ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಅನಾಥಾಲಯಗಳ ಹೆಸರಿನಲ್ಲಿI ವಸತಿ ನಿಲಯಗಳ ಬಸರುಗಳೂ.. I
ದೇಶದಲ್ಲಿ ಅವ್ಯಾಹತ ದಾಳಿಗಳಿಂದ ಬಡ ಅನಾಥ ಮಕ್ಕಳು, ಮಕ್ಕಳು ಕಾಣೆಯಾದ ಪ್ರಕರಣಗಳು, ಅನಾಥಾಲಯಗಳ ಹೆಸರಿನಲ್ಲಿ ಬಸರುಮಾಡಿಕೊಳ್ಳುವ ಕಮರ್ಷಿಯಲ್ ದಂಧೆ ಕೆಲವೊಂದು ಅನಾಥಾಲಯದಲ್ಲಿ ಮಕ್ಕಳ ಮರಣಗಳ ಸಂಖ್ಯೆ ಅದನ್ನು ಎಲ್ಲಿ ಕ್ರಿಯಾಕ್ರಮಗಳನುಸಾರ ಸಮಾಧಿ ಮಾಡಲಾಗುತ್ತಿದಿಯಾ..?, ಶಿವಮೊಗ್ಗದಲ್ಲಿರುವ ಅನಾಥ ಮಕ್ಕಳು ಎನ್ನುವ ತಲೆಬರಹದಡಿ ಬಾಚಿ ಬಳಿದುಕೊಳ್ಳುತ್ತಿರುವ ಕೋಟಿ ಕಂತೆಗಳ ತನಿಖೆ ಆಗಬೇಕಾದ ಜರೂರತ್ತಿದೆ, ಏಕೆಂದರೆ ಇದರ ವಿಸ್ತ್ರತೆಯನ್ನು ಮೇಲ್ನೋಟಕ್ಕೆ ದರ್ಶಿಸಿಕೊಂಡಾಗಲೇ ಗೊತ್ತು ಮಾಡಿಕೊಳ್ಳಬಹುದಾಗಿದೆ ಇಂತಹ ಅನೇಕತೆಗಳ ದಂಧೆಗಳಲ್ಲಿ ಸಿಲುಕಿ ಹೇಗೆ ಅನಾಥ ಬದುಕುಗಳು ಪಲ್ಲಟಗೊಳ್ಳುತ್ತಿವೆ ಎನ್ನುವ ಕೆಲವು ಭಯಬೀತ ನಿತ್ಯ ಘಟನೆಗಳ ಮೇಲೆ ಇತ್ಯಾದಿ ಪಾಕ್ಷಿಕ ಪತ್ರಿಕೆ ಹಾಗೂ ಸೂರ್ಯಗಗನ ಪತ್ರಿಕೆ ಬೆಳಕು ಚೆಲ್ಲಿ ಸಾರ್ವಜನಿಕವಾಗಿ ಮುಂದಿರಿಸುವ ಅಮಾನವೀಯ ಘಟನೆಗಳಲ್ಲಿ ಬಡ ಅನಾಥ ಮಕ್ಕಳ ಧಾರುಣ ಸ್ಥಿತಿಗಳನ್ನು ಬೆತ್ತಲು ಗೊಳಿಸುತ್ತದೆ.
ಹೌದು ಅಸಲಿಗೆ ದೇಶದಲ್ಲಿನ ಸಾಕಷ್ಟು ಜಿಲ್ಲೆಗಳಲ್ಲಿ ಅಪೌಷ್ಟಿಕತೆಗೆ ತುತ್ತಾಗಿ ಅಸುನೀಗುವ. ವಿಕಲಾಂಗತೆಗೊಳಗಾಗುವ ಬಹುತೇಕ ಮಕ್ಕಳು ಆದಿವಾಸಿ ದಲಿತ ,ಅಲ್ಪಸಂಖ್ಯಾತ ವರ್ಗದವರೇ ಆಗಿದ್ದಾರೆ. ಇಂತಹ ತಳ ಸಮುದಾಯಗಳ-ಹಸಿವು-ಅಪೌಷ್ಟಿಕತೆಯನ್ನು ಹೊಗಲಾಡಿಸುವ ಸರ್ವ ಪ್ರಯತ್ನಗಳಲ್ಲಿ ರಾಜ್ಯ ಸರ್ಕಾರ ತಾತ್ಸರತೆಯನ್ನು ಸಾರಿದೆ. ಪೌಷ್ಟಕತೆ ಎನ್ನುವ ಸಾಮಾಜಿಕ ನ್ಯಾಯದ ಕುರಿತಾಗಿ ಚಿಂತನೆ ನಡೆಸುವ ಜರೂರತ್ಗಳನ್ನು ಕಸದ ಬುಟ್ಟಿಗೆ ಬಿಸಾಕಿರುವ ಸರ್ಕಾರ ಹಾಗೂ ಸರ್ಕಾರದ ಡಸ್ಟ್ ಬಿನ್ ಸಚಿವರುಗಳು ಸೇರಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಗಳ ಅಧಿಕಾರ ನ್ಯೂನ್ಯತೆಗಳಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆಯೇ..? ಎನ್ನುವ ಸಾಕ್ಷ್ಯಗಳು ಧೃಡಿಕರಿಸುತ್ತವೆ,
