September 23, 2026

I ಕುಷ್ಟರೋಗ ನಿರ್ಮೂಲನಾ ಕಾರ್ಯಕ್ರಮ I ಜಿಲ್ಲಾಧಿಕಾರಿಗಳ ಸಂದೇಶ I

0
prabhu linga kavalakatti

I ಕುಷ್ಟರೋಗ ನಿರ್ಮೂಲನಾ ಕಾರ್ಯಕ್ರಮ I ಜಿಲ್ಲಾಧಿಕಾರಿಗಳ ಸಂದೇಶ I

ಶಿವಮೊಗ್ಗ, : ರಾಷ್ಟ್ರೀಯ ಕುಷ್ಟರೋಗ ನಿರ್ಮೂಲನಾ ಕಾರ್ಯಕ್ರಮ ‘ಸ್ಪರ್ಶ್ ಕುಷ್ಟರೋಗ ಜಾಗೃತಿ ಆಂದೋಲನ-2026’ ರ ಘೋಷವಾಕ್ಯ ‘ತಾರತಮ್ಯವನ್ನು ಕೊನೆಗೊಳಿಸುವುದು-ಘನತೆಯನ್ನು ಕಾಪಾಡುವುದು’ ಎಂಬುದಾಗಿದ್ದು ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿಯವರು ಕುಷ್ಟರೋಗ ನಿರ್ಮೂಲನೆ ಕುರಿತು ಕೆಳಕಂಡತೆ ಸಂದೇಶ ನೀಡಿದ್ದಾರೆ.

ಜಿಲ್ಲಾಡಳಿತ ಹಾಗೂ ಜಿಲ್ಲೆಯ ಪ್ರಜೆಗಳಾದ ನಾವು ರಾಷ್ಟçಪಿತ ಮಹಾತ್ಮಾ ಗಾಂಧೀಜಿಯವರು ಹುತಾತ್ಮರಾದ ದಿನದ ಸ್ಮರಣೆಯೊಂದಿಗೆ ಘೋಷಿಸುವುದೇನೆಂದರೆ ನಾವೆಲ್ಲರೂ ನಮ್ಮ ಜಿಲ್ಲೆಯನ್ನು ಕುಷ್ಟರೋಗದಿಂದ ಮುಕ್ತಗೊಳಿಸಲು ಪಣತೊಟ್ಟು ಕಾರ್ಯಪ್ರವೃತ್ತರಾಗಿದ್ದೇವೆ.

ಕುಷ್ಟರೋಗವನ್ನು ಸುಲಭವಾಗಿ ಪತ್ತೆ ಹಚ್ಚಿ ಗುಣಪಡಿಸಬಹುದಾಗಿದ್ದು, ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಕುಷ್ಟರೋಗದ ವಿರುದ್ದ ಹೋರಾಡೋಣ ಮತ್ತು ಕುಷ್ಟರೋಗವನ್ನು ಇತಿಹಾಸವಾಗಿಸೋಣ ಎಂಬ ಹೆಗ್ಗಳಿಗೆ ತರಲು ನಾವು ಬದ್ದರಾಗಿದ್ದೇವೆ. ನಮ್ಮಿಂದ ಮತ್ತು ಇತರರಿಂದ ಯಾವುದೇ ರೀತಿಯ ದೌರ್ಜನ್ಯ ಅಥವಾ ಶೋಷಣೆಗಳಾಗದಂತೆ ನೋಡಿಕೊಳ್ಳುತ್ತೇವೆ ಮತ್ತು ಎಲ್ಲರೂ ಒಟ್ಟಾಗಿ ನಾಗರೀಕ ಭಾವೈಕ್ಯ ಹಾಗೂ ಒಗ್ಗಟ್ಟಿನಿಂದ ಸಾಮಾಜಿಕ ಕಳಂಕ ಮತ್ತು ಪಿಡುಗುಗಳನ್ನು ಹೋಗಲಾಡಿಸಿ ಬಾಧಿತರಾಗಿರುವ ಕುಷ್ಟರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆಗಳನ್ನು ಕೊಡಿಸಿ, ಸಮಾಜದ ಮುಖ್ಯವಾಹಿನಿಗೆ ತರುವುದರ ಮೂಲಕ ಬಾಪೂಜಿಯವರ ನಂಬಿಕೆ ಮತ್ತು ಸದಾಶಯಗಳನ್ನು ಸಾಕಾರಗೊಳಿಸಲು ಸನ್ನದ್ದರಾಗಿದ್ದೇವೆ ಎಂಬುದನ್ನು ಈ ಮೂಲಕ ಘೋಷಿಸುತ್ತೇನೆ ಎಂದು ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!