Saturday, 19 September 2026 Suryagagana — Edition

Suryagagana

My WordPress Blog

ಸೂರ್ಯಗಗನ I ಹಸಿರು, ಸ್ವಚ್ಚ ಮತ್ತು ಸುಂದರ ನಗರ ನಿರ್ಮಾಣಕ್ಕೆ ಸಂಕಲ್ಪ I ಸ್ಬೂಡಾ ಅಧ್ಯಕ್ಷ ಹೆಚ್.ಎಸ್.‌ಸುಂದರೇಶ್ I ಸೂರ್ಯಗಗನ I ಕಾರ್ಮಿಕರ ವಸತಿ ನಿಲಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲು I ರಾಜ್ಯ ಅಸಂಘಟಿತ ಕಾರ್ಮಿಕ ಸಂಘ ಒತ್ತಾಯ I ಸೂರ್ಯಗಗನ I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I ಸೂರ್ಯಗಗನ I ಹಸಿರು, ಸ್ವಚ್ಚ ಮತ್ತು ಸುಂದರ ನಗರ ನಿರ್ಮಾಣಕ್ಕೆ ಸಂಕಲ್ಪ I ಸ್ಬೂಡಾ ಅಧ್ಯಕ್ಷ ಹೆಚ್.ಎಸ್.‌ಸುಂದರೇಶ್ I ಸೂರ್ಯಗಗನ I ಕಾರ್ಮಿಕರ ವಸತಿ ನಿಲಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲು I ರಾಜ್ಯ ಅಸಂಘಟಿತ ಕಾರ್ಮಿಕ ಸಂಘ ಒತ್ತಾಯ I ಸೂರ್ಯಗಗನ I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I
ಸೂರ್ಯಗಗನ

I ಇದು ಯುವಜನ ಕ್ರೀಡಾ ಇಲಾಖೆಯ ಈಜು ಕೊಳವೋ..?! I ಮಖೇಡಿ ಕೋಚರ್‌ಗಳ ರೆಸಾರ್ಟ್ ತಂಗುದಾಣವೋ..?! I

I ಇದು ಯುವಜನ ಕ್ರೀಡಾ ಇಲಾಖೆಯ ಈಜು ಕೊಳವೋ..?! I ಮಖೇಡಿ ಕೋಚರ್‌ಗಳ ರೆಸಾರ್ಟ್ ತಂಗುದಾಣವೋ..?! I ಶಿವಮೊಗ್ಗ : ಕ್ರೀಡೆಗಳು ಮನುಷ್ಯ ಬದುಕಿಗೆ ಆತ್ಮವಿಶ್ವಾಸ, ನಾಯಕತ್ವ, ದೈಹಿಕವಾಗಿ ಹಾಗೂ ಮಾನಸಿಕವಾಗಿ ಸಧೃಡತೆ ಹೆಚ್ಚಿಸುತ್ತದೆ ಈ ಮಾತ್ರದಿ ಸದೃಡ ಸಮಾಜ ನಿರ್ಮಾಣ…

I ಇದು ಯುವಜನ ಕ್ರೀಡಾ ಇಲಾಖೆಯ ಈಜು ಕೊಳವೋ..?! I ಮಖೇಡಿ ಕೋಚರ್‌ಗಳ ರೆಸಾರ್ಟ್ ತಂಗುದಾಣವೋ..?! I

