Friday, 18 September 2026 Suryagagana — Edition

Suryagagana

My WordPress Blog

ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I Uncategorized Een vergelijking van virtuele spelopties systematisch bekeken Uncategorized Algemene uitleg over gebruikelijke speloverzichten ter voorbereiding Uncategorized Algemene uitleg over beschikbare spelformaten helder beschreven Uncategorized Casino categories: examples and explanations for players Uncategorized Zo vergelijkt je online accountfuncties aandachtig Uncategorized Hoe u verschillende spelcategorieën duidelijk kunt onderscheiden ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I Uncategorized Een vergelijking van virtuele spelopties systematisch bekeken Uncategorized Algemene uitleg over gebruikelijke speloverzichten ter voorbereiding Uncategorized Algemene uitleg over beschikbare spelformaten helder beschreven Uncategorized Casino categories: examples and explanations for players Uncategorized Zo vergelijkt je online accountfuncties aandachtig Uncategorized Hoe u verschillende spelcategorieën duidelijk kunt onderscheiden
ಸಂಪಾದಕೀಯ

I ಲೌಕಿಕ ಕುತಂತ್ರಿಗಳ ವಿರುದ್ದ I ಅಲೌಕಿಕತೆ ಗೆಲ್ಲಿಸಿದೆ I

ಬರೆಯುತ್ತಾರೆ ಗಾರಾ.ಶ್ರೀನಿವಾಸ್ I ಲೌಕಿಕ ಕುತಂತ್ರಿಗಳ ವಿರುದ್ದ I ಅಲೌಕಿಕತೆ ಗೆಲ್ಲಿಸಿದೆ I ಈ ತಲೆಬರಹದಡಿ ಬರೆಯುವಾಗ ಒಂದೊಮ್ಮೆ ಚಿಂತನೆ ಎದುರಾಯ್ತು..! ಯಾರಿಗೋ,ವ್ಯಕ್ತಿಗತವಾಗಿ ಗುರಿ ಮಾಡಿಕೊಂಡು ಬರೆದು ಬಿಟ್ಟಿದ್ದಾನೆ ಅವ್ನೂ.. ಎಂದು ಎಲ್ಲಿ ಅಂದ್ಕೊಂಡು ಬಿಡ್ತಾರೆ ಎಂದೆನಿಸ್ತು, ಇನ್ನೊಮ್ಮೆ ತನ್ನ ಕುರಿತಾಗಿ…

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಲೌಕಿಕ ಕುತಂತ್ರಿಗಳ ವಿರುದ್ದ I ಅಲೌಕಿಕತೆ ಗೆಲ್ಲಿಸಿದೆ I

ಈ ತಲೆಬರಹದಡಿ ಬರೆಯುವಾಗ ಒಂದೊಮ್ಮೆ ಚಿಂತನೆ ಎದುರಾಯ್ತು..! ಯಾರಿಗೋ,ವ್ಯಕ್ತಿಗತವಾಗಿ ಗುರಿ ಮಾಡಿಕೊಂಡು ಬರೆದು ಬಿಟ್ಟಿದ್ದಾನೆ ಅವ್ನೂ.. ಎಂದು ಎಲ್ಲಿ ಅಂದ್ಕೊಂಡು ಬಿಡ್ತಾರೆ ಎಂದೆನಿಸ್ತು, ಇನ್ನೊಮ್ಮೆ ತನ್ನ ಕುರಿತಾಗಿ ಬರೆದಿರಬಹುದಾ..? ಎಂದು ಊಹಿಸಿಕೊಂಡ್ರೇ .. ಪ್ರಮಾದವಾಗಬಹುದೇ.. ಹೀಗೂ ಕೂಡ ಭಾವಿಸಿಕೊಂಡೆ.. ನಿಜಕ್ಕೂ ಇಂತಹ ಯಾವುದೇ ಸಂದಿಗ್ಧತೆಗೊಳಗಾಗಿ, ಗುರಿಮಾಡಿಕೊಂಡು ಈ ಸಾಲುಗಳ ಉಲ್ಲೇಖಿಸಿಲ್ಲ, ಬಹುತೇಕ ನನ್ನ ಉದಾಹರಿತವಾಗಿಯೇ ನಿಮ್ಮ ಮುಂದಡಿ ಒಂದಿಷ್ಟು ವಿಸ್ತೃತಗೊಳಿಸುವೆ.
ಹೌದು ನೀವು ತುಸು ಸಮಯದ ಹೊತ್ತು ಈ ಸಾಲುಗಳ ಗ್ರಹಿಸಿಕೊಂಡು ಹೋದರೆ ವಾಸ್ತವತೆಗಳು ಅನಾವರಣವಾಗದೇ ಇರಲಾರದು, ಹೀಗಾಗಿ ಬಿಡುವು ಮಾಡಿಕೊಂಡು ಬನ್ನಿ ಮುಂದಿನ ಸಾಲುಗಳತ್ತ ನಿಮ್ಮನ್ನ ಕೊಂಡೊಯ್ಯುವೆ, ನಿಮಗೆ ಸರಿ ಅನಿಸಿದರೆ ಮಾತ್ರ ತಪ್ಪದೇ ಸಂದೇಶ ರವಾನಿಸಿ, ನನ್ನಂತಹ ಅಲ್ಪಮತಿಗೆ ಭಾವದ ತುಲನೆಗೈಯುವುದಕ್ಕೆ ಸಹಕಾರಿಯಾಗಬಲ್ಲದು.

