Saturday, 19 September 2026 Suryagagana — Edition

Suryagagana

My WordPress Blog

ಸೂರ್ಯಗಗನ I ಹಸಿರು, ಸ್ವಚ್ಚ ಮತ್ತು ಸುಂದರ ನಗರ ನಿರ್ಮಾಣಕ್ಕೆ ಸಂಕಲ್ಪ I ಸ್ಬೂಡಾ ಅಧ್ಯಕ್ಷ ಹೆಚ್.ಎಸ್.‌ಸುಂದರೇಶ್ I ಸೂರ್ಯಗಗನ I ಕಾರ್ಮಿಕರ ವಸತಿ ನಿಲಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲು I ರಾಜ್ಯ ಅಸಂಘಟಿತ ಕಾರ್ಮಿಕ ಸಂಘ ಒತ್ತಾಯ I ಸೂರ್ಯಗಗನ I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I ಸೂರ್ಯಗಗನ I ಹಸಿರು, ಸ್ವಚ್ಚ ಮತ್ತು ಸುಂದರ ನಗರ ನಿರ್ಮಾಣಕ್ಕೆ ಸಂಕಲ್ಪ I ಸ್ಬೂಡಾ ಅಧ್ಯಕ್ಷ ಹೆಚ್.ಎಸ್.‌ಸುಂದರೇಶ್ I ಸೂರ್ಯಗಗನ I ಕಾರ್ಮಿಕರ ವಸತಿ ನಿಲಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲು I ರಾಜ್ಯ ಅಸಂಘಟಿತ ಕಾರ್ಮಿಕ ಸಂಘ ಒತ್ತಾಯ I ಸೂರ್ಯಗಗನ I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I
ಅಂಕಣ

I ಕರುನಾಡಿನ ಮಹಿಳಾ ಐಪಿಎಸ್ I ಸಿಂಘಂ ರೂಪಾ I

ಬರೆಯುತ್ತಾರೆ ಗಾರಾ.ಶ್ರೀನಿವಾಸ್ I ಕರುನಾಡಿನ ಮಹಿಳಾ ಐಪಿಎಸ್ I ಸಿಂಘಂ ರೂಪಾ I ಕರ್ನಾಟಕದಲ್ಲಿ ದಕ್ಷ ಪೊಲೀಸರಿಗೇನು ಕಡಿಮೆ ಇಲ್ಲ, ಅದೆಷ್ಟೆ ರಾಜಕೀಯ ಒತ್ತಡಗಳಿದ್ದರೂ ಯಾವುದೇ ಒತ್ತಡಗಳಿಗೆ ಮಣಿಯದೇ ತಮ್ಮ ಕರ್ತವ್ಯವನ್ನು ಪೊಲೀಸ್ ಖದರ್ ತೋರಿಸಿಯೇ ನಿಭಾಯಿಸಿರುವ ಜೀವಂತ ಶಾಸನಗಳಿವೆ, ಅಂತಹದೊಂದು…

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಕರುನಾಡಿನ ಮಹಿಳಾ ಐಪಿಎಸ್ I ಸಿಂಘಂ ರೂಪಾ I

