ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಸಾರ್ವಜನಿಕವಾದ ಬಹಿರಂಗ ಪತ್ರ I
ಹೀಗೊಂದು ಸಾರ್ವಜನಿಕ ವಲಯದಲ್ಲಿ ಸಾಮಾನ್ಯವಾಗಿರುವ ಚರ್ಚೆಗಳಿದೆ, ಸುದ್ದಿ ಮಾಧ್ಯಮಗಳ ಮೇಲೆ ಸಲ್ಲದ ಆರೋಪಗಳು ಇವೆ, ಇಂತಹದೊಂದು ಕಾರಣಕ್ಕಾಗಿ ಆಗಾಗ್ಗೆ ಸ್ಪಷ್ಠನೆ ಹಾಗೂ ಸತ್ಯ-ಮಿಥ್ಯಗಳ ತುಲನೆಗಳ ತರ್ಕಕ್ಕೆ ಸಂದೇಶ ರವಾನಿಸದಿದ್ದೊಡೆ ಅದೊಂದು ಪ್ರಮಾದವಾಗಿ ಬಿಡುತ್ತದೆ, ಸೂರ್ಯಗಗನ ಕನ್ನಡ ದಿನಪತ್ರಿಕೆ ಕಳೆದ ೨೦೨೫ರ ಇಸವಿ ಆರಂಭದಲ್ಲಿ ತನ್ನ ದಿಕ್ಕನ್ನು ಬದಲಿಸಿಕೊಂಡಿದೆ, ಹೌದು ೨೦೦೫ರಲ್ಲಿ ದಿನಪತ್ರಿಕೆಯಾಗಿ ಆರಂಭಗೊಂಡ ಜರ್ನಲಿಸಂ ಜರ್ನಿಗೆ ದೀವಿಗೆಯಾಗಿದ್ದ ಸೂರ್ಯಗಗನ ದಿನಪತ್ರಿಕೆಯನ್ನು ಹಲವು ಕಾರಣಗಳಿಂದಾಗಿ ೪೮ ಪುಟಗಳ ಮ್ಯಾಗಜಿನ್ ಮಾಸಿಕ ಪತ್ರಿಕೆಯಾಗಿ ಡಿಕ್ಲರೇಷನ್ ಪಡೆದುಕೊಂಡು ಪ್ರಚುರದಲ್ಲಿದೆ, ಈ ಸಾಹಸ ನನ್ನ ಸ್ವಂತ ಬರಹದ ಬದುಕಿನ ಆರ್ಥಿಕತೆಯ ಕ್ಷೀಣತೆಯ ಕಾರಣ ಬಹಳವಾಗಿ ಕಾಡುತ್ತಿದ್ದರಿಂದ, ನೂರು ಯೋಚನೆಗಳ ತರುವಾಯ ಅದನ್ನು ಮಾಸಿಕ ಮ್ಯಾಗಜಿನ್ ಆಗಿ ಪರಿವರ್ತಿತಗೊಳಿಸಿದ್ದೇನೆ. ಆದರೆ ಮ್ಯಾಗಜಿನ್ ಎನ್ನುವ ಪುಟಗಳಲ್ಲಿ ಸುದ್ದಿ, ಲೇಖನಗಳು, ಸಾಹಿತ್ಯ, ಸಾಂಸ್ಕೃತಿಕ, ಸಿನಿಮಾಗಳ ಒಟ್ಟು ಸಗಟಿನ ದಾಸ್ತಾನು ಲಗತ್ತಿಸಿ ಓದುಗರ ಜಗಲಿಗೆ ವಿರಾಜಮಾನಿಸುವ ಪ್ರಯತ್ನ ಸಾಗುತ್ತಿದೆ, ಇನ್ನೇನು ಕೆಲವೇ ತಿಂಗಳುಗಳಲ್ಲಿ ರಾಜ್ಯದಾಧ್ಯಂತ ಸೂರ್ಯಗಗನ ಮ್ಯಾಗಜಿನ್ ಪತ್ರಿಕೆಯನ್ನು ಮೈಲಿಗಲ್ಲಾಗಿಸುವುದರಲ್ಲಿ ಯಾವುದೇ ಅನುಮಾನವಿಲ್ಲವಾಗಿದೆ, ಇದಕ್ಕೆ ಸಾಕಷ್ಟು ಸ್ನೇಹ ಬಳಗ ಹಾಗೂ ಹಿತೈಷಿಗಳ ಬೆಂಬಲ, ಪ್ರೋತ್ಸಾಹವು ಬೆನ್ನೆಲುಬಾಗಿ ನಿಂತಿದೆ.