ಇಂತಹದೊಂದು ಟಿಪ್ಪಣಿಯೊಂದಿಗೆ…ಸಂಘ ಮತ್ತು ಸಂಘಟಕರ ನಡುವೆ ಸಮೀಪ ಸಾಮ್ಯತೆಯನ್ನು ತಿಳಿದುಕೊಳ್ಳೋಣ, ಇಂತಿವ ಅರಿವು ಬಹುತೇಕರಿಗೆ ಇರುವುದಿಲ್ಲ, ಸಂಘ ಎಂದರೆ ಆಯಾ ಸಂಘ/ಸಂಸ್ಥೆ/ಟ್ರಸ್ಟ್ ಗಳ ರಚನೆ ಮತ್ತು ಉದ್ದೇಶಗಳಿಗನುಗುಣವಾಗಿ ನಡೆದುಕೊಳ್ಳುವುದು, ಸಂಃಟಕರು ಅದರ ಹುದ್ದೆಗಳನ್ನು ಅನುಭವಿಸುವುದು, ಇಂತಹ ವ್ಯವಸ್ಥೆಯಲ್ಲಿ ಯಾವ ಸಂಘ-ಸಂಸ್ಥೆಗಳಲ್ಲಿದ್ರೂ ಸಂಘಟಿತ ಮನೋಭಾವ ಹೊಂದಿಲ್ಲದಿದ್ದರೆ ಅಕ್ಷರಶಃ ಅದು ವ್ಯರ್ಥವೇ ಆಗಿರುತ್ತದೆ, ‘ಥೇಟ್ ಹಳಸಿ ಹೋದ ಕೂಳಿನಂತೆ’ ಇಲ್ಲವೇ ಕೊಳೆತ ಶವದ ಮೇಲಿನ ಘಮಿಸುವ ಹೂವಿನಂತೆ..! ಅಥವಾ ಕೌಂಟ್ ಲೆಸ್ಗಳೇ ಆಗಿ, ಆ ಸಂಘ/ಸಂಸ್ಥೆಗಳಲ್ಲಿರುವವರೆಗೂ ಆಟಿಟ್ಯೂಡ್ಸ್ ಗಳನ್ನು ಬಿತ್ತು ಒಂದೊಮ್ಮೆ ಹೆಸರಿಲ್ಲದಂತೆ ಬತ್ತಿ ಹೋಗಿ ಬಿಡುತ್ತಾರೆ,

