September 23, 2026

I ಮಲೆನಾಡಿನ ಯಶಸ್ವಿ ಉದ್ಯಮಿ I ಅವಿನಾಶ್ ಅವರ ಸಾಹಸಗಾಥೆ I

0
avinash 2

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಮಲೆನಾಡಿನ ಯಶಸ್ವಿ ಉದ್ಯಮಿ I ಅವಿನಾಶ್ ಅವರ ಸಾಹಸಗಾಥೆ I

ಉದ್ಯಮ, ಉದ್ಯಮಶೀಲತಾ ಅಭಿವೃದ್ದಿಗಳ ಕುರಿತಾಗಿ ವಿಸ್ತೃತೆಗಳು, ಕದಂಬಬಾಹುವಿನಂತಹ ವೇದಿಕೆ ಭಾಷಣಗಳು, ತರ್ಕ, ತುಲನೆಗಳು ಮಾಡಬಹುದು ಆದರೆ ವಿಪರೀತ ಈ ಹೊತ್ತಿನ ಸವಾಲುಗಳನ್ನು ಆಸ್ವಾದಿಸಿಕೊಂಡು ನಿಭಾಯಿಸುವ ಬಲು ಜವಾಬ್ದಾರಿಗಳು ಒಂದು ಸಮಗ್ರ ಯುದ್ದವೇ ಆಗಿರುತ್ತದೆ, ಬಂಡವಾಳ ಹೂಡಿಕೆ, ಅದರ ನಿರ್ವಹಣೆ ಲಾಭ-ನಷ್ಟಗಳ ಲೆಕ್ಕಾಚಾರಗಳು, ದಿನದಿಂದ ದಿನಕ್ಕೆ ಹೊಸತನು ಕೊಡುವ ಕಯ್ಯಾಲಿಯಲ್ಲಿ ತನ್ನ ಬಿಡುವಿನ ಸಮಯಗಳನ್ನು ಕೂಡ ಮರೆತು ಹೋಗುವ ಓರ್ವ ಉದ್ಯಮಿ, ಈ ಹೊತ್ತಿನ ಸಮಾಜಕ್ಕೆ ದೊಡ್ಡದೊಂದು ಆಸ್ತಿ ಎನ್ನಬಹುದು, ಏಕೆಂದರೆ ತಾನು ಸಾಲಗಾರನಾಗಿ ಅನೇಕ ಸ್ಪರ್ಧಾತ್ಮಕ ಸವಾಲುಗಳನ್ನು ಎದುರಿಸಿ, ಕೆಲವರ ಅಪನಿನಂದನೆಗಳ ಸಹಿಸಿಕೊಂಡು ಅನೇಕತೆಯ ಕವಲುದಾರಿಗಳಲ್ಲಿನ ಮುಳ್ಳು ಮೊನಚುಗಳ ತುಳಿದುಕೊಂಡು, ತನಗಾದ ನೋವುಗಳಿಗೆ ಮುಲಾಮಿಲ್ಲದೆ ಉದ್ಯಮವೊಂದನ್ನು ಕಟ್ಟಿ ಬೆಳೆಸುವುದು, ಅದರಲ್ಲಿ ಯಶಸ್ಸಿನ ಪತಾಕೆ ಹಾರಿಸುವುದು ನಿಜಕ್ಕೂ ಸಾಹಸವೇ ಹೌದಾಗಿದೆ, ಇಂತಹ ಸಾಹಸಗಳೇ ಅನೇಕ ಬದುಕುಗಳಿಗೆ ಉದ್ಯೋಗಗಳನ್ನು ಸೃಷ್ಟಿಸುತ್ತದೆ, ಸಹ ವಹಿವಾಟುಗಳಿಗೆ ಕಾರಣವಾಗುತ್ತದೆ, ತೆರಿಗೆ ಪಾವತಿಗಳನ್ನು ಮಾಡುತ್ತದೆ, ನಷ್ಟದ ಸಂಕೋಲೆಗಳ ಸಾಂಗತ್ಯವಿದ್ದರು ಅದನ್ನು ಲಾಭದಾಯಕವಾಗಿ ಪರಿವರ್ತಿಸುವ ಉದ್ಯಮಿಯೋರ್ವನ ಸಾಹಸಗಾಥೆ ಶ್ಲಾಘನೀಯವಾದುದ್ದಾಗಿದೆ.