ಕರ್ನಾಟಕದಲ್ಲಿ ದಕ್ಷ ಪೊಲೀಸರಿಗೇನು ಕಡಿಮೆ ಇಲ್ಲ, ಅದೆಷ್ಟೆ ರಾಜಕೀಯ ಒತ್ತಡಗಳಿದ್ದರೂ ಯಾವುದೇ ಒತ್ತಡಗಳಿಗೆ ಮಣಿಯದೇ ತಮ್ಮ ಕರ್ತವ್ಯವನ್ನು ಪೊಲೀಸ್ ಖದರ್ ತೋರಿಸಿಯೇ ನಿಭಾಯಿಸಿರುವ ಜೀವಂತ ಶಾಸನಗಳಿವೆ, ಅಂತಹದೊಂದು ಧಿರೋದತ್ತವಾಗಿ ಪೊಲೀಸ್ ವಲಯದಲ್ಲಿ ಸಂಚಲನವನ್ನು ಹುಟ್ಟು ಹಾಕಿ ಹೈ-ಪ್ರೋಪೈಲ್ ಕೇಸುಗಳನ್ನು ಬಯಲಿಗೆಳೆದ ವೀರ ಒನಕೆ ಓಬವ್ವ ಡಿ.ರೂಪ ಐಪಿಎಸ್. ಇಂತಿವರು ಈಗಾಗಲೇ ೨೦ ವರ್ಷದ ಸೇವೆಗೆ, ೪೦ಕ್ಕೂ ಹೆಚ್ಚು ಭಾರಿ ವರ್ಗಾವಣೆಯಾಗಿದ್ದರೂ ಅಪರಾಧ ಜಗತ್ತು ಬೆಸ್ತು ಬೀಳುವಂತೆ ಖಾಕಿ ಖದರ್ ಕಾಯ್ದಿರಿಸಿದ ಕರುನಾಡಿನ ಮಹಿಳಾ ಐಪಿಎಸ್ ಸಿಂಘಂ ರೂಪಾರವರ ಹೆಜ್ಜೆ ಶ್ಲಾಘನೀಯವಾದುದ್ದು.

ಹೌದು ಮಹಿಳಾ ಗಟ್ಟಿಗಿತ್ತಿಯಾಗಿ ಅನೇಕ ಪ್ರಕರಣಗಳಲ್ಲಿ ನೀರುಣಿಸಿ ಕರ್ತವ್ಯವನ್ನು ಮೆರೆದ ಡಿ,ರೂಪರವರ ಕರ್ತವ್ಯ ಪರತೆ ಈ ನಾಡಿನಲ್ಲಿ, ದೇಶದಲ್ಲಿ ಮಾದರಿಯಾಗಿದೆ, ಇಂತಹ ಐಪಿಎಸ್ ರೂಪರವರು ಆಗಾಗ್ಗೆ ಲಾ ಅಂಡ್ ಆರ್ಡರ್ ಸಂಗತಿಯಲ್ಲಿ ಸಾಮಾಜಿಕ ಹಿತದೃಷ್ಠಿಯಲ್ಲಿ ನೀಡುತ್ತಿದ್ದ ಹೇಳಿಕೆಗಳು ಸಾಂವಿಧಾನಿಕ ಅಭಿವ್ಯಕ್ತಿಯನ್ನು ಪ್ರತಿಪಾದಿಸುತ್ತಿದ್ದರೆ, ಅವರ ಕರ್ತವ್ಯ ಪಾಲನೆ ದಕ್ಷತೆ ಬಿಂಬಿಸುತ್ತಿತ್ತು, ಇದನ್ನೇ ವಿವಾದಿತವಾಗಿಸಿಕೊಂಡಿರುವ ಟಿಆರ್ಪಿ ಖಾಸಗಿ ಚಾನೆಲ್‌ಗಳು, ಕೆಲ ವಕ್ರದೃಷ್ಠಿ ರಾಜಕೀಯ ವ್ಯವಸ್ಥೆಗಳು ಐಪಿಎಸ್ ರೂಪರವರ ಕರ್ತವ್ಯದ ಹಾದಿಯಲ್ಲಿ ಮುಗ್ಗರಿಸಿದ್ದವು. ಹೀಗೆ ಮುಗ್ಗರಿಸಿ ವರ್ಗಾವಣೆಗಳನ್ನು ಮಾಡಿಸುವಲ್ಲಿ ಸಫಲವೂ ಆದರೂ ಎಲ್ಲಿಯೇ ವರ್ಗಾವಾಗಿಯೇ ಹೋದರು ರೂಪರವರ ಕರ್ತವ್ಯದ ಸದ್ದು ಇಡೀ ನಾಡಿನಲ್ಲಿ ಕೇಳಿಸುತಿತ್ತು ಇದೇ ಅಲ್ಲವೇ..? ದಕ್ಷ ಕರ್ತವ್ಯಕ್ಕೆ ಹಿಡಿದ ಕೈಗನ್ನಡಿ.