ಹೀಗಾಗಿ ‘ನಮ್ಮೊಳಗಿನ ಅಂತರ್ಮುಖಿ ಮನಸು ಸಂಘಟಿತ ವಾಗಿ ಬಲದಿ ಶಾಶ್ವತವಾಗಿರಬೇಕು’ ಸಂಘಟಿತವಾಗಿ ನಮ್ಮ ಬುದ್ದಿರ್ಬಲತೆ, ನಡೆ-ನುಡಿಗಳು, ಗುರಿಯೆಡೆಗಿನ ಚಾರಣಗಳು ದಿಟ್ಟತೆಯಿಂದ ಪ್ರ್ಯಾಕ್ಟಿಕಲ್ (ಕ್ರಿಯಾತ್ಮಕವಾಗಿ, ರಚನಾತ್ಮಕವಾಗಿ) ನಿಂದ ಕೂಡಿದ್ದರೆ ಮಾತ್ರ ಬಾಹ್ಯಮುಖಿಯ ಸಂಘ,ಸಂಸ್ಥೆಗಳಲ್ಲಿ ಶಾಶ್ವತವಾಗಿ ಸಂಘಟಿತವಾಗಿಯೇ ನಿರ್ಧಿಷ್ಟ ಗುಣಗಳಡಿ ಯಶಸ್ಸು ಸಾಧಿಸುತ್ತಾರೆ, ಇಂತಿವರನ್ನು ಸೋಲಿಸಲು ಬಲು ಕ್ಲಿಷ್ಟಕರ, ಸ್ವತಃ ಎದೆಯಲ್ಲಿ ಸಂಘಟಿತವಾಗಿಯೇ ಇರುವ ಮನಸು ಸರಕಾರಿ ಇಲಾಖೆಯ ಮೇಜಿನಲ್ಲಿ ನೊಂದಣಿಯಾಗಿರುವ ಸಂಘಟನೆಗಳಲ್ಲಿ ಕೌಂಟ್ ಲೆಸ್ ಆಗುವುದಿಲ್ಲ, ಬದಲಿಗೆ ಬಾಹ್ಯ ಸಂಘಗಳ ಉದ್ದೇಶ, ಅದರ ಶೀರ್ಷಿಕೆಗಳ ಮೌಲ್ಯಗಳನ್ನು ಗೌರವಿಸಬೇಕು, ಇಂತಹದೊಂದು ಸದುದ್ದೇಶಗಳಡಿ ಅಂತರ್ಮುಖಿಯ ಭಾವದಡಿ ಸಂಘಟಿತನಾದವರು ಬಾಹ್ಯಮುಖಿಯಲ್ಲಿಯೂ ಯಾವುದೇ ಸಂದರ್ಭದಲ್ಲಿಯೂ ನಿರುತ್ಸಾಹ, ಹತಾಶರಾಗುವುದೇ ಇಲ್ಲ ಎನ್ನುವುದು ನಾವೊಮ್ಮೆ ಅವಲೋಕನಕ್ಕೊಳಗಾದರೆ ಅರಿವಿಗೆ ಬಂದೇ ಬರುತ್ತದೆ.

ಇಂತಹ ಅನೇಕತೆಗಳಲ್ಲಿ ಸಂಘಟಿತವಾದವನಿಗೆ, ಸಂಘಗಳ ಹೆಸರಿನಲ್ಲಿ ವಿಕೃತಕಾರಿಯಾಗಿ, ವಿಷಮ ಸ್ಥಿತಿಯಲ್ಲಿ ಹುದ್ದೆಗಳ ಜವಾಬ್ದಾರಿ ಅನುಭವಿಸುವ ಅವಿವೇಕಿತನದ ಪರಮಾವಧಿಗಳ ಆಟಿಟ್ಯೂಡ್ಸ್ ಮನಸ್ಥಿತಿ ಅಂತಹವರ ಹಪಾಹಪಿತನದ ಅಪ್ರಬುದ್ದತೆ, ಜಿಜ್ಞಾಸೆ, ಅಸೂಯೇ, ಅಸಹಿಷ್ಣುತೆಗಳ ಮಾನಸೀಕರ ಕಪಟಿ ಸಂಘಟಕರ ಸಾಂಗತ್ಯವಿದ್ದರೂ ತನ್ನೊಳಗಿನ ಭಾವದಡಿ ದೂರವಿಟ್ಟಿಯೇ ಇರುತ್ತಾನೆ ಎನ್ನುವುದು ಗೊತ್ತಿರಲೇ ಬೇಕಾಗುತ್ತದೆ. ಒಂದಂತು ನಿಜ ‘ನೊಂದಣಿ ಸಂಘಗಳಿಂದ’ ಏನು ಲಭಿಸುತ್ತದೋ ಗೊತ್ತಿಲ್ಲ, ಆದರೆ ತನ್ಕೊಳಗಿನ ಸಂಘಟಿತ ಭಾವಗಳಿಂದ ಯಾವುದೇ ಸಂದರ್ಭದಲ್ಲಿಯೂ ನೊಂದಣಿ ಸಂಘಗಳ ಮೌಲ್ಯವನ್ನು ಉಳಿಸಲು ಸದಾ ಶಕ್ಯನಾಗಿರುತ್ತಾನೆ. ಅಲ್ಲದೇ ಅಂತಹ ಮನಸ್ಥಿತಿಯವರು ಅಗ್ರಮುಖಿಗಳಾಗಿಯೇ ಇರುತ್ತಾರೆ.

