September 26, 2026

I ಸುದ್ದಿ ಬಿಟ್ರು I ಅಸ್ವಸ್ಥರಂತೆ ವರ್ತಿಸಿದ್ರೂ I ದರ್ಶನ್ ಫೈಲ್ಸ್ I

0
darshan 025
ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಸುದ್ದಿ ಬಿಟ್ರು I ಅಸ್ವಸ್ಥರಂತೆ ವರ್ತಿಸಿದ್ರೂ I ದರ್ಶನ್ ಫೈಲ್ಸ್ I
ಚಿತ್ರದುರ್ಗ ಮೂಲದ ಹಾಗೂ ಟಿಆರ್ಪಿ ಸುದ್ದಿ ನಿರೂಪಕರಾದ ಅಜಿತ್ ಹನುಮಕ್ಕನವರ್, ಜಯಪ್ರಕಾಶ್ ಶೆಟ್ಟಿ ಉಪ್ಪಳ, ಆಲ್ ರೈಟ್ ರಂಗಣ್ಣನ ಆಪ್ತ ರೇಣುಕಾಸ್ವಾಮಿಯ ಹತ್ಯೆ ಪ್ರಕರಣದ ಸುದ್ದಿ ವಿಸ್ತಾರತೆ ಈ ಹೊತ್ತಿಗೆ ಸಾವಿರ ಗಂಟೆಗಳ ಮೀರಿಸಿ ಜಗತ್ತಿನ ಎಲ್ಲಾ ದಾಖಲೆಗಳನ್ನ ಸರಿಗಟ್ಟಿದೆ, ಇಂತಹದೊಂದು ಮಹತ್ಸಾಧನೆಗೆ ಬರಪೂರವಾಗಿ ಸನ್ಮಾನಿಸಬೇಕು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಚಿಂತನೆ ನಡೆಸಲಿ‌ ಎನ್ನುವುದು ನನ್ನದೊಂದು ಮನವಿಯಾಗಿದೆ.
ಈ ಘಟನೆಯನ್ನು ಕುರಿತು ಸುದ್ದಿ ಮಾಡಿದರೋ..? ಸುದ್ದಿಯ ಹೆಸರಿನಲ್ಲಿ ಕಾಟೇರನ ಪಾತ್ರ ಟಾರ್ಗೆಟ್ ಆಯ್ತೋ‌.? ಎನ್ನುವ ತುಲನೆಗಳು, ತರ್ಕಗಳು ನಾಡಿನ ಸಮ ಸಮಾಜದವರು ಮಾಡಿದ್ದಾರೆ, ಹೀಗಾಗಿಯೇ ನಟ ದರ್ಶನ್ ಬೆಂಬಲಿತ ಅಭಿಮಾನಿಗಳ ದನಿಗಳ ವಿರುದ್ದ ಯಾರು ಮಾತಾಡುತ್ತಿಲ್ಲ, ಹೌದು ಇಲ್ಲಿ ಒಂದಷ್ಟು ಅರ್ಥವಾಗಬೇಕಾದುದ್ದು ಇಷ್ಟೆ..!
ಖಾಸಗಿ ಸುದ್ದಿ ನಿರೂಪಕರಾದ ಅಜಿತ್ ಹನುಮಕ್ಕನವರ್, ಜಯಪ್ರಕಾಶ್ ಶೆಟ್ಟಿ ಉಪ್ಪಳ, ಆಲ್ ರೈಟ್ ರಂಗಣ್ಣನವರುಗಳು ಪತ್ರಕರ್ತರಲ್ಲ, ಪತ್ರಕರ್ತ ಎನ್ನುವ ವ್ಯಾಖ್ಯಾನವೇ ಬೇರೆ, ಸುದ್ದಿ ನಿರೂಪಕರನ್ನು ಪತ್ರಕರ್ತರು ಎನ್ನುವುದು ಸಾಧ್ಯವಿಲ್ಲ, ಇಂತಿವರುಗಳು ಒಂದು ಪಕ್ಷದ ಹುರಿಯಾಳುಗಳು ಇದು ಗೊತ್ತಿರಲಿ, ಇನ್ನೂ ಈ ಆಸಾಮಿಗಳ ಆಸ್ತಿಗಳು, ಬೇನಾಮಿ ದಾಖಲೆಗಳನ್ನು ಪತ್ತೆ ಹಚ್ಚಲಿ, ಇವರುಗಳ ಐಷಾರಾಮಿ ಬದುಕು ಎಲ್ಲವೂ ವಾಕರಿಸಿಕೊಳ್ಳುತ್ತದೆ, ಪಬ್ಲಿಕ್ ರಂಗಣ್ಣನಿರುವ ಖಾಸಗಿ ಟಿವಿ ನ್ಯೂಸ್ ಕಛೇರಿಯನ್ನು ಟೆಂಡರ್ ನಿಯಮಾವಳಿಯಲ್ಲಿ ಬಾಡಿಗೆ ಪಡೆದಿಲ್ಲ, ಕಳೆದ ದಿನಮಾನದಲ್ಲೂ ಕೇಳಿದ ಪ್ರಶ್ನೆಗೆ ಉತ್ತರವಿಯ್ಯದ ಪಬ್ಲಿಕ್ ಟಿವಿ ರಂಗಣ್ಣ ನಿಮಗೆ ನಿಮ್ಮ ಟಿಆರ್ಪಿ ಸುದ್ದಿಮನೆಗೆ ನೈತಿಕತೆ ಇದ್ದೋಡೆ ಉತ್ತರಿಸಿ..?