ಶಿವಮೊಗ್ಗದಲ್ಲಿ ಅನಾಥ ಮಕ್ಕಳ ಹೆಸರಿನಲ್ಲಿ ಬಸರು ಮಾಡಿಕೊಳ್ಳುತ್ತಿರುವ ಅನಾಥಾಲಯಗಳಿವೆ : ಇಂತಹ ದಂಧೆಗಳು ನಿಜಕ್ಕೂ ಸೇವೋನ್ಮುಖಿ ಅನಿಸಿಕೊಂಡು ಸಾರ್ವಜನಿಕವಾಗಿ ಮೊಹರೊತ್ತುಕೊಳ್ಳುತ್ತಿರುವುದು ದುರಂತದ ಪರಮಾವಧಿಯಾಗಿದೆ, ಅನಾಥಾಲಯ ಎಂದರೆ ಇದರರ್ಥ ಮಕ್ಕಳಿಗೆ ಯಾರು ಇಲ್ಲದವರು, ಅವರಿಗೆ ಆಸರೆ ಬಯಸುವ ನೊಂದಾಯಿತ ಎನ್ಜಿಓ ಸಂಸ್ಥೆಗಳು, ಆದರೆ ಇಲ್ಲಿ ಬಹುತೇಕ ಏನಾಗುತ್ತಿದೆ, ಪೋಷಕರು ಇದ್ದು ಬಡತನ, ಮಧ್ಯಮ ಕ್ರಮಾಂಕದಲ್ಲಿರುವ ಸೂರುಗಳ ಮಕ್ಕಳು ಕೂಡ ಇಲ್ಲಿ ಅನಾಥರ ಪಟ್ಟಿಯಲ್ಲಿ ಸೇರಿಕೊಂಡಿವೆ, ಅಸಲಿಗೆ ನಾಲ್ಕು ಮಕ್ಕಳು ನಿಜಕ್ಕೂ ಅನಾಥರಿದ್ದರೆ ಉಳಿದವರು ಸ್ಥಳೀಯ ಪೋಷಕರಿದ್ದ ಮಕ್ಕಳೇ ಆಗಿದ್ದಾರೆ, ಇಂತಹ ವಿಷಮ ಸ್ಥಿತಿಗಳ ಒಟ್ಟು ಸಂಖ್ಯೆ ಹದಿನಾಲ್ಕರಿಂದ ಇಪ್ಪತ್ತು ಮಕ್ಕಳಿರಿರುತ್ತಾರೆ, ಬೇಕಿದ್ದರೆ ಇಲ್ಲಿನ ಬಹುತೇಕ ಪೋಷಕರ ಮಕ್ಕಳು ಮನೆಗೆ ತೆರಳಿ ವಿಶ್ರಮಿಸಬಹುದು, ಇದನ್ನು ನೋಡಿಕೊಳ್ಳುವ ವಾರ್ಡನ್ಗಳು ಥೇಟ್ ವಸತಿ ನಿಲಯವಾಗಿ ಮಾರ್ಪಡಿಸಿರುತ್ತಾರೆ, ಆದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿಗಳ ಕಡತದಲ್ಲಿ ಇಂತಿವರೆಲ್ಲಾ ಪಕ್ಕಾ ಅನಾಥಮಕ್ಕಳೆಂದು ಸುಳ್ಳು ಎಂಟ್ರಿ, ವರದಿಗಳಲ್ಲಿ ಕಾಣಿಸಿಕೊಳ್ಳುವುದು ನೋಡಿದರೆ ಇಂತಹ ಮಖೇಡಿ ಅಧಿಕಾರಿಗಳು ಕೂಡ ಅನಾಥಾಲಯ ಹೆಸರಿನಲ್ಲಿ ವಸತಿ ನಿಲಯವಾಗಿಸಿಕೊಂಡಿರುವ ಎನ್ಜಿಓ ಸಂಸ್ಥೆಗಳೊಂದಿಗೆ ಶಾಮೀಲಾಗಿರುತ್ತಾರೆ, ಎನ್ನುವುದರ ಪ್ರಕರಣದತ್ತ ಜಿಲ್ಲಾಧಿಕಾರಿಗಳಾದ ಗುರುದತ್ ಹೆಗಡೆಯವರು ಚಿತ್ತವರಿಸಲಿ.
