ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಕ್ಲಿಪ್ ಎಂಬಸಿ ಎಂಬುವ I ಟಾಪ್ ಲೌಂಜ್ನಲ್ಲಿ I ಸ್ಟೂಡೆಂಟ್ಸ್ ಡ್ರಿಂಕ್ಸ್ I
ಉದ್ಯಮಶೀಲತಾ ಹಾದಿಗಳನ್ನು ಪ್ರೋತ್ಸಾಹಿಸಬೇಕು, ಒಂದು ಉದ್ಯಮ, ಹಲವು ಸೂರುಗಳಿಗೆ ಉದ್ಯೋಗ.. ಎನ್ನುವ ಮಾತು ಅಕ್ಷರಶಃ ಸತ್ಯ, ಆದರೆ ಉದ್ಯಮದ ನೆಪದಲ್ಲಿ ಉಲ್ಲಂಘಿಸುವ ನಿಯಮಗಳು, ಸಮಾಜದ ಸ್ವಾಸ್ಥ್ಯಗಳು, ಬೆಳೆಯುವ ಮಕ್ಕಳ ಮೇಲಿನ ದುಷ್ಟರಿಣಾಮಗಳು, ವ್ಯಾಸಾಂಗದ ಪಥದಲ್ಲಿ ಭವಿಷ್ಯ ರೂಪಿಸಕೊಳ್ಳುವ ವಿದ್ಯಾರ್ಥಿಗಳು, ಕ್ರಾಸ್ ವ್ಹೇ ಗಳ ಕೂಪದ ಜಾಲದ ಅಮಲಿಗೆ ಸಿಲುಕಿಕೊಂಡರೆ ಇದಕ್ಕೆ ಹೊಣೆ ಯಾರು..? ಎನ್ನುವುದು ಈ ಹೊತ್ತು ಜವಾಬ್ದಾರಿಯುತವಾಗಿ ಉತ್ತರಿಸಬೇಕಾದ ಜರೂರತ್ ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಲಕಟ್ಟಿ, ಜಿಲ್ಲಾರಕ್ಷಣಾಧಿಕಾರಿಗಳಾದ ನಿಖಿಲ್ ಹಾಗೂ ಅಬಕಾರಿ ಉಪ ಆಯುಕ್ತರಾದ ವಿಶ್ವನಾಥ್, ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕ ಕೇಶವ್.ಎಚ್, ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡಾ.ವಿರೂಪಾಕ್ಷಪ್ಪ ಹಾಗೂ ಸ್ಥಳೀಯ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಎನ್ ಚೆನ್ನಬಸಪ್ಪ, ಇಂತಿವರುಗಳಿದೆ,
ಈ ಕುರಿತಾಗಿ ಅಸಲಿ ಸಂಗತಿ ಗೊತ್ತಿದ್ದರೂ ಮೌನವಹಿಸಿದರೆ ದಿನವಹಿ ಪಾನಮತ್ತರಾಗುವ ಭವಿಷ್ಯ ರೂಪಿಸಿಕೊಳ್ಳಬೇಕಾದ ವಿದ್ಯಾರ್ಥಿಗಳ ಜೀವನ ನಶೆಯ ಅಮಲಿನ ಜಾಲಕೆ ಸಿಲುಕಿ ನಶಿಸಿ ಹೋಗುವುದರಲ್ಲಿ ಯಾವುದೇ ಅನುಮಾನಿತಗಳಿಲ್ಲವಾಗಿದೆ, ಹೌದು ಶಿವಮೊಗ್ಗ ನಗರದ ರಸಋಷಿ ಕುವೆಂಪು ರಸ್ತೆಯ ಹೃದಯಭಾಗದಲ್ಲಿರುವ ಕ್ಲಿಪ್ ಎಂಬಸಿ ಬ್ಯಾಂಕ್ವೆಟ್ ಮತ್ತು ಸೂಟ್ಸ್ ಎನ್ನುವ ನಾಮಾಂಕಿತದೊಳು ತನ್ನ ಉದ್ಯಮವೇ ಇದಕ್ಕೆ ಕಾರಣವಾಗುತ್ತಿರುವ ಅಸಲಿ ದೃಶ್ಯಾವಳಿಗಳು ಯಾವ ಬ್ಯಾಂಕಾಕ್ ದೇಶಕ್ಕೂ ಕಡಿಮೆ ಇಲ್ಲವಾಗಿದೆ, ಸಂಜೆಗಳಿಯುತ್ತಲೇ ಇಲ್ಲಿನ ಕ್ಲಿಪ್ ಎಂಬಸಿ ಎನ್ನುವ ಮಹಡಿಯ ಮ್ಯಾಲಿನ ಕೋಣೆಗೆ ರೂಪ್ ಟಾಪ್ ಲೌಂಜ್ ಎಂದೇ ಪಾಶ್ಚತ್ಯ ಹೆಸರಿಟ್ಟು, ಮೆಡಿಕಲ್ ಹಾಗೂ ಇಂಜಿನಿಯರ್ ಇದಲ್ಲದೆ ಶಿವಮೊಗ್ಗದ ಐಷಾರಾಮಿ ಪಿಯು ಕಾಲೇಜುಗಳ ಸ್ಟೂಡೆಂಟ್ಸ್ಗಳಿಗೆ ನಶೆ ಅಮಲಿಗೆ ತಳ್ಳುವ ಪಾನಮತ್ತ (ಮದ್ಯದ) ಅಡ್ಡೆಯಾಗಿರುವುದು ಜವಾಬ್ದಾರಿಯುತ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಗೊತ್ತಿಲ್ಲವೇ…?!