ನಾಡಿನಲ್ಲಿ ನಡುಕ ಹುಟ್ಟಿಸಿದ ಐಪಿಎಸ್ ಅಧಿಕಾರಿ ಡಿ. ರೂಪಾ :
೨೦೦೦ನೇ ಇಸವಿಯಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ೪೩ ನೇ ರ್‍ಯಾಂಕ್ ಪಡೆದು ಉತ್ತೀರ್ಣರಾದ ಡಿ.ರೂಪಾರವರು ಹೈದರಾಬಾದ್‌ನ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆದವರು, ಬಳಿಕ ಕರ್ನಾಟಕ ಕೇಡರ್‌ನಲ್ಲೇ ಐಪಿಎಸ್ ಅಧಿಕಾರಿಯಾದರು. ಧಾರವಾಡ ಜಿಲ್ಲೆಯಲ್ಲಿ ಎಸ್‌ಪಿ ಆಗಿ ಮೊದಲು ನೇಮಕವಾಗಿದ್ದರು. ಬಳಿಕ, ಗದಗ, ಯಾದಗಿರಿಯಲ್ಲೂ ಸೇವೆ ಸಲ್ಲಿಸಿದ್ದಾರೆ. ನಂತರ, ಬೆಂಗಳೂರಿಗೆ ವರ್ಗಾವಣೆಯಾಗಿದ್ದರು.
೨೦೦೭ ರಲ್ಲಿ, ಮಧ್ಯಪ್ರದೇಶದ ಮುಖ್ಯಮಂತ್ರಿ ಮತ್ತು ಪ್ರಸ್ತುತ ಕೇಂದ್ರ ಸಚಿವೆಯಾಗಿರುವ ಉಮಾಭಾರತಿಯವರನ್ನು, ಹುಬ್ಬಳ್ಳಿಯ ಕೋರ್ಟ್ ಕೇಸಿನ ವಿಚಾರವಾಗಿ ಬಂಧಿಸುವ ಅಧಿಕಾರವನ್ನು ನೀಡಲಾಗಿತ್ತು. ೨೦೦೮ ರಲ್ಲಿ ಮಾಜಿ ಸಚಿವರಾದ ಯಾವಗಲ್ ರನ್ನು ಬಂಧಿಸಿದ್ದರು. ಇದೇ ಕೇಸ್ ವಿಚಾರವಾಗಿ ಅವರ ಜೊತೆ ಸಹೋದ್ಯೋಗಿಯಾಗಿದ್ದ ಮಸೂತಿಯವರನ್ನು ಯಾವಗಲ್ ರಿಗೆ ರಕ್ಷಣೆ ನೀಡುತ್ತಿದ್ದಾರೆಂಬ ಕಾರಣಕ್ಕೆ ಅಮಾನತುಗೊಳಿಸಲಾಗಿತ್ತು. ಸೈಬರ್-ಕ್ರೈಮ್ ಪೊಲೀಸ್ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದರಿಂದಾಗಿ ಈ ಕ್ಷೇತ್ರದಲ್ಲಿ ಕೆಲಸ ಮಾಡಿದ ಭಾರತದ ಪ್ರಥಮ ಮಹಿಳಾ ಪೊಲೀಸ್ ಅಧಿಕಾರಿ ಎನಿಸಿಕೊಂಡರು. ೨೦೧೭ ರ ಜುಲೈನಲ್ಲಿ ಕಾರಾಗೃಹ ಇಲಾಖೆಯ ಮಹಾನಿರ್ದೇಶಕರಾಗಿ ನೇಮಕಗೊಂಡರು.

