Thursday, 12 November 2026 — Suryagagana
05:03 AM
ಸಾಹಿತ್ಯ I ಅವಳ ದನಿ..I ಸೂರ್ಯಗಗನ I ಪಡಿತರ ಅಕ್ಕಿ ಕಾಳಸಂತೆಯ ಪಾಲಾಗುತ್ತಿದೆ I ಜೆಡಿಎಸ್ ಕಾರ್ಯಧ್ಯಕ್ಷ ನರಸಿಂಹ ಗಂಧದಮನೆ I ಸೂರ್ಯಗಗನ I ಮೇರಿ ಇಮ್ಯಾಕ್ಯುಲೇಟ್ ಸಂಸ್ಥೆಯಲ್ಲಿ I ವಾರ್ಷಿಕ ಕ್ರೀಡಾಕೂಟಕ್ಕೆ ಸಂಭ್ರಮದ ಚಾಲನೆ I ಸೂರ್ಯಗಗನ I ಗಾರಾ ಫೌಂಡೇಶನ್ ಸಂಸ್ಥೆಯಿಂದ I ಶಾಶ್ವತ ಕನ್ನಡ ಧ್ವಜ ಸ್ತಂಭದ ಧ್ವಜಾರೋಹಣ I ಸೂರ್ಯಗಗನ I ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಗೆ I ಮಲೆನಾಡು ಕನ್ನಡ ಪಡೆ ಆಗ್ರಹ I ಸೂರ್ಯಗಗನ I ತೋಟದ ಬೆಳೆಗಳ ರಕ್ಷಣೆಗೆ ತಕ್ಷಣ ನೀರು ಹರಿಸಿ I ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ I ಸೂರ್ಯಗಗನ I ಎಸ್‌ಬಿಐನಿಂದ ₹30 ಲಕ್ಷ ಅಪಘಾತ ವಿಮಾ ಪರಿಹಾರ ವಿತರಣೆ I ಸೂರ್ಯಗಗನ I ಕೊಡಗಿನಲ್ಲಿ ನಡೆದ ರಾಜ್ಯ ಮಟ್ಟದ ಕೆಯುಡಬ್ಲ್ಯೂಜೆ ಕ್ರಿಕೆಟ್ ಟೂರ್ನಿಯಲ್ಲಿ I ಕೊಡಗು-ಮಂಡ್ಯ ತಂಡಗಳು ಜಂಟಿ ಚಾಂಪಿಯನ್ I ಸಾಹಿತ್ಯ I ಅವಳ ದನಿ..I ಸೂರ್ಯಗಗನ I ಪಡಿತರ ಅಕ್ಕಿ ಕಾಳಸಂತೆಯ ಪಾಲಾಗುತ್ತಿದೆ I ಜೆಡಿಎಸ್ ಕಾರ್ಯಧ್ಯಕ್ಷ ನರಸಿಂಹ ಗಂಧದಮನೆ I ಸೂರ್ಯಗಗನ I ಮೇರಿ ಇಮ್ಯಾಕ್ಯುಲೇಟ್ ಸಂಸ್ಥೆಯಲ್ಲಿ I ವಾರ್ಷಿಕ ಕ್ರೀಡಾಕೂಟಕ್ಕೆ ಸಂಭ್ರಮದ ಚಾಲನೆ I ಸೂರ್ಯಗಗನ I ಗಾರಾ ಫೌಂಡೇಶನ್ ಸಂಸ್ಥೆಯಿಂದ I ಶಾಶ್ವತ ಕನ್ನಡ ಧ್ವಜ ಸ್ತಂಭದ ಧ್ವಜಾರೋಹಣ I ಸೂರ್ಯಗಗನ I ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಗೆ I ಮಲೆನಾಡು ಕನ್ನಡ ಪಡೆ ಆಗ್ರಹ I ಸೂರ್ಯಗಗನ I ತೋಟದ ಬೆಳೆಗಳ ರಕ್ಷಣೆಗೆ ತಕ್ಷಣ ನೀರು ಹರಿಸಿ I ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ I ಸೂರ್ಯಗಗನ I ಎಸ್‌ಬಿಐನಿಂದ ₹30 ಲಕ್ಷ ಅಪಘಾತ ವಿಮಾ ಪರಿಹಾರ ವಿತರಣೆ I ಸೂರ್ಯಗಗನ I ಕೊಡಗಿನಲ್ಲಿ ನಡೆದ ರಾಜ್ಯ ಮಟ್ಟದ ಕೆಯುಡಬ್ಲ್ಯೂಜೆ ಕ್ರಿಕೆಟ್ ಟೂರ್ನಿಯಲ್ಲಿ I ಕೊಡಗು-ಮಂಡ್ಯ ತಂಡಗಳು ಜಂಟಿ ಚಾಂಪಿಯನ್ I
ಸೂರ್ಯಗಗನ