ವಿವಿಧ ಕಂಪನಿಗಳ ಮದ್ಯಗಳಿಲ್ಲಿ, ಅದರ ಮುಖಬೆಲೆಗಿಂತಲೂ ದುಪ್ಪಟ್ಟು ನಿಗದಿಯಾಗಿಸಿ ಬಿಲ್ ನೀಡುವುದರಿಂದ ಲೋಕಲ್ ಜನರು ಇಲ್ಲಿ ಬರುವುದಿಲ್ಲ ಎನ್ನುವ ಟೋಟಲ್ ಇರಾದೆಯನ್ನು ಕಟ್ಟಿಕೊಂಡಿರುವ ರೂಪ್ ಟಾಪ್ ಲೌಂಜ್ ಮ್ಯಾನೇಜ್ಮೆಂಟ್ ಐಷರಾಮಿ ಸ್ಟೂಡೆಂಟ್ಸ್ಗಳನ್ನು ಗುರಿ ಮಾಡಿಕೊಂಡಿರುವ ವಾಸ್ತವ ಸತ್ಯಗಳ ಬುಟ್ಟಿಗಳಿಲ್ಲಿ ಅಮರಿಕೊಂಡಿದೆ, ಹದಿಹರೆಯದ ಆಸುಪಾಸಿನಲ್ಲಿರುವ ವಿದ್ಯಾರ್ಥಿಗಳಿಗೆ ಹ್ಯಾಪಿ ಬರ್ತಡೆ, ಇನ್ನೀತರ ಪಾರ್ಟಿಗಳಿಲ್ಲಿ ಭರ್ಜರಿಯಾಗಿ ಹೆಗ್ಗಿಲ್ಲದೆ ಸಾಗಿದೆ, ಇಂತಿವರ ಮದ್ಯದ ಅಮಲಿನಲಿ ತೇಲುವ ದೃಶ್ಯಗಳು ಸ್ಥಳೀಯ ಜನತೆಗೆ ಗೊತ್ತು ಮಾಡಿಕೊಳ್ಳಬಾರದು ಎನ್ನುವ ಹಿನ್ನಲೆಯಲ್ಲಿ ಮದ್ಯದ ಮುಖಬೆಲೆಗಿಂತಲೂ ದುಪ್ಪಟ್ಟು ಬೆಲೆ ಇವರೇ ಅಬಕಾರಿ ಕಂಪನಿಗಳಂತೆಯೇ ಮೊಹರೊತ್ತುತ್ತಾರೆ, ಇಂತಹ ವಾಸ್ತವ ಸಂಗತಿಗಳು ಊರಿಗೆ ತಿಳಿದಿದ್ದರೂ ಅಧಿಕಾರಿಗಳಿಗೆ ಹಾಗೂ ಶಾಸಕರಿಗೆ ಚಿತ್ತಗಳತ್ತ ದೌಡಾಯಿಸಲೇ ಇಲ್ಲ ಎನ್ನುವುದು ಅಚ್ಚರಿಯಾಗಿದೆ,
ಆದರೆ ರಸಋಷಿ ಕುವೆಂಪುರವರ ಮುಖ್ಯರಸ್ತೆಗೆ ನಡುರಾತ್ರಿಯೊತ್ತಿಗೆ ಸಮ ಪಾನಮತ್ತರಾಗಿ ಇದೇ ರೂಪ್ ಟಾಪ್ ಲೌಂಜ್ ನಿಂದ ಬಂದಿಳಿವ ವಿದ್ಯಾರ್ಥಿಗಳ ಸ್ಥಿತಿ ಮತ್ತೊಂದು ನಶೆಯ ವಿಪರೀತಕ್ಕೆ ಲೇಪನ ಮಾಡಿಕೊಳ್ಳುತ್ತದೆ ಇಂತಹುದನ್ನು ಈ ರಸ್ತೆಯಲ್ಲಿ ಹಾದು ಹೋಗುವ ಸಂಚಾರಿ ವಾಹನಗಳಲ್ಲಿ ತಿರುಗಾಡುವ ಜನತೆ ಕಣ್ಣ ಮಂದಡಿ ಸುಳಿದು ಸರಿಯುತ್ತಲೇ ಇರುತ್ತದೆ, ಹೀಗಿದ್ದರೂ ಅಬಕಾರಿ ಇಲಾಖಾಧಿಕಾರಿಗಳು ಮೌನ..!, ರಾತ್ರಿ ಪಾಳಯದ ಪೊಲೀಸರು ಮೌನ..!, ಇದೇನು ಅಧಿಕಾರದ ನ್ಯೂನ್ಯತೆಯೇ..?! ಅಥವಾ ಉದ್ಯಮದ ಈ ಉಲ್ಲಂಘಿತ ದಂಧೆಗಳಿಗೆ ಶಾಮೀಲಾಗಿದ್ದಾರೆಯೇ..?! ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳುವ ಹೊತ್ತಿನಲಿ ಅಲ್ಕೋಹಾಲ್ ಎಂಬುವ ಕೂಪದಲ್ಲಿ ಮುಳುಗಿಸುವ ಹೈಟೆಕ್ ಮದ್ಯ ದಂಧೆಯೇ ಇದಾಗಿದೆ,