ಈ ನಡುವೆ ಶಿವಮೊಗ್ಗದಲ್ಲಿರುವ ಇಂತಹ ಅನಾಥಾಲಯಗಳಲ್ಲಿ ನಾಗರೀಕರು ಹುಟ್ಟು ಹಬ್ಬ ಆಚರಿಸಿಕೊಳ್ಳಬೇಕೆಂದರೆ ಒಂದು ದಿನಕ್ಕೆ ಅನಾಥ ಹುಡುಗರ ಹೆಸರಿನ ಊಟದ ಹೆಸರಿನಲ್ಲಿ ೩೦೦೦ ( ಮೂರು ಸಾವಿರ ಹಣ ಮುಂಗಡವಾಗಿ ಕಟ್ಟಬೇಕಾಗಿರುತ್ತದೆ ) ಹೀಗೆ ಕಟ್ಟಿದವರ ಸಾಲಿನಡಿ ವಿವಾಹ ವಾರ್ಷಿಕೋತ್ಸವ, ವಾರ್ಷಿಕ ಶ್ರದ್ದಾಂಜಲಿ, ಸಂತಸ, ದುಃಖ ದುಮ್ಮಾನಗಳಿಗೆ ಇಂತಹುದೇ ಅನಾಥಾಲಯಗಳಲ್ಲಿ ಸೇವೆ ಸಲ್ಲಿಸಿ ಒಂದಷ್ಟು ನೆಮ್ಮದಿ ಕಂಡುಕೊಳ್ಳುವ ನಾಗರೀಕರಿಗೆ ಮಹಾಮೋಸ ನಡೆಯುತ್ತಿರುವುದು ಹಾಡುಹಗಲೇ ಬಹಿರಂಗವಾಗಿಯೇ ಇದೆ, ಒಟ್ಟಾರೆ ತಿಂಗಳಿಗೆ ಕನಿಷ್ಠ ಇಪ್ಪತ್ತು ಕಾರ್ಯಕ್ರಮಗಳ ದೇಣಿಗೆ ಸಂಗ್ರಹಿಸುವ ಎನ್ಜಿಓ ವ್ಯವಸ್ಥಾಪಕ ಮಂಡಳಿಗೆ ಅನಾಮತ್ತಾಗಿ ಆರು ಲಕ್ಷ ಹಣ ಜಮೆ ಅಗಿ ಬಿಡುತ್ತದೆ, ಇದು ಮುಂದುವರೆದು ಎನ್ಆರ್ಐ ಫಂಡ್ಸ್, ಶಾಸಕರ, ಸಂಸದರ ನಿಧಿ, ತಾಲ್ಲೂಕ್ ಪಂಚಾಯ್ತು, ಜಿಲ್ಲಾ ಪಂಚಾಯ್ತು ನಲ್ಲಿರುವ ಎನ್ಜಿಓ ನಿಧಿಗಳು, ಸಾರ್ವಜನಿಕವಾದ ದೇಣಿಗೆಗಳು, ಆಹಾರ ಪದಾರ್ಥಗಳು, ಸಾಮಾಗ್ರಿಗಳು, ತರಕಾರಿಗಳು, ಬಟ್ಟೆಗಳು, ಇತ್ಯಾದಿ ಕ್ರೂಡಿಕರಿಸಿಕೊಂಡರೆ ವರ್ಷಕ್ಕೆ ಅಂದಾಜು ಒಂದು ಕೋಟಿಗೂ ಅಧಿಕ ಹಣ ಮುಂಡಾಯಿಸುವ ಇಂತಹ ವಸತಿ ಗೃಹಗಳ ಮೇಲೆ ದಾಳಿ ಮಾಡಿ ಸುಳ್ಳು ಲೆಕ್ಕಪತ್ರ ಹಾಗೂ ಎನ್ಜಿಓ ಹೆಸರಿನಲ್ಲಿರುವ ವಿವಿಧ ಬ್ಯಾಂಕಿನ ಖಾತೆಗಳು, ರಶೀಧಿಗಳು ಪರಿಶೀಲಿಸಿದರೆ ಕಳೆದ ಹತ್ತು ವರ್ಷದಿಂದ ಒಂದು ಅನಾಥಾಲಯ ಹೆಸರಿನಲ್ಲಿರುವ ವಸತಿ ನಿಲಯಗಳು ಖಾಸಗಿ ಒಡೆತನದ ಎನ್ಜಿಓ ಸಂಸ್ಥೆಗಳ ಸರಾಸರಿ ಆದಾಯ ಹದಿನೈದು ಕೋಟಿಗೂ ಅಧಿಕ ಎನ್ನುವುದು ಗೊತ್ತು ಮಾಡಿಕೊಳ್ಳಬಹುದಾಗಿದೆ, ಇಂತಹದೊಂದು ತನಿಖೆಗೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮುಂದಾಗಲಿ ಎನ್ನುವುದು ಈ ವರದಿಯ ಉದ್ದೇಶ ಮತ್ತು