I ಶಿವಮೊಗ್ಗ ನಗರದ ಕುಡಿಯುವ ನೀರು ಸರಬರಾಜು ಘಟಕ ನಿರ್ಮಾಣಕ್ಕೆಸಚಿವರಿಗೆ ಮನವಿ I
ಶಿವಮೊಗ್ಗ : ನಗರಕ್ಕೆ ನೀರು ಒದಗಿಸಲು ಸಚಿವರಿಗೆ ಹೆಚ್.ಸಿ ಯೋಗೇಶ್ ರವರ ತಂಡದಿಂದ ಮನವಿಯನ್ನು ನೀಡಲಾಯಿತು,
ಈ ಸಂದರ್ಭದಲ್ಲಿ ಮಾತಾನಾಡಿದ ಅವರು ಗಾಜನೂರು ಮೂಲದಿಂದ 84.೦೦ ಎಂ ಎಲ್ ಡಿ ನೀರನ್ನು ಪಂಪ್ ಮಾಡಿ ನಗರದ ಮಂಡ್ಲಿ ಬಳಿ ಇರುವ ಜಲ ಶುದ್ಧೀಕರಣ ಘಟಕದಲ್ಲಿ ಶುದ್ಧೀಕರಣ ಮಾಡಿ ನಗರದ ವಿವಿಧ ಭಾಗಗಳಿಗೆ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ.
ಪ್ರಸ್ತುತ ಈ ಘಟಕದ 27 ತುಂಬಾ ಹಳೆಯದಾಗಿದ್ದು ಸಾಮರ್ಥ್ಯ ಕಡಿಮೆಯಾಗಿರುತ್ತದೆ ನಗರದ ವಿಸ್ತರಣೆಯೊಂದಿಗೆ ಜನಸಂಖ್ಯೆ ವಿನಯ್ದಿನಿ ಎತ್ತುತ್ತಿರುವುದರಿಂದ ನೀರಿನ ಬೇಡಿಕೆಯು ದಿನಕ್ಕೆ 100 ಗಿಂತ ಹೆಚ್ಚಾಗಿರುತ್ತದೆ. ನಗರಕ್ಕೆ ಹೊಸ ಯೋಜನೆ ಕೈಗೊಳ್ಳದಿದ್ದಲ್ಲಿ ಕುಡಿಯುವ ನೀರಿನ ಕೊರತೆಯಿಂದ ಪ್ರಸ್ತುತ ಹಾಗೂ ಮುಂಬರುವ ಜನಸಂಖ್ಯೆಗೆ ಕುಡಿಯುವ ನೀರು ಒದಗಿಸುವುದು ಕಷ್ಟಕರವಾಗಿರುತ್ತದೆ. ಆದ್ದರಿಂದ ಗಾಜನೂರು ಬಳಿಯ ಗುಡ್ಡದಲ್ಲಿ ಆಧುನಿಕ ತಂತ್ರಜ್ಞಾನಗಳೊಂದಿಗೆ 2016 ನೇ ಸಾಲಿನ ಬೇಡಿಕೆಗೆ ಅನುಗುಣವಾಗಿ 223 ಎಂಎಲ್‌ಡಿ ಸಾಮರ್ಥ್ಯದ ಹೊಸ ಶುದ್ಧೀಕರಣ ಘಟಕ ನಿರ್ಮಾಣ ಮಾಡುವುದು ಅತ್ಯವಶ್ಯಕವಾಗಿರುತ್ತದೆ ಎಂದು ತಿಳಿಸಿದರು,
ಹಾಗೂ ಗಾಜನೂರು ಜಲಾಶಯದ ಬಳಿಯ ಹೊಸದಾಗಿ ಮೂಲಸ್ಥಾವರ ನಿರ್ಮಿಸಿ ಸಕ್ರೆ ಬಯಲು ಅರಣ್ಯ ಪ್ರದೇಶದ ಗುಡ್ಡದ ದಿವಸ ಶುದ್ಧೀಕರಣ ಘಟಕ ನಿರ್ಮಾಣ ಮಾಡುವುದರಿಂದ, ಸುದ್ದಿ ಕಲಿಸಿದ ನೀರನ್ನು ಗುರುತ್ವಾಕರ್ಷಣೆಯಿಂದಲೇ ನಗರದ ಅತ್ಯಂತ ಬಹುತೇಕ ಸರಬರಾಜು ಮಾಡಬಹುದಾಗಿರುತ್ತದೆ.