ಒಂದೆಡೆ ಅಬಕಾರಿ ನಿಯಮಾವಳಿಗಳು ತೋಟದಪ್ಪನ ಸಂತೆಯಾಗಿದೆ, ಉಳ್ಳವರಿಗೆ ಕಾನೂನು ಇಲ್ಲ ಎಂಬುವ ಮಾತು ಇಲ್ಲಿ ಸತ್ಯವಾಗಿದೆ, ಬಲಿತವರು ಹೇಗಾದರು ಬದುಕಲಿ, ಕಾನೂನು ಮೀರಲಿ, ಅವರ ಕುರಿತಾಗಿ ಯಾವ ತಕರಾರು ಇಲ್ಲವಾಗಿದೆ, ಈ ದಂಧೆಯ ಕಡಿವಾಣಕ್ಕೆ ಮುಂದಡಿಯಾಗುವ ಮನಸು ಕಂಬಳಿ ಹೊದ್ದು ಮಲಗಿದೆ, ಇನ್ನೇನು ಐಷರಾಮಿ ನೆವದಲ್ಲಿ, ಪಾಶ್ಚಾತ್ಯ ಸಂಸ್ಕೃತಿಯ ನೆವದಲ್ಲಿ ವಿದ್ಯಾರ್ಥಿಗಳ ಭವಿಷ್ಯ ಕ್ಲಿಪ್ ಎಂಬಸಿ ಎನ್ನುವ ರೂಪ್ ಟಾಪ್ ಲೌಂಜ್ ಉಲ್ಲಂಘಿತ ಉದ್ಯಮದಲ್ಲಿ ಸಮಾ ಪಾನಮತ್ತರಾಗಿ ನಶೆಯ ಅಮಲಿನಲಿ ತೇಲುವಂತಾಗಿದೆ,
ಈ ಮ್ಯಾನೇಜ್ಮೆಂಟ್ ಪ್ರಮುಖರ ಘಟಾನುವಳಿಗಳ ದಂಧೆಯನ್ನು ಸಾಕ್ಷ್ಯ ಸಮೇತ ಪತ್ತೆ ಹಚ್ಚಲು ಒಂದಷ್ಟು ಹೊರಗಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಲಿ ಹಾಗೂ ಕನಿಷ್ಟ ಕಳೆದ ಹತ್ತು ದಿನಗಳ ಕಾಲದ ಸಿಸಿ ಕ್ಯಾಮೆರಾ ಪುಟೇಜಸ್ ಇರುವ ಡಿವಿಆರ್ ಚೆಕ್ ಮಾಡಲಿ, ಇದಲ್ಲದೆ ಮದ್ಯದ ಮುಖಬೆಲೆಗಿಂತಲೂ ದುಪ್ಪಟ್ಟು ಬಿಲ್ಗಳು ಆಗಿರುವುದನ್ನು ರ್ಯಾಂಡಮ್ ಆಗಿ ಪರಿಶೀಲಿಸಲಿ, ಅದಾಗಲೇ ಎಲ್ಲಾ ಸಂಗತಿಗಳು ಬೆತ್ತಲಾಗುತ್ತದೆ,
ಇನ್ನೂ ರಾತ್ರಿ ಪಾಳಯದ ಪೊಲೀಸರು ಇಲ್ಲಿಯೇ ಮೊಕ್ಕಾಂ ಹೂಡಿ ಸಮಾ ಪುಕ್ಸಾಟ್ ಮದ್ಯ ಕುಡಿದು ಪದ್ಯ ಹೇಳುತ್ತಿದ್ದರೆ, ಈ ದಂಧೆಗೆ ಮತ್ತೇಲ್ಲಿ ಕಡಿವಾಣ ಎನ್ನುವಂತಾಗಿದೆ, ಮುಂದಾದರೂ ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯದೆ ತಂಡ ರಚಿಸಿ ದಾಳಿ ನಡೆಸಲಿ, ಶಾಸಕರಾದ ಎಸ್.ಎನ್ ಚೆನ್ನಬಸಪ್ಪ ನವರು ಈ ಕುರಿತಾಗಿ ಗಂಭೀರವಾಗಿ ಪರಿಗಣಿಸಲಿ ಎನ್ನುವುದು ಸಧ್ಯದ ಅಂಬೋಣವಾಗಿದೆ.