    ಈ ಸಂಘಟಿತ ಭಾವ ಎನ್ನೊಳಗೆ ಶಾಶ್ವತ ಬೇರೂರಿದೆ ಎಂದೆನಿಸುತ್ತದೆ, ಹೀಗಾಗಿ ನಾನು ಖುದ್ದು ಯಾವ ಸಂಘ/ಸಂಸ್ಥೆಗಳಲ್ಲಿದ್ದರು ಸಹ ಯಾವುದೇ ಬಾಹ್ಯಮುಖಿಯ ಜವಾಬ್ದಾರಿಗಳಿಂದ ಒಂದು ಕ್ಷಣವೂ ದೂರವಿಲ್ಲ, ಅದಕ್ಕೊಂದು ನ್ಯಾಯ ನೀಡುವುದರಲ್ಲಿ ಕಟಿಬದ್ದತೆಯ ಬುತ್ತಿ ಕಟ್ಟಿ ಕೊಂಡಿದ್ದೇನೆ, ಇಂತಹ ಅಸಲು ನಿಖರತೆಗಳಿಂದಾಗಿಯೇ ನಾನಿರುವ ಯಾವುದೇ ಸಂಘ-ಸಂಸ್ಥೆಗಳ ವಿರುದ್ದ ವರ್ತಿಸುವುದಿಲ್ಲ, ಮಾತನಾಡುವುದು ಇಲ್ಲ, ದೂರುವುದು ಇಲ್ಲ, ನಿರುತ್ಸಾಹ ಹೊಂದುವುದು ಇಲ್ಲ, ನಿರೀಕ್ಷೆಗಳಂತೂ ಬಿತ್ತುವುದಿಲ್ಲ, ನಾನೋರ್ವ ಕೆಲಸಗಾರನಂತೆ ಧೈತ್ಯತೆಯಿಂದ ನಿಂತು ಬಿಡುತ್ತೇನೆ, ಈ ಸಂದರ್ಭದಲ್ಲಿ ಯಾವುದೇ ವಿಲಕ್ಷಣ ಮಾನಸೀಕರು ಸಂಘಟನೆಗಳ ಹೆಸರಿನಲ್ಲಿ ಎಸಗುವ ಯಾವ ಹೇಸಿಗೆಗಳಿಗೂ ಸುತಾರಾಂ ತಲೆಗೆಡಿಸಿಕೊಳ್ಳುವುದಿಲ್ಲ, ಮನದೊಳಗಿನ ಸಂಘಟಿತ ಭಾವ ಧೃಡವಾಗಿರುವಾಗ ನಾನ್ಯಾಕೆ ನೊಂದಣಿ ಸಂಘಟನೆಗಳ ಹೆಸರಿನಲ್ಲಿರುವ ಆಟಿಟ್ಯೂಡ್ಸ್ ಸಂಘಟಕರ ಕುರಿತಾಗಿ ಚಿತ್ತವರಿಸಲಿ ಅಲ್ಲವೇ..?!