ಇಂತಹದೊಂದು ಸಮಷ್ಠಿ ಪ್ರಯತ್ನದ ಉದ್ಯಮಿ ಅವಿನಾಶ್‌ರವರ ಕುರಿತಾಗಿ ಇಲ್ಲಿ ಉಲ್ಲೇಖಿಸಲಾಗುತ್ತಿದೆ, ಓರ್ವ ಉಪನ್ಯಾಸಕನಾಗಿ ತಮ್ಮದೇ ಆದ ವೃತ್ತಿ ಜೀವನ ನಿರ್ವಹಣೆಯ ಮಜಲುಗಳ ಜಗಲಿಗಳಲ್ಲಿ ವಿರಾಜಿಸಿ ನಿವೃತ್ತಿ ಹೊಂದಬೇಕಾದ ಗುರಿಗಳಲ್ಲಿ ಸಾಗಬೇಕಾಗಿದ್ದವರು ಒಮ್ಮೆಲೆ ಚಿಂತನೆ ಅವರಲ್ಲಿ ಬಹಳವಾಗಿ ಕಾಡುತ್ತದೆ, ಈ ಬದುಕು ಹೀಗೆಯೇ ಒಂದೇ ಹಾದಿಯಲ್ಲಿಯೇ ಕೊನೆಯಾಗಬಾರದು ಬಹುತ್ವದ ವಾಸ್ತವ ಕಲ್ಪನೆಗಳಿಗೆ ಜೀವದುಂಬಿಯಾಗಿ, ಎಂದಿಗೂ ಬಾಡದ ಹೂವಿನ ಘಮಲು ಆಗಬೇಕು, ಈ ನಂತರದಲ್ಲೂ ಶಾಸನವಾಗಿಸಬೇಕು ಎಂದುಕೊಂಡು ಹೋಟೆಲ್ ಉದ್ಯಮಕ್ಕೆ ಮುಂದಾಗುವ ಅವಿನಾಶ್ ಮೊದಲಿಗೆ ಜೈಲು ರಸ್ತೆಯ ಮುಖ್ಯದಾರಿಯಲ್ಲಿನ ಕಟ್ಟಡವೊಂದರಲ್ಲಿ ಸಣ್ಣದೊಂದು ಹೋಟೆಲ್ ಶುರು ಮಾಡುತ್ತಾರೆ, ಈ ತರುವಾಯದ ವರ್ಷಮಾನದಲ್ಲಿಯೇ ಗಾಂಧಿನಗರದಲ್ಲಿ ಹೋಟೆಲ್ ಉದ್ಯಮಕ್ಕೊಂದು ರಚನಾತ್ಮಕತೆಯ ಟಚ್ ಮಾಡಿ, ವಿನೂತನತೆಯ ಪರಿಭಾಷೆ ಬರೆಯುತ್ತಾರೆ, ಈ ಕಾರಣ ಮಾತ್ರದಿಂದಲೇ ‘ವಿಧಾತ್ರಿ’ ಹೋಟೆಲ್ ಶಿವಮೊಗ್ಗದ ಜನತೆಗೆ ಬ್ಯುಸಿನೆಸ್ ಪಾಯಿಂಟ್ ಆಗುತ್ತದೆ,