I ನಮ್ಮ ಕರ್ನಾಟಕ ಸೇನೆ ಶಿವಮೊಗ್ಗ ಜಿಲ್ಲಾ ಪದಾಧಿಕಾರಿಗಳ ಸಭೆ ಯಶಸ್ವಿ I ಎಂ. ಪರಮೇಶ್ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾಗಿ ಪದಗ್ರಹಣ I

I ನಮ್ಮ ಕರ್ನಾಟಕ ಸೇನೆ ಶಿವಮೊಗ್ಗ ಜಿಲ್ಲಾ ಪದಾಧಿಕಾರಿಗಳ ಸಭೆ ಯಶಸ್ವಿ I ಎಂ. ಪರಮೇಶ್ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾಗಿ ಪದಗ್ರಹಣ I ನೂತನ ಪದಾಧಿಕಾರಿಗಳಿಗೆ ಆದೇಶ ಪತ್ರ ಹಾಗೂ ಗುರುತಿನ ಚೀಟಿ ವಿತರಣೆ ಶಿವಮೊಗ್ಗ : ನಮ್ಮ ಕರ್ನಾಟಕ ಸೇನೆ…

I ನಮ್ಮ ಕರ್ನಾಟಕ ಸೇನೆ ಶಿವಮೊಗ್ಗ ಜಿಲ್ಲಾ ಪದಾಧಿಕಾರಿಗಳ ಸಭೆ ಯಶಸ್ವಿ I ಎಂ. ಪರಮೇಶ್ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾಗಿ ಪದಗ್ರಹಣ I

ನೂತನ ಪದಾಧಿಕಾರಿಗಳಿಗೆ ಆದೇಶ ಪತ್ರ ಹಾಗೂ ಗುರುತಿನ ಚೀಟಿ ವಿತರಣೆ

ಶಿವಮೊಗ್ಗ : ನಮ್ಮ ಕರ್ನಾಟಕ ಸೇನೆ ಶಿವಮೊಗ್ಗ ಜಿಲ್ಲಾ ಘಟಕದ ಪದಾಧಿಕಾರಿಗಳ ಸಭೆ ಹಾಗೂ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭವು ಶಿವಮೊಗ್ಗದ ಝತಾರ್ ಹೋಟೆಲ್‌ನಲ್ಲಿ ಯಶಸ್ವಿಯಾಗಿ ನೆರವೇರಿತು. ನಿರೂಪಣೆ ಶಿವಕುಮಾರ್ ಮಾಸ್ಟರ್ ನೆರವೇರಿಸಿದರು

ನಮ್ಮ ಕರ್ನಾಟಕ ಸೇನೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಯುತ ಬಸವರಾಜ್ ಪಡುಕೋಟೆ ಅವರ ಆದೇಶದಂತೆ ಹಾಗೂ ಶ್ರೀಯುತ ಸುಜಯ್ ಪೂಜಾರಿ, ಉಡುಪಿ ಜಿಲ್ಲಾಧ್ಯಕ್ಷರು ಹಾಗೂ ದಕ್ಷಿಣ ಕರ್ನಾಟಕ ಮತ್ತು ಶಿವಮೊಗ್ಗ ಜಿಲ್ಲೆ ಉಸ್ತುವಾರಿ ಅವರ ನೇತೃತ್ವದಲ್ಲಿ ಶ್ರೀಯುತ ಎಂ. ಪರಮೇಶ್ ಅವರು ನಮ್ಮ ಕರ್ನಾಟಕ ಸೇನೆಯ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾಗಿ ಪದಗ್ರಹಣ ಮಾಡಿದರು.