ಆಗ್ರಹವಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಕಲ್ಯಾಣ ಇಲಾಖೆ ಹೇಳಿದಂತೆ : ಮಕ್ಕಳ ರಕ್ಷಣೆ, ಅಭಿವೃದ್ಧಿಗೆ ಸಂಬಂಧಿಸಿದಂತೆ ಕಾಯ್ದೆ ಕಾನೂನು, ನೀತಿ, ಯೋಜನೆಗಳ ಹಾಗೂ ಕಾರ್ಯಕ್ರಮಗಳ ಚೌಕಟ್ಟಿನ ರಚನೆ ಹಾಗೂ ಅನುಷ್ಠಾನ. ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಸಾರ್ವತ್ರೀಕರಣ, ಮೂಲ ಕರ್ಮಚಾರಿಗಳ ತರಬೇತಿ, ಪ್ರಾಯ ಪೂರ್ವ ಬಾಲಕಿಯರಿಗೆ ಪೌಷ್ಠಿಕಾಂಶ, ಕೌಶಲ್ಯ ಆಧಾರಿತ ಶಿಕ್ಷಣ, ವೃತ್ತಿಪರ ತರಬೇತಿ, ಆರೋಗ್ಯ ಶಿಕ್ಷಣ ಹಾಗೂ ಗೃಹ ಆಧಾರಿತ ಚಟುವಟಿಕೆಗಳ ಬಗ್ಗೆ ಕೌಶಲ್ಯವನ್ನು ಒದಗಿಸುವುದು.
ಕಾರ್ಯ ಕರ್ತೃತ್ವ ಹಾಗೂ ಮಹಿಳೆಯರ ಹಾಗೂ ಮಕ್ಕಳ ಸಾಗಣೆ ಬಗ್ಗೆ ಅರಿವು ಮೂಡಿಸುವುದು, ಸಾಗಾಣೆಗೆ ಒಳಪಟ್ಟ ಮಹಿಳೆಯರ ಹಾಗೂ ಮಕ್ಕಳಿಗಾಗಿ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಪುನರ್ವಸತಿ ಕೇಂದ್ರಗಳ ಸ್ಥಾಪನೆ, ಅಲ್ಲದೆ ಸಂಕಷ್ಟದಲ್ಲಿರುವ ಮಹಿಳೆಯರಿಗೆ ಅಲ್ಪಾವಧಿ ಗೃಹ/ಕೇಂದ್ರ ಹಾಗೂ ಸಾಂತ್ವನ ಕೇಂದ್ರಗಳ ಸ್ಥಾಪನೆ.ಮಹಿಳೆಯರ ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು. ವಿವಿಧ ಸಂಸ್ಥೆಗಳಲ್ಲಿ ಮಹಿಳಾ ಉದ್ದೇಶಿತ ಆಯವ್ಯಯವನ್ನು ನಿಗದಿಪಡಿಸುವ ಪ್ರಕ್ರಿಯೆ ಬಗ್ಗೆ ಕಾರ್ಯ ಕರ್ತೃತ್ವ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ತರಬೇತಿ ನೀಡುವುದುವಿವಿಧ ಇಲಾಖೆಗಳೊಂದಿಗೆ ಸಮನ್ವಯತೆಯ ಮೂಲಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಯನ್ನು ಒಮ್ಮುಖವಾಗುವಂತೆ ನೋಡಿಕೊಳ್ಳುವುದು.ಆಸ್ತಿ ಇಲ್ಲದ ಹಾಗೂ ಸಂಕಷ್ಟದಲ್ಲಿರುವ ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕೌಶಲ್ಯಾಬಿsವೃದ್ಧಿ ತರಬೇತಿ ಹಾಗೂ ಸೂಕ್ಷ್ಮ ಜಮಾಕಟ್ಟು ನೆರವು (micro credit finance) ಪಡೆಯಲು ಅನುಕೂಲತೆಯನ್ನು ಕಲ್ಪಿಸುವುದು. ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಉತ್ತೇಜಿಸುವುದು ಹಾಗೂ ಅನುಷ್ಠಾನಗೊಳಿಸುವುದು. ಇದು ನಿಜಿಕ್ಕೂ ಆಗುತ್ತಿದಿಯಾ..? ಎನ್ನುವುದು ಇಲಾಖಾಧಿಕಾರಿಗಳೊಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ, ಶಿವಮೊಗ್ಗದಲ್ಲಿರುವ ಬಹುತೇಕ ಅನಾಥಾಲಯಗಳು ಅಸಲಿ ಅನಾಥಾಲಯಗಳೇ ಅಥವಾ ಇದರ ಹೆಸರಿನಲ್ಲಿರುವ ವಸತಿ ನಿಲಯಗಳೇ..? ಎನ್ನುವುದನ್ನು ಮೊದಲು ಸುಳ್ಳು ವರದಿಗಳನ್ನು ಇಲಾಖಾ ಕಡತಗಳಲ್ಲಿ ದಾಖಲಿಸುವ ಮುನ್ನದಿ ಎಚ್ಚೆತ್ತುಕೊಳ್ಳಲಿ,
ಮಕ್ಕಳು ಕಾಣೆಯಾದ ಪ್ರಕರಣಗಳು : ಇದು ಅಪೌಷ್ಠಿಕತೆ ಎನ್ನುವ ಸಾಮಾಜಿಕ ಪಿಡುಗಿನ ಜೊತೆಯಲ್ಲಿ ರಾಜ್ಯದಲ್ಲಿ ಮಕ್ಕಳು ಕಾಣೆಯಾಗುತ್ತಿದ್ದಾರೆ ಈ ರೀತಿ ಕಾಣೆಯಾಗುವ ಮಕ್ಕಳ ಪ್ರಕರಣ ರಾಜ್ಯದಲ್ಲಿ ಶೇಕಡ ೩೨%ರಷ್ಟು ಇದ್ದರೆ ಪತ್ತೆಯಾಗುವುದು ಕೇವಲ ೮% ಮಾತ್ರ ಹಾಗಾದಾರೆ ಕಾಣೆಯಾದ ಪ್ರಕರಣದಲ್ಲಿ ಪತ್ತೆಯಾಗದ ಮಕ್ಕಳ ಬಗ್ಗೆ ಯಾವ ಪೊಲೀಸ್ ಠಾಣೆಯಲ್ಲೂ ಒಟ್ಟು ರಿಜಿಸ್ಟರ್ ಮೆಂಟೆನ್ ಮಾಡಿರುವುದಿಲ್ಲ. ಎನ್ನುವ ಬೆಜಾವಾಬ್ದಾರಿ ಕರ್ತವ್ಯಗಳಲ್ಲಿ ಪೊಲೀಸ್ ಇಲಾಖೆ ಮುಳುಗಿ ಹೋಗಿದೆ. ಈ ರೀತಿಯ ಪ್ರಕರಣದಲ್ಲಿ ೨೪% ಮಕ್ಕಳನ್ನು ಅನಾಹುತಾಕಾರಿ, ದೇಶ ದ್ರೋಹಿ ಸಂಘಟನೆಗಳಿಗೆ ಕೆಲ ಶೇಖಡವಾರು ಪಾಲಾದರೆ ಇನ್ನುಳಿದವು ನಿರಾಶ್ರೀತರ ಶಿಬಿರ ಸಂಘ ಸಂಸ್ದೆಗಳು ಸ್ದಾಪಿಸಿರುವ ಅನಾಥಾಲಯಗಳಲ್ಲಿ ಬೆರಳೆಣಿಕೆಯ ಮಕ್ಕಳು ಶೋಷಣೆಗೊಳಪಟ್ಟು ಹೆತ್ತವರ ಮರೆತು ತನ್ನದೆ ಲೋಕದಲ್ಲಿ ಮಗ್ನವಾಗುವ ೧೨ ವರ್ಷದ ಮಕ್ಕಳು ಅನಾಥರಾಗಿಯೇ ಉಳಿಯುತ್ತಾರೆ. ಇಲ್ಲಿ ಇಂತಹ ಮಕ್ಕಳನ್ನು ಹಾಗೂ ಪೋಷಕರೆ ಇಲ್ಲದ ಮಕ್ಕಳನ್ನು ತಂದಿಟ್ಟುಕೊಂಡು ಸರ್ಕಾರಿ ಎನ್,ಜಿ,ಓ ಸೌಲಭ್ಯಗಳನ್ನು, ಡೋನೆಷನ್ಗಳನ್ನು