ಆದರೆ ಈ ವಿಧಾತ್ರಿಯ ಹೆಸರು ಕೂಡ ಅವಿನಾಶ್‌ರವರಿಗೆ ಸವಾಲು ನೀಡುತ್ತದೆ, ಈ ಸವಾಲಿನಲ್ಲಿ ಮೊದಲಿಗಿದ್ದ ‘ವಿದ್ಯಾರ್ಥಿ’ ಎನ್ನುವ ಹೆಸರು ಟ್ರೆಂಡ್ ಪಡೆದುಕೊಂಡು ಹೋಟೆಲ್ ಉದ್ಯಮದ ಖ್ಯಾತಿ ಪಡೆಯಿತೋ, ಅದಾಗ ಈ ಹೆಸರು ದೇಶ ವ್ಯಾಪಿ ನೊಂದಾಯಿತ ಸಂಸ್ಥೆಯಾಗಿದ್ದು, ಈ ಹೆಸರು ಬಳಸುವಂತಿಲ್ಲ ಎಂದು ಸಕ್ಷಮ ಪ್ರಾಧಿಕಾರದಿಂದ ಬಿಡುಗಡೆಯಾದ ಆದೇಶದ ಪತ್ರ ನೋಡಿದ ನಂತರ ತೊಂದರೆಯಿಲ್ಲ, ವಿಧ್ಯಾರ್ಥಿ ಹೆಸರಿನ ಬದಲಿಗೆ ಅದೊಂದು ‘ವಿಧಾತ್ರಿ’ ಎಂದು ಬದಲ್ಗೊಂಡು ಇಂದಿಗೂ ಇದೊಂದು ಐಕಾನ್ ಆಗಿರುವುದು ವಿಶೇಷವಾಗಿದೆ, ಈ ಸವಾಲಿಗೆ ಎದೆಗೊಟ್ಟಿ ನಿಂದ ಅವಿನಾಶ್‌ರವರಲ್ಲಿದ್ದ ಸವಾಲುಗಳಿಗೆ ಪುಷ್ಠಿ ಸೃಷ್ಟಿಯಾಗುತ್ತದೆ, ಹೀಗಾಗಿಯೇ ವಿನೋಬಾನಗರದಲ್ಲಿದ್ದ ಉಪಹಾರ ಮಂದಿರವನ್ನು ‘ವಿಧಾತ್ರಿ’ ಯಾಗಿ ಪರಿವರ್ತಿಸಿ ಯಶಸ್ಸು ಕಟ್ಟಿಕೊಡುತ್ತಾರೆ, ಇನ್ನೂ ಜಯನಗರದಲ್ಲಿರುವ ನೆಹರು ಸ್ಟೇಡಿಯಂ ಪಕ್ಕದಲ್ಲಿದ್ದ ಹೋಟೆಲ್ಲೊಂದು ಪಡೆದು ಅದನ್ನು ‘ವಿಧಾತ್ರಿ’ ಯಾಗಿ ನಿಲ್ಲಿಸುವ ಹೊತ್ತಿಗೆ ನಾಲ್ಕೈದು ವರುಷಗಳ ಅನುಭವ ಅನುಭೂತಿ ತಂದು ಕೊಡುತ್ತದೆ, ಒಳ್ಳೆಯ ಗುಣಮಟ್ಟದ ಅಹಾರ ಪೂರೈಕೆ, ನಿರಂತರ ಸೇವೆ, ಶುಚಿ-ರುಚಿ ಆಹಾರವನ್ನು ಗ್ರಾಹಕರಿಗೆ ನೀಡಿದ್ದೇ ಆದಲ್ಲಿ ‘ವಿಧಾತ್ರಿ’ ಭವಿಷ್ಯದಲ್ಲಿ ಮೈಲುಗಲ್ಲಾಗಿ ಬಿಡುತ್ತದೆ ಎಂದುಕೊಂಡವರು ಅವಿನಾಶ್ ಈ ವಹಿವಾಟು ವಿಸ್ತರಣೆ, ಸೇರಿದಂತೆ ವಿಸ್ತಾರವಾದಷ್ಟು ನೂರಾರು ಕುಟುಂಬಗಳಿಗೆ ಕೆಲಸ ನೀಡಿದ ಯಶಸ್ವಿ ಉದ್ಯಮಿ ಅವಿನಾಶ್ ಉದ್ಯೋಗ ಸಮಸ್ಯೆಗಳನ್ನು ನೀಗಿಸಿ, ಹಲುವು ಸೂರುಗಳಿಗೆ ನೆರಳಾಗಿ ನಿಂದವರು ಎಂದರೆ ತಪ್ಪಾಗಲಾರದು, ವಹಿವಾಟು ಎಂದಕೊಂಡಲೇ ಅಲ್ಲೊಂದು ಎದುರಾಗಬಹುದಾದ ನಷ್ಟಗಳನ್ನು ಕೂಡ ತನ್ನ ಹೊಣೆಗಾರಿಕೆಯಾಗಿ ಸ್ವೀಕರಿಸುವ ಉದ್ಯಮಿ ಅವಿನಾಶ್ ಸಕರಾತ್ಮಕ ಮೆಚ್ಚುಗೆಗಳನ್ನು ಅದ್ಯಾಗೆ ಸ್ವೀಕರಿಸುತ್ತಾರೋ..? ಹಾಗೆಯೇ ನಕರಾತ್ಮಕ ಆರೋಪ, ಕಡಿವಾಣಗಳನ್ನು ಕೂಡ ಅತ್ಯಂತ ಸವಾಲಿನಲ್ಲಿಯೇ ಆಸ್ವಾದಿಸಿಕೊಂಡು ಹೋಟೆಲ್ ಉದ್ಯಮದಲ್ಲಿ ಉತ್ತುಂಗಕ್ಕೇರಿ ಮಲೆನಾಡಿನ ಯಶಸ್ವಿ ಉದ್ಯಮಿ ಎಂದು ಉವಾಚಿಸಿಕೊಂಡಿರುವುದು ಪ್ರಶಂಸನೀಯ.