ಈ ವೇಳೆ ಎಐಎಡಿಎಂಕೆಯ ವಿ.ಕೆ. ಶಶಿಕಲಾಗೆ ಪರಪ್ಪನ ಅಗ್ರಹಾರದಲ್ಲಿ ವಿಶೇಷ ಸವಲತ್ತುಗಳನ್ನು ನೀಡಲಾಗುತ್ತಿದೆ ಎಂಬ ಮಾಹಿತಿಯನ್ನು ಡಿ. ರೂಪಾ ಅವರು ಬಯಲಿಗೆಳೆದರು. ಮಾತ್ರವಲ್ಲದೆ, ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕ ಮತ್ತು ಕಾರಾಗೃಹಗಳ ಮಹಾನೀರೀಕ್ಷಕ ಸತ್ಯನಾರಾಯಣರಾವ್ ಅವರಿಗೆ ಒಪ್ಪಿಸಿದ ವರದಿಯಲ್ಲಿ, ಶಶಿಕಲಾ ಅವರಿಗೆ ಜೈಲಿನ ಒಳಗೆ ವಿಶೇಷ ವ್ಯವಸ್ಥೆಗಳನ್ನು ನೀಡಿದ್ದು ಮಾತ್ರವಲ್ಲದೆ, ಅಡುಗೆ ಮನೆಯ ವ್ಯವಸ್ಥೆ ಮತ್ತು ೨ ಕೋಟಿ ರೂ. ಲಂಚ ತೆಗೆದುಕೊಂಡು ಜೈಲು ಅಧಿಕಾರಿಗಳು ಅವ್ಯವಹಾರ ಮಾಡಿದ್ದನ್ನು ಬಯಲಿಗೆಳೆದಿದ್ದರು.

ಇದು ಒನಕೆ ಓಬವ್ವನಂತೆಯೇ ಅಪರಾದಗಳ ಜಗತ್ತಿನಲ್ಲಿ ಒನಕೆ ಹಿಡಿದೊರಟ ವೀರ ವನಿತೆ ಡಿ.ರೂಪಾರವರು ದೀಪಾವಳಿಗೆ ರಾಜ್ಯದಲ್ಲಿ ಹಸಿರು ಪಟಾಕಿ ಹೊಡೆಯಲು ಮಾತ್ರ ಅವಕಾಶವಿತ್ತು, ಈ ಕುರಿತಂತೆ ಅವರು ಪಟಾಕಿ ಬ್ಯಾನ್ ಅನ್ನು ಸಮರ್ಥಿಸಿಕೊಂಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿವಾದದ ಕೇಂದ್ರ ಬಿಂದುವಾಗಿದ್ದಾರು ರಾಜ್ಯದ ಅತ್ಯುತ್ತಮ ಐಪಿಎಸ್ ಅಧಿಕಾರಿಗಳ ಪೈಕಿ ಈಕೆಯೂ ಒಬ್ಬರು ಎನ್ನುವುದನ್ನು ಮರೆತು ವಿವಾದಕ್ಕೆಡೆ ಮಾಡಿಕೊಟ್ಟ ಮನಸುಗಳು ಒಂದಿಷ್ಟು ಚಿಂತನೆಗಳೊಗಾಗಿ ಇದು ಅವರ ಅಭಿವ್ಯಕ್ತಿ, ಈ ದೇಶದಲ್ಲಿ ಪ್ರತಿಯೊಬ್ಬರಿಗೂ ಸಾಂವಿಧಾನಿಕವಾದ ಹಕ್ಕಿದೆ, ಅಲ್ಲದೆ ಪಟಾಕಿ ಸಿಡಿಸುವುದರಿಂದ ಆಗುತ್ತಿರುವ ಅನಾಹುತಗಳನ್ನಾಧರಿಸಿ ಡಿ.ರೂಪಾರವರು ಸಮರ್ಥಿಸಿಕೊಂಡಿದ್ದರೆ ವಿನಃ ಯಾವ ಧಾರ್ಮಿಕತೆಗೆ ವಿರೋಧಬಾಸ ಅವರದ್ದಾಗಿರಲಿಲ್ಲ ಎನ್ನುವುದು ಕಮೆಂಟಿಗರಿಗೆ ಅರ್ಥವಾಗಿಯೇ ಇರಲಿಲ್ಲ, ಎರಡು ಬಾರಿ ರಾಷ್ಟ್ರಪತಿ ಪೊಲೀಸ್ ಪದಕದ ಗೌರವಕ್ಕೆ ಭಾಜನರಾಗಿದ್ದ ಇವರು ಜಿ-ಫೈಲ್ಸ್ ಗವರ್ನೆನ್ಸ್ ಪ್ರಶಸ್ತಿ ಹಾಗೂ ಎಕ್ಸೆಪ್ಷನಲ್ ಕಾಂಟ್ರಿಬ್ಯೂಷನ್ ಅವಾರ್ಡ್‌ನ್ನು ಸ್ವೀಕರಿಸಿದವರಾಗಿದ್ದರು.