ಇದರಿಂದ ಪ್ರತಿ ತಿಂಗಳು ಬರುವ ವಿದ್ಯುತ್ ಬಿಲ್ ಸುಮಾರು ಒಂದು ಕೋಟಿ ಸರಕಾರಕ್ಕೆ ಉಳಿತಾಯವಾಗುತ್ತದೆ, ಮುಂದುವರೆದು ನಗರಕ್ಕೆ 24/7 ನಿರಂತರ ನೀರು ಸರಬರಾಜು ಸಾಧ್ಯವಾಗಿ ಕುಡಿಯುವ ನೀರಿನ ಕೊರತೆ ನಿವಾರಣೆಯಾಗುತ್ತದೆ ಆದ್ದರಿಂದ ನಿರ್ಮಾಣ ಸೂಕ್ತ ಸಾಮರ್ಥ್ಯದ ಅಳವಡಿಕೆ ಏರು ಕೊಳವೆ ಮಾರ್ಗ ಅಳವಡಿಸುವುದು, ಸಕ್ರೆ ಬೈ ಅರಣ್ಯ ಪ್ರದೇಶದ ಗುಡ್ಡದಲ್ಲಿ ಆಧುನಿಕ ತಂತ್ರಜ್ಞಾನದೊಂದಿಗೆ 223 ಎಂಎಲ್‌ಡಿ ಸಾಮರ್ಥ್ಯದ ಹೊಸ ಸುದ್ದಿಕರಣ ಘಟಕ, ಮುಖ್ಯ ಜಲಸಂಗ್ರಹ ನಿರ್ಮಾಣ, ಗುರುತ್ವಾಕರ್ಷಣೆ ಕೊಳವೆ ಮಾರ್ಗ, ವಿತರಣಾ ಕೊಳವೆ ಮಾರ್ಗ ಅಳವಡಿಸಲು ಸಕ್ರೆಬೈಲು ಸರ್ವೆ ನಂಬರ್ 5 ರಲ್ಲಿ ರಲ್ಲಿ ಗುಡ್ಡದ ಹತ್ತಿರ ಮುಖ್ಯ ಜನ ಸಂಗ್ರಹ ನಿರ್ಮಾಣ ಮತ್ತು ಸಂಪರ್ಕ ಇಲಾಖೆಯ ಆರೂಪಿನ ಕಟ್ಟೆ ಸರ್ವೆ ನಂಬರ್ 34 ರಲ್ಲಿ ಇರುವ ಮೂರು ಎಕರೆ ಎಂಟು ಗುಂಟೆ ಕರ್ನಾಟಕ ನೀರಾವರಿ ನಿಗಮದ ಜಾಗ, ತುಂಗಾ ಮೇಲ್ದಂಡೆ ಯೋಜನೆ ಜಾಗ ಹಾಲಿ ಇರುವ ಗುರುತ್ವಾಕರ್ಷಣ ಕೊಳವೆ ಮಾರ್ಗ ಜೊತೆಯಲ್ಲಿ ಇನ್ನೊಂದು ಕೊಳವೆ ಮಾರ್ಗವನ್ನು ಅಳವಡಿಸಲು ಅವಶ್ಯಕತೆ ಇರುವ ಪ್ರದೇಶಗಳನ್ನು ಆಯುಕ್ತರು ಮಹಾನಗರ ಪಾಲಿಕೆಗೆ ಶಿವಮೊಗ್ಗ ರವರ ಹೆಸರಿಗೆ ವರ್ಗಾವಣೆ ಮಾಡಲು ಮತ್ತು ಸದರಿ ಕಾಮಗಾರಿಯನ್ನು ನಿರ್ವಹಿಸಲು ಮಂಜೂರು ಮಾಡಲು ಶಿವಮೊಗ್ಗ ನಗರ ಜನರ ಹಿತ ದೃಷ್ಟಿಯಿಂದ ಈಶ್ವರ್ ಖಂಡ್ರೆ ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಸಚಿವರಲ್ಲಿ ಈ ಕಾಮಗಾರಿಯ ನೀಲಿ ನಕಾಶೆಯನ್ನು ತೋರಿಸುವ ಮುಖಾಂತರ ಮನವರಿಕೆಯನ್ನು ಮಾಡಲಾಯಿತು,
ಈ ಸಂದರ್ಭದಲ್ಲಿ ಹೆಚ್ ಸಿ ಯೋಗೇಶ್ ಗ್ರಾಮಾಂತರ ಶಾಸಕರಾದ ಶಾರದಾ ಪೂರ್ಯ ನಾಯ್ಕ ರವರು, ನಾಗರಾಜ್ ಕಂಕಾರಿ, ಹೆಚ್ ಪಾಲಾಕ್ಷಿ ರವರು, ಆಶ್ರಯ ಸಮಿತಿ ಸದಸ್ಯರಾದ ಯಮುನಾ ರಂಗೇಗೌಡರವರು, ಶಿವಮೊಗ್ಗ ನಗರ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಎಸ್ ಶಿವಕುಮಾರ್ ರವರು, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಚಂದ್ರಶೇಖರ್ ರವರು, ಗಂಗಾಧರ್ ರವರು, ರಂಗೇಗೌಡ ರವರು, ವಾರ್ಡ್ ಅಧ್ಯಕ್ಷರಾದ ನವೀನ್ ರವರು ಹಾಗೂ ಕೆ ಯು ಡಬ್ಲ್ಯೂ ಎಸ್ ಅಧಿಕಾರಿಗಳು, ಎಕ್ಸಿಕ್ಯೂಟಿವ್ ಇಂಜಿನಿಯರ್ ಉಪಸ್ಥಿತರಿದ್ದರು.