ಹೀಗೆ ‘ವಿಧಾತ್ರಿ’ ಎನ್ನುವ ಉದ್ಯಮವನ್ನು ಮಲೆನಾಡಿನ ಒಡಲಿನಾಳದಲ್ಲಿಟ್ಟು ಪೋಷಿಸುತ್ತಿರುವ ಅವಿನಾಶ್‌ರವರ ಸಾಹಸಗಾಥೆಗೊಂದು ಮತ್ತೊಂದು ಶಾಖೆ ದೂರ ದೇಶದ ಮಲೇಷಿಯಾ ಮಾದರಿ, ಹೋಟೆಲ್ ಬ್ಯಾಕ್ ಡ್ರಾಪ್ ಡಿಸೈನ್‌ಗೊಳಿಸಿ ಚಾಲನೆ ನೀಡಿದ್ದು ರಂಗನಾಥ್ ಬಡಾವಣೆಯ ಮುಖ್ಯರಸ್ತೆಯಲ್ಲಿರುವ ಹೋಟೆಲ್ ‘ವಿಧಾತ್ರಿ’ ಇದು ಇಡೀ ಶಿವಮೊಗ್ಗ ಮಾತ್ರವಲ್ಲ ಅಕ್ಕ-ಪಕ್ಕದ ಜಿಲ್ಲೆಗಳಲ್ಲಿ ದರ್ಶಿಸಿಕೊಳ್ಳದ ಮಾದರಿ ರೀತಿಯಲ್ಲಿ ಹೊಸ ವಿನ್ಯಾಸದಲ್ಲಿದೆ ಎನ್ನುವುದು ಅದೆಷ್ಟೋ ಗ್ರಾಹಕರು ಇಂದಿಗೂ ಗುಡ್‌ವಿಲ್ ರೈಟಪ್ ತಿಳಿಸುತ್ತಾರೆ, ಅಂತಹದೊಂದು ಹೆಸರು ಕೆಲವೇ ವರುಷಗಳಲ್ಲಿ ಕಟ್ಟಿಕೊಟ್ಟಿದ ಕೀರ್ತಿ ಅವಿನಾಶ್‌ರವರದ್ದಾಗಿದೆ,

ಹೌದು ‘ವಿಧಾತ್ರಿ’ ಶಿವಮೊಗ್ಗದಲ್ಲಷ್ಟೆ ಅಲ್ಲದೆ ರಾಜ್ಯ ಹಾಗೂ ಹೊರರಾಜ್ಯದವರೆಗೆ ಸಾಗಿ ಹೋಗಿದೆ, ಅಷ್ಟೊಂದು ಬರಪೂರತೆಯಲ್ಲಿ ಹೆಸರು ವಿಸ್ತಾರಗೊಂಡಿರುವುದು ಮಲೆನಾಡಿಗೊಂಡು ಹೆಮ್ಮೆಯೇ ಆಗಿದೆ, ಹೋಟೆಲ್ ಉದ್ಯಮ ನಡೆಸುವುದು ಬಲು ಕ್ಲಿಷ್ಟಕರವಾದರು ಸಾರ್ವಕಾಲಿಕವಾಗಿರುವ ಸ್ಪರ್ಧಾತ್ಮಕತೆಯ ಸವಾಲುಗಳನ್ನು ಸಮಗ್ರತೆಯ ಸಮಷ್ಠಿ ಭಾವದಡಿ ನಿರ್ವಹಿಸಿದ ಅವಿನಾಶ್‌ರವರು ಇಂದು ಶಿವಮೊಗ್ಗದ ಯಶಸ್ವಿ ಉದ್ಯಮಿಯಾಗಿ ಉದ್ಯಮವನ್ನು ನಡೆಸುತ್ತಿರುವುದು ಅಲ್ಲದೆ ಸರಿ ಸುಮಾರು ಮುನ್ನೂರಕ್ಕೂ ಹೆಚ್ಚು ಹೋಟೆಲ್ ಕಾರ್ಮಿಕರಿಗೆ ಉದ್ಯೋಗವನ್ನು ಸೃಷ್ಟಿಸಿದ ಉದ್ಯೋಗಧಾತರಾಗಿದ್ದಾರೆ, ಈ ನಡುವೆ ತರಕಾರಿ, ದಿನಸಿ, ಹಲವು ಸಹ ವ್ಯಾಪಾರಿಗಳಿಗೆ, ಆಗಾಗ್ಗೆ ಹೋಟೆಲ್ ನವೀಕರಣಕ್ಕಾಗಿ ಕಾರ್ಪೆಂಟರ್ ಕುಶಲಕರ್ಮಿಗಳಿಗೆ ಕೆಲಸ, ಹೀಗೆ ಅನೇಕತೆಯ ವ್ಯಾಪಾರಿಗಳಿಗೂ ಸಹಕಾರಿಯಾಗಿರುವ ‘ವಿಧಾತ್ರಿ’ ಹೋಟೆಲ್ ಉದ್ಯಮ ಮಲೆನಾಡಿನ ಕಾಮಧೇನುವೇ ಆಗಿರುವುದು ಮತ್ತೊಂದು ಮಾತೃತ್ವದ ಪ್ರತೀಕವಾಗಿದೆ.