ಶಿವಮೊಗ್ಗ : ಕ್ರೀಡೆಗಳು ಮನುಷ್ಯ ಬದುಕಿಗೆ ಆತ್ಮವಿಶ್ವಾಸ, ನಾಯಕತ್ವ, ದೈಹಿಕವಾಗಿ ಹಾಗೂ ಮಾನಸಿಕವಾಗಿ ಸಧೃಡತೆ ಹೆಚ್ಚಿಸುತ್ತದೆ ಈ ಮಾತ್ರದಿ ಸದೃಡ ಸಮಾಜ ನಿರ್ಮಾಣ ಮಾಡುವ ಸದುದ್ದೇಶದಿಂದ ಆಯಾ ಸರ್ಕಾರಗಳು ಹಲವು ಮುಖಿಯ ಕ್ರೀಡೆಗಳಿಗೆ ಉತ್ತೇಜನ ನೀಡಲು ಮುಂದಾಗುತ್ತದೆ, ಇಂತಹುದೇ ಉತ್ತೇಜನದಿಂದ ಶಿವಮೊಗ್ಗದ ಗೋಪಾಲ ಗೌಡ ಬಡಾವಣೆಯಲ್ಲಿ ಕೋಟಿ ವೆಚ್ಚದಲ್ಲಿ ನಿರ್ಮಿಸಲ್ಪಟ್ಟ ಈಜು ಕೊಳ ಹಲವು ದಾರಿದ್ರ್ಯತೆ ಹಾಗೂ ಸಾಮಾಜಿಕ ಪೀಡನೆಗಳಿಗೆ ಒಳಪಟ್ಟಿದೆ, ಈ ಅಸಲಿ ಕಥಾನಕಗಳ ಬೆಳವಣಿಗೆಯನ್ನು ಯುವಜನ ಕ್ರೀಡಾ ಇಲಾಖಾಧಿಕಾರಿ ರೇಖ್ಯಾನಾಯ್ಕ ಅವರಿಗೆ ಗಮನಕ್ಕೆ ಪತ್ರಿಕೆ ತರಲಾಗಿತ್ತು,

ಹೀಗಿದ್ದರೂ ಇಲ್ಲಿನ ಆವಾಂತರಗಳಿಗೆ ಕೊನೆ ಮೊಳೆ ಒಡೆದಿಲ್ಲವಾಗಿದೆ, ಇದಕ್ಕೆ ಕಡಿವಾಣವೂ ಇಲ್ಲದಂತಾಗಿರುವುದು ಅಚ್ಚರಿಯಾಗಿದೆ, ಆಗಿದ್ದರೆ ಏನೀದು ಈ ಅವಾಂತರ ಎನ್ನುವ ಪ್ರಸ್ತುತ ವಾಸ್ತವಗಳನ್ನು ಶಿವಮೊಗ್ಗ ಜಿಲ್ಲಾಧಿಕಾರಿಗಳಾದ ಗುರುದತ್ ಹೆಗಡೆಯವರಿಗೆ ಹಾಗೂ ಸ್ಥಳೀಯ ಶಾಸಕರಾದ ಚೆನ್ನಬಸಪ್ಪನವರು ಖುದ್ದು ತನಿಖಿಸಿ ಮ್ಯಾನ್ ಪವರ್ ಏಜೆನ್ಸಿಯಿಂದ ನೇಮಕವಾಗಿರುವ ಈರ್ವ ಈಜುಕೊಳದ ಕೋಚರ್‍ಸ್‌ಗಳನ್ನು ಎತ್ತಂಗಡಿ ಮಾಡಿ ಈ ಏಜೆನ್ಸಿಯ ಪರವಾನಿಗೆ ರದ್ದು ಪಡಿಸಬೇಕಾದ ಅತೀ ಜರೂರತ್ತಿದೆ,