ಕಬಳಿಸಿ, ಹೆಕ್ಕಿ ಅನಾಥಾಲಯದ ಹೆಸರಿನಲ್ಲಿ ಬಸರುಮಾಡಿಕೊಳ್ಳುವ ಕಮರ್ಷಿಯಲ್ ದಂಧೆ ಬಹುತೇಕ ಕಾಣಬರುತ್ತಿದೆ. ಇಂತಹ ಸೂಕ್ಷ್ಮ ಸಂಗತಿಗಳಲ್ಲೂ, ಅಧಿಕಾರಿಗಳು ಕಂಬಳಿ ಹೊದ್ದು ಮಲಗದೆ ಮಕ್ಕಳ ಸಂಗತಿಗಳಲ್ಲಿ ಗಂಭೀರವಾಗಿ ಕರ್ತವ್ಯ ನಿಭಾಯಿಸಲಿ
ಅನಾಥಾಲಯಗಳ ಹೆಸರಿನಲ್ಲಿ ಬಸರುಮಾಡಿಕೊಳ್ಳುವ ಕಮರ್ಷಿಯಲ್ ದಂಧೆ : ಎನ್ಜಿಓ ಕಾಯ್ದೆಯಡಿ ನೊಂದಣಿ ಮಾಡಿಸಿಕೊಂಡು ಅದೆಷ್ಠೊ ಅನಾಥಾಲಯಗಳು ಅನಾಥ ಮಕ್ಕಳ ಹೆಸರಿನಲ್ಲಿ ಬಸರು ಮಾಡಿಕೊಳ್ಳುತ್ತಿದೆ. ಅಲ್ಲದೆ ದುಡಿಮೆಗೆ ದಾರಿಮಾಡಿಕೊಂಡಿದೆ. ದೇಣಿಗೆ ವಸೂಲಿ ಎನ್ಆರ್ಐ ಹಣ ಎನ್ಜಿಓ ಹಾಗೂ ಕೇಂದ್ರ ಸರ್ಕಾರದ ಹಣಗಳನ್ನು ಸಮರ್ಪಕವಾಗಿ ಹೆಕ್ಕಿ ಸುಳ್ಳು ಕಾರ್ಯಕ್ರಮಗಳು, ಮಕ್ಕಳ ಅಭಿವೃದ್ಧಿಗಳು ಎನ್ನುವ ಹೆಸರಿನಲ್ಲಿ ಆಯಾ ಇಲಾಖೆ, ಸಂಸ್ಧೆಗಳಿಗೆ ವರದಿ ಸಲ್ಲಿಸಿ ತಮ್ಮದೇ ವೆಬ್ಸೈಟ್ಗಳಲ್ಲಿ ಪ್ರಚಾರ ಪಡಿಸುವ ಬಹುತೇಕ ಅನಾಥಾಲಯಗಳ ಕಮರ್ಷಿಯಲ್ ದಂಧೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಮ್ಮ ತನಿಖಾ ವರದಿಗಳನ್ನು ವಿಧಾನ ಸೌಧದ ಮೊಗಸಾಲೆಗಳಲ್ಲಿ ಕುಳಿತು ನಿದ್ದೆಗೆ ಜಾರುತ್ತಿರುವ ಸಚಿವರಿಗೆ ಕಳುಹಿಸಲಿ, ಕಮರ್ಷಿಯಲ್ ಅಂಗಡಿಗಳಂತಾಗಿರುವ ಒಂದಿಷ್ಟು ಅನಾಥಾಲಯಗಳ ಕಾರ್ಯ ವೈಖರಿ ಅಲ್ಲಿನ ಮಕ್ಕಳ ಸ್ಧಿತಿ ಕಣ್ಣಾರೆ ಕಂಡು ಸಂಬಂಧಿಸಿದ ಇಲಾಖೆಗೆ ಶಿಸ್ತು ಕ್ರಮ ಜರುಗಿಸುವಂತೆ ಆದೇಶಿಸಲಿ, ಎನ್ನುವುದು ಈ ಹೊತ್ತಿನ ಆಶಯವಾಗಿದೆ.
ಕೆಲವೊಂದು ಅನಾಥಾಲಯದಲ್ಲಿ ಮಕ್ಕಳ ಮರಣಗಳ ಸಂಖ್ಯೆ ಅದನ್ನು ಎಲ್ಲಿ ಕ್ರಿಯಾಕ್ರಮಗಳನುಸಾರ ಸಮಾಧಿ ಮಾಡಲಾಗುತ್ತಿದಿಯಾ..? : ಎನ್ನುವ ಸೂಕ್ಷ್ಮತೆಗಳಲ್ಲಿ ಅಲ್ಲಿಯ ಧ್ವನಿಗಳ ಪ್ರಕಾರ ಸತ್ತಮಕ್ಕಳನ್ನು ಅಥವಾ ಸಾಯುವ ಮೊದಲೇ ಲ್ಯಾಬ್ಗಳಿಗೆ ಮಾರಾಟ ಮಾಡುವ ದಂಧೆಗಳು ಕೂಡ ಸಾಗಿದೆ ಎನ್ನುವುದು