‘ಉದಾಹರಣೆಗೆ’ ಕಳೆದ ವರುಷ ಕಸಾಪ ಚುನಾವಣೆಯ ಸಂದರ್ಭದ ಮುನ್ನದಿ ಶಿವಮೊಗ್ಗದ ಹರಕೆರೆ ಸಮೀಪದಲ್ಲಿ ನನ್ನ ಪತ್ರಿಕಾ ವೃತ್ತಿಯ ಸಿಯಾಜ್ ಕಾರಿನ ಮೇಲೆ ‘ಏರ್ ಗನ್ ಫೈರ್’ ಆಯ್ತು ಈ ಘಟನೆ ಕುರಿತು ಒಂದು ಖಾಸಾಗಿ ಚಾನೆಲ್ಗೆ ಅದೇ ಸ್ಥಳದಲ್ಲಿ ಬೈಟ್ಸ್ ನೀಡಿದ್ದೆ, ಅಂದಿನ ಕಸಾಪ ಚುನಾವಣಾಧಿಕಾರಿಯವರಿಗೆ ದೂರು ನೀಡಿ ಜಿಲ್ಲಾರಕ್ಷಣಾಧಿಕಾರಿಯವರಿಗೆ ವರ್ಗಾಯಿಸಲು ಒತ್ತಾಯಿಸಿದ್ದೆ, ಈ ಪ್ರಕರಣ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು, ಈ ಸಂದರ್ಭದಲ್ಲಿ ಯಾವುದೇ ಪತ್ರಿಕಾ ಸಂಘಟನೆಯಿಂದ ಉತ್ತರವೂ ಇರಲಿಲ್ಲ, ಸಂಘಟಕರಿಂದ ಸಣ್ಣದೊಂದು ಅನುಕಂಪವೂ ವ್ಯಕ್ತವಾಗಲಿಲ್ಲ, ಆದರೂ ಕಿಂಚಿತ್ತು ಬೇಸರವಾಗಲಿಲ್ಲ, ಸಂಘಟನೆಗಳ ಮೇಲೆ ಯಾವುದೇ ನಕರಾತ್ಮಕ ಪ್ರತಿಕ್ರಿಯೇಗಳು ನೀಡಲಿಲ್ಲ, ಏಕೆಂದರೆ ಎನ್ನೊಳಗಿನ ಸಂಘಟಿತ ಮನೋಭಾವ ಸದೃಡವಾಗಿತ್ತು, ಅಸಲಿಗೆ ಈ ಏರ್ ಗನ್ ಪೈರಿಂಗ್ ಗುರುತು ನನ್ನ ಕಾರಿನ ಗ್ಲಾಸ್ ಮೇಲೆ ಇಂದಿಗೂ ಇದೆ.

ಹೀಗೆ ಅಂದು ಮುಂಜಾನೆಯೊತ್ತು ಎಂದಿನಂತೆ ಅದೇ ಕಾರಿನಲ್ಲಿ ಸೂರ್ಯಗಗನ ಪತ್ರಿಕಾ ಕಛೇರಿ ಕಡೆ ಬಂದು ನಿಂತೆ ಕಾರು ಸ್ಟೇರಿಂಗ್ ನಲ್ಲಿದ್ದ ಸಂದರ್ಭದಲ್ಲಿ ಅವೈಜ್ಞಾನಿಕ ಕಾಮಗಾರಿಗೆ ಸಿಲುಕಿದ್ದ ಮರವೊಂದು ಉರುಳಿ ಬಿತ್ತು, ತುಸು ಅಡಿಯಲ್ಲಿ ಬಿದ್ದ ಮರ ಕಾರಿನ ಮುಂದಡಿ ಸಂಪೂರ್ಣ ಜಖಂ ಆಗಿತ್ತು ಕಾರಿನೊಳಗಿದ್ದ ನಾನು ಅವಕ್ಕಾಗಿ ಹೋದೆ, ಏನು ಆಗುತ್ತಿದೆ ಎನ್ನುವಷ್ಟರಲ್ಲಿ ಸಾವಿನಿಂದ ಪಾರಾಗಿದ್ದೆ, ಈ ಘಟನೆ ಕುರಿತು ಭಾರಿ ಮರ ಬಿದ್ದು ಜಖಂ ಆಗಿದ್ದ ಘಟನೆಯ ಮುಂದಡಿಯೇ ಧರಣಿ ಕುಳಿತೇ, ಇದು ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು,  ಸಮಾಜಮುಖಿ ಸಂಘಟಿತ ಮನಸುಗಳು ಬೆಂಬಲಕ್ಕೆ ನಿಂತವು, ಒಂದಿಷ್ಟು ಪತ್ರಕರ್ತರು ಪೋನಾಯಿಸಿ ಮಾತಾಡಿಸಿದ್ರು ಎನ್ನುವುದಷ್ಟೆ ಸಮಾಧಾನಕರ ಇಂತಹ ಸಂದರ್ಭದಲ್ಲಿಯು ಯಾವುದೇ ಧೃತಿಗೆಡದೆ ಏಕಾಂಗಿಯಾಗಿ ಹೋರಾಟಕ್ಕಿಳಿದೇ ನ್ಯಾಯವು ದೊರಕಿಸಿಕೊಂಡೇ ಎನ್ನುವುದಕ್ಕೆ ಅಲ್ಲೊಂದು ಅಂತರ್ಮುಖಿ ಸಂಘಟಿತ ಮನಸ್ಸೇ ಸಾಕ್ಣಿಯಾಗಿತ್ತು.

