Saturday, 19 September 2026 Suryagagana — Edition

Suryagagana

My WordPress Blog

ಸೂರ್ಯಗಗನ I ಹಸಿರು, ಸ್ವಚ್ಚ ಮತ್ತು ಸುಂದರ ನಗರ ನಿರ್ಮಾಣಕ್ಕೆ ಸಂಕಲ್ಪ I ಸ್ಬೂಡಾ ಅಧ್ಯಕ್ಷ ಹೆಚ್.ಎಸ್.‌ಸುಂದರೇಶ್ I ಸೂರ್ಯಗಗನ I ಕಾರ್ಮಿಕರ ವಸತಿ ನಿಲಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲು I ರಾಜ್ಯ ಅಸಂಘಟಿತ ಕಾರ್ಮಿಕ ಸಂಘ ಒತ್ತಾಯ I ಸೂರ್ಯಗಗನ I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I ಸೂರ್ಯಗಗನ I ಹಸಿರು, ಸ್ವಚ್ಚ ಮತ್ತು ಸುಂದರ ನಗರ ನಿರ್ಮಾಣಕ್ಕೆ ಸಂಕಲ್ಪ I ಸ್ಬೂಡಾ ಅಧ್ಯಕ್ಷ ಹೆಚ್.ಎಸ್.‌ಸುಂದರೇಶ್ I ಸೂರ್ಯಗಗನ I ಕಾರ್ಮಿಕರ ವಸತಿ ನಿಲಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲು I ರಾಜ್ಯ ಅಸಂಘಟಿತ ಕಾರ್ಮಿಕ ಸಂಘ ಒತ್ತಾಯ I ಸೂರ್ಯಗಗನ I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I
ಸಾಹಿತ್ಯ

I ಜಾತಿ-ಧರ್ಮಗಳ ಜಗದೊಳು I

ಬರೆಯುತ್ತಾರೆ ಗಾರಾ.ಶ್ರೀನಿವಾಸ್‌ I ಜಾತಿ-ಧರ್ಮಗಳ ಜಗದೊಳು I ಕಲ್ಲೂರ, ಬೊಮ್ಮನ, ಮಾದರ, ಸಾಬರ ಕಿಲಿಸ್ತಾನ್ರು, ಹಜಾಮ್ರು ಶೆಟ್ಟರ, ಸುಡುಗಾಡು ಸಿದ್ದರ ಜೀವ ವಿಂಗಡಣೆಯ ನೆಲೆಯಿದು, ಜಾತಿ,ಧರ್ಮ ನಿಂದನೆಗಳ ದನಿಯಿದು, ಜಾತಿ ಹಿಡಿದರು, ಧರ್ಮ ಬಿಟ್ಟರು, ಧರ್ಮ ಹಿಡಿದರು, ಜಾತಿ ಬಿಟ್ಟರು, ಮಿಥ್ಯದ…

ಬರೆಯುತ್ತಾರೆ ಗಾರಾ.ಶ್ರೀನಿವಾಸ್‌

I ಜಾತಿ-ಧರ್ಮಗಳ ಜಗದೊಳು I

ಕಲ್ಲೂರ, ಬೊಮ್ಮನ,
ಮಾದರ, ಸಾಬರ
ಕಿಲಿಸ್ತಾನ್ರು, ಹಜಾಮ್ರು
ಶೆಟ್ಟರ, ಸುಡುಗಾಡು ಸಿದ್ದರ
ಜೀವ ವಿಂಗಡಣೆಯ ನೆಲೆಯಿದು,
ಜಾತಿ,ಧರ್ಮ ನಿಂದನೆಗಳ
ದನಿಯಿದು,
ಜಾತಿ ಹಿಡಿದರು, ಧರ್ಮ ಬಿಟ್ಟರು,
ಧರ್ಮ ಹಿಡಿದರು, ಜಾತಿ ಬಿಟ್ಟರು,
ಮಿಥ್ಯದ ಕೂಗು ಕೂಗಿಗೂ,
ಸೂರುಗಳ ಕಾವಿಟ್ಟರು,

ಬೆತ್ತಲ ಕಾಯಕೆ ಸೊಪ್ಪು-ಸೆದೆಗಳ ಸುತ್ತಿ,
ಹಸಿವ ದಾಹದಿ ಗೆಡ್ಡೆ -ಗೆಣಸು,
ಹಸಿ ಮಾಂಸಗಳ ಭಕ್ಷಿಸಿ,
ಪೊದೆ ಹಸಿರ, ಪ್ರತಿಧ್ವನಿಗಳ
ಆರಾಧಿಸಿ ಸಾಗಿತು,
ಮನುಕುಲವ ವೃದ್ದಿಸಿತು ಅನಾದಿ,
ಕೊಳೆಸಿತು ನಾಗರೀಕತೆಯ ಬುನಾದಿ,

ಮನಸು-ಮನಸುಗಳ
ಅಂತರದಿ, ಕಿಡಿಯ ಹಚ್ಚಿ
ದೈವ-ದೆವ್ವಗಳ ಸೃಷ್ಟಿಸಿ,
ಭಾವ ಬೇಗೆಗೆ ಹುಂಡಿಯಿಟ್ಟು,
ಬೆವರ ಕಿಸೆಗಳಿಗೆ ಕಂದಕವಿಟ್ಟರು,
ಕಂದಾಚಾರದಂದಣದಿ
ಮೊನಚು ಕಂದಲಿಗಳನು
ಶಿರಚ್ಛೇದನಕೆ ಅಣಿಗೊಳಿಸಿ,
ರುಧಿರದನಿಗಳ ತೊಟ್ಟಿಕ್ಕಿಸಿ,
ಬೊಗಸೆ ಬದುಕುಗಳ
ಸಮಾದಿಗೆ ದೌಡಾದರು,

ಅನಾದಿಯ ಕಾಲಗಳು ಕಾಲವಾಯಿತು,
ಮನಸಿನ ಮೃಗಿತನಗಳ ಮೇಳವಾಯಿತು,
ಅಂತರ್ಮುಖಿ ಆತ್ಮರತಿಗಳ ಕತ್ತಲಿಲಿ,
ದೀವಿಗೆಗಳು ಹಾರಿ ಹೋಯಿತು,
ಮಿಂಚು ಹುಳುವಿನಂತೆ ದನಿ ಮೊರೆದು
ಸದ್ದಿಲ್ಲದ ತೆರೆಗೆ ಸರಿಯಿತು,
ಲೋಕ ನಿಂದಿತರ ಜಗದೊಳು
ಜಾತಿ-ಧರ್ಮಗಳ ನೆಲೆಯೊಳು,
ಸತ್ಯವೇ ಹುದುಗಿ ಹೋಯಿತು,

Gara Srinivas

Gara Srinivas

Leave a comment

error: Content is protected !!