಕೆ ಸಂಬಂಧಿಸಿದ ದಾಖಲಾತಿಗಳು, ಪತ್ರಿಕೆಗೆ ಕಳುಹಿಸಿರುವ ಮುಡುಬಾ ಮಹಿಳೆಯ ಕಡೆಯವರು, ನ್ಯಾಯಕ್ಕಾಗಿ ಎಸ್ಪಿ ಮಿಥುನ್ ಕುಮಾರ್ ಅವರಲ್ಲಿ ಅವಲತ್ತುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ,

ಈ ಕಿಟ್ಟಿಪಾರ್ಟಿಯ ಅನಾಹುತದ ಕಥಾನಕದ ಘಟನೆಯ ಚಿತ್ರಣದ ಒಂದಿಷ್ಟು ಮಾಹಿತಿಗಳನ್ನು ಕಲೆಹಾಕುತ್ತಿದ್ದು, ಈ ಕುರಿತಂತೆ ವಿಸ್ತೃತತೆಯನ್ನು ಸಾರ್ವಜನಿಕವಾಗಿ ಮುಂದಿಡಲಾಗುವುದು,

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ I ಗುಡ್ಡ ಕುಸಿದು ಮೂವರ ಧಾರುಣ ದುರ್ಮರಣ I I ಗಾರಾ ಎನ್ನುವ ಜೀವಭಾವ I I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I