September 26, 2026

I ಗಿಲ್ಲಿ ಗೆಲ್ಬೇಕು ಅದುವೇ ನ್ಯಾಯ I

0
Gara 1

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಗಿಲ್ಲಿ ಗೆಲ್ಬೇಕು ಅದುವೇ ನ್ಯಾಯ I

ಬಿಗ್ಬಾಸ್ ಎನ್ನುವ ನೈಜ ಚಿತ್ರಣ
ಕಿಚ್ಚ ಸುದೀಪರ ವಾರದ ಹೂರಣ,
ಕರವೇ ನಾರಾಯಣ ಗೌಡರ ವಕಾಲತ್ತು..?
ತಿರುಗಿ ಬಿತ್ತು ಕನ್ನಡಿಗರ ತಾಕತ್ತು..!

ಗಿಲ್ಲಿಯೆಂಬ ಬಡವನೆದೆಯ ಸಾಮರ್ಥ್ಯ,
ಅಧಮರ ಹಣದ ಅಂದಣವೇ ವ್ಯರ್ಥ,
ಬೊಬ್ಬಿರಿದ ಸ್ವಜನ ಪಕ್ಷಪಾತದೊಳು..
ನಿರರ್ಥಕವಾದ ಗತ ಹೋರಾಟಗಳು.‌?!

ಗಲ್ಲಿ ಗಲ್ಲಿಯಲ್ಲೂ ಗಿಲ್ಲಿ ಜಾತ್ರೆ,
ಅಚ್ಚೆಗಳ ಮೊಹರೊತ್ತಿದ ಅಭಿಮಾನದ ಯಾತ್ರೆ,
ಆಟೋಗಳ ಹಿಂಬದಿ ಮೂಡಿದ ಬರಹದ ಸಾಲೆ,
ಬಡವನ ಪ್ರತಿಭೆಗೆ ದಕ್ಕಿದೆ ಕನ್ನಡದ ಮಾಲೆ,

ಗಿಲ್ಲಿಯಿಂದಲೇ ಮನರಂಜನೆಯ ವಾರಗಳು,
ಒಳಗನ್ನಡಿಯಂತೆಯೇ ಬದಕು ಬಿತ್ತಿದ ದಿನಗಳು,
ನೋವಿನ ಅಲಗಿನ ಮ್ಯಾಲೆ ಅರಗಿಣಿಯ ಮಾತುಗಳು,
ನಕ್ಕು ನಲಿಸಿದ ನಿಜದ ರಂಗಭೂಮಿಕೆಯೊಳು,
ಸಾಬೀತಾದ ಗಿಲ್ಲಿಯ ಬಹುತ್ವ ಭಾವಗಳು..

ಗಿಲ್ಲಿ ಗೆಲ್ಲಲು, ಎತ್ತಿ ಹಿಡಿಯಲಿ ಕಿಚ್ಚನ ನ್ಯಾಯಗಳು.

Spread the love

Leave a Reply

Your email address will not be published. Required fields are marked *

error: Content is protected !!