ಕಾರ್ಯಕ್ರಮದಲ್ಲಿ ರಾಜ್ಯ ಮಹಿಳಾ ಕಾರ್ಯದರ್ಶಿ ಸುನೀತಾ ಗೌಡ, ಶಿವಮೊಗ್ಗದ ವಕೀಲರಾದ ಶಿವಕುಮಾರ್, ಬೆಂಗಳೂರು ನಗರ ಕಾರ್ಮಿಕ ಘಟಕದ ಮಹಿಳಾ ಉಪಾಧ್ಯಕ್ಷರಾದ ಮಮತಾ ಸೇರಿದಂತೆ ಹಲವು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಒಗ್ಗಟ್ಟೇ ಸಂಘಟನೆಯ ಶಕ್ತಿ — ಕನ್ನಡ ನಾಡು, ನುಡಿಯ ಸೇವೆಯೇ ಸಂಕಲ್ಪ :

ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವುದು, ಕನ್ನಡ ನಾಡು–ನುಡಿಯ ಸೇವೆ ಹಾಗೂ ಅನ್ಯಾಯದ ವಿರುದ್ಧ ಕಾನೂನಿನ ಚೌಕಟ್ಟಿನಲ್ಲಿ ಹೋರಾಟ ನಡೆಸುವ ಕುರಿತು ಪ್ರಮುಖವಾಗಿ ಚರ್ಚಿಸಲಾಯಿತು.

ಸಭೆಯಲ್ಲಿ ನಮ್ಮ ಕರ್ನಾಟಕ ಸೇನೆ

“ಸಂಘಟನೆಯೇ ನಮ್ಮ ಶಕ್ತಿ”

ಈ ಸಂದರ್ಭದಲ್ಲಿ ಮಾತನಾಡಿದ ಶಿವಕುಮಾರ್, ಸಂಘಟನೆ ಒಂದು ಶಕ್ತಿಯಾಗಿದ್ದು, ನಾವೆಲ್ಲರೂ ಒಂದಾಗಿ ನಿಂತು ಅನ್ಯಾಯದ ವಿರುದ್ಧ ಕಾನೂನಿನ ಚೌಕಟ್ಟಿನಲ್ಲಿ ಹೋರಾಡಲು ಸದಾ ಸಿದ್ಧರಾಗಿರಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಒಗ್ಗಟ್ಟಿನಿಂದ ಸಂಘಟನೆ ಬಲಪಡಿಸೋಣ: ಸುಜಯ್ ಪೂಜಾರಿ

ಸುಜಯ್ ಪೂಜಾರಿ ಮಾತನಾಡಿ, ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳೊಂದಿಗೆ ಚರ್ಚಿಸಿ ಸಂಘಟನೆಯ ಮುಂದಿನ ಕಾರ್ಯಚಟುವಟಿಕೆಗಳ ಕುರಿತು ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಬೇಕು. ಕನ್ನಡಪರ ಸದಸ್ಯರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಮೂಲಕ ಸಂಘಟನೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದು ತಿಳಿಸಿದರು.

“ಸಂಘಟನೆಯೊಂದಿಗೆ ಕೆಲಸ ಮಾಡುವ ಅವಕಾಶ ಸಂತೋಷದ ಸಂಗತಿ”

ಸುಜಯ್ ಗೌಡ ಮಾತನಾಡಿ, ತಾವು ಈ ಹಿಂದೆ ಕೆಲವು ಸಂಘಟನೆಗಳಲ್ಲಿ ಕೆಲಸ ನಿರ್ವಹಿಸಿದ್ದು, ಇದೀಗ ನಮ್ಮ ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಕೆಲಸ ಮಾಡುವ ಅವಕಾಶ ದೊರೆತಿರುವುದು ಸಂತೋಷ ಹಾಗೂ ಭಾಗ್ಯದ ಸಂಗತಿ ಎಂದು ಹೇಳಿದರು.