ನಿಮ್ಮ ಕಛೇರಿಯು ಸರಕಾರಿ ಕಟ್ಟಡಗಳ ವಾಣಿಜ್ಯ ಬಳಕೆಗಾಗಿ ಯೋಜಿಸಿದ್ದರೆ, ಇದರ ಕುರಿತಾಗಿ ಪ್ರಶ್ನೆಯೇ ಇಲ್ಲ..ಇದು ವಾಣಿಜ್ಯ ಬಳಕೆಯ ಯೋಜನೆಯಾಗಿದ್ದು ನಿಯಮಿತ ಟೆಂಡರ್ ಪ್ರಕಾರವೇ ಬಾಡಿಗೆ ಪಡೆದಿದ್ದರೆ ಯಾರ ಪ್ರಶ್ನೆಯೂ ಇಲ್ಲ, ಬಾಡಿಗೆ ಟೆಂಡರ್ ಅನ್ವಯವೇ ಪಬ್ಲಿಕ್ ಟಿವಿಗೆ ಆಗಿದ್ದರೆ ಎಷ್ಟು ಮಾಸಿಕ ಬಾಡಿಗೆ ಎಂದು ನಮ್ಮಂತಹವರಿಗೆ ಗೊತ್ತಿಲ್ಲ, ಇದು ಲಘುವಾಹನ ನಿಲುಗಡೆಯ ಯೋಜನೆಗೆ ಬಳಕೆಯಾಗಬೇಕಿದ್ದ ಕಟ್ಟಡವೆಂದು ಮೂಲಗಳು ಹೇಳುತ್ತಿರುವ ಹಿನ್ನಲೆಯಲ್ಲಿ ಯಾಕೆ ರಂಗಣ್ಣ ಈ ಪ್ರಶ್ನೆಗೆ ಉತ್ತರಿಸಬಾರದು ಎನ್ನುವ ಅಭಿಪ್ರಾಯವಷ್ಟೇ.
ಸನ್ಮಾನ್ಯ..public tv ರಂಗಣ್ಣನವರೇ..?. ನಿಮ್ಮ ನ್ಯೂಸ್ ಚಾನೆಲ್ ವಿಳಾಸವಿದು…
4th floor, TTMC, BMTC Building,
Yeswanthpur Circle, Yeswanthpur,
Bangalore -560022
ಸ್ವಲ್ಪ ಗಮನಿಸಿ ಇಲ್ಲಿ Bengaluru Metropolitan Transport Corporation ( BMTC,) Traffic Transit Management Centres (TTMC) ಅಸಲಿಗೆ ಈ ಕಟ್ಟಡ ಯಾರದ್ದು..? TTMC, BMTC ಅಂದರೆ ಖಾಸಾಗಿ ಒಡೆತನದ ಸಂಸ್ಥೆಯೋ..? ಅಥವಾ ಇದೊಂದು ಸರಕಾರಿ ಕಟ್ಟಡವೋ..? ನನಗೆ ತಿಳಿಯದು ತಮಗೆ ಎನಾದ್ರೂ ತಿಳಿದಿದ್ದರೆ ಇಲ್ಲಿ ಕಮೆಂಟಿಸಿ ಪ್ಲೀಸ್, ನೀವು ಕಾನೂನಿನ್ವಯ ಟೆಂಡರ್ ಪ್ರಕ್ರಿಯೇ ಮುಖೇನ ಬಾಡಿಗೆ ಪಡೆದ ಕಟ್ಟಡವೋ..? ಇಲ್ಲಿ ಖಾಸಾಗಿ ವಹಿವಾಟುವಿಗೆ ಅವಕಾಶವಿದೆಯಾ..? ಇವೆಲ್ಲವುದರ ಮೊದಲು ನೀವು ಇಂತಿಷ್ಠು ವರುಷಗಳ ಕಾಲದಿಂದಲೂ ಖಾಸಾಗಿ ವಾಹಿನಿಯನ್ನು ನಡೆಸುತ್ತಿದ್ದೀರಿ ಆಗಾದರೆ ನೀವು TTMC, BMTC ಗೆ ಪಾವತಿಸಿರುವ ಬಾಡಿಗೆಗಳ ವಿವರವಿದ್ದರೆ ಇಲ್ಲಿ ಹಾಕಿ ಸ್ವಲ್ಪ ಸಾರ್ವಜನಿಕರಿಗೂ ಗೊತ್ತಾಗಲಿ,
ನಮಗಿರುವ ಮಾಹಿತಿಯಂತೆ ಇಲ್ಲಿ ಖಾಸಾಗಿ ಸಂಸ್ಥೆಗಳಿಗೆ ಬಾಡಿಗೆ ನೀಡುವುದಕ್ಕೆ ವಾಣಿಜ್ಯ ಸಂಕೀರ್ಣವಲ್ಲ ಆದರೂ ನಿಮಗೆ ಬಾಡಿಗೆ ನೀಡಿದ್ದಾರೆಯೋ..? ಅಥವಾ ಸರಕಾರಿ ಸ್ವತ್ತಿನ ಕಟ್ಟಡ ಪುಗುಸೊಟ್ಟೆ ನಿಡಿದ್ದಾರೆಯೋ ತಿಳಿಸಿ ..? ಇದು ನಾನೊರ್ವ ಪಬ್ಲಿಕ್ ಆಗಿ ಪ್ರಶ್ನಿಸುತ್ತಿದ್ದೇನೆ, ಉತ್ತರವಿಯ್ಯುವ ನೈತಿಕತೆ ನಿಮಗೆ ನಿಮ್ಮ ಟಿಆರ್ಪಿ ಸುದ್ದಿ ಮನೆಗೆ ಇದಿಯಾ..?
ಹೀಗೆ ಒಂದಲ್ಲ ಒಂದು ಬಾನಗಡಿಗಳು ರಾಚಿಸಿಕೊಂಡಿರುವ ನಿಮ್ಮ ಅಂಗಳದಲ್ಲಿಯೇ ಕೊಳೆತ ಕಸಗಳು ಇದ್ದು ಮೊದಲು ಇದನ್ನು ಸ್ವಚ್ಚಗೊಳಿಸಿ, ಇದನ್ನು ಬಿಟ್ಟು ಕಾಟೇರಾನ ಪಾತ್ರಧಾರಿಯಾದ ನಟ ದರ್ಶನ್ ಮೇಲೆ ಅಭಿವ್ಯಕ್ತಿಯ ಹೆಸರಿನಲ್ಲಿ ಟಾರ್ಗೆಟ್ ಮಾಡಿಕೊಂಡಿರುವುದು ಅಸಾಂವಿಧಾನಿಕ ಎನ್ನುವ ಕನಿಷ್ಠ ಜ್ಞಾನವಿಲ್ಲದೆ ಬೊಬ್ಬಿರಿಯುತ್ತಿದ್ದೀರಿ, ಇಂತಹ ಅಸಾಂವಿಧಾನಿಕ ನಿಮ್ಮ ನಡೆಗಳಿಂದ ಇಡೀ ಮಾಧ್ಯಮ ಸಮೂಹವೇ ಅಪಹಾಸ್ಯಕ್ಕೆ ಒಳಗಾಗುತ್ತಿದೆ, ನಿಂದನೆಗೆ ಗುರಿಯಾಗುತ್ತಿದೆ, ಕೇವಲ ನಿಮ್ಮ ಅಳಸಿ ಹೋದ ತೆವಲುಗಳಿಂದಾಗಿ ಇಂದು ಮಾಧ್ಯಮದ ಮೌಲ್ಯಗಳನ್ನು ಬೀದಿಗೆ ತಳ್ಳಿದಂತಾಗಿದೆ,
ಇದೊಂದು ಪೂರ್ವ ಷಡ್ಯಂತ್ರವೇ ಇರಬಹುದು ಈ ನೆಲದ ಮಹಾಚೇತನ ಡಾ.ಬಿ.ಆರ್ ಅಂಬೇಡ್ಕರ್ ರಚಿತ ಸಂವಿಧಾನದ ನಾಲ್ಕನೇ ಅವಿಭಾಜ್ಯ ಅಂಗವನ್ನು ಬಹಿರಂಗವಾಗಿ ವಿರೂಪಗೊಳಿಸಿ ಬೀದಿಗೆ ತಂದಿರುವ ನಿಮ್ಮಗಳ ಮೇಲೆ ಕಾನೂನು ತನಿಖೆ ನಡೆಸಲು ರಾಜ್ಯ ಸರ್ಕಾರ ಉನ್ನತ ಮಟ್ಟದ ತಂಡ ರಚಿಸಲಿ ಎನ್ನುವುದು ನನ್ನಯ ಆಗ್ರಹವಾಗಿದೆ.