ಒಂದೆಡೆ ಉಪನ್ಯಾಸಕನಾಗಿ ಉದ್ಯಮಿಯಾಗಿ ನಿಂದ ಅವಿನಾಶ್ ಶಿಕ್ಷಣ ಕ್ಷೇತ್ರದಲ್ಲಿ ಇಂತಿಷ್ಟೆ ರಚನಾತ್ಮಕತೆಯ ಬುಟ್ಟಿ ತೆರೆದಿಟ್ಟು ಬಹುತ್ವದ ಹಾದಿಯಲ್ಲಿ ಯಶಸ್ಸಿನ ಕೃಷಿಕನಾಗಿ ಹೊರಹೊಮ್ಮಿರುವುದು ಬಹುತೇಕ ಸಮಾಜಮುಖಿ ಸಂಸ್ಥೆಗಳು ಸ್ಮರಿಸಬೇಕಾಗಿರುವುದು ಆದ್ಯ ಕರ್ತವ್ಯವಾಗಿದೆ ಎಂದೇ ಅಕ್ಷರಮುಖಿಯಾಗಿ ಉವಾಚಿಸುತ್ತೇನೆ ಇನ್ನೂ ಶಿಕ್ಷಣದ ಹಾದಿಯಲ್ಲಿ ಇಂತಿವರ ಸಾಧನೆ ಕುರಿತಂತೆ ಬರೆಯುವುದಾದರೆ. ಉನ್ನತ ವ್ಯಾಸಾಂಗದ ಹಾದಿ ಬಲು ಕ್ಲಿಷ್ಟಕರ, ಅದರಲ್ಲೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ದೂರದ ಊರುಗಳಿಗೆ ತೆರಳಿ ಕೋಚಿಂಗ್ ಪಡೆಯಲು ಬಹಳಷ್ಟು ಮಾನಸೀಕ ಸಮಸ್ಯೆಗಳು ಈ ಹೊತ್ತಿನ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತಲೆದೋರುತ್ತದೆ, ಮದ್ಯಮ, ಬಡ ಕ್ರಮಾಂಕದ ಬದುಕಿನ ಶ್ರೇಣಿಗಳು ಈ ಬಗ್ಗೆ ಯೋಚಿಸುವುದು ಒಂದು ಅತೀವ ಸವಾಲು ಕೂಡ ಹೌದು, ಉದಾಹರಣೆಗೆ ಆಡು ಮಾತಿನಂತೆ ಮಗು ಶಾಲೆಗೆ ಹೋಗುತ್ತಿರುವ ಸಂದರ್ಭದಲ್ಲಿ ಪರಿಚಯಸ್ಥರು, ಕೌಟುಂಬಿಕ ವರ್ಗದವರು ಕೇಳುತ್ತಾರೆ ಏನು ಮಗು ಓದಿ ಏನಾಗುತ್ತಿಯಾ..? ಎಂದರೆ ಆ ಮಗು ಡಾಕ್ಟರ್ ಆಗುತ್ತೇನೆ, ಇಂಜೀನಿಯರ್ ಆಗುತ್ತೇನೆ, ಎಂದು ಬಹಳ ಸಲೀಸಾಗಿ ಹೇಳಿ ಬಿಡುತ್ತದೆ, ಆ ಅರಿವಿನ ಎಳೆ ಇಲ್ಲದೆ ಹೇಳಿದ ಮಾತುಗಳು ಮುಂದೆ ನಿಜದ ಬದುಕಿನಲ್ಲಿ ಈಡೇರಿಸುವುದಕ್ಕೆ ಪೋಷಕರಿಗೆ ಸಾದ್ಯವಾಗುತ್ತದೆಯೇ..? ಇದು ಸಾದ್ಯಗೊಳಿಸಲೇ ಬೇಕು ಎನ್ನುವ ಪೋಷಕರು ಯಾವ ವ್ಯವಸ್ಥೆಗಳನ್ನು ಅನುಸರಿಸಬೇಕು,