ರಾಜಧಾನಿ ಬೆಂಗಳೂರಿನಲ್ಲಿ, ಸಿಟಿ ಆರ್ಮ್ಡ್ ರಿಸರ್ವ್ ವಿಭಾಗದ ಡಿ.ಎಸ್.ಪಿ. ಆಗಿದ್ದಾಗ ಡಿ.ರೂಪಾರವರು ಸರಿ ಸುಮಾರು ೮೧ ರಾಜಕೀಯ ವ್ಯಕ್ತಿಗಳ ೨೧೬ ಮಂದಿ ಅನಧಿಕೃತ ಬಂದೂಕುಧಾರಿಗಳನ್ನು ಹಿಂಪಡೆದುಕೊಂಡು ಸುದ್ದಿಯಾಗಿದ್ದರು, ಅಷ್ಟು ಮಾತ್ರವಲ್ಲದೇ, ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳ ಬಳಿಯಿದ್ದ ಅನಧಿಕೃತ ೮ ಹೊಸ ಎಸ್.ಯು.ವಿ. ಗಳನ್ನು ವಿಭಾಗಕ್ಕೆ ಹಿಂತೆಗೆದುಕೊಂಡರು. ೨೦೧೭ ರ ಜುಲೈ, ಕಾರಾಗೃಹ ಇಲಾಖೆಯ ಮಹಾನಿರ್ದೇಶಕರಾಗಿ ನೇಮಕಗೊಂಡರು.
ಪ್ರಸ್ತುತ ಅವರು ಕರ್ನಾಟಕ ಮತ್ತು ಬೆಂಗಳೂರಿನ ಎರಡನೇ ಅತ್ಯುನ್ನತ ಸ್ಥಾನವಾದ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ (ಐಜಿಪಿ) ಅಧಿಕಾರಿಯಾಗಿದ್ದಾರೆ. ಅಷ್ಟು ಮಾತ್ರವಲ್ಲದೆ ಬೆಂಗಳೂರಿನಲ್ಲಿ ಗೃಹ ರಕ್ಷಕ ದಳದ ಹೆಚ್ಚುವರಿ ಕಮಾಂಡೆಂಟ್ ಜನರಲ್ ಮತ್ತು ನಾಗರಿಕ ರಕ್ಷಣಾ ವಿಭಾಗದಲ್ಲಿ ಎಕ್ಸ್ – ಅಫಿಸಿಯೋ ಹೆಚ್ಚುವರಿ ನಿರ್ದೇಶಕರಾಗಿಯೂ ಕೆಲಸ ಮಾಡುತ್ತಿದ್ದಾರೆ. ಇದಕ್ಕೂ ಮೊದಲು ಕರ್ನಾಟಕದ ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗಕ್ಕೆ ಕಮೀಷನರ್ ಆಗಿಯೂ ಮತ್ತು ಕಾರಾಗೃಹ ಇಲಾಖೆಯ ಮಹಾನಿರ್ದೇಶಕರಾಗಿಯೂ ಕೆಲಸ ನಿರ್ವಹಿಸಿದ್ದರು.