ಅಖಿಲ ಎಂಟರ್‌ಪ್ರೈಸಸ್ ಎನ್ನುವ ಖಾಸಗಿ ಮ್ಯಾನ್‌ಪವರ್ ಏಜೆನ್ಸಿಯಿಂದ ನೇಮಿಸಿರುವ ತತ್ಕಾಲ್ ಕೋಚರ್‍ಸ್‌ಗಳ ಕರಾಮತ್ತು : ಸಾರ್ವಜನಿಕರಿಗಿಂತಲೂ ವಿದ್ಯಾರ್ಥಿಗಳಲ್ಲಿ ನಕರಾತ್ಮಕ ಮನೋಭಾವ ಮತ್ತು ಆತ್ಮವಿಶ್ವಾಸವನ್ನು ವೃದ್ದಿಸಲು ಸಹಕಾರಿಯಾಗುವ ಈಜುಕೊಳ ಇಂತಹ ಮಖೇಡಿಗಳ ಕೈಗೆ ಸಿಲುಕಿ ರವರವ ನರಳುತ್ತಿರುವುದನ್ನು ಲಭ್ಯವಿರುವ ವೀಡಿಯೋ ತುಣುಕುಗಳನ್ನು ನೋಡಿ ಸಾಕ್ಷೀಕರಿಸಬಹುದಾಗಿದೆ, ಇಂತಹ ಆವಾಂತರಗಳಿಗೆ ಕಾರಣವಾಗಿರುವ ಸಂಗಮೇಶ್ ಪಾರಶೆಟ್ಟಿ ಹಾಗೂ ರಮೇಶ್ ಪಾರಶೆಟ್ಟಿ ಎಂಬೀರ್ವರು ಇಲ್ಲಿಯೇ ಮೊಕ್ಕಾಂ ಹೂಡಿ ಸಾಂಸರಿಕ ಜೀವನ ಸಾಗಿಸುತ್ತಿರುವುದಲ್ಲದೆ, ಪಾರ್ಟಿಗಳು ನಡುರಾತ್ರಿವರೆಗೆ ನಡೆಸುತ್ತಿರುವುದು ದರ್ಶಿಸಿಕೊಂಡಿದೆ ಇನ್ನೂ ಕೊಟ್ಟಿರುವ ಈಜುಕೊಳದ ಮೇಲುಸ್ತುವಾರಿ ಕಛೇರಿಯ ತುಂಬೆಲ್ಲಾ ಹಾಸಿರುವ ಹಾಸಿಗೆ, ದಿಂಬುಗಳು ಹಾಸುಹೊಕ್ಕಿದೆ, ಆಗಾಗ್ಗೆ ನಡೆಯುವ ಗುಂಡು ಪಾರ್ಟಿಗಳ ಪಳಯುಳಿಕೆಗಳು ಅಲ್ಲಲ್ಲಿಯೇ ಬಿದ್ದು ಅದರ ದುರ್ವಾಸನೆಗಳು ಇಲ್ಲಿನ ತರಬೇತಿ ಪಡೆವ ಸದಸ್ಯರಿಗೆ ಬಡಿಯದೆ ಇರದು, ಇಂತಿದ್ದರೂ ಈ ಬಗ್ಗೆ ಅನೇಕತೆಯ ದೂರುಗಳು ರವಾನೆಯಾಗಿದ್ದರು ಇವರಿಬ್ಬರನ್ನು ಎತ್ತಂಗಡಿ ಮಾಡದೆ ಇರುವುದು ನೋಡಿದರೆ ಇವರ ಹಿಂದೆ ಯಾರಿದ್ದಾರೆ..?! ಎನ್ನುವುದು ಗೊತ್ತು ಮಾಡಬೇಕಿದೆ,

ಬೆಂಬಲವಿರಲಿ ಇಂತಹ ಒಂದೊಳ್ಳೆಯ ಯೋಜನೆಗಳು ಭದ್ರತೆಯಿಂದ ಕೂಡಿರಬೇಕು, ಇದು ಫಲಪ್ರದವಾಗಬೇಕೆಂದರೆ ಅಂತಹದೊಂದು ವಾತಾವರಣಗಳು ಇಲ್ಲಿ ಏರ್ಪಟ್ಟಿರಬೇಕು, ಏಕೆಂದರೆ ಇದೊಂದು ಸ್ನಾನದ ಕೊಳ ಅಥವಾ ಈಜು ಕೊಳ, ಮಕ್ಕಳು ಮಹಿಳೆಯರು, ತರಬೇತಿಗಾಗಿ ಬರುವ ಕೇಂದ್ರವಾಗಿದ್ದು ಇಲ್ಲಿ ಅಭದ್ರತೆಯಿಂದ ತಾಂಡವಾಡಿದರೆ, ಈ ಸ್ಥಳೀಯ ಸಮಸ್ಯೆ ರಾಜ್ಯದ ಸಮಸ್ಯೆಗಳಾಗಿ ತಲೆದೋರದೆ ಇರಲಾರದು ಹೀಗಾಗಿ, ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿಗಳು ಈ ವೀಡಿಯೋ ತುಣುಕು ನೋಡಿ, ಖುದ್ದು ಈಜುಕೊಳ ಸುತ್ತ ಪರಿಶೀಲಿಸಲಿ ಅಲ್ಲದೆ ತತ್ಕಾಲ್ ನೇಮಕಾತಿಗೊಂಡಿರುವ ಸಂಗಮೇಶ್ ಪಾರಶೆಟ್ಟಿ ಹಾಗೂ ರಮೇಶ್ ಪಾರಶೆಟ್ಟಿ ಅವರುಗಳನ್ನು ತರಾಟೆಗೆ ತೆಗೆದುಕೊಂಡು, ಎತ್ತಂಗಡಿ ಮಾಡಲಿ ಎನ್ನುವುದು ಈ ವರದಿಯ ಉದ್ದೇಶವಾಗಿದೆ,