ಜಾತಿ–ಮತಗಳ ಭೇದ ಮರೆತು ಕನ್ನಡಕ್ಕಾಗಿ ಒಂದಾಗೋಣ :

ಸಭೆಯನ್ನುದ್ದೇಶಿಸಿ ಮಾತನಾಡಿದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಎಂ. ಪರಮೇಶ್, ಜಾತಿ–ಮತಗಳ ಭೇದವನ್ನು ಮರೆತು ಕನ್ನಡ ನಾಡು–ನುಡಿಗಾಗಿ ಸಂಘಟನೆಯನ್ನು ಬಲಪಡಿಸಿಕೊಳ್ಳಬೇಕು. ಅನ್ಯಾಯದ ವಿರುದ್ಧ ಹೋರಾಟ ನಡೆಸಬೇಕು. ಆದರೆ ಸಂಘಟನೆಯ ಪ್ರತಿಯೊಂದು ಹೋರಾಟವೂ ಕಾನೂನಿನ ಚೌಕಟ್ಟಿನಲ್ಲಿರಬೇಕು ಹಾಗೂ ಕಾನೂನಿಗೆ ಗೌರವ ನೀಡಿ ನಡೆದುಕೊಳ್ಳಬೇಕು ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ನಮ್ಮ ಕರ್ನಾಟಕ ಸೇನೆಯ ಶಾಖೆಗಳನ್ನು ಪ್ರಾರಂಭಿಸಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಸಂಕಲ್ಪವನ್ನು ಅವರು ವ್ಯಕ್ತಪಡಿಸಿದರು.

ನೂತನ ಪದಾಧಿಕಾರಿಗಳಿಗೆ ಆದೇಶ ಪತ್ರ ಹಾಗೂ ಗುರುತಿನ ಚೀಟಿ ವಿತರಣೆ :

ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆ ಹಾಗೂ ಭದ್ರಾವತಿ ತಾಲೂಕು ಸೇರಿದಂತೆ ವಿವಿಧ ಘಟಕಗಳಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ, ಅವರಿಗೆ ಆದೇಶ ಪತ್ರ ಹಾಗೂ ಗುರುತಿನ ಚೀಟಿಗಳನ್ನು ವಿತರಿಸಲಾಯಿತು.

🔹 ಶಿವಮೊಗ್ಗ ಗ್ರಾಮಾಂತರ ಅಧ್ಯಕ್ಷರು — ಸೈಯದ್ ಫಾರೂಕ್
🔹 ಭದ್ರಾವತಿ ತಾಲೂಕು ಅಧ್ಯಕ್ಷರು — ರಾಮಕೃಷ್ಣ
🔹 ಯುವ ಘಟಕದ ತಾಲೂಕು ಅಧ್ಯಕ್ಷರು — ಕುಶಾಲ ಗೌಡ
🔹 ತಾಲೂಕು ಗ್ರಾಮಾಂತರ ಅಧ್ಯಕ್ಷರು — ಪ್ರವೀಣ್
🔹 ಸಂಘಟನೆ ಕಾರ್ಯದರ್ಶಿ — ಜಿ.ಕೆ. ಮಂಜುನಾಥ್

ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.

“ಶ್ರೀಗಂಧದ ನಾಡು — ಸುಂದರ ನಾಡು ನಮ್ಮ ಕರ್ನಾಟಕ, ಕನ್ನಡವೇ ಉಸಿರು” ಎಂಬ ಆಶಯದೊಂದಿಗೆ ಕನ್ನಡ ನಾಡು–ನುಡಿಯ ಸೇವೆ ಹಾಗೂ ಸಂಘಟನೆಯ ಬಲವರ್ಧನೆಗೆ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಸಂಕಲ್ಪವನ್ನು ವ್ಯಕ್ತಪಡಿಸಿದರು.

ನೂತನ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಎಂ. ಪರಮೇಶ್ವರ್ ಹಾಗೂ ಎಲ್ಲಾ ನೂತನ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ನಮ್ಮ ಕರ್ನಾಟಕ ಸೇನೆಯ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಶುಭಾಶಯಗಳನ್ನು ಈ ಮೂಲಕ ತಿಳಿಸಿದ್ದಾರೆ

Gara

Gara

Leave a comment

error: Content is protected !!