ಎನ್ನುವ ತುಲನೆಯ ತರ್ಕದಲ್ಲಿಯೇ ಮಗುವಿನ ವ್ಯಾಸಾಂಗದ ಹಾದಿ ಅನೇಕ ತಿರುವು ಪಡೆದುಕೊಂಡಿರುತ್ತದೆ, ಒಂದು ಅಂತಹದೊಂದು ವ್ಯವಸ್ಥೆ ಇದ್ದ ಊರಿನಲ್ಲಿ ಇಲ್ಲದಿರುವುದು, ಬಹಳ ಮುಖ್ಯವಾಗಿ ಉನ್ನತ ವ್ಯಾಸಾಂಗಕ್ಕೆ ಎದುರಿಸಬಹುದಾದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯ ಪೂರ್ವ ತಯಾರಿ ಇಲ್ಲದಿರುವುದು, ಪ್ರಾಥಮಿಕ ಹಂತದಿಂದಲೂ ಈ ಕುರಿತಾಗಿ ಜ್ಞಾನದ ಕೊರತೆಗಳು ಒಮ್ಮೆಲೆ ಸಾಗರದಲೆಗಳಂತೆ ಅಪ್ಪಳಿಸಿ ಆತಂಕವನ್ನು ಸೃಷ್ಠಿಸುತ್ತಿರುವುದರಿಂದ, ಮಕ್ಕಳ ಮನಸಿನಲ್ಲಿದ್ದ ವೈದ್ಯಕೀಯ ರಂಗದ ಚಿಂತನೆಗಳು ಬಹುತೇಕ ಸಮಾಧಿಯಾಗುತ್ತದೆ, ಇಂತಹ ವಿದ್ಯಾರ್ಥಿ ಭವಿಷ್ಯಗಳನ್ನು ನಿಜದ ಬದುಕಿನಲ್ಲಿ ದರ್ಶಿಸಿಕೊಂಡಿದ್ದೇವೆ.

ಹೀಗೊಂದು ಟಿಪ್ಪಣಿಯೊಂದನ್ನು ತಮ್ಮ ಮುಂದಡಿಯಿಟ್ಟು, ಚಳುವಳಿಗಳ ನೆಲೆ, ಸಾಹಿತ್ಯ ಸೋಗಡಿನ ಸೆಲೆ, ಹೊಸತೊಂದು ಮೈಲಿಗಲ್ಲು ದಾಖಲಿಸುವುದಕ್ಕೆ ದಾಪುಗಾಲಿಟ್ಟಿದೆ, ಹೌದು ಶೈಕ್ಷಣಿಕ ಕ್ಷೇತ್ರದಲ್ಲಿ ಶಾಲಾ-ಕಾಲೇಜುಗಳ ಸ್ಥಾಪನೆ ಅದರ ನಿರ್ವಹಣೆ ಸಾಮಾನ್ಯ, ಯಾಕೆಂದರೆ ವ್ಯಕ್ತಿ ವಿಕಸನದಂತಹ ಜ್ಞಾನವಿಲ್ಲದೆ ಟ್ರೇಡಿಷನಲ್ ಪರಿಕ್ಷೆಗಳಲ್ಲಿ ಗರಿಷ್ಠ ಅಂಕಗಳು ಪಡೆದಿದ್ದರೂ ಭಾರತದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೊಂದಾದ ?ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ ನೀಟ್‌ನಲ್ಲಿ ಕುಸಿದು ಬಿಡುತ್ತಾನೆ ಎಂದರೆ ಕಾರಣವೇನಿರಬಹುದು ಎನ್ನುವುದಕ್ಕೆ ವೈಜ್ಞಾನಿಕ ಸತ್ಯಗಳಿವೆ, ಓದುವ ಮಕ್ಕಳಲ್ಲಿ ಆತಂಕವೇ ಇಲ್ಲದ ಜ್ಞಾನದ ಸುಂದರತೆಯನ್ನು ಅರಳಿಸಬೇಕಿದೆ, ?ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯನ್ನು ಎದುರಿಸಲು ಪೂರ್ವ ಸಿದ್ದತೆಗಳಿಲ್ಲದ ಮಕ್ಕಳಲ್ಲಿ ಧೈರ್ಯವನ್ನು ತುಂಬಿ ತಜ್ಞ್ಯ ಉಪನ್ಯಾಸಕರುಗಳ ತಂಡದಿಂದ ಕಾಲ ಕಾಲಕ್ಕೆ ಸಮರ್ಪಕ ಹಾಗೂ ಸಮಗ್ರ ಬೋಧನೆಗಳ ಅಗತ್ಯತೆಯನ್ನು ನಿರ್ಮಿಸುವುದು, ಹೆಚ್ಚಿನ ಕೋಚಿಂಗ್ ನೆಪದಲ್ಲಿ ದೂರದ ಊರುಗಳಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ಪೋಷಕರ ನಡುವಿನ ಭಾವನೆಗಳ ತೊಳಲಾಟ, ನಿಶ್ಚಿಂತತೆ ಇಲ್ಲದ ವೇದನೆಗಳಿಂದ ಮುಕ್ತಗೊಳಿಸುವುದು, ಅತ್ಯಾಧುನಿಕ ತಂತ್ರಜ್ಞಾನಗಳು ಬದಲುಗೊಂಡಿದ್ದರೂ ಸಹ ಅಗತ್ಯಕ್ಕೆ ತಕ್ಕಂತೆ ಬಳಸಿಕೊಂಡು ಮ್ಯಾನ್ಯುಯಲ್ ಹಾದಿಯಲ್ಲಿಯೇ ಗುರುಕುಲ ಕಲ್ಪನೆಯಡಿ ವಿದ್ಯಾರ್ಥಿಗಳನ್ನು ವೈದ್ಯಕೀಯ ರಂಗದತ್ತ ಕೊಂಡೋಯ್ಯುವ ಕನಸು ಹೊತ್ತಿದ್ದು ರಚನಾತ್ಮಕ ಮನಸಿನ, ಮಲೆನಾಡಿನ ಅವಿನಾಶ್ ಅವರದ್ದಾಗಿದೆ,