ಇಂತಿವರು ಮೂಲತಃ ದಾವಣಗೆರೆಯವರು ಅವರ ತಂದೆ ಜೆ. ಎಚ್. ದಿವಾಕರ್, ನಿವೃತ್ತ ಎಂಜಿನಿಯರ್. ತಾಯಿ ಹೇಮಾವತಿ ಅಂಚೆ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರ ತಂಗಿ ರೋಹಿಣಿ ಸಹ ಆದಾಯ ತೆರಿಗೆ ಇಲಾಖೆಯಲ್ಲಿ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರೂಪಾ ತಮ್ಮ ಬಿ.ಎ. ಪದವಿಯನ್ನು ಕರ್ನಾಟಕದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪಡೆದುಕೊಂಡರೆ, ಬೆಂಗಳೂರು ವಿಶ್ವವಿದ್ಯಾಲಯದಿಂದ ಮನಃಶಾಸ್ತ್ರ ವಿಭಾಗದಲ್ಲಿ ಎಂ.ಎ. ಪದವಿಯನ್ನು ಪಡೆದರು. ಡಿ. ರೂಪಾ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಮತ್ತು ಭರತನಾಟ್ಯ ನೃತ್ಯಗಾರ್ತಿಯಾಗಿಯೂ ತರಬೇತಿ ಪಡೆದಿದ್ದಾರೆ. ಇತ್ತೀಚೆಗೆ ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಮಹಿಳೆಯರಲ್ಲಿ ಸ್ಪೂರ್ತಿ ತುಂಬುವಂತಹ ಮ್ಯೂಸಿಕ್ ವೀಡಿಯೋ ಒಂದನ್ನು ಬಿಡುಗಡೆ ಮಾಡಿದ್ದರು. ೨೦೧೩ ರಲ್ಲಿ ಅವರು ಮುನೀಶ್ ಮೌದ್ಗಿಲ್ ರನ್ನು ಮದುವೆಯಾದರು. ಮುನೀಶ್ ಐಐಟಿ ಮುಂಬೈನಲ್ಲಿ ಓದಿದ್ದವರು. ಅವರು ಐ.ಎ.ಎಸ್.ನಲ್ಲಿ ೮ ನೇ ರ?ಯಾಂಕ್ ಪಡೆದಿದ್ದು, ಪ್ರಸ್ತುತ ಐಎಎಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಅನಘಾ ಮತ್ತು ರೊಶಿಲ್ ಎಂಬ ಇಬ್ಬರು ಮಕ್ಕಳಿದ್ದಾರೆ.