ಆಚ್ಚರಿಯಾಗಿದೆ. ಬೀದಿ ಮಕ್ಕಳ ಅಪಹರಣ, ಕೊಲೆ ನಡೆಸಿ, ಲ್ಯಾಬ್ಗಳು ಮೆಡಿಕಲ್ ಸೈನ್ಸ್ ಟೆಕ್ನಾಲಜಿ ಇನ್ಸಿಟ್ಯೂಟ್ಗಳಿಗೆ ಮಾರಾಟ ಶಂಕೆ..? ಹೀಗೆ ಅನಾಥಾ ಮಕ್ಕಳು ಎನ್ನುವ ಒಂದೇ ಕಾರಣಕ್ಕೆ ಪರಿಪರಿಯಾ ದಂಧೆಗಳಿಗೆ ಬಳಸಿಕೊಂಡು ಹೆಗ್ಗಿಲ್ಲದೆ ಸಾಗಿರುವ ಆತಂಕಕಾರಿ ಬೆಳವಣಿಗೆಯಲ್ಲಿ ಬೀದಿ ಮಕ್ಕಳು ಎಂದು ಗುರುತಿಸಲಾದವರು ಸೂರಿಲ್ಲದೆ ಚಿಂದಿ ಆಯುವ ಕೈಂಕರ್ಯದಲ್ಲಿ ತೊಡಗಿಕೊಂಡು ಯಾರದ್ದೊ ಜಗುಲಿ ಕಟ್ಟೆಯ ಮೇಲೆ ನಿದ್ರಿಸಿ ಬಿಡುವ ಈ ಬೀದಿ ಬದುಕುಗಳು ಅಪಹರಣಕಾರರ ಜಾಲಕ್ಕೇ ಸಿಲುಕಿ ಕೊನೆಯುಸಿರೆಳೆಯುತ್ತದೆ. ಇಲ್ಲಿ ಅಪಹರಣಕ್ಕೊಳಾಗಾದ ಮಕ್ಕಳು ಹಿಂದೆ-ಮುಂದೆ ಯಾರು ಇಲ್ಲದಿರುವುದರಿಂದ ಅಪಹರಣಕಾರರ ಜಾಲ ಇಂದಿಗೂ ಸಕ್ರೀಯವಾಗಿದೆ. ಅಸಲಿಗೆ ಅಪಹರಿಸಿದ ಮಕ್ಕಳಿಗೆ ಮಾತ್ರೆಗಳನ್ನು ಕೊಟ್ಟು ಆಹಾರಾಧಿಗಳಿಲ್ಲದೆ. ಸಾಯಿಸುವ ಹಾಗೂ ಸಾಯುವ ಹಂತಕ್ಕೆ ಆ ಬೀದಿ ಮಕ್ಕಳು ತಲುಪಿದಾಗ. ಅದೇ ಸ್ಥಿತಿಯಲ್ಲಿ ಮಕ್ಕಳನ್ನು ಲ್ಯಾಬ್ಗೆ ಮೆಡಿಕಲ್ ಸೈನ್ಸ್ ಟೆಕ್ನಾಲಜಿ ಆಪ್ ಇನ್ಸಿಟ್ಯೂಟ್ಗಳಿಗೆ ಹಾಗೂ ಮಕ್ಕಳ ಕಿಡ್ನಿ ಕಣ್ಣುಗಳನ್ನು ಸಾಗಾಟ ನಡೆಸುವುದು, ಸತ್ತ ಮಕ್ಕಳ ದೇಹವನ್ನು ರಾಸಾಯಿನಿಕ ಕೆಮಿಕಲ್ಗಳಿಂದ ಕೊಳೆಯಿಸಿ ಅದೇ ಆಸ್ತಿಪಂಜರಗಳನ್ನು ಮೆಡಿಕಲ್ ಸ್ಟೂಡೆಂಟ್ಗಳಿಗೆ ಮಾರಾಟ ಮಾಡುವ ಜಾಲ ಇದೇ ಮಹಾನಗರಿಯ ಇಕ್ಕೆಲಗಳಲ್ಲಿವೆ. ಎನ್ನುವುದು ಪೊಲೀಸ್ ಇಲಾಖೆಯ ವೈಪಲ್ಯವನ್ನು ತೋರಿಸುತ್ತದೆ,
ಕಾಣೆಯಾದ ಮಕ್ಕಳು ಹಾಗೂ ಬೀದಿ ಮಕ್ಕಳನ್ನು ಅಪಹರಿಸಿ ಸಮಾಜ ಘಾತುಕ ಶಕ್ತಿಗಳಿಗೆ ಸಾಗಾಟ ನಡೆಸಿ ಅವರಿಗೆ ವಿವಿಧ ಮತಾಂಧತೆಯ ಹಾಗೂ ದೇಶದ್ರೋಹಿ, ಸಮಾಜ ದ್ರೋಹಿ ಸಂಘಟನೆಗಳಿಗೆ ಬಳಸಿಕೊಳ್ಳುತ್ತಿರುವುದು. ಮಕ್ಕಳ ಮೇಲಿನ ಅವ್ಯಾಹತ ದಾಳಿ ಇಂದು ನಿನ್ನೆಯದಲ್ಲ ನಿರಂತರವಾಗಿ ಸಾಕಷ್ಟು ವರುಷಗಳಿಂದಲೇ ಸಾಗಿಬಂದಿದೆ. ಕಾಣೆಯಾದ ಮಕ್ಕಳಲ್ಲಿ ಶೇಕಡವಾರು ಹಾಗೂ ಬೀದಿ ಮಕ್ಕಳ ಪೋಷಣೆಗಳ ಹೆಸರಿನಲ್ಲಿ ೧೨ ವರುಷ ದೊಳಗಿನ ಮಕ್ಕಳನ್ನು ಒಂದು ಹೊರ ಪ್ರಪಂಚದ ಅರಿವೆಯಲ್ಲಿನ ಸುತ್ತುವರೆದ ಬಂಗಲೆಗಳಲ್ಲಿ ಹಾಗೂ ಮನೆಗಳಲ್ಲಿ ತಮ್ಮದೇ ತತ್ವ ಸಿದ್ದಾಂತಗಳನ್ನು ನಿತ್ಯವೂ ಭೋದಿಸಿ. ದೈಹಿಕವಾಗಿ ಹಾಗೂ ಅಂತಹ ಘಾತುಕ ಘಟನೆಗಳಿಗೆ ಅನುಕೂಲವಾಗುಂತೆ ವರುಷಗಟ್ಟಲೆ ತರಬೇತಿ ಕೊಟ್ಟು ಬೆಳೆಸುತ್ತಾರೆ ಇಲ್ಲಿ ಅಚ್ಚರಿಯೆಂದರೆ ಕಾಣೆಯಾದ ಮಕ್ಕಳು ಒಂದಷ್ಟು ತಿಂಗಳು ಹೆತ್ತವರನ್ನು ನೆನಪಿಸಿಕೊಂಡು ದುಃಖಿಸುತ್ತಾರೆ. ಬರಬರುತ್ತಾ ಹೆತ್ತವರನ್ನು ಮರೆತು, ಬಾಂಬರ್ಗಳಾಗಿ, ಸಮಾಜ ವಿದ್ರೋಹಿ ಚಟುವಟಿಕೆಗಳಿಗೆ ನಿಲ್ಲುತ್ತಾರೆ. ಇಂತಹ ಅನಾಹುತಗಳ ಬಗ್ಗೆ ಗುಪ್ತಚರ ಇಲಾಖೆಗೆ ಮಾಹಿತಿಯಿಲ್ಲವೇ..? ಇದ್ದರೂ ಮೌನವೇಕೆ..? ಎನ್ನುವ ಅಸಲಿ ಸತ್ಯಗಳು ಇಲ್ಲಿ ಕೆಣಕುತ್ತಿವೇ. ಈ ಸಂಬಂದಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇತ್ತಕಡೆ ಗಮನ ಹರಿಸಿದರೆ ಒಳಿತು.
ಮಹಾನಗರಿ ಬೆಂಗಳೂರಿನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ನೂರು ಮಕ್ಕಳ ಬಿಕ್ಷಾಟನೆಯಲ್ಲಿ ತೊಡಗಿಸಿಕೊಂಡ ಪೋಷಕರನ್ನು ಪೊಲೀಸರಿಂದ ಹಿಡಿಸಿದ್ದು ದೊಡ್ಡದೊಂದು ಸಾಧನೆಯಲ್ಲ. ಅತೀ ಮುಖ್ಯವಾಗಿ ಕಾಸಿಗಾಗಿ ತನ್ನ ಹಸಿವಿಗಾಗಿ ಪರಿತಪಿಸುವ ಅನಾಥ ಮಕ್ಕಳ ದಯನೀಯ ಸ್ಥಿತಿಯನ್ನು ಸಚಿವರು ಸಂಬಂಧಿಸಿದ ಇಲಾಖಾಧಿಕಾರಿಗಳು ಅರ್ಥೈಸಿಕೊಳ್ಳಬೇಕಾಗಿದೆ. ಅಲ್ಲದೆ ಅನಾಥ ಮಕ್ಕಳ ಕುರಿತಾಗಿ ಇತ್ಯಾದಿ ಪತ್ರಿಕೆ ಬಿತ್ತರಗೊಳಿಸಿರುವ ಅನಾಹುತಗಳ ಸಂಗತಿಯನ್ನು ಲಘುವಾಗಿ ಪರಿಗಣಿಸದೇ ಒಂದಿಷ್ಟು ಸಂಭಂದಿಸಿದ ಇಲಾಖೆಗಳಿಗೆ ಕಾರ್ಯಾಚರಣೆಗಿಳಿಸಿದರೆ ಇದರ ಅಸಲಿಯತ್ತಿನ ಘಟನೆಗಳು ಬಹಿರಂಗಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲವಾಗಿದೆ,.