ಹೀಗೆ ಸೂರ್ಯಗಗನ ಎನ್ನುವ ಮಾತೃತ್ವದ ಹಾದಿಯಲ್ಲಿ ಅರ್ಥಿಕ ದುರ್ಬಲತೆ ಎದುರಾಗಿದ್ದರು, ಇನ್ನಿಲ್ಲದ ಗೌರವವನ್ನು ಕಟ್ಟಿಕೊಟ್ಟಿದೆ, ಎದ್ದು ನಿಲ್ಲು ವೀರ ದೇಶ ಕರೆದಿದೆ, ಪಡೆಯ ಕಟ್ಟು ಧೀರ ಸಮರ ಕಾದಿದೆ ಎನ್ನುವ ಹಾಡು-ಪಾಡಿನೊಂದಿಗೆ ಸಂಘಟಿತವಾಗಿ ನಡೆದು ಬಂದವನಿಗೆ ನಿಜಕ್ಕೂ ಬಲದಿ ಅಮರಿಕೊಂಡು ಕಾಪಿಟ್ಟಿದ್ದು ಇದೇ ಸೂರ್ಯಗಗನ ಪತ್ರಿಕೆ ಜೊತಗೆ ಈ ಹೊತ್ತಿನಲ್ಲಿ ಸೂರ್ಯಗಗನ ಡಾಟ್ ಕಾಂ, ಸೂರ್ಯಗಗನ ಯೂಟ್ಯೂಬ್ ಚಾನೆಲ್, ಎನ್ನುವ ಡಿಜಿಟಲ್ ಮಾಧ್ಯಮಗಳಾಗಿಯು ರೂಪಿತಗೊಂಡು ಹಲವು ಬರಹಗಳ ಶೈಲಿಗಳಲ್ಲಿ ಅಭಿವ್ಯಕ್ತಿಗಳು ದಾಖಲಾಗುತ್ತಿದೆ, ಇನ್ನೂ ಹದಿನಾರು ಪುಟದ ಪಾಕ್ಷಿಕ ಪತ್ರಿಕೆ ಇತ್ಯಾದಿ ಭೂಗತರ ನಿದ್ದೆಗೆಡಿಸಿದೆ, ಶಿವಮೊಗ್ಗದಲ್ಲಿ ನಡೆಯುತ್ತಿರುವ ಅವ್ಯಾಹತವಾದ ಲ್ಯಾಂಡ್ ಲಿಟಿಗೇಶನ್ ಕುರಿತಾಗಿ ದಾಖಲೆಗಳ ಸಹಿತ ಪ್ರಕಟಿಸಿದೆ, ಹಲವು ಸಮಾಜ ವಿದ್ರೋಹಿ ಚಟುವಟಿಕೆಗಳು, ಕಾನೂನು ಬಾಹಿರ ಚಟುವಟಿಕೆಗಳ ವಿರುದ್ದ ರಾಜಿರಹಿತವಾದ ಸುದ್ದಿ, ಲೇಖನಗಳ ಪ್ರಕಟಿಸಿದೆ, ಇಂತಹ ಮಖೇಡಿಗಳ ವಿರುದ್ದ ಬರೆದು ಸಮರ್ಥನೀಯವಾದ ನಿಲುವುನ್ನು ತಳೆದಿರುವುದು ಹೆಮ್ಮೆಯ ಸಂಗತಿ.