ಹೀಗೆ ಸಾಂಸರಿಕ ಜೀವನ ಕಟ್ಟಿಕೊಂಡಿರುವ ಈ ಕೋಚರ್‍ಸ್‌ಗಳು ತಮ್ಮ ವಾಹನ ಇನ್ನೋವಾ ಕಾರು ಬಾರು ಮಾಡಿಕೊಂಡು ಒಳಗೆ ಪಾರ್ಕಿಂಗ್ ಕೂಡ ಮಾಡಿಕೊಂಡಿದ್ದಾರೆ, ಕಛೇರಿಯ ಒಳಗಿರುವ ಹಾಸಿಗೆ ದಿಂಬುಗಳ ಹಾಕಿದಂತೆ ಇನ್ನೂ ಕೊಳೆ ಹಾಕಿರುವ ಇಂತಿವರು ಅಲ್ಲಿಯೇ ಕಮರ್ಷಿಯಲ್ ಬ್ಯುಸಿನೆಸ್ ಮಾಡಿಕೊಂಡಿದ್ದಾರೆ, ಸ್ವಿಮ್ಮಿಂಗ್ ವಸ್ತ್ರ ಉಡುಪುಗಳನ್ನು ಮಾರಾಟ ಮಾಡುವ ಈ ಕೋಚರ್‍ಸ್‌ಗಳು ಗಾರ್ಮೆಂಟ್ಸ್ ಮಾರಾಟ ಕೇಂದ್ರವನ್ನಾಗಿ ಮಾರ್ಪಾಡಿಸಿಕೊಂಡಿದ್ದಾರೆ, ಹೀಗಿದ್ದರೂ ಯುವಜನ ಕ್ರೀಡಾ ಇಲಾಖೆಯ ಅಧ್ಯಕ್ಷರಾಗಿಯು ಇರುವ ಜಿಲ್ಲಾಧಿಕಾರಿಗಳಾದ ಗುರುದತ್ ಹೆಗಡೆ ತ್ವರಿತಗತಿಯಲ್ಲಿ ಕ್ರಮ ಜರುಗಿಸದಿದ್ದೊಡೆ ಇದೊಂದು ಪ್ರಮಾದವೇ ಆಗಬಹುದಾಗಿದೆ,