ಇಂತಹ ಹತ್ತಾರು ಘಟನೆಗಳು ಜರುಗಿದೆ, ಈ ಘಟನೆಗಳಿಗೆ ನ್ಯಾಯ ಕೊಡಿಸಿ ಎಂದು ಎಂದಿಗೂ ಅರ್ಜಿ ಹಾಕಿ ಅವಲತ್ತುಕೊಂಡಿಯೇ ಇಲ್ಲ, ಈ ಘಟನೆಗಳಲ್ಲಿ ಭೂಗತರ ಬೆದರಿಕೆಗಳು ಹೇಗಿದ್ದವು ಎಂದರೆ, ಅನಾಮಧೆಯ ಪತ್ರದಲ್ಲಿ ನನ್ನ. ಕಛೇರಿಗೆ ಪೋಸ್ಟ್ ಬಂದಿದೆ, ಸಾಲದಕ್ಕೆ ದಾಳಿ ನಡೆಸುವ ಪ್ರಯತ್ನವೂ ಆಗಿದೆ, ಇದರಲ್ಲಿ ಅಂದಿನ ಜಿಲ್ಲಾರಕ್ಷಣಾಧಿಕಾರಿ ಅಭಿನವ್ ಖರೆಯವರಿಗೆ ತಿಳಿದಂತೆ ನಟೋರಿಯಸ್ ಒಬ್ಬನ ಬೆದರಿಕೆ ಕರೆಯನ್ನು ವಿಚಾರಣೆ ನಡೆಸಲು ಟಪ್ ಕಾಪ್ ಪೊಲೀಸ್ ಅಧಿಕಾರಿ ಅಭಯ್ ಪ್ರಕಾಶ್ ರವರನ್ನು ನಿಯೋಜಿಸಿದ್ದರು, ಅಲ್ಲದೆ ಅದೇ ನಟೋರಿಯಸ್ ಜೊತೆ ಮುಖಾಮುಖಿ ಮಾಡಿಸಿ ಠಾಣೆಯಲ್ಲಿ ಇತ್ಯರ್ಥಗೊಳಿಸಿ ಸುಖಾಂತ್ಯಗೊಳಿಸಿದ ಪ್ರಕರಣದಲ್ಲೂ ಯಾವುದೇ ಪತ್ರಿಕಾ ಸಂಘಟನೆಗಳು ಪ್ರತಿ ದನಿಯಾಗಲೇ ಇಲ್ಲ, ಬದಲಿಗೆ ನಾನು ಕಾದು ಕುಳಿತುಕೊಳ್ಳಲು ಇಲ್ಲ,

