I ಸಂಘದ ತಳಹದಿಯಡಿ ಒಮ್ಮತದ ಒಡನಾಡಿಗಳಾಗೋಣ I ಕೆಯುಡಬ್ಲ್ಯೂಜೆ ಜಿಲ್ಲಾಧ್ಯಕ್ಷ ಎಚ್.ಯು ವೈದ್ಯನಾಥ್ I
I ಸಂಘದ ತಳಹದಿಯಡಿ ಒಮ್ಮತದ ಒಡನಾಡಿಗಳಾಗೋಣ I ಕೆಯುಡಬ್ಲ್ಯೂಜೆ ಜಿಲ್ಲಾಧ್ಯಕ್ಷ ಎಚ್.ಯು ವೈದ್ಯನಾಥ್ I
ಶಿಕಾರಿಪುರ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿಕಾರಿಪುರ ತಾಲ್ಲೂಕು ಶಾಖೆಯ 2025 -28ರ ಸಾಲಿನ ಕಾರ್ಯಕಾರಿ ಸಮಿತಿಗೆ ಡಿಸೆಂಬರ್ 8ರಂದು ನಡೆದ ಚುನಾವಣೆಯಲ್ಲಿಅವಿರೋದವಾಗಿ ಶಿರಾಳಕೊಪ್ಪದ ಪತ್ರಕರ್ತ ನವೀನ್ ಕುಮಾರ್ ಅವರು ತಾಲೂಕ ಅಧ್ಯಕ್ಷರಾಗಿ, ಹಾಗೂ ಪ್ರಧಾನ ಕಾರ್ಯದರ್ಶಿಗಳಾಗಿ ಮಂಜುನಾಥ್ ಮಠದ ಇವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಹೆಚ್ ಯು ವೈದ್ಯನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್. ಎಸ್ ಹಾಲಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಕೆಎಸ್ ಹುಚ್ಚರಾಯಪ್ಪ, ಜಿಲ್ಲಾ ಕಾರ್ಯದರ್ಶಿ ದೀಪಕ್ ಸಾಗರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗಾರಾ ಶ್ರೀನಿವಾಸ್ ಹಾಗೂ ರಾಜ್ಯ ಚುನಾವಣಾ ಅಧಿಕಾರಿ ಟೆಲೆಕ್ಸ್ ರವಿ ಕುಮಾರ್ ರವರ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರ ಸ್ಥಾನಕ್ಕೆ ತಾಲ್ಲೂಕಿನ 24 ಜನ ಪತ್ರಕರ್ತರ ಪೈಕಿ ಒಟ್ಟು ಒಂಬತ್ತು ಜನ ಉಮೇದುವಾರರಾಗಿದ್ದು ಕೊನೆ ಗಳಿಗೆಯಲ್ಲಿ ಉಳಿದ ಎಂಟು ಜನ ನವೀನ್ ಅವರನ್ನು ಬೆಂಬಲಿಸಿದರು ಈ ಬದಲಾವಣೆಯಿಂದಾಗಿ ನವೀನ್ ಕುಮಾರ್ ಶಿರಾಳಕೊಪ್ಪ ರವರನ್ನು ಅಧ್ಯಕ್ಷರಾಗಿ ಅವಿರೋಧ ಆಯ್ಕೆ ಮಾಡಲಾಯಿತು. .
ಈ ಸಂಧರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಎಚ್. ಯು ವೈದ್ಯನಾಥ ಚುನಾವಣೆಯಿಲ್ಲದೆ ಎಲ್ಲರೂ ಸೇರಿ ಒಮ್ಮತದಿಂದ ಅವಿರೋಧವಾಗಿ ತಾಲ್ಲೂಕು ಅಧ್ಯಕ್ಷರನ್ನ ಆಯ್ಕೆ ಮಾಡಿದ್ದು ಮಾದರಿ ಕಾರ್ಯ. ಆಯ್ಕೆಯಾದಂತಹ ಪದಾಧಿಕಾರಿಗಳು ಸಂಘದ ಸದಸ್ಯರೊಂದಿಗೆ ಸಂಘದ ಚಟುವಟಿಕೆಗಳಲ್ಲಿ ಸಕ್ರೀಯಾವಾಗಿ ಭಾಗವಹಿಸುವುದರ ಮೂಲಕ ಸಂಘವನ್ನು ಗಟ್ಟಿಗೊಳಿಸಬೇಕು.