ಸಂಗಮೇಶ್ ಪಾರಶೆಟ್ಟಿ ಹಾಗೂ ರಮೇಶ್ ಪಾರಶೆಟ್ಟಿಯ ದರಪಟ್ಟಿ : ಈಜುಕೊಳಕ್ಕೆ ಕೋಚರ್‍ಸ್ ಆಗಿ ಮ್ಯಾನ್‌ಪವರ್ ಎಜೆನ್ಸಿಯಿಂದ ನೇಮಕಗೊಂಡಿರುವ ಪಾಕಂಡಿಗಳು ಮುಂದುವರೆದಂತೆ, ಪ್ರತ್ಯೇಕತೆಯ ಹೆಸರಿನಡಿ ಕೋಚಿಂಗ್ ಶುಲ್ಕ ತೆಗೆದುಕೊಳ್ಳುತ್ತಿದ್ದಾರೆ, ಇಂತಿವರ ಸಂಖ್ಯೆ ೫೦ ಜನರಿದ್ದು ತಲಾ ಮಾಸಿಕ ೭೦೦ರೂ ವಸೂಲಿ ಮಾಡುತ್ತಿದ್ದಾರೆ, ಬೇಸಿಕ್ ಕ್ಲಾಸ್ ತರಬೇತಿಯಲ್ಲಿ ೨೫ ಜನರಿದ್ದು ೨೨೫೦,ರೂಗಳು ಸಂದಾಯ ಮಾಡಿಕೊಳ್ಳುತ್ತಿದ್ದು ಹದಿನಾಲ್ಕು ವರ್ಷದ ಕೆಳಗಿನವರೆಗೆ ೮.೦೦೦ ಸಾವಿರ, ಮೇಲ್ಪಟ್ಟ ವಯೋಮಿತಿಯವರುಗಳಿಗೆ ರೂ ೧೧.೦೦೦ ಸಾವಿರ ರೂಪಾಯಿಗಳನ್ನು ಫಿಕ್ಸ್ ಮಾಡಿಕೊಂಡಿದ್ದು ಸಮವಸ್ತ್ರ, ಪ್ರತ್ಯೇಕ ತರಬೇತಿಯ ಹೆಸರಿನ ಶುಲ್ಕ ವಸೂಲಿಗಳಲ್ಲಿ ಇಂತಿವರದ್ದು ಹೆಗ್ಗಿಲ್ಲದ ವಹಿವಾಟು ಸಾಗುತ್ತಿರುವುದಲ್ಲದೆ, ಇಂತಿವ ಕೋಚರ್‌ಗಳು ಇಲ್ಲಿ ಸಿಗುವ ಕ್ಲೋರಿನ್ ಪೌಡರ್ ನ್ನು ಅನ್ಯ ಖಾಸಗಿ ಮ್ಯಾನೇಜ್ಮೆಂಟ್‌ನಲ್ಲಿರವ ಈಜುಕೊಳದ ತರಬೇತಿದಾರರಾಗಿ ಕೆಲಸ ಮಾಡುತ್ತಿದ್ದು ಅಲ್ಲಿಗೆ ಕದ್ದೊಯ್ಯುತ್ತಿರುವುದು ಕೇಳಿ ಬಂದಿದೆ, ಸಾಲದಕ್ಕೆ ಇಂತಹ ಆರೋಪಗಳು ಸುತ್ತಿಕೊಂಡಿರುವ ಈಜುಕೊಳ ರೆಸಾರ್ಟ್ ಆಗಿ ಪರಿವರ್ತನೆ ಮಾಡಿಕೊಂಡಿರುವ ಅಸಲಿ ಸತ್ಯಗಳ ಅನಾವರಣ ಇದಾಗಿದೆ, ಖಾಸಗಿ ಮೀಟಿಂಗ್‌ಗಳಿಗೂ ಬಾಡಿಗೆ ನೀಡುತ್ತಿರುವ ಈ ಕೋಚರ್‌ಗಳು ಅವಾಂತರಗಳಿಗೆ ಕೊನೆ ಮೊಳೆ ಒಡೆದು, ಇವರನ್ನು ಈ ಕೂಡಲೆ ಕಿತ್ತುಹಾಕಿ ಮಕ್ಕಳು-ಮಹಿಳೆಯರ ಭದ್ರತೆಗೆ ಮುಂದಾಗಲಿ ಎನ್ನುವುದು ಜಿಲ್ಲಾಧಿಕಾರಿಗಳಿಗೆ, ಶಾಸಕರಿಗೆ ಚಿತ್ತವರಿಸಿರುವ ವರದಿ ಇದಾಗಿದೆ.

 

Gara Srinivas

Gara Srinivas

Leave a comment

error: Content is protected !!