ಅವರು ನಿಜಕ್ಕೂ ಒಂದು ಕೆಲಸವನ್ನು ಹೇಗೆ ಅಚ್ಚುಕಟ್ಟಾಗಿ ಕಟ್ಟಬಹುದು ಎಂದು ವಾಸ್ತವವಾಗಿ ಈ ಮಲೆನಾಡಿನ ನಗರಿಯಲ್ಲಿ ತೋರಿಸಿಕೊಟ್ಟಿದ್ದಾರೆ, ಒಂದು ಹೋಟೆಲ್ ಉದ್ಯಮವನ್ನು ಕೂಡ ಹೇಗೆ ಯಶಸ್ಸಿನತ್ತ ಕ್ರಿಯೇಟಿವ್ ಮಾದರಿಯಾಗಿ ಮೇರೆತ್ತರಕ್ಕೆ ತಂದು ರಾಜ್ಯದಲ್ಲಿಯೇ ಐಕಾನ್ ಉದ್ಯಮಿಯಾಗಿ ಗುರುತಿಸಿಕೊಂಡಿರುವುದು ಮಲೆನಾಡಿನ ನೆಲಕ್ಕೆ ಗೌರವವೇ ಆಗಿದೆ, ಅವರೊಬ್ಬ ಉಪನ್ಯಾಸಕರು ಆಗಿರುವುದರಿಂದ ಅವರಲ್ಲಿ ವಿಶೇಷ, ಅದ್ಬುತ ಶಿಕ್ಷಣ ಕಲ್ಪನೆಯೊಂದು ಕನಸಿನ ತೊಟ್ಟಿಲಾಗಿ ತೂಗುವುದಕ್ಕೆ ಶುರುವಿಟ್ಟಿತು, ಏನೇ ಆಗಲಿ ಶಿಕ್ಷಣ ರಂಗದಲ್ಲಿ ಅನೇಕ ಬದಲಾವಣೆಗಳ ನಡುವೆ ಉನ್ನತ ವ್ಯಾಸಾಂಗಕ್ಕೆ ಸೇತುವೆಯೊಂದನ್ನು ನಿರ್ಮಿಸಬೇಕೆಂದು ಆತ್ಮಶಪಥ ಶಾಶ್ವತ ವಾದಂತೆಯೇ ಉನ್ನತ ವ್ಯಾಸಾಂಗದ ಕನಸುಗಳ ಹೊತ್ತಿರುವ ಅನೇಕ ವಿದ್ಯಾರ್ಥಿಗಳ ಭವಿಷ್ಯವನ್ನು ಸಾಕಾರಗೊಳಿಸಲು ಹೊರ ಊರುಗಳ ಬ್ರಾಂಡ್ ಅಕಾಡೆಮಿ ಕೋಚಿಂಗ್‌ಗಳಿಗಿಂತಲೂ ಭಾರತದ ಪೂರ್ವ ಪರಂಪರೆಗೆ ಅನುಗುಣವಾಗಿ ವೈದ್ಯಕೀಯರಂಗಕ್ಕೆ ಪ್ರವೇಶ ಪಡೆಯಲು ನೆನೆಗುದಿಗೆ ಬಿದ್ದಿದ್ದ ಎಜ್ಯುಕೇಷನಲ್ ಪ್ರಾಜೆಕ್ಟ್ ನಡುವೆ ಬ್ರಿಡ್ಜ್ ದ ಗ್ಯಾಪ್ ನಿರ್ಮಿಸಿರುವ ಹೆಗ್ಗಳಿಕೆಗೆ ‘ದೇಶ್ ನೀಟ್ ಅಕಾಡೆಮಿ’ ( ದಕ್ಷಾಸ್ ಎಜ್ಯುಕೇಷನಲ್ ಸರ್ವೀಸಸ್ ಹಾಲಿಸ್ಟಿಕ್ ) ತನ್ನದೇ ಆಖಾಡವನ್ನು ಸೃಷ್ಟಿಸಿಕೊಂಡಿದೆ.

