September 23, 2026

I ಶಾಲಾ ಕಾಲೇಜುಗಳಲ್ಲಿ ಅನ್ಯ ಭಾಷೆ ಗೀತೆಗಳ ನೃತ್ಯಕ್ಕೆ I ಅವಕಾಶ ನೀಡದಂತೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಮನವಿ I

0
607138378_4082405912020885_1535642956691896241_n
I ಶಾಲಾ ಕಾಲೇಜುಗಳಲ್ಲಿ ಅನ್ಯ ಭಾಷೆ ಗೀತೆಗಳ ನೃತ್ಯಕ್ಕೆ I ಅವಕಾಶ ನೀಡದಂತೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಮನವಿ I
  ಶಿವಮೊಗ್ಗ : ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಗಳಲ್ಲಿ ಅನ್ಯ ಭಾಷೆ ಗೀತೆಗಳ ನೃತ್ಯ ಮಾಡುವುದನ್ನು ನಿಷೇಧ ಮಾಡುವಂತೆ ಹಾಗೂ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಹೀಗಾಗಿ ಇಂದು ಮಕ್ಕಳಿಗೆ ಕನ್ನಡದ ನೆಲೆಯ ಸಂಸ್ಕಾರ ಸಂಸ್ಕೃತಿ ಕಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಕರವೇ ಕಿರಣ್ ತಿಳಿಸಿದ್ದಾರೆ,
  ಶಾಲಾ ಹಾಗೂ ಕಾಲೇಜುಗಳು ಪರಭಾಷಾ ಕಲಾ ಕೇಂದ್ರಗಳಾಗಿವೆ. ಇನ್ನೂ ಖಾಸಗಿ ಶಾಲಾ-ಕಾಲೇಜುಗಳು ಶಾಲಾ ಕಾಲೇಜುಗಳ ವಾರ್ಷಿಕೋತ್ಸವದ ಸಮಾರಂಭದಲ್ಲಿ ದೇಶಭಕ್ತಿ ಗೀತೆ, ಭಾವಗೀತೆ ಕನ್ನಡ ನಾಡು ನುಡಿಗಳ ಗೀತೆಗಳಿಗೆ ಆದ್ಯತೆ ನೀಡದೆ ಕೇವಲ ಪರಭಾಷಾ ಗೀತೆಗಳಿಗೆ ನೃತ್ಯ ಮಾಡುತ್ತಿರುವುದು ಪ್ರತಿ ವರ್ಷ ಕಂಡುಬರುತ್ತದೆ ಇದಕ್ಕೆ ಅವಕಾಶ ಕೊಡದಂತೆ ಜಿಲ್ಲಾಡಳಿತ ಡಿಡಿಪಿಐ ಅಧಿಕಾರಿಗಳಿಗೆ ಪತ್ರ ರವಾನೆ ಮಾಡಬೇಕೆಂದು ಜಿಲ್ಲಾಡಳಿತಕ್ಕೆ ಆಗ್ರಹಿಸಿದರು,
ಮುಂದುವರೆದಂತೆ ಈ ವರ್ಷದಿಂದ ಯಾವುದೇ ಶಾಲಾ ಕಾಲೇಜುಗಳಲ್ಲಿ ಶಿಕ್ಷಕರು ಮಕ್ಕಳಿಗೆ ಅನ್ಯ ಭಾಷೆ ಗೀತೆಗಳ ನೃತ್ಯ ಮಾಡಿಸಬಾರದು. ಒಂದು ವೇಳೆ ಮಾಡಿಸಿದ್ದೆ ಆದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಹೋರಾಟಕ್ಕಿಳಿಯುವುದು ಅನಿವಾರ್ಯ ಆದ್ದರಿಂದ ತಾವುಗಳು ಇದಕ್ಕೆ ಅವಕಾಶ ಮಾಡಿಕೊಡದೆ ಶಿವಮೊಗ್ಗ ಜಿಲ್ಲೆಯಲ್ಲಿರುವ ಎಲ್ಲಾ ಶಾಲಾ ಕಾಲೇಜುಗಳಿಗೆ ಕನ್ನಡದ ಕಲಾ ನಿಲುವಿನ ಜರೂರಿ  ಆದೇಶ ಮಾಡಬೇಕೆಂದು ಜಿಲ್ಲಾಡತಕ್ಕೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖಾಧಿಕಾರಿಗಳಿಗೆ ವೇದಿಕೆಯು ಮನವಿ ಮಾಡಿಕೊಳ್ಳುತ್ತದೆ ಎಂದು ಅವರು ವಿವರಿಸಿದರು,
ಹಾಗೂ ಶಿಕ್ಷಣ ಸಚಿವರು ಈ ವಿಚಾರವಾಗಿ ಸೂಕ್ತ ಆದೇಶವನ್ನು ತಕ್ಷಣವೇ ಹೊರಡಿಸಬೇಕೆಂದು ಸಂಘಟನೆಯು ಆಗ್ರಹಿಸುತ್ತದೆ. ಸಂಘಟನೆಯು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಡಿಡಿಪಿಐ ಅವರಿಗೂ ಸಹ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯನ್ನು ಸಹ ಸಲ್ಲಿಸಲಾಯಿತು. ಈ ಕೂಡಲೇ ಖಾಸಗಿ ಶಾಲಾ ವಾಹನಗಳ ಮೇಲೆ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಶಾಲಾ ವಾರ್ಷಿಕೋತ್ಸ ವದಲ್ಲಿ ನಾಮ ಫಲಕಗಳು ಸಹ ಕಡ್ಡಾಯವಾಗಿ ಕನ್ನಡದಲ್ಲಿ ಇರಬೇಕೆಂದು ಸಂಘಟನೆ ಆಗ್ರಹಿಸಿದೆ ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದು ಸಂಘಟನೆ ತಿಳಿಸಿದೆ,
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಕರವೇ ಕಿರಣ್ ಕುಮಾರ್ ಎಚ್ಎಸ್ ರವರು, ಜಿಲ್ಲಾ ಉಪಾಧ್ಯಕ್ಷರಾದ ಮುಜಿಬುಲ್ಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶಫಿ,ವಿಜಯಕುಮಾರ್, ಮಹಿಳಾ ಅಧ್ಯಕ್ಷರಾದ ಕವಿತಾ ಸಿ, ಜ್ಯೋತಿ ಎನ್, ಎಲ್ಲ ಉಪಾಧ್ಯಕ್ಷರಾದ ಪದ್ಮ ಎನ್, ಜಿಲ್ಲಾ ಸಹ ಸಂಘಟನಾ ಕಾರ್ಯದರ್ಶಿಯಾದ ನೂರುಲ್ಲಖಾನ್, ಯುವ ಅಧ್ಯಕ್ಷ ಸಂತೋಷ, ಯುವ ಘಟಕದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರತಿ ತಿವಾರಿ, ಸತೀಶಣ್ಣ , ಆರತಿ ತಿವಾರಿ, ಅಶ್ವಥ್, ಅನ್ಸರ್ ಪಾಷಾ, ಸಾದಿಕ್ ಇತರರು ಹಾಜರಿದ್ದರು.
Spread the love

Leave a Reply

Your email address will not be published. Required fields are marked *

error: Content is protected !!