ಇಂತಹುದೇ ಘಟನೆಯಲ್ಲಿ ಕಛೇರಿ ಮುಂದಡಿ ಎದುರಾಗಿದ್ದ ಭೂಗತ ರೌಡಿಯ ಗ್ಯಾಂಗು ಬೆದರಿಸುವ ನೆವದಲ್ಲಿ ಎಡತಾಕಿತ್ತು, ಅದಾಗಲು ಇದೇ ಮನಸ್ಥಿತಿಯಿಂದಲೇ ಎದುರಿಸಿದ್ದೇನೆಯೇ ಹೊರತು ಪತ್ರಿಕಾ ಸಂಘಟನೆಗಳಿಗೆ ಅರ್ಜಿ ಹಾಕಲೇ ಇಲ್ಲ, ಇಂತಹ ಹತ್ತಾರು ಅತೀ ಸೂಕ್ಷ್ಮ ಪ್ರಕರಣಗಳನ್ನು ಮನದೊಳಗಿನ ಸಂಘಟಿತ ಮನೋಭಾವದಿಂದಲೆ ಎದೆಯೊಡ್ಡಿದ್ದೇನೆ, ಬರಹದ ಮೂಲಕ, ಸಾಹಿತ್ಯಗಳ ಮೂಲಕ ಸಾರ್ವಜನಿಕವಾಗಿ ಮುಂದಾಗಿದ್ದೇನೆಯೇ ಹೊರತು, ನಾನಿರುವ ಯಾವ ಸಂಘಟನೆಗಳ ಬೆಂಬಲ ಯಾಚಿಸಲೇ ಇಲ್ಲ ಬಾಸ್..!? ಹೀಗೆ ಹೇಳುವುದಕ್ಕೆ ಹೊರಟರೆ, ನೂರು ಘಟಿತ ಘಟನೆಗಳ ಜೀವಭಾವ ಹಸಿಯಾಗಿಯೇ ಇದೆ, ತಾತ್ಸಾರತೆ ಬಿತ್ತುವುದು, ಅಸಡ್ಡೆ, ನಿರ್ಲಕ್ಷ್ಯಕ್ಕೆ ಗುರಿ ಮಾಡಿ ವ್ಯಂಗ್ಯಿಸಿವುದು, ಇನ್ನೊರ್ವರನ್ನು ಸದಾ ಎತ್ತಿಕಟ್ಟಿ ವಿಷದಜಂತು ಹುಳುವಿನಂತೆ ನರ್ತಿಸುವ ನರ್ತನಕಾರರನ್ನು ಮೀರಿ ಪತ್ರಿಕಾ ರಂಗದಲ್ಲಿ ತನ್ನದೇ ಆದ ಮೊಹರು ಹೊತ್ತಿದ್ದೇನೆ ಎನ್ನುವುದಕ್ಕೆ ಅನೇಕತೆಗಳ ಬರಹದ ಸಗಟುಗಳಿವೆ, ರಚನಾತ್ಮಕ ಹೆಜ್ಜೆಗಳಿವೆ, ನಾಲ್ಕು ಕೃತಿಗಳು ಸಾರಸ್ವತ ಲೋಕಕ್ಕೆ ಅರ್ಪಣೆಯಾಗಿದೆ, ಸೇವಾ ವಲಯದಲದಲ್ಲಿ ಅಗ್ರಮುಖಿಯಾಗಿದ್ದೇನೆ, ಆಯಾಸವಿಲ್ಲದ ಅಂತರ್ಮುಖಿ ಸಂಘಟಿತವಾಗಿ ಸ್ಥಾಪಿತವಾಗಿದ್ದೇನೆ, ಬಹುತ್ವ ಭಾವದಡಿ ಬರಹದ ಬದುಕು ಕಟ್ಟಿಕೊಂಡಿದ್ದೇನೆ, ಹೀಗಿದ್ದರೂ ಯಾವ ಆಹ್ವಾನಿತ ಉದ್ದೇಶಗಳಿಗೆ ಅರ್ಜಿ ಹಾಕಿ ಸಾಲಿಗೆ ನಿಲ್ಲುವ ಗೋಜಿಗೆ ಎಂದಿಗೂ ತೆರಳುವುದೇ ಇಲ್ಲ,