ನಮ್ಮ ಕಾರ್ಯಾವಧಿಯಲ್ಲಿ ಜಿಲ್ಲೆಯ ಪತ್ರಕರ್ತರಿಗೆ ವಿಭಿನ್ನ ಕಾರ್ಯಕ್ರಮಗಳು ಮತ್ತು ಉತ್ಸಾಯಿಸುವ ಯೋಜನೆ ಗಳು ನೀಡಬೇಕೆಂದು ಆಲೋಚನೆ ಕೈಗೊಂಡಿದ್ದು ಸಂಘದ ಎಲ್ಲಾ ಸದಸ್ಯರು ಸಂಘದ ಮೇಲೆ ಭರವಸೆ, ವಿಶ್ವಾಸ ಮತ್ತು ನಂಬಿಕೆ ಇಟ್ಟು ಕಾರ್ಯನಿರ್ವಹಿಸಿ ಎಂದು ಕರೆ ನೀಡಿದರು.
ರಾಜ್ಯ ಕಾರ್ಯನಿರತ ಪತ್ರಕರ್ತ ರ ಸಂಘದ ಹಿರಿಯ ಸದಸ್ಯ ಜಿ ಕೆ ಹೆಬ್ಬಾರ್ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆ ಸೇರಿ ಗುಣ ಮುಖರಾಗಿ ಬಂದಿದ್ದ ಪತ್ರಕರ್ತ ಜಿ.ಕೆ ಹೆಬ್ಬಾರ್ ರವರಿಗೆ ರಾಜ್ಯ ಸಂಘ ನೀಡಿದ ಹತ್ತು ಸಾವಿರ ರೂಗಳ ಚಕ್ ಬಂದಿದ್ದ ಜಿಲ್ಲಾ ಸಮಿತಿಯವರು ನೀಡಿದರು,
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ಜಿಕೆ ಹೆಬ್ಬಾರ್ ಸಂಘ ಅನಾರೋಗ್ಯದ ಕಾಲದಲ್ಲಿ ಸಂಘ ತಮಗೆ ಮಾಡಿದ ಸಹಾಯ ಸಹಕಾರದ ವಿಚಾರವನ್ನು ಪ್ರಸ್ತಾಪಿಸಿ ಎರಡನೇ ಬಾರಿ ಅನಾರೋಗ್ಯ ಸಂಭವಿಸಿದಾಗ ಜೀವನದ ಪ್ರಯಣದ ಕೊನೆಯ ಹಾದಿಯಲ್ಲಿ ಇರುವಂತಹ ಸಂದರ್ಭದಲ್ಲಿ . ಹುಚ್ಚರಾಯಪ್ಪನವರು ಮಾಡಿದ ಸಹಕಾರ ಮತ್ತು ಜಿಲ್ಲಾ ಅಧ್ಯಕ್ಷ ಶಿವಕುಮಾರ್ ಮಾಡಿದ ಸಹಾಯದ ಮಾತುಗಳನ್ನು ಕೃತಜ್ಞತೆಯೊಂದಿಗೆ ತಿಳಿಸಿ ತಮ್ಮ ಜೀವ ಇರೋವರೆಗೂ ಸಂಘಕ್ಕೆ ಆಭಾರಿಯಾಗುವುದಾಗಿ ಭಾವನಾತ್ಮಕ ಧ್ವನಿಯಲ್ಲಿ ತಿಳಿಸಿದರು
ಈ ಸಂಧರ್ಭದಲ್ಲಿ ಸಂಘದ ನಿಕಟಪೂರ್ವ ಅಧ್ಯಕ್ಷ ಬಿ ಎಲ್ ರಾಜಪ್ಪ, ಸಂಘದ ಹಿರಿಯ ಸದಸ್ಯರಾದ ಬಿ ವಿ ಶೇಷಗಿರಿ, ಶಿವಣ್ಣ ವೈಭವ, ಅರುಣ್ ಕುಮಾರ್, ಸೇರಿದಂತೆ ಸಂಘದ ಸದಸ್ಯರಾದ ರಾಘವೇಂದ್ರ, ರಘು ಎಚ್ ಎಸ್, ಸತೀಶ್ ರಮ್ಯಾ, ಅರುಣ್ ನಿಸರ್ಗ ಶಿರಾಳಕೊಪ್ಪ, ಮಂಜಪ್ಪ, ವಿ ಪಿ ಬಸವರಾಜು, ಪ್ರಕಾಶ್, ,ವಿನಯ್ ಕುಮಾರ್ ವಾಲಿ, ಮತ್ತಿತರರು ಇದ್ದರು.