ಹೀಗೆ ಸುದ್ದಿ ಹಾದಿಯಲ್ಲಿ ಸುದ್ದಿಗೆ ಸೀಮಿತವಾಗಿಸಿ, ಸಂಬಂಧಿಸಿದ ಅಧಿಕಾರಿಗಳ, ಇಲಾಖೆಗಳ, ಸರ್ಕಾರಗಳ ಚಿತ್ತಕ್ಕೆ ತರಲಾಗಿದೆ, ಇನ್ಯಾವುದೇ ಕಾರಣಕ್ಕೂ ಭೂಗತರೊಂದಿಗೆ, ಲ್ಯಾಂಡ್ ಲಿಟಿಗೇಶನ್ ಮಂದಿಗಳೊಂದಿಗೆ ಇನ್ನಿತರ ಸಮಾಜ ವಿದ್ರೋಹಿಗಳೊಂದಿಗೆ ವೈಯಕ್ತಿಕವಾದ ಯಾವ ಸಂಪರ್ಕ, ಸಂಬಂಧಗಳು ಇಲ್ಲವಾಗಿದೆ, ಹೀಗಿದ್ದರು ಒಂದಷ್ಟು ಸಹಿಸದ ಮಾನಸೀಕರುಗಳು ಕಪ್ಪು ಮಸಿ ಬಳಿಯುವ ದುರದ್ದೇಶದಿಂದ ವ್ಯಥಾ ಡೀಲಿಂಗ್ ಆರೋಪಗಳನ್ನು ಆರೋಪಿಸುವ ಪ್ರಯತ್ನ ಮಾಡುತ್ತಿರುವುದು ತರವಲ್ಲವಾಗಿದೆ. ಹೀಗೆನಾದರು ಸಾರ್ವಜನಿವಾದ ಗಮನಕ್ಕೆ ಬಂದರೆ ಯಾವುದೇ ಮುಲಾಜಿಲ್ಲದೆ ಹತ್ತಿರದ ಪೊಲೀಸ್ ಠಾಣೆ ಅಥವಾ ಪತ್ರಿಕಾ ಕಛೇರಿಗೆ ಸಂಪರ್ಕಿಸಲು ಕೋರುತ್ತೇವೆ.
ಈ ಎಲ್ಲಾ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ನನ್ನ ಸಂಪಾದಕತ್ವದ ಸುದ್ದಿ ಮಾಧ್ಯಮಗಳಲ್ಲಿ ಅನಿಲ್ ವರ್ಣೇಕರ್, ಶಿವಮೊಗ್ಗ ನಗರ ವರದಿಗಾರರು, ಆರ್.ಮಹೇಂದ್ರ, ಶಿವಮೊಗ್ಗ ನಗರ ವರದಿಗಾರರು, ಸಿಗ್ಬತ್ ಉಲ್ಲಾ ಎನ್.ಎಂ ಶಿವಮೊಗ್ಗ ವರದಿಗಾರರು, ಹಾಗೂ ಕಛೇರಿ ಜವಾಬ್ದಾರಿ ನಿರ್ವಹಿಸುತ್ತಿರುವುದು ಬಿಟ್ಟರೆ ಇನ್ಯಾರು ಅಧಿಕೃತರಿಲ್ಲವಾಗಿದೆ, ಸುದ್ದಿ ಹಾಗೂ ಜಾಹಿರಾತುಗಳಿಗೆ ಸಂಬಂಧಿಸಿದಂತೆ ಇಂತಿವರನ್ನು ಸಂಪರ್ಕಿಸಬಹುದಾಗಿದೆ, ಎಂಬುವ ಅಂಬೋಣದೊಂದಿಗೆ ಸಾರ್ವಜನಿಕ ಪ್ರಕಟಣೆಯನ್ನು ಈ ಮೂಲಕ ಪ್ರಚುರ ಪಡಿಸುತ್ತಿದ್ದೇನೆ.

