I ಕನಸಿನ ದನಿ I
ಬ್ರಾಹ್ಮಿಯ ಹೊತ್ತಿನಲಿ
ಕನಸೊಂದು ದೌಡಿತ್ತು..
ದುಃಖವೆಂಬುದು ದುಃಖವಲ್ಲ,
ಸುಖಿ ಎಂಬುದು ಸ್ಥಿರವಲ್ಲ,
ಭಾವೋಧ್ವೇಗದಿ ತಲ್ಲಣಿಸಿದರು,
ಇಂತೆಲ್ಲವೂ.. ತೀರಾ ಕ್ಷಣಿಕ,
ನಾನು ನನ್ನದು, ತಾನು ತನ್ನದು
ಸೂರಿನ ನೆರಿಕೆ ಎಂಬುದು ವೈಭವದ ಪ್ರೇತ,
ಆತ್ಮದಂತರ ಚಾಂಚಲ್ಯದ ಸಂಪ್ರೀತ,
ವಿಳಂಬಿಸದೆ, ವಿಡಂಬನೆಗಳಿಲ್ಲದೆ ನಡೆ..
ಹೆಜ್ಜೆ ಗುರುತುಗಳ ಮೊಹರೊತ್ತೆಂದಿತು..!
ವ್ಯರ್ಥ ಮಾತೆಂದಿಗೂ ಕೃತಿಯಾಗದು,
ಗಟ್ಟಿಯ ದನಿ ಎಂದಿಗೂ ಹುಸಿಯಾಗದು,
ನಿನ್ನೊಳಗೆ ಬೀಮ ಬಲದ ಬೆಳಕಿದೆ,
ಅದುವೇ ಬಿತ್ತುವ ಒಕ್ಕಲಿಗಿಳಿದು ಬಿಡು..
ತಟ್ಟಿ ಎಚ್ಚರಿಸಿ ಅಂತರ್ಧವಾಯಿತು..!
ಇದ್ಯಾವ ಕನಸು..? ಅರಿವಿನ ಬಿರುಸು,

