Sunday, August 2, 2026
Homeಸಾಹಿತ್ಯI ಸಿಹಿಮೊಗೆ ಎಂಬ ಹತ್ಯೆಗಳ ನಿಲ್ದಾಣ I

I ಸಿಹಿಮೊಗೆ ಎಂಬ ಹತ್ಯೆಗಳ ನಿಲ್ದಾಣ I

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಸಿಹಿಮೊಗೆ ಎಂಬ ಹತ್ಯೆಗಳ ನಿಲ್ದಾಣ I

ನಮ್ಮೂರು ಸಿಹಿಮೊಗೆ
ಅಲ್ಲೊಂದು ಹೋರಾಟ, ಚಳುವಳಿಗಳಿತ್ತು,
ಮತ-ಪಂಥಗಳ ಹೊರತಾದ ಜಗಲಿಗಳಿತ್ತು,
ಸಾಂಸ್ಕೃತಿಕ ಸೊಬಗಿನ ಮೇರು ಬಲದಿತ್ತು,
ಇಂದೇನಾಗಿದೆ..? ಕಪಟಿಗಳ ಹೂರಣಗಳಿದೆ,
ಹತ್ಯೆ, ಲಿಟಿಗೇಶನ್, ಸುಫಾರಿಗಳ ಕರಾಳವಿದೆ,

ಆರ್ಥಿಕತೆಯ ಹೂಡಿಕೆಗೆ ಬೆದರಿದ ಸಗಟಿದೆ,
ಮನುಷ್ಯ ಧ್ವೇಷ ಬೆಸೆವ ವೈಟ್ ಕಾಲರಿನ ದಂಡಿದೆ,
ಜಾತಿಗಳ ಮೇಳೈಸುವ, ಧರ್ಮ ಪ್ರಚೋದನೆಗಳಿದೆ,
ಅಭಿವ್ಯಕ್ತಿ ನಾಮಾಂಕಿತದಿರುವ ವಿಷಜಂತುಗಳಿದೆ,
ಆದರೂ ನಮ್ಮೂರು ಸಿಹಿಮೊಗೆ,
ವಿವಿಧತೆಯಲ್ಲಿ ಏಕತೆ ಮೂಡಿಸುವ ವೈವಿದ್ಯತೆಗಳಿದೆ,

ಸೇಡಿನ ದಿಸೆಯ ಸರಣಿ ಹತ್ಯೆಗಳು,
ಕಂಡ ಕಂಡಡೆ ಹೊಸೆವ ಅಕ್ರಮ ಬೇಲಿಗಳು,
ಕೋಮುಧ್ವೇಷ ಬಿತ್ತುವ ಪ್ರತಿ ಹೇಳಿಕೆಗಳು
ಮುಗಿಬಿದ್ದು ಬಿತ್ತರಿಸುವ ಸುದ್ದಿ ಕಾಲಂಗಳು,
ಒಂದಷ್ಟು ಸ್ವಯಂಚಾಲಿತ ಪ್ರೌಡಿಮೆ, ಪ್ರಬುದ್ದತೆಗಳು,
ಇದನ್ನೇ ನಂಬಿ ಬ್ಯಾಲೆನ್ಸ್ ಮಾಡುವ ಪರಗೇಡಿಗಳು,

ಆದರೂ ನಮ್ಮೂರು ಸಿಹಿಮೊಗೆ
ವಿವಿಧತೆಯಲಿ ಏಕತೆ ಮೂಡಿಸುವ ವೈವಿದ್ಯತೆಗಳಿದೆ,

ಕೆಲ ರಾಜಕಾರಣಿಗಳಿಂದ ಜನನ್ಯಾಯ ವಿಫಲ,
ಪೆನ್ನಿಗರು ಅಭಿವ್ಯಕ್ತಿ ಸಾರುವಲ್ಲಿ ಕೋಲಾಹಲ,
ರೌಡಿ ಎಲಿಮೆಂಟ್ಗಳ ದುಂಡಾವರ್ತನೆ ಸಫಲ,
ಪೊಲೀಸರೇಕೆ ಅತೀವ ನೀರವತೆ ತಳೆದ ಮೌನ,

ಎಲ್ಲವೂ ಮತಗುಂಪು, ಸಮುದಾಯಗಳ ಓಲೈಕೆ,
ರಾಜಕೀಯ ಜಾಲದ ಪಾಪದ ಕೂಸಿನ ಒಡಂಬಡಿಕೆ,
ಜನದನಿ ಗಟ್ಟಿಯಾಗಲಿ, ಕಪಟಿಗಳ ಅರಿಯಲಿ‌..
ಸೌಹಾರ್ದತೆ, ಸಹಬಾಳ್ವೆ, ಏಕತೆಯ ಜಗಲಿಗಳಿರಲಿ
ಇದುವೇ ನಮ್ಮ ಸಿಹಿಮೊಗೆ, ನಮ್ಮ ನಗುಮೊಗೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ I ಗುಡ್ಡ ಕುಸಿದು ಮೂವರ ಧಾರುಣ ದುರ್ಮರಣ I I ಗಾರಾ ಎನ್ನುವ ಜೀವಭಾವ I I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I