ಇನ್ನೂ ವರ್ಗಾವಣೆಯ ಸರಣಿಯನ್ನು ಕೂಡ ಎದುರಿಸಿದ್ದರೂ ಡಿ.ರೂಪಾ :
ಹೀಗೆ ರಾಜಕೀಯ ವ್ಯಕ್ತಿಗಳ ಮತ್ತು ಹಿರಿಯ ಐಪಿಎಸ್ ಅಧಿಕಾರಿಗಳ ಪ್ರಕರಣಗಳನ್ನು ಕೈಗೆತ್ತಿಕೊಳ್ಳುವುದರಲ್ಲಿ ಮುಂದಡಿಯಾಗುತ್ತಿದ್ದ ಡಿ.ರೂಪಾರವರು ೪೦ಕ್ಕೂ ಹೆಚ್ಚು ಬಾರಿ ವರ್ಗಾವಣೆಗೊಂಡಿದ್ದರು ಪ್ರಸ್ತುತ ಅವರು ಕರ್ನಾಟಕ ಮತ್ತು ಬೆಂಗಳೂರಿನ ಎರಡನೇ ಅತ್ಯುನ್ನತ ಸ್ಥಾನವಾದ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ಅಧಿಕಾರಿಯಾಗಿದ್ದಾರೆ. ಅಷ್ಟು ಮಾತ್ರವಲ್ಲದೆ ಬೆಂಗಳೂರಿನಲ್ಲಿ ಗೃಹ ರಕ್ಷಕ ದಳದ ಹೆಚ್ಚುವರಿ ಕಮಾಂಡೆಂಟ್ ಜನರಲ್ ಮತ್ತು ನಾಗರಿಕ ರಕ್ಷಣಾ ವಿಭಾಗದಲ್ಲಿ ಎಕ್ಸ್-ಅಫ಼ೀಸಿಯೋ ಹೆಚ್ಚುವರಿ ನಿರ್ದೇಶಕರಾಗಿಯೂ ಕೆಲಸ ಮಾಡುತ್ತಿದ್ದಾರೆ. ಇದಕ್ಕಿಂತಲೂ ಮೊದಲು ಅವರು ಕರ್ನಾಟಕದ ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗಕ್ಕೆ ಕಮೀಷನರ್ ಆಗಿಯೂ ಮತ್ತು ಕಾರಾಗೃಹ ಇಲಾಖೆಯ ಮಹಾನಿರ್ದೇಶಕರಾಗಿಯೂ ಕೆಲಸ ನಿರ್ವಹಿಸಿದ್ದರುವ ಇಂತಿವರ ಕರ್ತವ್ಯ ಪಾಲನೆ, ಸವಾಲುಗಳು ಅತ್ಯಂತ ಪರಿಣಾಮಕಾರಿಯಾಗಿ ಎದುರಿಸಿ ಯಶಸ್ವಿಯಾಗಿದ್ದು ಸಾಹಸವೇ ಆಗಿದೆ. ಇವರ ಬಗ್ಗೆ ಒಂದಿಷ್ಟು ಕಲೆ ಹಾಕಿ ಅನ್ಯರಿಗೂ ಸುದ್ದಿ ರೂಪದಲ್ಲಿ ತಲುಪಿಸಬೇಕು, ಸಮಸ್ಯೆಗಳಲ್ಲಿ ಬಳಲಿ ರಾಜಕೀಯ ಒತ್ತಡಗಳಿಗೆ ಬಲಿಗೊಳ್ಳುವ ಕರ್ತವ್ಯಕ್ಕೆ ಡಿ.ರೂಪರವರ ದಿಟ್ಟ ಹೆಜ್ಜೆಗಳು ಎಂದಿಗೂ ನಾಡು ಮರೆಯುವುದಿಲ್ಲ, ಮತ್ತೆ ಮತ್ತೆ ಅದು ಪುನಾರವರ್ತಿತವಾಗಿ ಬಹುತೇಕರಿಗೆ ಸ್ಪೂರ್ತಿಯಾಗಬಲ್ಲದು ಎನ್ನುವ ಅಸಲು ಸಂಗತಿಯನ್ನಿಟ್ಟುಕೊಂಡು ಅವರ ವೀಕಿಪಿಡಿಯಾ ಹಾಗೂ ಅವರ ಒನಕೆ ಓಬವ್ವನಂತಹ ಕರ್ತವ್ಯ ನೋಡುತ್ತಲೇ ಇರುವ ಅನೇಕತೆಗಳನ್ನು ಕಲೆ ಹಾಕಿ ಇತ್ಯಾದಿ ಪತ್ರಿಕೆಯಲ್ಲಿ ವಿಸ್ತೃತಗೊಳಿಸಲಾಗಿದೆ

Gara Srinivas

Gara Srinivas

Leave a comment

error: Content is protected !!