ಇದೊಂದು ಮಲೆನಾಡಿಗೆ ಹೆಮ್ಮೆಯೇ ಹೌದು. ಇಂತಹದೊಂದು ವಿಶೇಷ ಕಲ್ಪನೆಗೆ ಮೊದಲ ಹೆಜ್ಜೆಯಲ್ಲಿಯೇ ಜೊತೆಯಾದವರು ವೃತ್ತಿಪರ ಶಿಕ್ಷಕರ ತಂಡ ಇಲ್ಲೊಂದು ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆದಿರುವುದು ವಿಶೇಷವಾಗಿದೆ, ಯಾಕೆ ಶಿಕ್ಷಣ ಕ್ರಾಂತಿ ಎಂದರೆ ಸಾಮಾನ್ಯವಾದದ್ದು ಸಾಮಾನ್ಯವೇ ಆಗಿರುತ್ತದೆ, ಅದೊಂದು ಅಸಾಧಾರಣ, ಅಸಾಮಾನ್ಯ ರೂಪು ಪಡೆದರೆ ಅದುವೇ ಕ್ರಾಂತಿ ಅಲ್ಲವೇ.. ಹಾಗೆಯೇ ಮಲೆನಾಡಿಗೊಂದು ಶಾಶ್ವತವಾದ ಶಾಸನವನ್ನು ಬರೆಯಲೊರಟಿರುವ ಅವಿನಾಶ್ ಎ.ಆರ್‌ರವರು ಪ್ರಯತ್ನ ನಿಜಕ್ಕೂ ಕೈಗೂಡಲಿದೆ, ಯಾವುದೇ ಸಂದರ್ಭದ ಸಾಂದರ್ಭಿಕತೆ ಎದುರಾದರೂ ಸರಿ ಆ ಸವಾಲುಗಳ ನಡುವೆಯೇ ಯಾವುದೇ ಗ್ರೇಡ್ ವಿದ್ಯಾರ್ಥಿಗಳನ್ನು ವೈದ್ಯಕೀಯ ಪ್ರವೇಶ ಸಿಗಲೇಬೇಕು ಅಂತಹದೊಂದು ಮಾದರಿ ಶಿಕ್ಷಣ, ಕೋಚಿಂಗ್ ವಾತಾವರಣ, ಊಟ, ವಸತಿಗಳನ್ನು ನೀಡಲಾಗಿದೆ ಎಂದು ‘ದೇಶ್ ನೀಟ್ ಅಕಾಡೆಮಿ’ ತನ್ನ ಪ್ರಭುತ್ವವನ್ನು ಸಾಧಿಸಿದೆ.

ಒಟ್ಟಾರೆ ಉದ್ಯಮ ಹಾಗೂ ಶಿಕ್ಷಣದ ಯಶಸ್ಸಿನ ಹಾದಿಯಲ್ಲಿ ನಡೆದಿರುವ ಅವಿನಾಶ್‌ರವರಿಗೆ ಮಲೆನಾಡಿಗರ ಹೃದಯಸ್ಪರ್ಶಿ ಬೆಂಬಲವಿರಲಿ ಎನ್ನುವುದೇ ನನ್ನಯ ಅಂಬೋಣ.

Spread the love

Leave a Reply

Your email address will not be published. Required fields are marked *

error: Content is protected !!