ಪ್ರಕರಣ ಸುದ್ದಿ, ಸುದ್ದಿಯಾಗಿರದೇ ಅದೊಂದು ಟಾರ್ಗೆಟ್‌ ಆಗಿದೆ ಇದು ಕಾನೂನು ರಿತ್ಯಾ ಅಪರಾಧದ ಭಾಗವಾಗಿದ್ದರೂ ಪೊಲೀಸರು ಅತೀವ ಮೌನವಹಿಸಿರುವುದು ನೀವುಗಳು ಕಾರ್ಪೋರೇಟ್ ಮಾಧ್ಯಮಿಗಳೆನ್ನುವ ಹೆದರಿಕೆಯಿಂದಲೇ ಹೊರತು, ನಿಮ್ಮ ಅಪ್ರಬುದ್ದತೆಯಿಂದಲ್ಲ ಎನ್ನುವ ಚರ್ಚೆ ರಾಜ್ಯದಲ್ಲಿ ಗ್ರಾಸವಿಟ್ಟಿದೆ, ನಿಮ್ಮನ್ನು ಹೀನಾಡಿ ಬಿದಿಗೆಳೆದಿರುವ ನಟ ದರ್ಶನ್ ಅಭಿಮಾನಿ ವಲಯದಿಂದ ತಾವುಗಳು ಅತೀ ಮುಜುಗರಕ್ಕೆ ಒಳಪಟ್ಟಿದ್ದೀರಾ ಅಲ್ಲವೇ..? ಸಾಲದಕ್ಕೆ ನಿಮ್ಮೊಳಗಿನ ಮನುಷ್ಯ ಧ್ವೇಷಿ ವಿಕೃತ ಭಾವಗಳನ್ನು ಬೆತ್ತಲುಗೊಳಿಸಿದ್ದಾರೆ ಎನ್ನುವ ಕ್ರೂರ ಕೋಪ ಅಮರಿಕೊಂಡಿದೆ ಅಲ್ಲವೇ.?
ಇಂತಾದರೂ ಯಾವ ಪತ್ರಿಕಾ ಸಂಘಟನೆಗಳು ನಿಮ್ಮ ಪರವಾಗಿ ದನಿಯಾಗಲಿಲ್ಲ, ಅತೀ ಮೌನದ ತೆರೆಯ ಹಿಂದೆ ಸರಿದಿದೆ, ಇದು ಕೂಡ ನಿಮ್ಮ ಅಪ್ರಭುದ್ದ ಮನುಷ್ಯ ಧ್ವೇಷಿ ಸುದ್ದಿಯ ರಂಪಾಟಕ್ಕೆ ಹಿಡಿದ ಕೈಗನ್ನಡಿ ಅಲ್ಲವೇ..? ಈ ಬರಹದ ಕೊನೆಯದಾಗಿ ನೀವು ಮನುಷ್ಯರಾ..? ಮನುಷ್ಯ ಮುಖಿ ಅಸ್ವಸ್ಥರಾ..? ಕಾಲವೇ ಉತ್ತರಿಸುತ್ತದೆ
Spread the love

Leave a Reply

Your email address will not be published. Required fields are marked *

error: Content is protected !!