ಇಂತಿಷ್ಟು ನನ್ನ ಸ್ವತಃ ಅನುಭವವನ್ನ ಇಲ್ಲಿ ಉಲ್ಲೇಖಿಸಿ ಲಗತ್ತಿಸಿದ್ದೇನೆ, ಯಾರೇ ಆಗಲಿ ಸಂಘಟನೆಗಳು ಏನು ಕೊಡುತ್ತದೋ.. ಗೌರವಿಸುತ್ತದೋ ಅವೆಲ್ಲವೂ ಒಂದೊಮ್ಮೆ ಗೌಣವೇ ಸರಿ, ನಾವು ಸದಾ ಶಾಶ್ವತವಾಗಿ ನಮ್ಮೊಳಗಿನ ಭಾವವನ್ನು ಸಂಘಟಿತವಾಗಿರಿಸಲು ಪ್ರಯತ್ನಿಸಿದರೆ, ನಿಜಕ್ಕೂ ನಾವು ಯಾವ ಸಂಘಟನೆಯಲ್ಲಿದ್ದರೂ ಸರಿಯೇ..? ಎಂತಹ ವಿಲಕ್ಷಣವಾದಿಗಳು ಇದ್ದರೂ ಕೂಡ ಸಮಚಿತ್ತದಿ ನಡೆದು ದೂರ ದೂರದಿ ಸಾಗಿ ವಿಸ್ತಾರ ಜಗದ ಜಗಲಿಯಲ್ಲಿ ವಿರಾಜಿಸುತ್ತೇವೆ, ವಿಶೇಷತೆಯಲ್ಲಿ ಗುರುತಿಸಿಕೊಳ್ಳುತ್ತೇವೆ, ಒಟ್ಟಿನಲ್ಲಿ ನಮ್ಮೊಳಗಿನ ಮನಸನ್ನು ಸಂಘಟಿತಗೊಳಿಸಿ, ಬಲಾಡ್ಯಗೊಳಿಸಿದರೆ ನೀವು ಎಂದಿಗೂ ಯಾವ ಬಾಹ್ಯ ಸಂಘಟಕರಿಗೆ ಅರ್ಜಿ ಹಾಕುವ ಸಂದರ್ಭಗಳೇ , ದರ್ಶಿಸಿಕೊಳ್ಳುವ ಸಾಂದರ್ಬಿಕತೆಗಳೇ ಎದುರಾಗುವುದಿಲ್ಲ,

ಇನ್ನೂ ಈ ಮೇಲಿನ ಉದಾಹರಣೆಗಳಲ್ಲಿ ಪತ್ರಿಕಾ ಸಂಘಟನೆಗಳ ಕುರಿತಾಗಿಯೇ ಉದಾಹರಿಸಿದ್ದೇನೆ ಎಂದರೆ ಕೇವಲ ಆರೋಪದ ವ್ಯರ್ಥವಲ್ಲ, ನನ್ನ ವೃತ್ತಿಯ ವೇದಿಕೆಗಳಲ್ಲವೇ..? ಹೀಗಾಗಿ ವಿವರಿಸಿದ್ದೇನೆಯೇ ಹೊರತು ನಾನೆಂದಿಗೂ ಪತ್ರಿಕಾ ಸಂಘಟನೆಗಳ ವಿರೋದವಿಲ್ಲ, ಬದಲಿಗೆ ಗೌರವವೂ ಇದೆ, ಇದರೊಳಗಿನ ಸಂಘಟಕರಿಗೆ ತನ್ನೊಳಗಿನ ಸಾಮರ್ಥ್ಯ ಜರೂರು ಪಡಿಸಲು ಇದೊಂದು ಅವಕಾಶ ಕೊಟ್ಟಿದ್ದಾರೆ ಎಂದೇ ಭಾವಿಸಿ, ನಾನೀರುವ ಎಲ್ಲಾ ಸಂಘಟನೆಗಳಿಗೆ ಗೌರವಿಸುತ್ತೇನೆ, ಕೆಲ ವಿಲಕ್ಷಣವಾದಿ ಮಾನಸೀಕರಿಗೂ ಅನುಕಂಪಿಸುತ್ತೇನೆ. ಎಂದು ಈ ಸಾಲಿಗೆ ವಿರಾಮ ನೀಡುತ್ತೇನೆ.

Gara Srinivas

Gara Srinivas

Leave a comment

error: Content is protected !!